AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Influenza B Virus: ನಟಿ ಡೆಬಿನಾ ಬ್ಯಾನರ್ಜಿ ಬಳಲುತ್ತಿರುವ ಇನ್ಫ್ಲುಯೆನ್ಸ ಬಿ ವೈರಸ್ ಎಂದರೇನು? ರೋಗಲಕ್ಷಣಗಳು ಮತ್ತು ಚಿಕಿತ್ಸೆಯ ಕುರಿತು ಮಾಹಿತಿ ಇಲ್ಲಿದೆ

Debina Bonnerjee: ನಟಿ ಡೆಬಿನಾ ಬ್ಯಾನರ್ಜಿ ಅವರಿಗೆ ಇನ್‌ಫ್ಲುಯೆಂಜಾ ಬಿ ವೈರಸ್ ಇರುವುದು ಪತ್ತೆಯಾಗಿದೆ. ಇದರ ಅರ್ಥವೇನು, ಲಕ್ಷಣಗಳು ಮತ್ತು ಚಿಕಿತ್ಸೆಗಳ ಕುರಿತು ಮಾಹಿತಿ ಇಲ್ಲಿದೆ.

Influenza B Virus: ನಟಿ ಡೆಬಿನಾ ಬ್ಯಾನರ್ಜಿ ಬಳಲುತ್ತಿರುವ ಇನ್ಫ್ಲುಯೆನ್ಸ ಬಿ ವೈರಸ್ ಎಂದರೇನು? ರೋಗಲಕ್ಷಣಗಳು ಮತ್ತು ಚಿಕಿತ್ಸೆಯ ಕುರಿತು ಮಾಹಿತಿ ಇಲ್ಲಿದೆ
ನಟಿ ಡೆಬಿನಾ ಬ್ಯಾನರ್ಜಿ Image Credit source: Instagram
ಅಕ್ಷತಾ ವರ್ಕಾಡಿ
|

Updated on:Mar 02, 2023 | 2:02 PM

Share

ಕಿರುತೆರೆ ನಟಿ ಹಾಗೂ ಇಬ್ಬರು ಮಕ್ಕಳ ತಾಯಿ ಡೆಬಿನಾ ಬ್ಯಾನರ್ಜಿ(Debina Bonnerjee) ರವರು ಇನ್ಫ್ಲುಯೆಂಜಾ ಬಿ ವೈರಸ್‌(Influenza B Virus) ನಿಂದ ಬಳಲುತ್ತಿದ್ದಾರೆ ಎಂದು ತಿಳಿದುಬಂದಿದೆ. ಡೆಬಿನಾ ತನ್ನ ಪತಿ ಮತ್ತು ನಟ ಗುರ್ಮೀತ್ ಚೌಧರಿ ಅವರೊಂದಿಗೆ ಕುಟುಂಬ ರಜೆಗಾಗಿ ಶ್ರೀಲಂಕಾಕ್ಕೆ ತೆರಳಿದ್ದರು. ಅವರ ಈ ಕಾಯಿಲೆಯೆಗೆ ಸಾಕಷ್ಟು ಮುನ್ನೆಚ್ಚರಿಕೆ ವಹಿಸಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ ಎಂದು ತಳಿದುಬಂದಿದೆ. ಈಗಾಗಲೇ ಮಾಡಿದ ಪರೀಕ್ಷೆಗಳ ಬಗ್ಗೆ ಬಹಿರಂಗಪಡಿಸಿದ ಅವರು, ಪ್ರಾರಂಭದಲ್ಲಿ ಶೀತವಿತ್ತು ಆದರೆ ಸುಧಾರಿಸಲು ಸಾಧ್ಯವಾಗದಿದ್ದಾಗ, ಚಿಕಿತ್ಸೆಗೆ ಒಳಪಡಿಸಲಾಯಿತು. ಆಗ ಇನ್ಫ್ಲುಯೆನ್ಸ ಬಿ ವೈರಸ್‌ ಇರುವುದು ಪತ್ತೆಯಾಗಿದೆ.

ಇನ್ಫ್ಲುಯೆನ್ಸ ಬಿ ವೈರಸ್ ಎಂದರೇನು?

ಇನ್ಫ್ಲುಯೆನ್ಸವನ್ನು ಸಾಮಾನ್ಯವಾಗಿ ಫ್ಲೂ ಎಂದು ಕರೆಯಲಾಗುತ್ತದೆ, ಇದು ಫ್ಲೂ ವೈರಸ್‌ಗಳಿಂದ ಉಂಟಾಗುವ ಉಸಿರಾಟದ ಸೋಂಕು. ಈ ಸೋಂಕನ್ನು ಮೂರು ಮುಖ್ಯ A, B, ಮತ್ತು C ವಿಧಗಳಲ್ಲಿ ಕಾಣಬಹುದು. A ಮತ್ತು Bಯ ಲಕ್ಷಣಗಳು ಒಂದೇ ಆಗಿರುತ್ತದೆ. ಆದರೆ B ಕೇವಲ ಮನುಷ್ಯರಿಂದ ಮನುಷ್ಯರಿಗೆ ಹರಡುತ್ತದೆ. ಹೆಚ್ಚು ಗಂಭೀರವಾದ ಪ್ರಕರಣಗಳಲ್ಲಿ ಮಾರಣಾಂತಿಕ ತೊಡಕುಗಳನ್ನು ಉಂಟುಮಾಡಬಹುದು. ಇನ್ಫ್ಲುಯೆನ್ಸ ಬಿ ವೈರಸ್ ಮನುಷ್ಯರಿಂದ ಮನುಷ್ಯರಿಗೆ ಮಾತ್ರ ಹರಡುತ್ತದೆ.

ಇದನ್ನೂ ಓದಿ: ಪಶ್ಚಿಮ ಬಂಗಾಳದಲ್ಲಿ ಉಸಿರಾಟಕ್ಕೆ ಸಂಬಂಧಿಸಿದ ಸೋಂಕಿನಿಂದ ಕಳೆದ 24 ಗಂಟೆಗಳಲ್ಲಿ 7 ಮಕ್ಕಳು ಸಾವು

ಇನ್ಫ್ಲುಯೆನ್ಸ ಬಿ ವೈರಸ್ ಲಕ್ಷಣಗಳು:

ಜ್ವರ, ಶೀತ, ನೋಯುತ್ತಿರುವ ಗಂಟಲು, ಕೆಮ್ಮು, ಸ್ರವಿಸುವ ಮೂಗು ಮತ್ತು ಸೀನುವಿಕೆ, ಆಯಾಸ, ಸ್ನಾಯು ನೋವು ಮತ್ತು ದೇಹದ ನೋವು ಮುಂತಾದ ಲಕ್ಷಣಗಳನ್ನು ಕಾಣಬಹುದು.

ಇನ್ಫ್ಲುಯೆನ್ಸ ಬಿ ವೈರಸ್ ಚಿಕಿತ್ಸೆ:

ಇನ್ಫ್ಲುಯೆನ್ಸ ಬಿ ವೈರಸ್​​ನಿಂದ ಬಳಲುತ್ತಿರುವ ವ್ಯಕ್ತಿಗೆ ಸಾಕಷ್ಟು ವಿಶ್ರಾಂತಿಯ ಅಗತ್ಯವಿರುತ್ತದೆ. ಇದು ಒಬ್ಬರಿಂದ ಇನ್ನೊಬ್ಬರಿಗೆ ಹರಡುವ ಸಾಧ್ಯತೆ ಹೆಚ್ಚಿರುವುದರಿಂದ ಆದಷ್ಟು ಮನೆಯಲ್ಲಿಯೇ ವಿಶ್ರಾಂತಿಯನ್ನು ತೆಗೆದುಕೊಳ್ಳುವುದು, ದ್ರವ ಆಹಾರಗಳನ್ನು ಸೇವಿಸುವುದು ಅತ್ಯಂತ ಅಗತ್ಯ ಎಂದು ತಜ್ಞರು ಸಲಹೆ ನೀಡುತ್ತಾರೆ.

ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

Published On - 12:07 pm, Thu, 2 March 23