Dengue Symptoms: ಮಕ್ಕಳಲ್ಲಿ ವೇಗವಾಗಿ ಹರಡುತ್ತಿರುವ ಡೆಂಗ್ಯೂ, ನಿರ್ಲಕ್ಷ್ಯ ಮಾಡದೆ ಮುನ್ನೆಚ್ಚರಿಕಾ ಕ್ರಮಗಳನ್ನು ಅಳವಡಿಸಿ

| Updated By: Rakesh Nayak Manchi

Updated on: Aug 24, 2022 | 6:30 AM

ಡೆಂಗ್ಯೂ ರೋಗವು ಮಕ್ಕಳಲ್ಲಿ ವೇಗವಾಗಿ ಹರಡುತ್ತಿದ್ದು, ಪೋಷಕರು ತಮ್ಮ ಮಕ್ಕಳ ಬಗ್ಗೆ ವಿಶೇಷ ಕಾಳಜಿ ವಹಿಸಿ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು.

Dengue Symptoms: ಮಕ್ಕಳಲ್ಲಿ ವೇಗವಾಗಿ ಹರಡುತ್ತಿರುವ ಡೆಂಗ್ಯೂ, ನಿರ್ಲಕ್ಷ್ಯ ಮಾಡದೆ ಮುನ್ನೆಚ್ಚರಿಕಾ ಕ್ರಮಗಳನ್ನು ಅಳವಡಿಸಿ
ಸಾಂಕೇತಿ ಚಿತ್ರ
Follow us on

ಭಾರತ ಡೆಂಗ್ಯೂ ಜ್ವರದಿಂದ ತತ್ತರಿಸುತ್ತಿದ್ದು, ಈ ಕಾಯಿಲೆಗೆ ತುತ್ತಾಗುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ತೀವ್ರ ಜ್ವರ, ತಲೆನೋವು, ಸ್ನಾಯು ಮತ್ತು ಕೀಲು ನೋವು, ವಾಂತಿ ಮತ್ತು ರೋಗಲಕ್ಷಣಗಳಿಂದ ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆಯಲ್ಲಿಯೂ ಹೆಚ್ಚಾಗುತ್ತಿದೆ. ಆಗಸ್ಟ್ 13 ರವರೆಗೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 178 ಡೆಂಗ್ಯೂ ಪ್ರಕರಣಗಳು ವರದಿಯಾಗಿವೆ. ಮೇ 31 ರವರೆಗೆ ದೇಶದಲ್ಲಿ 10,172 ಪ್ರಕರಣಗಳು ಬೆಳಕಿಗೆ ಬಂದಿವೆ. ಮುನ್ಸಿಪಲ್ ಕಾರ್ಪೊರೇಷನ್ ಆಫ್ ದೆಹಲಿ (ಎಂಸಿಡಿ) ವರದಿ ಪ್ರಕಾರ, ಜನವರಿಯಲ್ಲಿ 23, ಫೆಬ್ರವರಿಯಲ್ಲಿ 16, ಮಾರ್ಚ್‌ನಲ್ಲಿ 22, ಏಪ್ರಿಲ್‌ನಲ್ಲಿ 20, ಮೇನಲ್ಲಿ 30 ಮತ್ತು ಜೂನ್‌ನಲ್ಲಿ 32 ಡೆಂಗ್ಯೂ ಪ್ರಕರಣಗಳು ವರದಿಯಾಗಿವೆ.

ಮೇ 31 ರವರೆಗೆ ದೇಶದಲ್ಲಿ 10,172 ಪ್ರಕರಣಗಳು ವರದಿಯಾಗಿದ್ದು, ಒಟ್ಟು ಮೂವರು ಸಾವನ್ನಪ್ಪಿದ್ದಾರೆ. ಡೆಂಗ್ಯೂ ಜ್ವರವನ್ನು ವೈದ್ಯಕೀಯವಾಗಿ ಮೂಳೆ ಜ್ವರ ಎಂದು ಕರೆಯಲಾಗುತ್ತದೆ. ಇದು ಸೊಳ್ಳೆಯಿಂದ ಹರಡುವ ವೈರಾಣು ರೋಗವಾಗಿದ್ದು, ಮಳೆಗಾಲದಲ್ಲಿ ಈ ರೋಗ ಹರಡಲು ಸೂಕ್ತ ಸಮಯವಾಗಿದೆ. ಹೀಗಾಗಿ ಜನರು ತಮ್ಮ ಹಾಗೂ ತಮ್ಮ ಮಕ್ಕಳ ಬಗ್ಗೆ ವಿಶೇಷವಾಗಿ ಕಾಳಜಿ ವಹಿಸಬೇಕಾಗಿದೆ ಎಂದು ಹಿರಿಯ ಡಾ.ಅಂಕಿತ್ ಪ್ರಸಾದ್ ಸಲಹೆ ನೀಡಿದರು. “ಮಕ್ಕಳು ನಿರಂತರವಾಗಿ ರೋಗಗಳಿಗೆ ಒಳಗಾಗುತ್ತಿದ್ದಾರೆ. ಏಕೆಂದರೆ ಅವರಲ್ಲಿ ರೋಗ ನಿರೋಧಕ ಶಕ್ತಿ ವೃದ್ಧಿಯಾಗುತ್ತಿದೆ. ಹೀಗಾಗಿ ಸೋಂಕನ್ನು ತಡೆಗಟ್ಟಲು ಕೆಲವು ತಿಂಗಳುಗಳವರೆಗೆ ಕಾಳಜಿಯನ್ನು ತೆಗೆದುಕೊಳ್ಳಬೇಕು. ತೀವ್ರ ಜ್ವರ, ತಲೆನೋವು, ಕೈಕಾಲುಗಳಲ್ಲಿ ದದ್ದು, ಮಾಂಸಖಂಡ, ಕೀಲು ನೋವು, ವಾಂತಿ, ಹೊಟ್ಟೆ ನೋವು ಮುಂತಾದವುಗಳಿದ್ದರೆ ವೈದ್ಯರ ಸಲಹೆ ಪಡೆಯಬೇಕು” ಎಂದು ಹೇಳಿದರು.

ಅಧಿಕ ಜ್ವರ, ಲೋಳೆಯ ರಕ್ತಸ್ರಾವ, ಆಲಸ್ಯ, ಚಡಪಡಿಕೆ ಮತ್ತು ವಿಸ್ತರಿಸಿದ ಯಕೃತ್ತು ರೋಗಲಕ್ಷಣಗಳಾಗಿವೆ. ಎರಡ್ಮೂರು ದಿನ ತಡೆಯಿಲ್ಲದೆ ಜ್ವರ ಬಂದರೆ ಕೂಡಲೇ ವೈದ್ಯರ ಬಳಿ ಕರೆದುಕೊಂಡು ಹೋಗಬೇಕು. ಯಾವುದೇ ಕಾರಣಕ್ಕೂ ಮಕ್ಕಳ ವಿಚಾರದಲ್ಲಿ ನಿರ್ಲಕ್ಷ್ಯಕ್ಕೆ ಅವಕಾಶ ನೀಡಬಾರದು. ನಿರ್ಲಕ್ಷಿಸಿದರೆ ದೀರ್ಘಾವಧಿಯಲ್ಲಿ ದೊಡ್ಡ ಸಮಸ್ಯೆಗಳಿಗೆ ಕಾರಣವಾಗಬಹುದು.

ಡೆಂಗ್ಯೂಗೆ ಒಳಗಾಗುವ ಮಕ್ಕಳು ನಿರ್ಜಲೀಕರಣಕ್ಕೆ ಒಳಗಾಗುತ್ತಾರೆ. ಹಾಗಾಗಿ ಅವರಿಗೆ ನೀರು ಸಿಗುವಂತೆ ಮಾಡಬೇಕು. ಇದಲ್ಲದೆ, ದ್ರವವನ್ನು ಕುಡಿಸಬೇಕು. ಅಂದರೆ, ಹಣ್ಣಿನ ರಸವನ್ನು ನೀಡಬೇಕು. ನೋವು ನಿವಾರಕ ಕ್ರಮಗಳನ್ನು ತೆಗೆದುಕೊಳ್ಳಬೇಕು. ಹೀಗೆ ಮಾಡುವುದರಿಂದ ಡೆಂಗ್ಯೂ ರೋಗ ಲಕ್ಷಣಗಳು ಬೇಗನೆ ಕಡಿಮೆಯಾಗುತ್ತವೆ.

ಸುತ್ತಮುತ್ತಲಿನ ಪ್ರದೇಶಗಳನ್ನು ಬ್ಲೀಚಿಂಗ್ ಮಾಡುವುದರಿಂದ ಡೆಂಗ್ಯೂ ಹರಡುವುದನ್ನು ತಡೆಯಬಹುದು. ಮನೆಯ ಸುತ್ತ ನೀರು ನಿಲ್ಲದಂತೆ ನೋಡಿಕೊಳ್ಳಬೇಕು, ಉದ್ಯಾನವನಗಳು ಮತ್ತು ಆಟದ ಮೈದಾನಗಳಿಗೆ ಹೋಗುವಾಗ ಸೊಳ್ಳೆ ಕಡಿತಕ್ಕೆ ಒಳಗಾಗದಂತೆ ಮೈ ಮುಚ್ಚುವ ಬಟ್ಟೆಗಳನ್ನು ಧರಿಸಬೇಕು, ರಾತ್ರಿ ಮಲಗುವಾಗ ಸೊಳ್ಳೆ ಪರದೆಗಳನ್ನು ಬಳಸಬೇಕು. ಈ ಕ್ರಮಗಳನ್ನು ಅನುಸರಿಸುವುದರಿಂದ ಡೆಂಗ್ಯೂ ಸೋಂಕನ್ನು ತಪ್ಪಿಸಬಹುದು.

ಮತ್ತಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ