ಸಾಮಾನ್ಯವಾಗಿ ನಾವು ಸಾಕು ಪ್ರಾಣಿಗಳನ್ನು ಮನೆಯ ಮಕ್ಕಳಂತೆಯೇ ಬೆಳೆಸಿರುತ್ತೇವೆ. ಅವುಗಳಿಗೆ ಚಿಕ್ಕ ನೋವಾದರೂ ಸಹ ನಮಗೆ ಸಹಿಸಿಕೊಳ್ಳುವುದು ಕಷ್ಟವಾಗುತ್ತದೆ. ಅದರಲ್ಲಿಯೂ ಇತ್ತೀಚಿನ ದಿನಗಳಲ್ಲಿ ಭಾರತದಲ್ಲಿ ಮಧುಮೇಹ ಪ್ರಕರಣಗಳು ಬಹಳಷ್ಟು ಹೆಚ್ಚಾಗಿದ್ದು ಈ ರೋಗಕ್ಕೆ ಮನುಷ್ಯರು ಮಾತ್ರ ಬಲಿಯಾಗುತ್ತಿಲ್ಲ ಬದಲಾಗಿ ನಾಯಿ ಮತ್ತು ಬೆಕ್ಕುಗಳು ಸಹ ತುತ್ತಾಗುತ್ತಿವೆ. ತುಂಬಾ ಪ್ರೀತಿಯಿಂದ ಬೆಳೆಸಿದ ಅವರು ನಮ್ಮ ಕುಟುಂಬದ ಭಾಗವಾಗಿರುವುದರಿಂದ ಅವರಿಗೆ ಏನಾದರೂ ತಡೆದುಕೊಳ್ಳುವುದು ಬಹಳ ಕಷ್ಟವಾಗುತ್ತದೆ. ಇಂತಹ ಸಂದರ್ಭಗಳಲ್ಲಿ ಸಾಕು ಪ್ರಾಣಿಗೆ ಮಧುಮೇಹದಂತಹ ಕಾಯಿಲೆ ಇದೆ ಎಂಬುದು ಕೆಲವರಿಗೆ ಆಘಾತ ಮೂಡಿಸಬಹುದು. ಹಾಗಾದರೆ ಈ ರೋಗಲಕ್ಷಣಗಳನ್ನು ಪತ್ತೆ ಹಚ್ಚುವುದು ಹೇಗೆ? ಯಾವ ರೀತಿಯ ಮುನ್ನೆಚ್ಚರಿಕೆ ವಹಿಸಬೇಕು? ಇಲ್ಲಿದೆ ಸಂಪೂರ್ಣ ಮಾಹಿತಿ.
ಈ ವಿಷಯದ ಕುರಿತು ಕಂಡು ಬಂದಿರುವ ಅಂಕಿ ಅಂಶಗಳ ಪ್ರಕಾರ ಬೆಕ್ಕು ಮತ್ತು ನಾಯಿಗೆ ಮಧುಮೇಹವಿದ್ದಾಗ ಅವು ತನ್ನಿಂದ ತಾನಾಗಿಯೇ ಅವುಗಳನ್ನು ಕಡಿಮೆ ಮಾಡಿಕೊಳ್ಳುತ್ತದೆ ಎಂಬುದು ಕಂಡು ಬಂದಿದೆ. ಹಾಗಾಗಿ ಎಲ್ಲಾ ಪ್ರಾಣಿಗಳು ಈ ರೋಗದಿಂದ ಹೆಚ್ಚಿನ ತೊಂದರೆ ಎದುರಿಸಬೇಕಾಗುವುದಿಲ್ಲ. ಅಂಕಿ ಅಂಶಗಳ ಪ್ರಕಾರ, ಸುಮಾರು 20% ಬೆಕ್ಕು ಮತ್ತು ನಾಯಿಗಳಲ್ಲಿ ಒಂದು ವರ್ಷದೊಳಗೆ ಮಧುಮೇಹ ಕಂಡುಬಂದಿದ್ದರೆ ಅವುಗಳನ್ನು ಕಡಿಮೆ ಮಾಡಬಹುದಾಗಿದೆ. ಅದರಲ್ಲಿಯೂ ಬೆಕ್ಕುಗಳು ಹಲವು ಸಂದರ್ಭಗಳಲ್ಲಿ, ರೋಗವನ್ನು ಬಹುಬೇಗ ಗುಣಪಡಿಸಿಕೊಳ್ಳುತ್ತದೆ, ಆದರೆ ನಾಯಿಗಳು ಈ ರೋಗದಿಂದ ಚೇತರಿಸಿಕೊಳ್ಳುವುದು ಹೆಚ್ಚು ಕಷ್ಟಕರ ಎಂಬುದು ಸಂಶೋಧನೆಯಿಂದ ಸಾಬೀತಾಗಿದೆ.
ನಾಯಿ, ಬೆಕ್ಕುಗಳಲ್ಲಿ ಮಧುಮೇಹ ರೋಗ ಕಂಡುಬರುವುದು ಸಾಕಷ್ಟು ಸಾಮಾನ್ಯವಾಗಿದೆ. ಸುಮಾರು 1.5% ನಾಯಿಗಳು ಮತ್ತು 0.5-1% ಬೆಕ್ಕುಗಳಲ್ಲಿ ಮಧುಮೇಹ ಕಂಡುಬರುತ್ತಿರುವುದು ಸಂಶೋಧನೆಗಳಿಂದ ಬಹಿರಂಗವಾಗಿದೆ. ಅದರಲ್ಲಿಯೂ ಕೆಲವು ತಳಿಗಳು ಮತ್ತು ಹೆಣ್ಣು ನಾಯಿ ಈ ರೋಗಕ್ಕೆ ತುತ್ತಾಗುವ ಅಪಾಯ ಹೆಚ್ಚಾಗಿದೆ. ಅಲ್ಲದೆ, ಮಧ್ಯವಯಸ್ಕ ಮತ್ತು ವಯಸ್ಸಾದ ನಾಯಿ ಮತ್ತು ಬೆಕ್ಕುಗಳಲ್ಲಿಯೂ ಈ ರೋಗ ಕಂಡುಬರುತ್ತದೆ. ಜೊತೆಗೆ ಯಾವುದಾದರೂ ನಾಯಿ ಮತ್ತು ಬೆಕ್ಕುಗಳು ಅಧಿಕ ತೂಕ ಹೊಂದಿದ್ದರೆ, ಅಂತವು ಈ ರೋಗಕ್ಕೆ ಬಲಿಯಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ.
ಇದನ್ನೂ ಓದಿ: ಮೂತ್ರ ವಿಸರ್ಜಿಸುವಾಗ ನೊರೆ ಉಂಟಾಗುತ್ತಿದೆಯೇ? ಕಾರಣ ಇಲ್ಲಿ ತಿಳಿದುಕೊಳ್ಳಿ
ಈ ರೋಗಲಕ್ಷಣಗಳು ಸಾಮಾನ್ಯವಾಗಿ ವಾರಗಳಿಂದ ತಿಂಗಳುಗಳ ವರೆಗೆ ಕ್ರಮೇಣ ಕಾಣಿಸಿಕೊಳ್ಳುತ್ತವೆ. ಮಧುಮೇಹವನ್ನು ಗುರುತಿಸುವಲ್ಲಿ ವಿಳಂಬವಾದರೆ, ಬೆಕ್ಕು ಮತ್ತು ನಾಯಿಗಳ ಆರೋಗ್ಯವು 24-48 ಗಂಟೆಗಳಲ್ಲಿ ವೇಗವಾಗಿ ಹದಗೆಡಬಹುದು ಹಾಗಾಗಿ ಅವುಗಳಿಗೆ ತಕ್ಷಣ ಔಷಧ ನೀಡದಿದ್ದರೆ, ಸಾಯಬಹುದು.
*ಹೆಚ್ಚಿದ ಬಾಯಾರಿಕೆ ಮತ್ತು ಮೂತ್ರವಿಸರ್ಜನೆ
*ಹಸಿವು ಹೆಚ್ಚಾಗುವುದು
*ತೂಕ ನಷ್ಟ
*ಮಧುಮೇಹ ಹೊಂದಿರುವ ಕೆಲವು ನಾಯಿ ಮತ್ತು 50% ಬೆಕ್ಕುಗಳು ಹಸಿವಿನ ಕೊರತೆಯನ್ನು ಹೊಂದಿರುತ್ತವೆ.
*ಮಧುಮೇಹದಿಂದ ಬಳಲುತ್ತಿರುವ ಬೆಕ್ಕುಗಳು ತಮ್ಮ ಭಂಗಿಯನ್ನು ಆಗಾಗ ಬದಲಾಯಿಸುತ್ತವೆ ಜೊತೆಗೆ ಜಿಗಿಯುವುದು, ದೂರ ಓಡುವುದನ್ನು ಸಹ ನಿಲ್ಲಿಸುತ್ತವೆ.
*ಮಧುಮೇಹದಿಂದ ಬಳಲುತ್ತಿರುವ ನಾಯಿಗಳಲ್ಲಿ ಕಣ್ಣಿನ ಪೊರೆಗೆ ಅಪಾಯವಿರುತ್ತದೆ.
ಸರಿಯಾದ ಮೇಲ್ವಿಚಾರಣೆ ಮತ್ತು ಉತ್ತಮ ಮದ್ದು ನೀಡಿ ಈ ರೋಗವನ್ನು ಗುಣಪಡಿಸಬಹುದು. ಬೆಕ್ಕುಗಳಿಗೆ ಮೊದಲೇ ಮದ್ದು ನೀಡಿದರೆ, ಚೇತರಿಸಿಕೊಳ್ಳಲು ಕಡಿಮೆ ಸಮಯ ತೆಗೆದುಕೊಳ್ಳುತ್ತದೆ. ಜೊತೆಗೆ ನಾಯಿ ಮತ್ತು ಬೆಕ್ಕು ಬೇಗನೆ ಔಷಧಗಳನ್ನು ಪಡೆದರೆ, ಅವುಗಳು ಬೇಗ ಗುಣಪಡಿಸುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ. ಅಲ್ಲದೆ, ಚಿಕಿತ್ಸೆಯ ಸಮಯದಲ್ಲಿ ಅವರ ಆಹಾರ ಪದ್ದತಿಯನ್ನು ಬದಲಾಯಿಸುವುದು ಬಹಳ ಮುಖ್ಯ. ಅದರಲ್ಲಿಯೂ ಕಡಿಮೆ ಕಾರ್ಬೋಹೈಡ್ರೇಟ್ ಆಹಾರವು ಅವರಿಗೆ ಉತ್ತಮ ಎಂಬುದು ಸಾಬೀತಾಗಿದೆ. ಜೊತೆಗೆ ಇಂತಹ ಆಹಾರ ಅವುಗಳ ಚೇತರಿಕೆಗೆ ಸಹಾಯ ಮಾಡುತ್ತದೆ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ