ಚಳಿಗಾಲದಲ್ಲಿ ರಾತ್ರಿ ಸಾಕ್ಸ್ ಧರಿಸಿ ಮಲಗಬೇಕೇ ಅಥವಾ ಬೇಡವೇ ತಿಳಿದುಕೊಳ್ಳಿ
ಚಳಿಗಾಲದ ರಾತ್ರಿಗಳಲ್ಲಿ ಸಾಮಾನ್ಯವಾಗಿ ದಪ್ಪ ಮತ್ತು ಬೆಚ್ಚಗಿನ ಬಟ್ಟೆಗಳನ್ನು ಹಾಕಿಕೊಳ್ಳುತ್ತಾರೆ. ವಿಶೇಷವಾಗಿ ಹೆಚ್ಚಿನವರು ಮಲಗುವಾಗ ಸಾಕ್ಸ್ ಧರಿಸುವುದನ್ನು ನೀವು ನೋಡಿರಬಹುದು. ರಾತ್ರಿ ಸಮಯದಲ್ಲಿ ನಿದ್ರೆ ಸರಿಯಾಗಿ ಆಗಬೇಕು ಎನ್ನುವ ಸಲುವಾಗಿ ಸಾಕ್ಸ್ ಧರಿಸುತ್ತಾರೆ. ಇದು ಕೆಲವರಿಗೆ ಅಭ್ಯಾಸವಾಗಿರುತ್ತದೆ. ಆದರೆ ಈ ಅಭ್ಯಾಸ ಪ್ರಯೋಜನಕಾರಿಯೇ ಅಥವಾ ಹಾನಿಕಾರಕವೇ ಎಂಬುದನ್ನು ಸರಿಯಾಗಿ ತಿಳಿದುಕೊಳ್ಳಿ. ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
ಚಳಿಗಾಲದಲ್ಲಿ ನಮ್ಮ ದೇಹಕ್ಕೆ ಉಷ್ಣತೆಯ ಅಗತ್ಯವಿರುತ್ತದೆ. ಈ ವಿಷಯ ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರುತ್ತದೆ. ಹಾಗಾಗಿ ಜನರು ಶೀತ ಅಥವಾ ಚಳಿ ಹೆಚ್ಚಿರುವ ಸಂದರ್ಭಗಳಲ್ಲಿ ದೇಹದಿಂದ ಪಾದಗಳ ವರೆಗೆ ಬೆಚ್ಚಗಿರುವ ಬಟ್ಟೆಯನ್ನು ಧರಿಸುತ್ತಾರೆ. ಅದರಲ್ಲಿಯೂ ಕೆಲವರಿಗೆ ಪಾದಗಳು ಹೆಚ್ಚಾಗಿ ತಂಪಾಗುವುದರಿಂದ ರಾತ್ರಿ ಮಲಗುವ ಸಮಯದಲ್ಲಿಯೂ ದಪ್ಪ ಮತ್ತು ಬೆಚ್ಚಗಿನ ಬಟ್ಟೆಗಳನ್ನು ಹಾಕಿಕೊಳ್ಳುತ್ತಾರೆ. ವಿಶೇಷವಾಗಿ ಅವರಲ್ಲಿ ಹೆಚ್ಚಿನವರು ಮಲಗುವಾಗ ಸಾಕ್ಸ್ ಧರಿಸುತ್ತಾರೆ. ಇದು ಕೆಲವರಿಗೆ ಅಭ್ಯಾಸವಾಗಿರುತ್ತದೆ. ಆದರೆ ಈ ಅಭ್ಯಾಸ ಪ್ರಯೋಜನಕಾರಿಯೇ ಅಥವಾ ಹಾನಿಕಾರಕವೇ ಎಂಬುದನ್ನು ಸರಿಯಾಗಿ ತಿಳಿದುಕೊಳ್ಳಿ. ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
ಚಳಿಗಾಲದಲ್ಲಿ ಮಲಗುವ ಮೊದಲು ಸಾಕ್ಸ್ ಧರಿಸಬೇಕೆ ಅಥವಾ ಬೇಡವೇ ಎಂಬುದು ನಿದ್ರೆಯ ಗುಣಮಟ್ಟ, ಕಾಲಿನ ಆರೋಗ್ಯ ಮತ್ತು ವೈಯಕ್ತಿಕ ಆಯ್ಕೆಯಾಗಿರುತ್ತದೆ. ಇಂತಹ ಅನೇಕ ಅಂಶಗಳನ್ನು ಅವಲಂಬಿಸಿ ಸಾಕ್ಸ್ ಧರಿಸುತ್ತಾರೆ. ಕೆಲವರು ರಾತ್ರಿ ಸಮಯದಲ್ಲಿ ನಿದ್ರೆ ಸರಿಯಾಗಿ ಆಗಬೇಕು ಎನ್ನುವ ಸಲುವಾಗಿ ಸಾಕ್ಸ್ ಧರಿಸುತ್ತಾರೆ. ಏಕೆಂದರೆ ನಾವು ಮಲಗಿದಾಗ ದೇಹವು ತಣ್ಣಗಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಸಾಕ್ಸ್ ಧರಿಸುವುದು ಪರಿಹಾರ ನೀಡುತ್ತದೆ. ಆದರೆ ಚಳಿಗಾಲದಲ್ಲಿ ಸಾಕ್ಸ್ ನೊಂದಿಗೆ ಮಲಗುವ ಕೆಲವು ಅನುಕೂಲಗಳು ಮತ್ತು ಅನಾನುಕೂಲಗಳನ್ನು ತಿಳಿದುಕೊಳ್ಳುವುದು ಒಳ್ಳೆಯದು.
ಪ್ರಯೋಜನಗಳೇನು?
ಚಳಿಗಾಲದಲ್ಲಿ ಸಾಕ್ಸ್ ಧರಿಸಿ ಮಲಗಿದರೆ ದೇಹ ಬೆಚ್ಚಗಿರುತ್ತದೆ. ಜೊತೆಗೆ ಪಾದಗಳ ಚರ್ಮ ಒರಟಾಗಿ ಒಣಗದಂತೆ ರಕ್ಷಿಸಲು ಇದನ್ನು ಹಾಕಿಕೊಳ್ಳುತ್ತಾರೆ. ಇದನ್ನು ಹಾಕಿಕೊಳ್ಳುವುದರಿಂದ ಪಾದಗಳಲ್ಲಿನ ಬಿರುಕುಗಳನ್ನು ಸಹ ನಿವಾರಿಸಬಹುದು. ಆದರೆ ವಾಸ್ತವದಲ್ಲಿ ಚಳಿಗಾಲದ ರಾತ್ರಿಗಳಲ್ಲಿ ಸಾಕ್ಸ್ ಧರಿಸಿ ಮಲಗುವ ಪ್ರಯೋಜನಗಳಿಗಿಂತ ಹೆಚ್ಚಿನ ಅನಾನುಕೂಲತೆಗಳಿವೆ. ಹಾಗಾದರೆ ಇದರಿಂದ ಯಾವ ರೀತಿಯ ಸಮಸ್ಯೆ ಉಂಟಾಗುತ್ತದೆ ತಿಳಿಯಿರಿ.
ಚಡಪಡಿಕೆ
ಚಳಿಗಾಲದ ಸಮಯದಲ್ಲಿ, ರಾತ್ರಿ ಸಾಕ್ಸ್ ಧರಿಸಿ ಮಲಗುವುದರಿಂದ ರಕ್ತನಾಳಗಳು ಸಂಕುಚಿತಗೊಳ್ಳುತ್ತವೆ. ಹಾಗಾಗಿ ಇಂತಹ ಸಂದರ್ಭಗಳಲ್ಲಿ, ಉಣ್ಣೆ ಸಾಕ್ಸ್ ಅಥವಾ ತುಂಬಾ ಬಿಸಿಯಾಗುವ ಬಟ್ಟೆಗಳನ್ನು ಧರಿಸಿ ಮಲಗುವುದು ಒಳ್ಳೆಯದಲ್ಲ. ದೇಹದಲ್ಲಿ ಸಾಕಷ್ಟು ಪ್ರಮಾಣದ ಶಾಖ ಉಂಟಾದರೆ ಇದರಿಂದ ಚಡಪಡಿಕೆ, ಆತಂಕ ಮತ್ತು ಕಡಿಮೆ ರಕ್ತದೊತ್ತಡದಂತಹ ಸಮಸ್ಯೆಗಳು ಹೆಚ್ಚಾಗುತ್ತವೆ.
ಉಸಿರಾಟದ ತೊಂದರೆ
ರಾತ್ರಿಯಲ್ಲಿ ಬಿಗಿಯಾದ ಸಾಕ್ಸ್ ಹಾಕಿ ಮಲಗುವುದು ನರಗಳ ಮೇಲೆ ಒತ್ತಡವನ್ನುಂಟು ಮಾಡುತ್ತದೆ, ಇದರಿಂದಾಗಿ ಹೃದಯ ರಕ್ತವನ್ನು ಪಂಪ್ ಮಾಡಲು ಹೆಚ್ಚು ಶ್ರಮಿಸಬೇಕಾಗುತ್ತದೆ, ಇದರಿಂದಾಗಿ ಉಸಿರಾಡಲು ಕಷ್ಟವಾಗುತ್ತದೆ.
ಸೋಂಕು
ದಿನವಿಡೀ ಸಾಕ್ಸ್ ಧರಿಸಿ ರಾತ್ರಿ ಮಲಗಿದರೆ, ಚರ್ಮಕ್ಕೆ ಸಂಬಂಧಿಸಿದ ಸೋಂಕು ಉಂಟಾಗುವ ಅಪಾಯವಿರುತ್ತದೆ. ಜೊತೆಗೆ ಈ ಅಭ್ಯಾಸದಿಂದ ಚರ್ಮಕ್ಕೆ ಸಂಬಂಧಿಸಿದ ಇತರ ಸಮಸ್ಯೆಗಳು ಸಹ ಬರಬಹುದು.
ಇದನ್ನೂ ಓದಿ: ಚಳಿಗಾಲದಲ್ಲಿ ಶಿಶುವಿಗೆ ಈ ಎಣ್ಣೆಯಿಂದ ಮಸಾಜ್ ಮಾಡಿ, ಸ್ನಾಯುಗಳು ಬಲಗೊಳ್ಳುತ್ತೆ
ರಕ್ತ ಪರಿಚಲನೆ
ರಾತ್ರಿಯಲ್ಲಿ ಸಾಕ್ಸ್ ಧರಿಸಿ ಮಲಗುವುದರಿಂದ ದೇಹಕ್ಕೆ ರಕ್ತದ ಹರಿವು ಕಡಿಮೆಯಾಗುವ ಅಪಾಯ ಹೆಚ್ಚಾಗಿರುತ್ತದೆ. ತುಂಬಾ ಬಿಗಿಯಾದ ಸಾಕ್ಸ್ ಧರಿಸುವುದರಿಂದ ರಕ್ತ ಪರಿಚಲನೆ ಹದಗೆಡುತ್ತದೆ. ಹಾಗಾಗಿ ಸಾಕ್ಸ್ ಧರಿಸುವ ಮುನ್ನ ಯೋಚಿಸಿ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ