
ಮಕ್ಕಳನ್ನು ಹುಟ್ಟಿನಿಂದ ಐದು ವರ್ಷದ ವರೆಗೆ ಎಷ್ಟು ಜಾಗರೂಕತೆಯಿಂದ ನೋಡಿಕೊಂಡರು ಸಾಲುವುದಿಲ್ಲ. ಈ ಸಮಯದಲ್ಲಿ ಮಕ್ಕಳಲ್ಲಿ ನಾನಾ ರೀತಿಯ ಸಮಸ್ಯೆಗಳು ಕಂಡುಬರುವುದು ಸಹಜ. ಎಷ್ಟೇ ಕಾಳಜಿ ಮಾಡಿದರೂ ಒಂದಲ್ಲಾ ಒಂದು ರೀತಿಯ ತೊಂದರೆ ತಪ್ಪಿದ್ದಲ್ಲ. ಅದರಲ್ಲಿಯೂ ಮಕ್ಕಳ ಚರ್ಮ ತುಂಬಾ ಸೂಕ್ಷ್ಮವಾಗಿರುವುದರಿಂದ ಬಹಳ ಎಚ್ಚರಿಕೆಯಿಂದ ನೋಡಿಕೊಳ್ಳಬೇಕಾಗುತ್ತದೆ. ಇಲ್ಲವಾದಲ್ಲಿ ಪರಿಸರದಲ್ಲಿ ಆಗುವಂತಹ ಬದಲಾವಣೆಗಳು ಸಹ ಮಕ್ಕಳಲ್ಲಿ ಆರೋಗ್ಯ (Health) ಸಮಸ್ಯೆಗಳನ್ನು ಉಂಟುಮಾಡಬಹುದು. ಇನ್ನು ಮಕ್ಕಳು ಚಿಕ್ಕವರಿರುವಾಗ ಅವರಿಗೆ ಹೆಚ್ಚಾಗಿ ಡೈಪರ್‌ಗಳನ್ನು ಹಾಕಲಾಗುತ್ತದೆ. ಇತ್ತೀಚಿಗೆ ಈ ಅಭ್ಯಾಸ ಸಾಮಾನ್ಯವಾಗಿ ಬಿಟ್ಟಿದೆ. ಆದರೆ ಈ ಡೈಪರ್‌ಗಳು (Diaper) ಎಲ್ಲಾ ಮಕ್ಕಳ ಚರ್ಮಕ್ಕೆ ಸೂಕ್ತವಲ್ಲ. ಇದರಿಂದ ನಾನಾ ರೀತಿಯ ಚರ್ಮ ಸಂಬಂಧಿ ಸಮಸ್ಯೆಗಳು ಕಂಡುಬರುತ್ತದೆ. ಆದರೆ ಕೆಲವು ಸರಳ ಸಲಹೆಗಳ ಮೂಲಕ ಡೈಪರ್ ನಿಂದ ಉಂಟಾಗುವ ದದ್ದುಗಳನ್ನು ಕಡಿಮೆ ಮಾಡಬಹುದು. ಈ ಬಗ್ಗೆ ಮತ್ತಷ್ಟು ಮಾಹಿತಿಯನ್ನು ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.
ಡೈಪರ್‌ಗಳು ಕೆಲವು ಮಕ್ಕಳಲ್ಲಿ ದದ್ದುಗಳು ಕಾಣಿಸಿಕೊಳ್ಳುವುದಕ್ಕೆ ಕಾರಣವಾಗುತ್ತದೆ. ಇದು ಎಲ್ಲ ಮಕ್ಕಳಿಗೂ ಸೂಕ್ತವಲ್ಲ. ಕೆಲವರಲ್ಲಿ ದದ್ದುಗಳ ಜೊತೆಗೆ ಚರ್ಮದಲ್ಲಿ ಕಿರಿಕಿರಿಯನ್ನು ಕೂಡ ಉಂಟಾಗುತ್ತದೆ. ಈ ರೀತಿಯಾದಾಗ ಪೋಷಕರು ಆತಂಕಕ್ಕೆ ಒಳಗಾಗಿ ಅವರನ್ನು ತಕ್ಷಣ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಾರೆ. ಆದರೆ ಇವುಗಳಿಗೆ ಕೆಲವು ಸರಳ ಸಲಹೆಗಳಿವೆ. ಅವುಗಳನ್ನು ಸರಿಯಾದ ರೀತಿಯಲ್ಲಿ ಪಾಲನೆ ಮಾಡಿದಲ್ಲಿ ಡೈಪರ್ ನಿಂದ ಉಂಟಾಗುವ ದದ್ದು, ಕಿರಿಕಿರಿಯನ್ನು ಕಡಿಮೆ ಮಾಡಬಹುದು.
ಡೈಪರ್ ನಿಂದ ಉಂಟಾಗುವ ದದ್ದುಗಳು ಮತ್ತು ಎಸ್ಜಿಮಾವನ್ನು ಕಡಿಮೆ ಮಾಡುವಲ್ಲಿ ತಾಯಿಯ ಎದೆ ಹಾಲು ತುಂಬಾ ಚೆನ್ನಾಗಿ ಕೆಲಸ ಮಾಡುತ್ತದೆ. ಎದೆ ಹಾಲು ಅನೇಕ ಪೋಷಕಾಂಶಗಳನ್ನು ಹೊಂದಿದ್ದು, ದದ್ದುಗಳು ಮತ್ತು ಎಸ್ಜಿಮಾ ಇರುವ ಪ್ರದೇಶಗಳಲ್ಲಿ ಎದೆ ಹಾಲನ್ನು ತೆಗೆದು ಸ್ವಲ್ಪ ಸ್ವಲ್ಪವೇ ಹಚ್ಚುವುದರಿಂದ ಈ ದದ್ದುಗಳು ಕಡಿಮೆಯಾಗಲು ಸಹಾಯವಾಗುತ್ತದೆ.
ಇದನ್ನೂ ಓದಿ: ಕರ್ನಾಟಕದ 41,000 ಮಕ್ಕಳಲ್ಲಿ ಜನ್ಮಜಾತ ಹೃದಯ ಕಾಯಿಲೆ: ಸಮೀಕ್ಷೆಯಲ್ಲಿ ಬಯಲಾಯ್ತು ಆಘಾತಕಾರಿ ಅಂಶ
ಪ್ರತಿಯೊಬ್ಬರ ಮನೆಯಲ್ಲಿಯೂ ಸಿಗುವ ತೆಂಗಿನ ಎಣ್ಣೆಯು ಡೈಪರ್ ನಿಂದ ಉಂಟಾಗುವ ದದ್ದುಗಳು ಮತ್ತು ಕಿರಿಕಿರಿಯನ್ನು ಸಹ ಕಡಿಮೆ ಮಾಡುತ್ತದೆ. ಅಡುಗೆಗೆ ಮತ್ತು ಇನ್ನಿತರ ಉಪಯೋಗಕ್ಕಾಗಿ ಬಳಸುವ ತೆಂಗಿನ ಎಣ್ಣೆಯಲ್ಲಿ ಉತ್ತಮ ಪೋಷಕಾಂಶಗಳಿವೆ. ಡೈಪರ್ ಹಾಕುವ ಮೊದಲು ತೆಂಗಿನ ಎಣ್ಣೆಯನ್ನು ಹಚ್ಚುವುದರಿಂದ ಉರಿ, ತುರಿಕೆ ಮತ್ತು ಅಸ್ವಸ್ಥತೆ ಕಡಿಮೆಯಾಗುತ್ತದೆ.
ವ್ಯಾಸಲೀನ್ ಬಳಸುವುದರಿಂದ ಡೈಪರ್ ಧರಿಸಿ ಉಂಟಾಗುವ ದದ್ದುಗಳು, ಸುಡುವಿಕೆ, ತುರಿಕೆ ಮತ್ತು ದದ್ದುಗಳನ್ನು ಕಡಿಮೆ ಮಾಡಬಹುದು. ವ್ಯಾಸಲೀನ್ ಚರ್ಮ ಮೃದುವಾಗಿರಲು ಸಹಾಯ ಮಾಡುವ ಮೂಲಕ ಸಮಸ್ಯೆಯನ್ನು ನಿವಾರಿಸಲು ಸಹಾಯ ಮಾಡುತ್ತದೆ. ಇವೆಲ್ಲವನ್ನೂ ಅನುಸರಿಸಿದರೆ ಡೈಪರ್ ಬಳಕೆ ಮಾಡಿದರೂ ಯಾವುದೇ ರೀತಿಯ ಸಮಸ್ಯೆಗಳು ಕಂಡು ಬರುವುದಿಲ್ಲ. ನೀವು ಕೂಡ ಇತ್ತೀಚಿಗೆ ತಾಯಿಯಾಗಿ ನಿಮ್ಮ ಮಗುವಿನ ಲಾಲನೆ ಪಾಲನೆ ಮಾಡುತ್ತಿದ್ದು, ನಿಮಗೂ ಮಕ್ಕಳಿಗೆ ಡೈಪರ್ ಹಾಕುವುದಕ್ಕೆ ಭಯವಿದ್ದರೆ ಈ ಮೂರು ಸುಲಭ ವಿಧಾನವನ್ನು ಅನುಸರಿಸಿ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ