ರಾತ್ರಿ ಹಾಲು ಕುಡಿದು ಮಲಗಿದರೆ ಜೀರ್ಣಕ್ರಿಯೆ ಸುಲಭವಾಗುತ್ತಾ?

|

Updated on: Jan 25, 2024 | 11:39 AM

ನಿದ್ರಾಹೀನತೆಗೆ ಅನೇಕ ವಿಷಯಗಳು ಕಾರಣವಾಗುತ್ತವೆ. ನಾವು ಸೇವಿಸುವ ಆಹಾರ ನಮ್ಮ ಆರೋಗ್ಯದ ಮೇಲೆ ಬಹಳ ಪರಿಣಾಮ ಬೀರುತ್ತದೆ. ನಿದ್ರೆಯ ಮೇಲೆ ಕೂಡ ನಮ್ಮ ಆಹಾರ ಪರಿಣಾಮ ಬೀರುತ್ತದೆ. ರಾತ್ರಿ ಮಲಗುವಾಗ 1 ಲೋಟ ಬಿಸಿ ಹಾಲು ಕುಡಿಯಬೇಕೆಂದು ಹಿರಿಯರು ಹೇಳುತ್ತಾರೆ. ಅದಕ್ಕೆ ಕಾರಣವೇನು ಗೊತ್ತಾ?

ರಾತ್ರಿ ಹಾಲು ಕುಡಿದು ಮಲಗಿದರೆ ಜೀರ್ಣಕ್ರಿಯೆ ಸುಲಭವಾಗುತ್ತಾ?
ಸಾಂದರ್ಭಿಕ ಚಿತ್ರ
Follow us on

ನಮ್ಮ ಬಿಡುವಿಲ್ಲದ ಜೀವನದ ನಡುವೆ, ಒಳ್ಳೆಯ ನಿದ್ರೆಯ ಪ್ರಾಮುಖ್ಯತೆ ಮತ್ತು ನಮ್ಮ ದೇಹಕ್ಕೆ ನಿದ್ರೆಯಿಂದ ರಾತ್ರಿಯಿಡೀ ಸಿಗುವ ಪೋಷಣೆಯನ್ನು ಆಗಾಗ ನಾವು ನಿರ್ಲಕ್ಷಿಸುತ್ತೇವೆ. ರಾತ್ರಿ ಮಲಗುವಾಗ ಹಾಲು ಕುಡಿದು ಮಲಗುವುದರಿಂದ ಎಷ್ಟೆಲ್ಲ ಪ್ರಯೋಜನಗಳಿವೆ ಎಂಬುದು ನಿಮಗೆ ಗೊತ್ತಾ? ಹಾಲು ನಮ್ಮ ಜೀರ್ಣಕ್ರಿಯೆಯ ಆರೋಗ್ಯವನ್ನು ಕಾಪಾಡಲು ಸಹಾಯ ಮಾಡುತ್ತದೆ. ಹಾಲು ಕೇವಲ ಪಾನೀಯವಲ್ಲ. ಇದು ನಮ್ಮ ಜೀರ್ಣಾಂಗ ವ್ಯವಸ್ಥೆಯ ಸಾಮಾನ್ಯ ಆರೋಗ್ಯಕ್ಕೆ ಸಹಾಯ ಮಾಡುವ ಪೋಷಕಾಂಶಗಳ ಸಮೃದ್ಧ ಮೂಲವಾಗಿದೆ.

ಹಾಲು ಮತ್ತು ಕರುಳಿನ ಆರೋಗ್ಯದ ನಡುವಿನ ಸಂಪರ್ಕವು ರಾತ್ರಿಯಲ್ಲಿ ಹೆಚ್ಚು ಗೋಚರಿಸುತ್ತದೆ. ರಾತ್ರಿ ಮಲಗುವಾಗ ಹಾಲು ಕುಡಿಯುವುದು ಆರೋಗ್ಯಕರ ಆಯ್ಕೆಯಾಗಿದೆ. ಹಾಲು ನಮ್ಮ ಜೀರ್ಣಾಂಗ ವ್ಯವಸ್ಥೆಯನ್ನು ರಾತ್ರೋರಾತ್ರಿ ಹೇಗೆ ಪೋಷಿಸುತ್ತದೆ ಎಂಬುದರ ಬಗ್ಗೆ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ಬಿಸಿ ಹಾಲು ಕುಡಿದರೆ ನಿಜಕ್ಕೂ ಚೆನ್ನಾಗಿ ನಿದ್ರೆ ಬರುತ್ತಾ?

ಕ್ಯಾಲ್ಸಿಯಂ ಮತ್ತು ವಿಟಮಿನ್ ಡಿಯಂತಹ ಖನಿಜಗಳು ಅಧಿಕವಾಗಿರುವ ಹಾಲು ಕುಡಿಯವುದು ಬಹಳ ಆರೋಗ್ಯಕರವಾಗಿದೆ. ಇದು ನಾವು ನಿದ್ರೆ ಮಾಡುವಾಗ ನಮ್ಮ ಜೀರ್ಣಾಂಗ ವ್ಯವಸ್ಥೆಯನ್ನು ಪುನಃಸ್ಥಾಪಿಸುತ್ತದೆ. ಹಾಲಿನ ನಿರ್ದಿಷ್ಟ ಸಂಯೋಜನೆಯು ಜೀರ್ಣಾಂಗ ವ್ಯವಸ್ಥೆಯನ್ನು ಶಮನಗೊಳಿಸಲು ಮತ್ತು ಸರಿಪಡಿಸಲು ಸಹಾಯ ಮಾಡುತ್ತದೆ.ಹಾಲು ಹೊಟ್ಟೆಯಲ್ಲಿ ಆರೋಗ್ಯಕರ ಬ್ಯಾಕ್ಟೀರಿಯಾದ ಬೆಳವಣಿಗೆಗೆ ಕೊಡುಗೆ ನೀಡುವ ಪ್ರಯೋಜನಕಾರಿ ಪ್ರೋಬಯಾಟಿಕ್‌ಗಳನ್ನು ಹೊಂದಿರುತ್ತದೆ. ಈ ಪ್ರೋಬಯಾಟಿಕ್‌ಗಳು ಉತ್ತಮ ಜೀರ್ಣಕ್ರಿಯೆ ಮತ್ತು ಪೋಷಕಾಂಶಗಳ ಹೀರಿಕೊಳ್ಳುವಿಕೆಗೆ ಸಹಾಯ ಮಾಡುತ್ತದೆ.

ಇದನ್ನೂ ಓದಿ: ಹಾಲು ಹಾಕಿದ ಟೀ ಕುಡಿಯುತ್ತೀರಾ? ಈ ಅಪಾಯಗಳ ಬಗ್ಗೆಯೂ ತಿಳಿದಿರಲಿ

ಹಾಲು ಟ್ರಿಪ್ಟೊಫಾನ್‌ನ ನೈಸರ್ಗಿಕ ಮೂಲವಾಗಿದೆ. ಇದು ಅಮೈನೋ ಆಮ್ಲವಾಗಿದ್ದು, ನಿದ್ರೆಯ ಹಾರ್ಮೋನ್ ಮೆಲಟೋನಿನ್ ರಚನೆಗೆ ಸಹಾಯ ಮಾಡುತ್ತದೆ. ರಾತ್ರಿಯ ಸಮಯದಲ್ಲಿ ಮೆಲಟೋನಿನ್ ಮಟ್ಟವು ಹೆಚ್ಚಾಗುತ್ತದೆ. ಇದು ನಿದ್ರೆಯ ಗುಣಮಟ್ಟವನ್ನು ಸುಧಾರಿಸುತ್ತದೆ. ಹಾಗೇ, ಜೀರ್ಣಕಾರಿ ಅಂಗಗಳನ್ನು ಸರಿಪಡಿಸಲು ಮತ್ತು ಪುನರ್ಯೌವನಗೊಳಿಸಲು ಸಹಾಯ ಮಾಡುತ್ತದೆ. ಹಾಲಿನಲ್ಲಿ ಹೇರಳವಾಗಿರುವ ಖನಿಜವಾದ ಕ್ಯಾಲ್ಸಿಯಂ ಮೂಳೆಯ ಆರೋಗ್ಯಕ್ಕೆ ಮುಖ್ಯವಾಗಿದೆ. ಹಾಲಿನ ಮೂಲಕ ಸಾಕಷ್ಟು ಕ್ಯಾಲ್ಸಿಯಂ ಸೇವನೆಯು ನಯವಾದ ಮತ್ತು ಪರಿಣಾಮಕಾರಿ ಜೀರ್ಣಕಾರಿ ಪ್ರಕ್ರಿಯೆಗಳನ್ನು ಉತ್ತೇಜಿಸುತ್ತದೆ. ಆದ್ದರಿಂದ ಮಲಬದ್ಧತೆಯನ್ನು ಕಡಿಮೆ ಮಾಡುತ್ತದೆ.

ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ