ತಲೆ ನೋವು ಯಾರಿಗೆ ಇಲ್ಲ ಹೇಳಿ. ಪ್ರತಿಯೊಬ್ಬರೂ ಒಂದಲ್ಲಾ ಒಂದು ಕಾರಣದಿಂದ ತಲೆನೋವನ್ನು ಅನುಭವಿಸುತ್ತಾರೆ. ಅದರಲ್ಲೂ ಕೆಲವರಿಗಂತೂ ಪದೇ ಪದೇ ತಲೆನೋವು, ಮೈಗ್ರೇನ್ ಸಮಸ್ಯೆ ಕಾಡುತ್ತಿರುತ್ತದೆ. ಯಾವ ನೋವನ್ನು ಬೇಕಾದರೂ ಸಹಿಸಿಕೊಳ್ಳಬಹುದು ಆದರೆ ಈ ತಲೆನೋವನ್ನು ಮಾತ್ರ ಸಹಿಸಿಕೊಳ್ಳಲು ಸಾಧ್ಯವಿಲ್ಲ, ಇದು ಇಡೀ ದಿನವನ್ನೇ ಹಾಳು ಮಾಡಿಬಿಡುತ್ತದೆ ಎಂದು ಹಲವರು ಹೇಳುತ್ತಿರುತ್ತಾರೆ. ನೀವು ಕೂಡಾ ಇದೇ ರೀತಿ ಪದೇ ಪದೇ ತಲೆನೋವಿನ ಸಮಸ್ಯೆಯನ್ನು ಅನುಭವಿಸುತ್ತಿದ್ದೀರಾ? ತಲೆನೋವಿನ ಮಾತ್ರೆ ಕುಡಿದರೂ ಈ ಸಮಸ್ಯೆ ಕಡಿಮೆಯಾಗಿಲ್ವಾ? ಹಾಗಾದ್ರೆ ಈ ಸಮಸ್ಯೆಯಿಂದ ಹೇಗಪ್ಪಾ ಮುಕ್ತಿ ಪಡೆಯುವುದು ಎಂದು ಚಿಂತಿಸುತ್ತಿದ್ದೀರಾ? ಹಾಗಿದ್ದರೆ ಈ ಯುವಕ ಹೇಳಿರುವ ಈ ಒಂದು ಸಿಂಪಲ್ ಟಿಪ್ಸ್ ಫಾಲೋ ಮಾಡಿ. ನೀವು ಅತೀ ಶೀಘ್ರದಲ್ಲಿ ತಲೆನೋವಿನ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು. ಈ ಕುರಿತ ವಿಡಿಯೋ ಇಲ್ಲಿದೆ ನೋಡಿ.
ಈ ವಿಡಿಯೋವನ್ನು ಯೋಗ ಟೀಚರ್ ಆಗಿರುವಂತಹ ವಿನಯ್ (@vinayyoga) ಎಂಬವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಅದರಲ್ಲಿ ಮೈಗ್ರೇನ್ ಮತ್ತು ತಲೆನೋವಿನ ಸಮಸ್ಯೆಯಿಂದ ಶೀಘ್ರದಲ್ಲಿ ಪರಿಹಾರವನ್ನು ಪಡೆಯುವುದು ಹೇಗೆ ಎಂಬುದನ್ನು ತಿಳಿಸಿಕೊಟ್ಟಿದ್ದಾರೆ.
ವಿಡಿಯೋದಲ್ಲಿ ಮೈಗ್ರೇನ್ ಅಥವಾ ತಲೆನೋವಿ ಸಮಸ್ಯೆ ನಿಮಗಿದ್ದರೆ ಮೊದಲಿಗೆ ಒಂದು ಪಾತ್ರೆಯಲ್ಲಿ ಶುದ್ಧ ನೀರನ್ನು ತೆಗೆದುಕೊಂಡು, ಅದನ್ನು ಸ್ವಲ್ಪ ಕುದಿಸಿ. ನೀರು ಕುದಿದ ಬಳಿಕ, ಆ ನೀರನ್ನು ಅಗಲವಾದ ಬಟ್ಟಲಿನಲ್ಲಿ ಹಾಕಿ, ಆ ಬಿಸಿನೀರಿನಲ್ಲಿ ಕಾಲನ್ನಿಟ್ಟು ನಿಂತುಕೊಳ್ಳಬೇಕು. ಹೀಗೆ ಬಿಸಿ ನೀರಿನಲ್ಲಿ ಪಾದಗಳನ್ನು ನೆನೆಸುವುದರಿಂದ ನಮ್ಮ ಸ್ನಾಯುಗಳು ವಿಶ್ರಾಂತಿ ಪಡೆಯಲು, ಒತ್ತಡ ಮತ್ತು ನೋವನ್ನು ನಿವಾರಿಸಲು, ಊತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಅಷ್ಟೇ ಅಲ್ಲದೆ ಇದು ರಕ್ತಪರಿಚಲನೆಯನ್ನು ಸುಧಾರಿಸುತ್ತದೆ, ನಿದ್ರೆಯನ್ನು ಉತ್ತೇಜಿಸುತ್ತದೆ ಮತ್ತು ಮುಖ್ಯವಾಗಿ ಇದು ತಲೆಯ ಭಾಗದಲ್ಲಿನ ರಕ್ತಪರಿಚಲನೆಯನ್ನು ಸುಧಾರಿಸುವ ಮೂಲಕ ತಲೆಯಲ್ಲಿ ತಲೆನೋವಿನಿಂದ ಶೀಘ್ರ ಪರಿಹಾರವನ್ನು ನೀಡುತ್ತದೆ ಎಂದು ವಿನಯ್ ತಿಳಿಸಿಕೊಟ್ಟಿದ್ದಾರೆ.
ಇದನ್ನೂ ಓದಿ: ನಿಮ್ಮನ್ನು ಆರೋಗ್ಯಕರವಾಗಿರಿಸಿಕೊಳ್ಳಲು ಈ ಸಿಂಪಲ್ ಟಿಪ್ಸ್ ಪಾಲಿಸಿ
ಇನ್ಸ್ಟಾಗ್ರಾಮ್ ಅಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋ 20.9 ಮಿಲಿಯನ್ ವೀಕ್ಷಣೆಗಳನ್ನು ಹಾಗೂ 457K ಲೈಕ್ಸ್ ಗಳನ್ನು ಪಡೆದುಕೊಂಡಿದೆ. ಅಲ್ಲದೆ ಹಲವಾರು ಈ ಒಂದು ಸಿಂಪಲ್ ಟಿಪ್ಸ್ ಹೇಳಿಕೊಟ್ಟಿದ್ದಕ್ಕಾಗಿ ಕಮೆಂಟ್ ಮಾಡುವ ಮೂಲಕ ವಿನಯ್ ಅವರಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ.
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: