ABCG Juice: ನಿಮ್ಮ ದೇಹಕ್ಕೆ ಸಮೃದ್ಧ ಪೋಷಣೆಯನ್ನು ನೀಡುವ ಎಬಿಸಿಜಿ ಜ್ಯೂಸ್

ಎಬಿಸಿಜಿ ಜ್ಯೂಸ್ ಅಂದಾಕ್ಷಣ ಏನಪ್ಪ ಇದು ಅಂತ ಯೋಚನೆ ಮಾಡ್ತಾ ಇದ್ದೀರಾ? ಪ್ರತಿದಿನ ನೀವು ಸೇವಿಸುವ ಕೇವಲ ನಾಲ್ಕು ಪದಾರ್ಥಗಳಿಂದ ಮಾಡಲಾಗುವ ಜ್ಯೂಸ್ ಇದಾಗಿದೆ. ಇದರ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.

ABCG Juice: ನಿಮ್ಮ ದೇಹಕ್ಕೆ ಸಮೃದ್ಧ ಪೋಷಣೆಯನ್ನು ನೀಡುವ ಎಬಿಸಿಜಿ ಜ್ಯೂಸ್
ABCG’ juice
Image Credit source: Be Bodywise
Edited By:

Updated on: Nov 18, 2022 | 11:02 AM

ನಗರಗಳನ್ನು ಕೇಂದ್ರೀಕರಿಸಿದ ಅಭಿವೃದ್ದಿಯಿಂದಾಗಿ ಇಂದು ಮಾಲಿನ್ಯಗಳಿಗೆ ಒಗ್ಗಿಕೊಂಡೇ ಜೀವನ ನಡೆಸುವಂತಾಗಿದೆ. ಆದ್ದರಿಂದ ನಿಮ್ಮ ಆರೋಗ್ಯವನ್ನು ಕಾಪಾಡುವ ದೃಷ್ಟಿಯಿಂದ ಆರೋಗ್ಯಕರವಾದ ಜೊತೆಗೆ ರುಚಿಕರ ಎಬಿಸಿಜಿ ಜ್ಯೂಸ್ ಅನ್ನು ಇಲ್ಲಿ ಪರಿಚಯಿಸಲಾಗಿದೆ. ಎಬಿಸಿಜಿ ಇದನ್ನು ವಿಸ್ತರಿಸಿ ಹೇಳುವುದಾದರೆ ಸೇಬು, ಬೀಟ್ರೂಟ್, ಕ್ಯಾರೆಟ್, ಶುಂಠಿ ಇವುಗಳನ್ನು ಒಟ್ಟಾಗಿ ಸೇರಿಸಿ ಜ್ಯೂಸ್ ಮಾಡಲಾಗುತ್ತದೆ. ಇದು ನಿಮ್ಮ ದೇಹದ ಪ್ರತಿಯೊಂದು ಭಾಗಗಳನ್ನು ಆರೋಗ್ಯವಾಗಿಡಲು ಸಹಾಯಕವಾಗಿದೆ.

ಎಬಿಸಿಜಿ ಜ್ಯೂಸ್ ಅಂದಾಕ್ಷಣ ಏನಪ್ಪ ಇದು ಅಂತ ಯೋಚನೆ ಮಾಡ್ತಾ ಇದ್ದೀರಾ? ಪ್ರತಿದಿನ ನೀವು ಸೇವಿಸುವ ಕೇವಲ ನಾಲ್ಕು ಪದಾರ್ಥಗಳಿಂದ ಮಾಡಲಾಗುವ ಜ್ಯೂಸ್ ಇದಾಗಿದೆ. ಇದರ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ.

ಈ ಜ್ಯೂಸ್ ಮಾಡುವುದು ಹೇಗೆ?

1 ಬೀಟ್ರೂಟ್, 1ಕ್ಯಾರೆಟ್, ಅರ್ಧ ಸೇಬು, ಚಿಕ್ಕ ತುಂಡು ಶುಂಠಿ ಎಲ್ಲವನ್ನು ಚೆನ್ನಾಗಿ ತೊಳೆದು ಚಿಕ್ಕ ತುಂಡುಗಳಾಗಿ ಕತ್ತರಿಸಿ. ನಂತರ ಎಲ್ಲವನ್ನು ಚೆನ್ನಾಗಿ ರುಬ್ಬಿ ಕೊಳ್ಳಿ. ಜೊತೆಗೆ ಅರ್ಧ ತುಂಡು ಲಿಂಬೆಯನ್ನು ಹಿಂಡಿ. ರುಚಿಗೆ ಸ್ಪಲ್ಪ ಸಕ್ಕರೆಯನ್ನು ಸೇರಿಸಿಕೊಳ್ಳಬಹುದು. ಚೆನ್ನಾಗಿ ರುಬ್ಬಿದ ಈ ಜ್ಯೂಸ್ ಹಾಗೆಯೇ ನಾರಿನಾಂಶಗಳೊಂದಿಗೆ ಕುಡಿಯಬಹುದು. ಇಲ್ಲದಿದ್ದರೆ ಸೋಸಿಕೊಂಡಿ ಕುಡಿಯಿರಿ.

ಈ ಜ್ಯೂಸ್ ನೀವು ಪ್ರತಿದಿನ ಕುಡಿಯುವುದ್ದರಿಂದ ನಿಮ್ಮ ದೇಹಕ್ಕೆ ಸಾಕಷ್ಟು ಪ್ರಯೋಜನಗಳಿವೆ. ಇದು ದೇಹದ ಚಯಾಪಚಯವನ್ನು ಬಲಪಡಿಸುತ್ತವೆ ಮತ್ತು ಅದರ ದೈನಂದಿನ ಪೌಷ್ಟಿಕಾಂಶದ ಅಗತ್ಯಗಳನ್ನು ಪೂರೈಸಲು ಸಹಾಯ ಮಾಡುತ್ತದೆ. ಜೊತೆಗೆ ಚರ್ಮವನ್ನು ಹೊಳೆಯುವಂತೆ ಮಾಡುತ್ತದೆ ಮತ್ತು ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

ಸೇಬುಗಳಲ್ಲಿ ಹೆಚ್ಚಿನ ಫೈಬರ್ ಮತ್ತು ನೀರಿನ ಅಂಶಗಳು ಸಮೃದ್ಧವಾಗಿರುವುದ್ದರಿಂದ ಸ್ಥೂಲಕಾಯದಂತಹ ಸಮಸ್ಯೆಗಳಿಗೆ ಪರಿಹಾರ ನೀಡಲು ಸಹಾಯಕವಾಗಿದೆ. ಜೊತೆಗೆ ನಿಮ್ಮ ದೇಹದಲ್ಲಿನ ಹೆಚ್ಚಿನ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ. ಬೀಟ್ರೂಟ್ ಬೆಟಾಲೈನ್ಸ್ ಶಕ್ತಿಯುತವಾದ ಉತ್ಕರ್ಷಣ ನಿರೋಧಕವಾಗಿದ್ದು ಅದು ಉರಿಯೂತವನ್ನು ಕಡಿಮೆ ಮಾಡುತ್ತದೆ. ಇದು ಕ್ಯಾನ್ಸರ್ ಮತ್ತು ಇತರ ಕಾಯಿಲೆಗಳಿಂದ ನಿಮ್ಮನ್ನು ರಕ್ಷಿಸಲು ಸಹಾಯ ಮಾಡುತ್ತದೆ ಮತ್ತು ದೇಹಕ್ಕೆ ಶಕ್ತಿಯನ್ನು ಹೆಚ್ಚಿಸುತ್ತದೆ.

ಕ್ಯಾರೆಟ್ ಕ್ಯಾರೊಟಿನಾಯ್ಡ್ಸ್ ಎಂಬ ಸಂಯುಕ್ತಗಳಲ್ಲಿ ಸಮೃದ್ಧವಾಗಿದೆ. ಇದು ನಿಮ್ಮ ಚರ್ಮವನ್ನು ಆರೋಗ್ಯವನ್ನು ಕಾಪಾಡುತ್ತದೆ. ಜೊತೆಗೆ ಇದರಲ್ಲಿರುವ ವಿಟಮಿನ್ ಎ ಕಣ್ಣಿನ ಆರೋಗ್ಯವನ್ನು ಸುಧಾರಿಸುತ್ತದೆ.

ಇದನ್ನು ಓದಿ: ಬಾಯಿ ಹುಣ್ಣು ನಿಮಗೆ ಸಾಕಷ್ಟು ತೊಂದರೆಯನ್ನುಂಟು ಮಾಡುತ್ತಿದೆಯೇ? ಆಯುರ್ವೇದ ತಜ್ಞರ ಸಲಹೆಯನ್ನು ಪಾಲಿಸಿ

ಶುಂಠಿಯ ನೈಸರ್ಗಿಕ ಅಂಶವಾದ ಜಿಂಜರಾಲ್, ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ನಿಮ್ಮ ಕರುಳಿಗೆ ಸಂಬಂಧಪಟ್ಟ ಯಾವುದೇ ಸಮಸ್ಯೆಗಳಿಗೆ ಶುಂಠಿಯು ಒಂದು ಉತ್ತಮ ಔಷಧಿಯಾಗಿದೆ.

ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: