AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪದೇ ಪದೇ ಮೂಗಿನ ಒಳಗೆ ಬೆರಳು ಹಾಕುತ್ತೀರಾ? ಈ ಅಭ್ಯಾಸದಿಂದ ಆರೋಗ್ಯ ಬದಲಾವಣೆವಾಗುವುದು ಖಂಡಿತ

ಮೂಗಿನ ಒಳಗೆ ಕೈ ಹಾಕುವ ಅಭ್ಯಾಸ ಕೆಲವರಿಗೆ ಇದೆ. ಆದರೆ ಈ ಅಭ್ಯಾಸದಿಂದ ದೇಹದ ಆರೋಗ್ಯದಲ್ಲಿ ಬದಲಾವಣೆ ಆಗುತ್ತದೆ. ಇದು ಆರೋಗ್ಯಕ್ಕೆ ಕೆಟ್ಟ ಪರಿಣಾಮವನ್ನು ಉಂಟು ಮಾಡುತ್ತದೆ. ಮೂಗಿನ ಒಳಗೆ ಕೈ ಹಾಕುವುದರಿಂದ ಆಗುವ ಆರೋಗ್ಯ ಸಮಸ್ಯೆಗಳೇನು?, ಈ ಅಭ್ಯಾಸವನ್ನು ಬಿಡುವುದು ಹೇಗೆ? ಯಾವೆಲ್ಲಾ ಕ್ರಮಗಳನ್ನು ಅನುಸರಿಸಬೇಕು ಎನ್ನುವ ಮಾಹಿತಿ ಇಲ್ಲಿದೆ.

ಪದೇ ಪದೇ ಮೂಗಿನ ಒಳಗೆ ಬೆರಳು ಹಾಕುತ್ತೀರಾ? ಈ ಅಭ್ಯಾಸದಿಂದ ಆರೋಗ್ಯ ಬದಲಾವಣೆವಾಗುವುದು ಖಂಡಿತ
ಸಾಂದರ್ಭಿಕ ಚಿತ್ರ
ಸಾಯಿನಂದಾ
|

Updated on: Aug 21, 2025 | 3:01 PM

Share

ಮೂಗಿನ ಒಳಗೆ ಕೈಹಾಕುವ (nose picking dangers) ಅಭ್ಯಾಸ ಅನೇಕರಿಗೆ ಇರುತ್ತದೆ. ಬಾಲ್ಯದಿಂದಲೂ ಮೂಗಿನ ಒಳಗೆ ಕೈ ಹಾರುವ ಅಭ್ಯಾಸ ಕೆಲವರಿಗೆ ಇರುತ್ತದೆ. ಇದು ಕ್ರಮೇಣ ದೊಡ್ಡವರಾದ ನಂತರವೂ ಮುಂದುವರೆಯುತ್ತದೆ. ಆದರೆ ಇದು ಗಂಭೀರ ಆರೋಗ್ಯ ಅಪಾಯವನ್ನು (health risks) ಉಂಟು ಮಾಡಬಹುದು. ಮೂಗಿನ ಒಳಗಿರುವ ಸೂಕ್ಷ್ಮ ಅಂಗಾಂಶಗಳು ಮತ್ತು ರಕ್ತನಾಳಗಳು ಸೋಂಕಿಗೆ ಒಳಗಾಗಬಹುದು, ಇದರಿಂದಾಗಿ ಬ್ಯಾಕ್ಟೀರಿಯಾ ಮತ್ತು ವೈರಸ್‌ಗಳು ಸುಲಭವಾಗಿ ದೇಹವನ್ನು ಪ್ರವೇಶಿಸಬಹುದು. ಮೂಗಿನ ಒಳಗೆ ಕೈ ಹಾಕುವುದರಿಂದ ಸೈನಸ್, ಮೂಗು ಮತ್ತು ಗಂಟಲಿನ ಸೋಂಕುಗಳ ಅಪಾಯ ಹೆಚ್ಚಾಗುತ್ತದೆ. ಕೈಗಳಲ್ಲಿರುವ ಸೂಕ್ಷ್ಮಜೀವಿಗಳು ನೇರವಾಗಿ ಮೂಗಿಗೆ ತಲುಪಿ ಶೀತ, ಜ್ವರ ಅಥವಾ ಮೂಗಿನ ಉರಿಯೂತದಂತಹ ಸಮಸ್ಯೆಗಳನ್ನು ಉಂಟುಮಾಡಬಹುದು. ಇದನ್ನು ಹೊರತುಪಡಿಸಿ, ರಕ್ತದ ಸೋಂಕನ್ನು ಅಥವಾ ಮೂಗಿನ ಅಂಗಾಂಶದಲ್ಲಿ ಗಾಯಗಳನ್ನು ಉಂಟುಮಾಡುವ ಸಾಧ್ಯತೆ ಇದೆ.

ಮೂಗಿನ ಒಳಗೆ ಕೈ ಹಾಕುವ ಕಾರಣದಿಂದ ಕೈಗಳು ಬ್ಯಾಕ್ಟೀರಿಯಾ ಮತ್ತು ವೈರಸ್‌ಗಳಿಂದ ತುಂಬಿರುತ್ತವೆ. ಈ ಸೂಕ್ಷ್ಮಜೀವಿಗಳು ನೇರವಾಗಿ ದೇಹವನ್ನು ಪ್ರವೇಶಿಸಬಹುದು, ಆದ್ದರಿಂದ ಕೈಗಳನ್ನು ತೊಳೆಯುವುದು ಮತ್ತು ಉಗುರುಗಳನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಬಹಳ ಮುಖ್ಯ. ಈ ಅಭ್ಯಾಸವು ಆರೋಗ್ಯಕ್ಕೆ ಅಪಾಯಕಾರಿ ಮಾತ್ರವಲ್ಲದೆ ಸಾಮಾಜಿಕವಾಗಿ ಮುಜುಗರಕ್ಕೂ ಕಾರಣವಾಗಬಹುದು. ಸಾರ್ವಜನಿಕ ಸ್ಥಳಗಳಲ್ಲಿ ಈ ಅಭ್ಯಾಸವನ್ನು ಅನುಚಿತವೆಂದು ಪರಿಗಣಿಸಲಾಗುತ್ತದೆ ಮತ್ತು ಇತರರ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ.

ಇದನ್ನೂ ಓದಿ: ಪ್ರತಿದಿನ ಬೆಳಗ್ಗೆ ಈ 5 ಸುಲಭ ಯೋಗಾಸನಗಳನ್ನು ಮಾಡಿ, ಆರೋಗ್ಯಕರವಾಗಿರಿ

ಇದನ್ನೂ ಓದಿ
Image
ಪ್ರತಿದಿನ ಬೆಳಗ್ಗೆ ಈ 5 ಸುಲಭ ಯೋಗಾಸನಗಳನ್ನು ಮಾಡಿ, ಆರೋಗ್ಯಕರವಾಗಿರಿ
Image
ಆಹಾರದಲ್ಲಿ ಜೀರಿಗೆ ಉಪಯೋಗ ಮಾಡ್ತೀರಾ? ಹಾಗಿದ್ರೆ ಈ ಸ್ಟೋರಿ ತಪ್ಪದೆ ಓದಿ
Image
ಹೊಟ್ಟೆ ಉಬ್ಬರ ಸಮಸ್ಯೆಗೆ ಕಾರಣವೇನು? ಹೀಗೆ ಮಾಡಿ ತಿಂಗಳಲ್ಲಿ ಪರಿಹಾರ
Image
ಹಳೆಯ ಪ್ರೆಶರ್‌ ಕುಕ್ಕರ್‌, ಪಾತ್ರೆ ಬಳಸಿದ್ರೆ ಅಪಾಯ ಕಟ್ಟಿಟ್ಟ ಬುತ್ತಿ

ಈ ಅಭ್ಯಾಸವನ್ನು ಬಿಡಲು ಕೆಲವು ಸುಲಭ ವಿಧಾನಗಳನ್ನು ಅಳವಡಿಸಿಕೊಳ್ಳಬಹುದು

  • ನಿಮ್ಮ ಮೂಗು ತುರಿಕೆ ಅಥವಾ ಉಸಿರುಕಟ್ಟಿಕೊಂಡರೆ ಟಿಶ್ಯೂ ಪೇಪರ್ ಬಳಸಿ.
  • ನಿಮ್ಮ ಕೈಗಳನ್ನು ನಿಯಮಿತವಾಗಿ ತೊಳೆಯಿರಿ ಮತ್ತು ಅವುಗಳನ್ನು ಸ್ವಚ್ಛವಾಗಿಡಿ.
  • ಮೂಗು ಸ್ವಚ್ಛಗೊಳಿಸಲು ಉಪ್ಪು ನೀರಿನ ಸ್ಪ್ರೇ ಅಥವಾ ಮೂಗಿನ ನೈರ್ಮಲ್ಯ ಉತ್ಪನ್ನಗಳನ್ನು ಬಳಸಿ.
  • ಈ ಅಭ್ಯಾಸವು ಒತ್ತಡ ಅಥವಾ ಆತಂಕಕ್ಕೆ ಸಂಬಂಧಿಸಿದ್ದರೆ, ಮೈಂಡ್‌ಫುಲ್‌ನೆಸ್ ಅಥವಾ ವಿಶ್ರಾಂತಿ ವ್ಯಾಯಾಮಗಳನ್ನು ಅಳವಡಿಸಿಕೊಳ್ಳಿ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಸಾಯಿನಂದಾ
ಸಾಯಿನಂದಾ

ಮೂಲತಃ ಉಡುಪಿಯವರು. ಪ್ರತಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಪ್ರತಿಷ್ಠಿತ ಕಾಲೇಜುಗಳಲ್ಲಿ ಉಪನ್ಯಾಸಕಿಯಾಗಿ ಕೆಲಸ ಮಾಡಿದ ಅನುಭವ ಇದೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಒಲವು ಹೆಚ್ಚಿರುವ ಇವರು ಕರ್ನಾಟಕ ಟೈಮ್ ವೆಬ್ ಸೈಟ್ ನಲ್ಲಿ ಕೆಲಸ ಮಾಡಿದ ಅನುಭವವಿದೆ. ಬಿಡುವು ಸಿಕ್ಕಾಗಲೆಲ್ಲಾ ಸಿನಿಮಾ ನೋಡುವುದು ಹಾಗೂ ಓದುವುದು ಇವರ ಹವ್ಯಾಸ

Read More
ರಿಷಬ್ ಶೆಟ್ಟಿ ಹೊಸ ಸಿನಿಮಾನಲ್ಲಿ ನಟಿಸಲು ನೂಕು ನುಗ್ಗಲು: ವಿಡಿಯೋ ನೋಡಿ
ರಿಷಬ್ ಶೆಟ್ಟಿ ಹೊಸ ಸಿನಿಮಾನಲ್ಲಿ ನಟಿಸಲು ನೂಕು ನುಗ್ಗಲು: ವಿಡಿಯೋ ನೋಡಿ
ಕಾಂಗ್ರೆಸ್ ಸೇವಾದಳದಿಂದ ಎಡವಟ್ಟು: ಉಲ್ಟಾ ಧ್ವಜ ನೀಡಿ ಅಧಿಕಾರ ಹಸ್ತಾಂತರ
ಕಾಂಗ್ರೆಸ್ ಸೇವಾದಳದಿಂದ ಎಡವಟ್ಟು: ಉಲ್ಟಾ ಧ್ವಜ ನೀಡಿ ಅಧಿಕಾರ ಹಸ್ತಾಂತರ
ಉಪ್ಪಿನ ಕೇಕ್ ತಿಂದ ಶಾಸ್ತ್ರಿ, ಅದ್ಭುತ ನಟನೆ ಎಂದ ಕಿಚ್ಚ: ವಿಡಿಯೋ ನೋಡಿ
ಉಪ್ಪಿನ ಕೇಕ್ ತಿಂದ ಶಾಸ್ತ್ರಿ, ಅದ್ಭುತ ನಟನೆ ಎಂದ ಕಿಚ್ಚ: ವಿಡಿಯೋ ನೋಡಿ
ಗಣಪತಿ ಮೂರ್ತಿ ಮೆರವಣಿಗೆಯಲ್ಲಿ ರಾರಾಜಿಸಿದ ಪೈಲಟ್ ಸ್ಮಿತ್ ಮಚ್ಚರ್ ಫೋಟೋ!
ಗಣಪತಿ ಮೂರ್ತಿ ಮೆರವಣಿಗೆಯಲ್ಲಿ ರಾರಾಜಿಸಿದ ಪೈಲಟ್ ಸ್ಮಿತ್ ಮಚ್ಚರ್ ಫೋಟೋ!
ಶೌಚಾಲಯಕ್ಕೂ ಜಾತಿ ಕೇಳಿದ ಅಧಿಕಾರಿಗಳು: ಪ್ರಜಾಸೇವಾಯಲ್ಲಿ ಕಣ್ಣೀರಿಟ್ಟ ಮಹಿಳೆ
ಶೌಚಾಲಯಕ್ಕೂ ಜಾತಿ ಕೇಳಿದ ಅಧಿಕಾರಿಗಳು: ಪ್ರಜಾಸೇವಾಯಲ್ಲಿ ಕಣ್ಣೀರಿಟ್ಟ ಮಹಿಳೆ
ನೆಲಮಂಗಲ ಭಾಗದಲ್ಲಿ ಮಿತಿಮೀರಿದ ಕಳ್ಳರ ಹಾವಳಿ: ದೇವರನ್ನೂ ಬಿಡದ ಖದೀಮರು
ನೆಲಮಂಗಲ ಭಾಗದಲ್ಲಿ ಮಿತಿಮೀರಿದ ಕಳ್ಳರ ಹಾವಳಿ: ದೇವರನ್ನೂ ಬಿಡದ ಖದೀಮರು
ಬಿ.ವೈ.ವಿಜಯೇಂದ್ರ ಸಮ್ಮುಖದಲ್ಲೇ ಕಿತ್ತಾಡಿಕೊಂಡ ಬಿಜೆಪಿ ಮುಖಂಡರು
ಬಿ.ವೈ.ವಿಜಯೇಂದ್ರ ಸಮ್ಮುಖದಲ್ಲೇ ಕಿತ್ತಾಡಿಕೊಂಡ ಬಿಜೆಪಿ ಮುಖಂಡರು
ಗದಗ ಸರ್ಕಾರಿ ಶಾಲಾ ವಿದ್ಯಾರ್ಥಿಗಳ ಆವಿಷ್ಕಾರ ರಾಷ್ಟ್ರೀಯ ಮಟ್ಟಕ್ಕೆ ಆಯ್ಕೆ
ಗದಗ ಸರ್ಕಾರಿ ಶಾಲಾ ವಿದ್ಯಾರ್ಥಿಗಳ ಆವಿಷ್ಕಾರ ರಾಷ್ಟ್ರೀಯ ಮಟ್ಟಕ್ಕೆ ಆಯ್ಕೆ
ದಸರಾ ಸಮಿತಿಯಿಂದ ಕೊಪ್ಪಳ ಶ್ರೀಗಳಿಗೆ ಅಧಿಕೃತ ಆಹ್ವಾನ
ದಸರಾ ಸಮಿತಿಯಿಂದ ಕೊಪ್ಪಳ ಶ್ರೀಗಳಿಗೆ ಅಧಿಕೃತ ಆಹ್ವಾನ
SIR ಗೊಂದಲ: ಜೀವಂತ ವ್ಯಕ್ತಿಗಳ ಮರಣ ಪತ್ರ ಪ್ರದರ್ಶಿಸಿದ ಯತ್ನಾಳ್
SIR ಗೊಂದಲ: ಜೀವಂತ ವ್ಯಕ್ತಿಗಳ ಮರಣ ಪತ್ರ ಪ್ರದರ್ಶಿಸಿದ ಯತ್ನಾಳ್