ಸ್ಟೀಮ್​ ತೆಗೆದುಕೊಳ್ಳುವಾಗ ಅಥವಾ ಗಾರ್ಗ್ಲಿಂಗ್​ ಮಾಡುವಾಗ ದೇಹದಲ್ಲಿರುವ ಕೊರೊನಾ ವೈರಾಣು ಗಾಳಿಗೆ ಬರ್ತಾವಾ?

|

Updated on: May 27, 2021 | 3:00 PM

ಒಂದು ವಿಡಿಯೋ ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ ವಿಡಿಯೋದಲ್ಲಿ ಗಮನಿಸುವಂತೆ ಸ್ಟೀಮ್ ತೆಗೆದುಕೊಳ್ಳುವಾಗ ಅಥವಾ ಗಾರ್ಗ್ಲಿಂಗ್​ ಮಾಡುವಾಗ ಕೊರೊನಾ ವೈರಾಣು ಹರಡಲು ಕಾರಣವಾಗುತ್ತದೆ ಎಂದು ವೈದ್ಯರು ಹೇಳಿದ್ದಾರೆ.

ಸ್ಟೀಮ್​ ತೆಗೆದುಕೊಳ್ಳುವಾಗ ಅಥವಾ ಗಾರ್ಗ್ಲಿಂಗ್​ ಮಾಡುವಾಗ ದೇಹದಲ್ಲಿರುವ ಕೊರೊನಾ ವೈರಾಣು ಗಾಳಿಗೆ ಬರ್ತಾವಾ?
ಸಾಂದರ್ಭಿಕ ಚಿತ್ರ
Follow us on

ಶೀತ, ಜ್ವರ ಅಥವಾ ಕೆಮ್ಮುಗಳಿದ್ದಾಗ ಮೂಗು ಕಟ್ಟಿಕೊಳ್ಳುವುದು, ಗಂಟಲು ಕಿರಿಕಿರಿ ಅನಿಸುವುದು ಸಾಮಾನ್ಯ. ಹೀಗಿದ್ದಾಗ ಮನೆಯಲ್ಲಿಯೇ ಗಿಡಮೂಲಿಕೆಗಳನ್ನು ಬಳಸಿಕೊಂಡು ಕಷಾಯವೋ, ಸ್ಟೀಮ್​ ತೆಗೆದುಕೊಳ್ಳುವುದು ಅಥವಾ ಗಾರ್ಗ್ಲಿಂಗ್​ ಮಾಡುತ್ತೇವೆ. ಇದೀಗ ಕೊರೊನಾ ಸೋಂಕಿನ ಲಕ್ಷಣಗಳು ಶೀತ,ಕೆಮ್ಮು ಹಾಗೂ ಜ್ವರವಾದ್ದರಿಂದ ಮನೆಯಲ್ಲಿಯೇ ಮನೆಮದ್ದುಗಳನ್ನು ತಯಾರಿಸಿಕೊಂಡು ಸುಧಾರಿಸಿಕೊಳ್ಳಬಹುದು ಎಂಬ ಯೋಚನೆಯಿಂದ ಹೊರಬನ್ನಿ. ನಿಜವಾಗಿಯೂ ಕೊರೊನಾ ಸೋಂಕು ತಗುಲಿದ್ದರೆ ನೀವು ಸ್ಟೀಮ್​ ತೆಗೆದುಕೊಳ್ಳುವಾಗ ಅಥವಾ ಗಾರ್ಗ್ಲಿಂಗ್​ ಮಾಡುವಾಗ ಗಾಳಿಯಲ್ಲಿ ವೈರಾಣು ಬಿಡುಗಡೆಗೊಳ್ಳುತ್ತದೆ. ಇದರಿಂದ ಹತ್ತಿರವಿದ್ದ ಜನರಿಗೆ ಸೋಂಕು ತಗಲುವ ಸಾಧ್ಯತೆ ಹೆಚ್ಚಿವೆ. ಆದಷ್ಟು ಬೇಗ ವೈದ್ಯರನ್ನು ಸಂಪರ್ಕಿಸಿ ಎಂದು ಇತ್ತೀಚೆಗೆ ವೈದ್ಯರೋರ್ವರು ಹಂಚಿಕೊಳ್ಳಲಾದ ವಿಡಿಯೋದಲ್ಲಿ ಸೂಚನೆ ನೀಡಿದ್ದಾರೆ. 

ಒಂದು ವಿಡಿಯೋ ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ ವಿಡಿಯೋದಲ್ಲಿ ಗಮನಿಸುವಂತೆ ಸ್ಟೀಮ್ ತೆಗೆದುಕೊಳ್ಳುವಾಗ ಅಥವಾ ಗಾರ್ಗ್ಲಿಂಗ್​ ಮಾಡುವಾಗ ಕೊರೊನಾ ವೈರಾಣು ಹರಡಲು ಕಾರಣವಾಗುತ್ತದೆ ಎಂದು ವೈದ್ಯರು ಹೇಳಿದ್ದಾರೆ.

ಕೊವಿಡ್​ ಸೋಂಕಿತರು ಗಾರ್ಗ್ಲಿಂಗ್​ ಅಥವಾ ಸ್ಟೀಮ್​ ತೆಗೆದುಕೊಳ್ಳುವಾಗ ಗಾಳಿಯಲ್ಲಿ ವೈರಸ್​ ಕಣಗಳು ಬಿಡುಗಡೆಗೊಳ್ಳುತ್ತವೆ. ಈ ವೈರಣು ಗಾಳಿಯಲ್ಲಿ ಹಲವು ಗಂಟೆಗಳ ಕಾಲ ಜೀವಂತವಾಗಿರುತ್ತದೆ. ಕುಟುಂಬದವರಿಗೆ ಮತ್ತು ಹತ್ತಿರವಿರುವವರಿಗೆ ಬಹುಬೇಗ ಕೊರೊನಾ ಸೋಂಕು ಹರಡಲು ಕಾರಣವಾಗಬಹುದು. ಇಂತಹ ಅಭ್ಯಾಸಗಳನ್ನು ತಪ್ಪಿಸಬೇಕು ಎಂದು ಡಾ.ತುಷಾರ್​ ಷಾ ವಿಡಿಯೋದಲ್ಲಿ ಹೇಳಿದ್ದಾರೆ.

ಈ ಕುರಿತಂತೆ ಶ್ವಾಸಕೋಶ ತಜ್ಞರಾದ ಡಾ.ವಿಕಾಸ್​ ಮೌರ್ಯ ಮಾಹಿತಿ ನೀಡಿದ್ದು, ಶೀತವಾದಾಗ ಮೂಗು ಕಟ್ಟಿರುತ್ತದೆ. ಉಸಿರಾಡಲು ತೊಂದರೆಯಾಗುತ್ತದೆ. ಹೀಗಿರುವಾಗ ಸ್ಟೀಮ್​ ತೆಗೆದುಕೊಳ್ಳುವುದು ಸಾಮಾನ್ಯ. ಉಸಿರಾಡಲು ಅನುಕೂಲಕರವಾಗುವಂತೆ ಮಾಡುತ್ತದೆ. ಆದರೆ ಇದು ಕೊವಿಡ್​ ನಿಯಂತ್ರಣಕ್ಕೆ ಸರಿಯಾದ ಮಾರ್ಗವಲ್ಲ. ಮೂಗು ಕಟ್ಟಿರುವುದರಿಂದ ಉಸಿರಾಡಲು ಸಹಾಯ ಮಾಡುತ್ತದೆಯೇ ಹೊರತು ಗುಣ ಪಡಿಸುವುದಿಲ್ಲ. ನೀವು ರೋಗ ಲಕ್ಷಣಗಳನ್ನು ಹೊಂದಿದ್ದರೆ ದಯವಿಟ್ಟು ಬಹುಬೇಗ ವೈದ್ಯರನ್ನು ಸಂಪರ್ಕಿಸಿ. ಇವುಗಳೆಲ್ಲವೂ ತಾತ್ಕಾಲಿಕ ಪರಿಹಾರವೇ ಹೊರತು ರೋಗದಿಂದ ನಿಮ್ಮನ್ನು ಕಾಪಾಡುವ ಔಷಧಗಳಲ್ಲ ಎಂದು ಹೇಳಿದ್ದಾರೆ.

ಇದನ್ನೂ ಓದಿ:

Lockdown Guidelines: ಕೊರೊನಾ ಸೋಂಕು ಇಳಿಕೆಯತ್ತ ಮುಖ ಮಾಡಿರುವಾಗಲೇ ಲಾಕ್​ಡೌನ್ ನಿಯಮ ಸಡಿಲಿಸಿದ ಕರ್ನಾಟಕ ಸರ್ಕಾರ

ಕೊರೊನಾ ಸೋಂಕು ಕಾರಣ ವಿಡಿಯೋ ಕಾನ್ಫರೆನ್ಸ್ ಮೂಲಕ ಪ್ರಕರಣ ವಿಚಾರಣೆ: ಕರ್ನಾಟಕ ಹೈಕೋರ್ಟ್