ದೊಡ್ಡಪತ್ರೆಯಲ್ಲಿದೆ ಆರೋಗ್ಯ ವೃದ್ಧಿಸುವ ಉತ್ತಮ ಗುಣ; ಇಲ್ಲಿವೆ ಕೆಲವು ಔಷಧೀಯ ಉಪಯೋಗಗಳು
ದೊಡ್ಡ ಪತ್ರೆಯನ್ನು ಸಾಮಾನ್ಯವಾಗಿ ಅಡುಗೆಗೆ ಬಳಸುವುದು ಕಡಿಮೆ. ಇದೊಂದು ಗಿಡ ನಿಮ್ಮ ಮನೆಯಲ್ಲಿದ್ದರೆ ಸಾಕು, ಇದು ನಿಮಗೆ ಸಾಕಷ್ಟು ಉಪಯೋಗಗಳನ್ನು ನೀಡುತ್ತದೆ. ಕೆಮ್ಮು-ಶೀತ ದಿಂದ ಬೇಸಿಗೆಯ ಬಿಸಿ ತಣಿಸುವವರೆಗೂ ಈ ಎಲೆಯನ್ನು ವಿವಿಧ ರೀತಿಯಲ್ಲಿ ಬಳಸಬಹುದು.
ದೊಡ್ಡಪತ್ರೆಯನ್ನು (Carom Leaves) ಸಾಮಾನ್ಯವಾಗಿ ಅಡುಗೆಗೆ ಬಳಸುವುದು ಕಡಿಮೆ. ಇದೊಂದು ಗಿಡ ನಿಮ್ಮ ಮನೆಯಲ್ಲಿದ್ದರೆ ಸಾಕು, ಇದು ನಿಮಗೆ ಸಾಕಷ್ಟು ಉಪಯೋಗಗಳನ್ನು (Health Benefits) ನೀಡುತ್ತದೆ. ಕೆಮ್ಮು-ಶೀತ (Cough, cold) ದಿಂದ ಬೇಸಿಗೆಯ ಬಿಸಿ ತಣಿಸುವವರೆಗೂ ಈ ಎಲೆಯನ್ನು ವಿವಿಧ ರೀತಿಯಲ್ಲಿ ಬಳಸಬಹುದು. ಆಯುರ್ವೇದದ ಪ್ರಕಾರ ದೊಡ್ಡಪತ್ರೆಯಲ್ಲಿ ಸಾಕಷ್ಟು ಆರೋಗ್ಯ ಪ್ರಯೋಜನಗಳಿವೆ. ಇದರ ಸುವಾಸನೆ ಮತ್ತು ರುಚಿ ಬಲವಾಗಿರುವುದರಿಂದ ಇದು ತಲೆನೋವು, ಶೀತದಂತ ರೋಗಗಳಿಗೆ ಸೂಕ್ತವಾದ ಮದ್ದು. ದೊಡ್ಡಪತ್ರೆಯ ಕಷಾಯ, ಚಹಾ ಮತ್ತು ಇದನ್ನು ಹಾಗೆ ಹಸಿಯಾಗಿ ಸ್ವಲ್ಪ ಉಪ್ಪು ಅಥವಾ ಬೆಲ್ಲದ ಜೊತೆ ಸೇವಿಸಬಹುದು.
ದೊಡ್ಡಪತ್ರೆಯ ಉಪಯೋಗ:
1. ಶೀತ ಮತ್ತು ಕೆಮ್ಮು ಗುಣಪಡಿಸಲು:
ಶೀತ ಮತ್ತು ಕೆಮ್ಮನ್ನು ನಿವಾರಿಸಲು ದೊಡ್ಡಪತ್ರೆಯನ್ನು ನೀರಿನಲ್ಲಿ ಕುದಿಸಿ ಮತ್ತು ಈ ಮಿಶ್ರಣವನ್ನು ನಿರಂತರ ಸೇವಿಸಿ. ನಿಮಗೆ ನೆಗಡಿ ಮತ್ತು ಕೆಮ್ಮು ಇದ್ದರೆ, 10 ಅಥವಾ 12 ದೊಡ್ಡಪತ್ರೆ ಎಲೆಗಳನ್ನು ತೆಗೆದುಕೊಂಡು, ನೀರಿನಿಂದ ಸ್ವಚ್ಛಗೊಳಿಸಿ ಮತ್ತು ನಂತರ ಅವುಗಳನ್ನು ಒಂದು ಲೋಟ ನೀರಿಗೆ ಸೇರಿಸಿ ಮತ್ತು ಕಡಿಮೆ ಉರಿಯಲ್ಲಿ ಕುದಿಸಿ. ನೀರು ಅದರ ಮೂಲ ಪ್ರಮಾಣದಲ್ಲಿ ಸುಮಾರು ಮೂರು-ನಾಲ್ಕು ಭಾಗಕ್ಕೆ ಕಡಿಮೆಯಾಗುತ್ತದೆ. ಇದನ್ನು ಸ್ವಲ್ಪ ತಣ್ಣಗಾಗಲು ಬಿಡಿ, ಶೀತ ಮತ್ತು ಕೆಮ್ಮಿನ ಪರಿಹಾರಕ್ಕಾಗಿ ಇದನ್ನು ಕುಡಿಯಿರಿ. ನೀವು ಬಯಸಿದರೆ, ಇದಕ್ಕೆ ಸ್ವಲ್ಪ ಜೇನುತುಪ್ಪ ಅಥವಾ ಬೆಲ್ಲವನ್ನು ಸೇರಿಸಬಹುದು.
2. ಪಕೋಡಗಳನ್ನು ತಯಾರಿಸಲು ಇದನ್ನು ಬಳಸಿ:
ದೊಡ್ಡಪತ್ರೆ ಎಲೆಗಳನ್ನು ಮಸಾಲೆಯುಕ್ತ ಕಡಲೆ ಹಿಟ್ಟಿಗೆ ಸೇರಿಸಿ, ನಂತರ ರುಚಿಕರವಾದ ಮತ್ತು ಸುವಾಸನೆಯ ಪಕೋಡಗಳನ್ನು ತಯಾರಿಸಲು ಡೀಪ್ ಫ್ರೈ ಮಾಡಬಹುದು, ಇದನ್ನು ಬಿಸಿ ಬಿಸಿ ಚಹಾದ ಜೊತೆ ಸಂಜೆ ಸಮಯ ಕುಟುಂಬದವರ ಜೊತೆ ಕುಳಿತು ಸೇವಿಸಿ. ಇದು ಆರೋಗ್ಯಕ್ಕೂ ಒಳ್ಳೇದು, ತಿನ್ನಲು ರುಚಿಕರವಾಗಿರುತ್ತದೆ.
3. ದೊಡ್ಡಪತ್ರೆ ತಂಬುಳಿ:
ಕೇರಂ ಎಲೆಗಳ ಅಥವಾ ದೊಡ್ಡಪತ್ರೆ ಬಹಳಷ್ಟು ಉತ್ತಮ ಗುಣಗಳನ್ನು ಹೊಂದಿರುವ ಆರೋಗ್ಯಕರ ಅನ್ನದ ಭಕ್ಷ್ಯವಾಗಿದೆ. ಇವುಗಳು ಮಳೆಗಾಲದಲ್ಲಿ ಹೇರಳವಾಗಿ ಬೆಳೆಯುವ ಎಲೆಗಳು ಮತ್ತು ತುಂಬಾ ಆರೋಗ್ಯಕರವೆಂದು ಪರಿಗಣಿಸಲಾಗಿದೆ. ತಂಬುಳಿಯನ್ನು ಮಾಡುವುದು ತುಂಬಾ ಸರಳವಾಗಿದೆ, ಇದಕ್ಕೆ ಮೆಣಸು, ಜೀರಿಗೆ, ತೆಂಗಿನಕಾಯಿ ಮತ್ತು ಮಜ್ಜಿಗೆಯಂತಹ ಕೆಲವೇ ಪದಾರ್ಥಗಳು ಬೇಕಾಗುತ್ತವೆ, ಮೊದಲಿಗೆ ಮೆಣಸು, ಜೀರಿಗೆ, ತೆಂಗಿನಕಾಯಿ ಯನ್ನು ರುಬ್ಬಿ , ನಂತರ ಈ ಮಿಶ್ರಣಕ್ಕೆ ಮಜ್ಜಿ ಸೇರಿಸಿ ರುಚಿಗೆ ತಕ್ಕಷ್ಟು ಉಪ್ಪು ಬೆರೆಸಿ. ನಿಮಗೆ ಬೇಕಾದ ಹದಕ್ಕೆ ಇದು ಬಂದ ಮತ್ತೆ ಒಗ್ಗರಣೆ ಹಾಕಿ ಅನ್ನದ ಜೊತೆ ಸವಿಯಿರಿ.
ಇದನ್ನೂ ಓದಿ: ಅಂದರು ಹೃದಯ ಬಡಿತವನ್ನು ಕಣ್ಣಿದ್ದವರಿಗಿಂತ ಉತ್ತಮವಾಗಿ ಗ್ರಹಿಸುತ್ತಾರೆ; ಅಧ್ಯಯನ
ದೊಡ್ಡಪತ್ರೆ ಎಲೆಗಳು ಹೊಟ್ಟೆಯ ಸಮಸ್ಯೆಗಳನ್ನು ನಿವಾರಿಸುವುದು, ಹಸಿವು ಮತ್ತು ಜೀರ್ಣಕ್ರಿಯೆಯನ್ನು ಸುಧಾರಿಸುವುದು ಜೊತೆಗೆ ಹಲವಾರು ಆರೋಗ್ಯ ಪ್ರಯೋಜನಗಳನ್ನು ಹೊಂದಿವೆ ಎಂದು ಹೇಳಲಾಗುತ್ತದೆ. ದೈನಂದಿನ ಭಕ್ಷ್ಯಗಳ ರುಚಿ ಮತ್ತು ಪರಿಮಳವನ್ನು ಹೆಚ್ಚಿಸಲು ಮತ್ತು ದೈನಂದಿನ ಮನೆಮದ್ದುಗಳಿಗಾಗಿ ಈ ಅದ್ಭುತ ಎಲೆಗಳನ್ನು ನಿಮ್ಮ ದೈನಂದಿನ ಬಳಕೆಗೆ ತನ್ನಿ.
Published On - 11:20 am, Sun, 26 March 23