ತಣ್ಣೀರು ಕುಡಿಯುವುದರಿಂದ ತೂಕ ಹೆಚ್ಚಾಗುತ್ತಾ? ಇಲ್ಲಿದೆ ನೋಡಿ ತಜ್ಞರ ಸಲಹೆ

ನೀರು ಪ್ರತಿಯೊಬ್ಬ ಮನುಷ್ಯ ಅಗತ್ಯ, ಪಂಚ ಭೂತಗಳಲ್ಲಿ ನೀರು ಒಂದು, ಪ್ರಕೃತಿಯಿಂದ ಸಿಗುವ ಮಹತ್ವದ ವರ ಇದು. ಹಾಗಾಗಿ ನೀರು ದೇಹಕ್ಕೆ ಶಕ್ತಿಯನ್ನು ನೀಡುತ್ತದೆ. ಈಗ ಬೇಸಿಗೆಯಲ್ಲಿ ನೀರು ಇನ್ನು ಅಗತ್ಯವಾಗಿರುತ್ತದೆ. ಈ ಸಮಯದಲ್ಲಿ ತಣ್ಣೀರು ಅಥವಾ ಬಿಸಿನೀರು ಇದರಲ್ಲಿ ಯಾವುದು ಒಳ್ಳೆಯದು, ಅನೇಕರಿಗೆ ತಣ್ಣೀರು ಕುಡಿದ್ರೆ ತೂಕ ಹೆಚ್ಚಾಗುತ್ತದೆ ಎಂಬ ಭಯ, ಆದರೆ ಇದು ಎಷ್ಟು ನಿಜಾ? ಎಂಬ ಬಗ್ಗೆ ಇಲ್ಲಿ ತಜ್ಞರು ಮಾಹಿತಿ ನೀಡಿದ್ದಾರೆ.

ತಣ್ಣೀರು ಕುಡಿಯುವುದರಿಂದ ತೂಕ ಹೆಚ್ಚಾಗುತ್ತಾ? ಇಲ್ಲಿದೆ ನೋಡಿ ತಜ್ಞರ ಸಲಹೆ
ಸಾಂದರ್ಭಿಕ ಚಿತ್ರ
Image Credit source: Getty Images
Updated By: ಅಕ್ಷಯ್​ ಪಲ್ಲಮಜಲು​​

Updated on: May 01, 2025 | 6:00 PM

ಬಾಯರಿಕೆಗೆ ನೀರು ಕುಡಿಯಲೇಬೇಕು, ಆದರೆ ಯಾವ ಪ್ರಮಾಣದಲ್ಲಿ ಅಥವಾ ಬಿಸಿ ಅಥವಾ ತಣ್ಣೀರು ಯಾವುದನ್ನು ಕುಡಿಯಬೇಕು ಎಂಬ ಬಗ್ಗೆ ಮೊದಲು ತಿಳಿದುಕೊಳ್ಳಬೇಕು. ಇದರಿಂದ ದೇಹದಲ್ಲಾಗುವ ಬದಲಾವಣೆಗಳೇನು ಎಂಬ ಅರಿವು ಇರಬೇಕು. ನೀರು ಬಾಯಾರಿಕೆಯನ್ನು ತಣಿಸುತ್ತದೆ. ಇದರ ಜತೆಗೆ ದೇಹಕ್ಕೂ ಇದರ ಪರಿಣಾಮ ಇರುತ್ತದೆ. ಈ ಬೇಸಿಗೆಯಲ್ಲಿ ತಣ್ಣೀರು ಸಿಕ್ಕರೆ ಅಮೃತವೇ ಸರಿ. ಬೇಸಿಕೆಯಲ್ಲಿ ಬಾಯರಿಕೆ ಹೆಚ್ಚು. ಬಾಯರಿಕೆ ಕಡಿಮೆ ಮಾಡಲು ತಣ್ಣೀರು (cold water) ಅಥವಾ ಕೋಲ್ಡ್​​​ ಪಾನೀಯಗಳನ್ನು ಸೇವನೆ ಮಾಡಬೇಕು ಎಂಬ ಬಯಕೆ ಬರುವುದು ಸಹಜ, ಆದರೆ ಕೆಲವರು ಈ ಬೇಸಿಗೆಯಲ್ಲಿ ತಣ್ಣೀರು ಕುಡಿದರೆ ಆರೋಗ್ಯ ಸಮಸ್ಯೆ ಕಾಡುತ್ತೇ ಎಂಬ ಗೊಂದಲ ಅನೇಕರಲ್ಲಿ ಇದೆ. ಅದರಲ್ಲೂ ತಣ್ಣೀರು ಕುಡಿದರೆ ತೂಕ ಹೆಚ್ಚಾಗುತ್ತದೆ (weight gain) ಎಂಬ ಭಯ ಇದೆ. ಪೌಷ್ಟಿಕತಜ್ಞೆ ಅಮಿತಾ ಗದ್ರೆ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಇದಕ್ಕೆ ಸ್ಪಷ್ಟವಾಗಿ ಉತ್ತರಿಸಿದ್ದಾರೆ.

ತೂಕ ಹೆಚ್ಚಳದ ಬಗ್ಗೆ ಸತ್ಯ:

ತೂಕ ಇಳಿಸುವುದೇ ತೂಕ, ಅದರಲ್ಲಿ ಕ್ಯಾಲೊರಿಗಳು ಶೂನ್ಯ ಇರುತ್ತದೆ. ತಣ್ಣೀರು ದೇಹದಲ್ಲಿ ಕೊಬ್ಬನ್ನು ಸಂಗ್ರಹಿಸುತ್ತದೆ ಎಂಬುದು ಸುಳ್ಳು. ತಣ್ಣೀರು ಕುಡಿಯುವುದರಿಂದ ಕೊಬ್ಬಿನ ಕೋಶಗಳು ಹೆಪ್ಪುಗಟ್ಟುವುದಿಲ್ಲ. ಹಾಗೆ ಬೆಚ್ಚಗಿನ ನೀರನ್ನು ಕುಡಿಯುವುದರಿಂದ ಅವು ಕರಗುವುದಿಲ್ಲ. ದೇಹದ ಹೈಡ್ರೇಟೆಡ್ ಸರಳವಾಗಿರುತ್ತದೆ. ಒಂದು ವೇಳೆ ದೇಹದಲ್ಲಿ ನೀರಿನ ಅಂಶ ಇಲ್ಲವೆಂದರೆ, ಆಲಸ್ಯ ಬರುವುದು ಖಂಡಿತ. ಇದರಿಂದ ಚಯಾಪಚಯ ಕ್ರಿಯೆಗೆ ತೊಂದರೆಯಾಗಬಹುದು. ಹಾಗಾಗಿ ಹೆಚ್ಚು ಹೆಚ್ಚು ನೀರು ಕುಡಿಯುವ ಅಭ್ಯಾಸ ಮಾಡಿಕೊಳ್ಳಬೇಕು. ಅದರಲ್ಲೂ ಈ ಬೇಸಿಗೆಯಲ್ಲೇ ಅದು ಹೆಚ್ಚಾಗಬೇಕು ಎನ್ನುವುದು ಅಮಿತಾ ಗದ್ರೆ ಸಲಹೆ.

  1. ತಣ್ಣೀರು ಕುಡಿಯುವುದು ನಿಮ್ಮ ಜೀರ್ಣಾಂಗ ವ್ಯವಸ್ಥೆಗೆ ಒಳ್ಳೆಯದೇ ಎಂಬ ಪ್ರಶ್ನೆ ಬಂದಾಗ, ಇದು ಒಳ್ಳೆಯದಲ್ಲ ಎಂದ ಹೇಳಿದೆ. ಜೀರ್ಣ ಕ್ರಿಯೆಯನ್ನು ಕುಗ್ಗಿಸಬಹುದು. ಜೀರ್ಣಾಂಗ ವ್ಯವಸ್ಥೆಗೆ ಒಳ್ಳೆಯದಲ್ಲ. ಅತ್ಯುತ್ತಮ ಜೀರ್ಣಕ್ರಿಯೆಯನ್ನು ಕಾಪಾಡಿಕೊಳ್ಳಲು, ಉಗುರು ಬೆಚ್ಚಗಿನ ನೀರನ್ನು ಕುಡಿಯುವುದು ಉತ್ತಮ.
  2. ಒಬ್ಬ ವ್ಯಕ್ತಿ ದಿನಕ್ಕೆ ಎಷ್ಟು ಬಾರಿ ನೀರು ಕುಡಿಯಬೇಕು ಹಾಗೂ ಯಾವ ಪ್ರಮಾಣದಲ್ಲಿ ಕುಡಿಯಬೇಕು. ಪ್ರತಿ ಕಿಲೋಗ್ರಾಂ ದೇಹದ ತೂಕಕ್ಕೆ 35 ಮಿಲಿ ನೀರನ್ನು ಸೇವಿಸುವ ಗುರಿಯನ್ನು ಹೊಂದಿರಬೇಕು. ದೇಹದಲ್ಲಿ ನೀರಿನಂಶವನ್ನು ಕಾಪಾಡಿಕೊಳ್ಳುವುದು ಅಗತ್ಯವಾಗಿರುತ್ತದೆ.
  3. ತಣ್ಣೀರು ಕುಡಿಯುವುದರಿಂದ ಯಾವುದಾದರೂ ಅಡ್ಡ ಪರಿಣಾಮ ಇದ್ದೀಯಾ ಎಂಬ ಬಗ್ಗೆ ಇಲ್ಲಿದೆ ಮಾಹಿತಿ, ಅತಿಯಾಗಿ ತಣ್ಣೀರು ಕುಡಿಯುವುದರಿಂದ ಜೀರ್ಣಕಾರಿ ಸಮಸ್ಯೆಗಳು, ಗಂಟಲು ನೋವು ಅಥವಾ ಕೆಲವು ಸಂದರ್ಭಗಳಲ್ಲಿ ತಲೆನೋವು ಕೂಡ ಉಂಟಾಗುತ್ತದೆ

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ