ಶೀತ ವಾತಾವರಣದಲ್ಲಿ ಆಲ್ಕೋಹಾಲ್ ಸೇವನೆ ಎಷ್ಟು ಅಪಾಯಕಾರಿ ತಿಳಿಯಿರಿ

| Updated By: ಅಕ್ಷಯ್​ ಪಲ್ಲಮಜಲು​​

Updated on: Nov 30, 2024 | 11:31 AM

ಸಂಜೆ ಶೀತದ ವಾತಾವರಣ ಆರಂಭವಾಗುತ್ತಿದ್ದಂತೆ ಮದ್ಯ ಸೇವನೆ ಮಾಡುವ ಅಭ್ಯಾಸವನ್ನು ಹೊಂದಿರುತ್ತಾರೆ. ಅದರಲ್ಲಿಯೂ ಶೀತದಿಂದ ಪಾರಾಗಲು ಮಿತಿಮೀರಿ ಕುಡಿಯುತ್ತಾರೆ. ಈ ರೀತಿ ಅಭ್ಯಾಸ ಅನೇಕ ಸಮಸ್ಯೆಗಳಿಗೆ ಆಹ್ವಾನ ನೀಡಿದಂತಾಗಬಹುದು ಎಂದು ವೈದ್ಯರು ಎಚ್ಚರಿಸುತ್ತಾರೆ. ಅದರಲ್ಲಿಯೂ ಇದರಿಂದ ಉಸಿರಾಟಕ್ಕೆ ಸಂಬಂಧ ಪಟ್ಟ ಕಾಯಿಲೆಗಳು ಹೆಚ್ಚಾಗುವ ಅಪಾಯವಿರುತ್ತದೆ. ನಿಮಗೆ ಹೆಚ್ಚಿನ ಜ್ವರ, ಉಸಿರಾಟದ ತೊಂದರೆ, ನೀಲಿ ಚರ್ಮ ಅಥವಾ ತುಟಿಗಳಿಂದ ಅಥವಾ ಕಫ ಹೊರಬರುವಾಗ ರಕ್ತ ಬಂದರೆ, ನೀವು ತಕ್ಷಣ ಆಸ್ಪತ್ರೆಗೆ ಹೋಗಬೇಕು ಎಂದು ವೈದ್ಯರು ಸೂಚಿಸುತ್ತಾರೆ. ಏಕೆಂದರೆ ತಾಪಮಾನ ಕಡಿಮೆಯಾದಾಗ ಬೆಚ್ಚಗಿರಲು ಆಲ್ಕೋಹಾಲ್ ಕುಡಿದರೆ, ಹೆಚ್ಚಿನ ತೊಂದರೆಗಳು ಉಂಟಾಗುತ್ತವೆ. ಹಾಗಾಗಿ ಶೀತ ಗಾಳಿಯ ತೀವ್ರತೆ ಕಡಿಮೆಯಾಗುವವರೆಗೆ ಜಾಗರೂಕರಾಗಿರಿ.

ಶೀತ ವಾತಾವರಣದಲ್ಲಿ ಆಲ್ಕೋಹಾಲ್ ಸೇವನೆ ಎಷ್ಟು ಅಪಾಯಕಾರಿ ತಿಳಿಯಿರಿ
ಸಾಂದರ್ಭಿಕ ಚಿತ್ರ
Follow us on

ಚಳಿಗಾಲ ಆರಂಭವಾಗಿದ್ದು ತಾಪಮಾನ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇದಲ್ಲದೆ, ಫ್ಲೂ ಸೇರಿದಂತೆ ಅನೇಕ ರೋಗಗಳು ಹೆಚ್ಚು ಹರಡುತ್ತಿವೆ. ಕಾಲೋಚಿತ ಜ್ವರ ಅನೇಕ ರೋಗಗಳ ಹರಡುವಿಕೆಯಿಂದಾಗಿ ಆಸ್ಪತ್ರೆಗಳಲ್ಲಿ ರೋಗಿಗಳ ಸಂಖ್ಯೆಯಲ್ಲಿಯೂ ಹೆಚ್ಚಳ ಕಂಡುಬರುತ್ತಿದೆ. ಹಾಗಾಗಿ ಸೋಂಕಿಗೆ ಒಳಗಾಗದಂತೆ ಜನರು ಜಾಗರೂಕರಾಗಿರುವುದು ಅನಿವಾರ್ಯ. ಅದರಲ್ಲಿಯೂ ಚಳಿಯಾದ ವಾತಾವರಣ ಅನೇಕ ರೀತಿಯ ಆರೋಗ್ಯ ಸಮಸ್ಯೆಗೆ ಕಾರಣವಾಗುವುದರಿಂದ ಹೆಚ್ಚಿನ ಕಾಳಜಿ ವಹಿಸುವುದು ಅವಶ್ಯವಾಗಿದೆ. ಆದರೆ ಕೆಲವರು ಚಳಿಯಿಂದ ತಮ್ಮನ್ನು ರಕ್ಷಿಸಿಕೊಳ್ಳಲು ಆಲ್ಕೋಹಾಲ್ ಸೇವನೆ ಮಾಡಲು ಆರಂಭಿಸುತ್ತಾರೆ. ಇದು ಯಾವ ರೀತಿಯಲ್ಲಿ ಅಪಾಯ ತರಬಹುದು ಎಂಬುದು ಕೂಡ ತಿಳಿದಿರುವುದಿಲ್ಲ. ವೈದ್ಯರು ಹೇಳುವ ಪ್ರಕಾರ ಈ ರೀತಿಯ ಅಭ್ಯಾಸ ಒಳ್ಳೆಯದಲ್ಲ. ಅದಲ್ಲದೆ ಇದೊಂದು ತಪ್ಪು ಕಲ್ಪನೆ ಎನ್ನುತ್ತಾರೆ. ಸಾಮಾನ್ಯವಾಗಿ ಜನರು ಮದ್ಯ ಸೇವನೆ ಮಾಡುವುದರಿಂದ ಕೊರೆಯುವ ಚಳಿಯಿಂದ ಬಿಡುಗಡೆ ಪಡೆಯಬಹುದು ಎಂದು ತಿಳಿದುಕೊಳ್ಳುತ್ತಾರೆ. ಆದರೆ ಇದರಿಂದ ಉಂಟಾಗುವ ಅಡ್ಡಪರಿಣಾಮಗಳ ಬಗ್ಗೆ ಯೋಚಿಸುವುದಿಲ್ಲ. ಹಾಗಾದರೆ ಚಳಿಗಾಲದಲ್ಲಿ ಆಲ್ಕೋಹಾಲ್ ಸೇವನೆ ಮಾಡುವುದರಿಂದ ಉಂಟಾಗುವ ಸಮಸ್ಯೆಗಳೇನು? ಇಲ್ಲಿದೆ ಮಾಹಿತಿ.

ಅನೇಕರ ಮನೆಗಳಲ್ಲಿ ಸಂಜೆ ಶೀತದ ವಾತಾವರಣ ಆರಂಭವಾಗುತ್ತಿದ್ದಂತೆ ಮದ್ಯ ಸೇವನೆ ಮಾಡುವ ಅಭ್ಯಾಸವನ್ನು ಹೊಂದಿರುತ್ತಾರೆ. ಅದರಲ್ಲಿಯೂ ಶೀತದಿಂದ ಪಾರಾಗಲು ಮಿತಿಮೀರಿ ಕುಡಿಯುತ್ತಾರೆ. ಈ ರೀತಿ ಅಭ್ಯಾಸ ಅನೇಕ ಸಮಸ್ಯೆಗಳಿಗೆ ಆಹ್ವಾನ ನೀಡಿದಂತಾಗಬಹುದು ಎಂದು ವೈದ್ಯರು ಎಚ್ಚರಿಸುತ್ತಾರೆ. ಅದರಲ್ಲಿಯೂ ಇದರಿಂದ ಉಸಿರಾಟಕ್ಕೆ ಸಂಬಂಧ ಪಟ್ಟ ಕಾಯಿಲೆಗಳು ಹೆಚ್ಚಾಗುವ ಅಪಾಯವಿರುತ್ತದೆ. ನಿಮಗೆ ಹೆಚ್ಚಿನ ಜ್ವರ, ಉಸಿರಾಟದ ತೊಂದರೆ, ನೀಲಿ ಚರ್ಮ ಅಥವಾ ತುಟಿಗಳಿಂದ ಅಥವಾ ಕಫ ಹೊರಬರುವಾಗ ರಕ್ತ ಬಂದರೆ, ನೀವು ತಕ್ಷಣ ಆಸ್ಪತ್ರೆಗೆ ಹೋಗಬೇಕು ಎಂದು ವೈದ್ಯರು ಸೂಚಿಸುತ್ತಾರೆ. ಏಕೆಂದರೆ ತಾಪಮಾನ ಕಡಿಮೆಯಾದಾಗ ಬೆಚ್ಚಗಿರಲು ಆಲ್ಕೋಹಾಲ್ ಕುಡಿದರೆ, ಹೆಚ್ಚಿನ ತೊಂದರೆಗಳು ಉಂಟಾಗುತ್ತವೆ. ಹಾಗಾಗಿ ಶೀತ ಗಾಳಿಯ ತೀವ್ರತೆ ಕಡಿಮೆಯಾಗುವವರೆಗೆ ಜಾಗರೂಕರಾಗಿರಿ.

ಯಾವ ರೀತಿಯ ಸಮಸ್ಯೆಗಳು ಉಂಟಾಗುತ್ತದೆ?

-ಆಲ್ಕೋಹಾಲ್ ನಿಮ್ಮ ರಕ್ತನಾಳಗಳನ್ನು ಹಿಗ್ಗಿಸುತ್ತದೆ, ಇದು ಮೊದಲಿಗೆ ನಿಮಗೆ ಬೆಚ್ಚಗಿನ ಅನುಭವವನ್ನು ನೀಡಿದರೂ ಕೂಡ ದೇಹಕ್ಕೆ ಒಳ್ಳೆಯದಲ್ಲ.

-ಆಲ್ಕೋಹಾಲ್ ಉತ್ತಮ ನಿರ್ಧಾರಗಳನ್ನು ತೆಗೆದುಕೊಳ್ಳುವ ನಿಮ್ಮ ಸಾಮರ್ಥ್ಯವನ್ನು ದುರ್ಬಲಗೊಳಿಸುತ್ತದೆ, ಇದು ಅಪಾಯಕಾರಿ ನಡವಳಿಕೆಗೆ ಕಾರಣವಾಗಬಹುದು.

-ಆಲ್ಕೋಹಾಲ್ ನಿಮ್ಮ ಹೃದಯ ಬಡಿತ ಮತ್ತು ಅರಿಥ್ಮಿಯಾ ಅಪಾಯವನ್ನು ಹೆಚ್ಚಿಸುತ್ತದೆ.

ಇದನ್ನೂ ಓದಿ: ಚಳಿಗಾಲದಲ್ಲಿ ಸ್ನಾನ ಮಾಡುವಾಗ ಈ ತಪ್ಪನ್ನು ಮಾಡಬೇಡಿ

ಹೆಚ್ಚು ಚಳಿ ಇರುವಾಗ ಸುರಕ್ಷಿತವಾಗಿರಲು, ಇವುಗಳನ್ನು ಮಾಡಬಹುದು:

ದಪ್ಪ ಬಟ್ಟೆಗಳನ್ನು ಧರಿಸಿ.

ಅಧಿಕವಾಗಿ ಶಕ್ತಿ ನೀಡುವಂತಹ ಆಹಾರವನ್ನು ಸೇವನೆ ಮಾಡಿ.

ಆದಷ್ಟು ಬೆಚ್ಚಗಿನ ಪಾನೀಯಗಳನ್ನು ಕುಡಿಯಿರಿ.

ಮದ್ಯಪಾನ ಮಾಡುವುದಾದರೆ ಎಷ್ಟು ಕುಡಿಯುತ್ತೀರಿ ಎಂಬುದಕ್ಕೆ ಒಂದು ಮಿತಿ ಇರಲಿ.

ತುಂಬಾ ತಂಪು ಪಾನೀಯಗಳ ಸೇವನೆಯನ್ನು ತಪ್ಪಿಸಿ.

ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ