
ಇತ್ತೀಚಿನ ದಿನಗಳಲ್ಲಿ ಮೂತ್ರ ಸೋರಿಕೆ (Urine Leakage) ಎನ್ನವಂತದ್ದು ಮಹಿಳೆಯರಲ್ಲಿ ಹೆಚ್ಚಾಗಿ ಕಂಡುಬರುತ್ತಿರುವ ಆರೋಗ್ಯ ಸಮಸ್ಯೆಗಳಲ್ಲಿ ಒಂದಾಗಿದೆ. ಕೆಮ್ಮುವಾಗ ಅಥವಾ ಸೀನುವಾಗ ಮೂತ್ರ ಸೋರಿಕೆಯಾಗುವುದು ಸಣ್ಣ ಸಮಸ್ಯೆ ಅಲ್ಲವೇ ಅಲ್ಲ. ಆದರೆ ಎಷ್ಟೋ ಜನ ಮಹಿಳೆಯರು ಇದನ್ನು ನಿರ್ಲಕ್ಷ್ಯ ಮಾಡುತ್ತಿದ್ದಾರೆ. ಆದರೆ ಸ್ತ್ರೀರೋಗ ತಜ್ಞರು ಇದನ್ನು ಎಂದಿಗೂ ಕಡೆಗಣಿಸಬೇಡಿ ಇದರಿಂದ ಆರೋಗ್ಯ ಸಮಸ್ಯೆಗಳು ಹೆಚ್ಚಾಗುತ್ತದೆ ಎಂದಿದ್ದಾರೆ. ಕೆಲವೊಮ್ಮೆ ಹಠಾತ್ ಆಗಿ ಬರುವ ಕೆಮ್ಮು, ಸೀನು ಅಥವಾ ಅತಿಯಾದ ನಗುವಿನಿಂದಲೂ ಮೂತ್ರ ಸೋರಿಕೆಯಾಗುವುದನ್ನು ಅನುಭವಿಸಿರಬಹುದು. ಈ ಸಮಸ್ಯೆ ಹೆಚ್ಚಾಗಿ ಮಹಿಳೆಯರಲ್ಲಿಯೇ ಕಂಡುಬರುತ್ತದೆ. ಪುರುಷರಲ್ಲಿ ಕಂಡುಬರುವುದಿಲ್ಲ ಎಂದಲ್ಲ. ಮಹಿಳೆಯರಿಗೆ ಹೋಲಿಕೆ ಮಾಡಿದರೆ ಪುರುಷರಲ್ಲಿ ಈ ರೀತಿಯ ಸಮಸ್ಯೆ ಕಂಡು ಬರುವುದು ಕಡಿಮೆಯಾಗಿರುತ್ತದೆ. ಈ ರೀತಿ ಮೂತ್ರ ಸೋರಿಕೆಯಾಗುವಂತಹ ಸಮಸ್ಯೆಗಳನ್ನು ಹಗುರವಾಗಿ ಪರಿಗಣಿಸದೆಯೇ ಅದರಿಂದ ಮುಕ್ತಿ ಪಡೆಯುವ ಬಗ್ಗೆ ಯೋಚಿಸಬೇಕಾಗುತ್ತದೆ.
ಮೂತ್ರ ಹಠಾತ್ ಆಗಿ ಸೋರಿಕೆ ಆಗುವುದನ್ನು ಸಣ್ಣ ಸಮಸ್ಯೆ ಎಂದು ನಿರ್ಲಕ್ಷಿಸಿದರೆ, ಮುಂದೆ ಇದು ದೊಡ್ಡ ಸಮಸ್ಯೆಯಾಗಬಹುದು. ಈ ಸೋಂಕು ಮೂತ್ರಪಿಂಡ ದುರ್ಬಲಗೊಂಡಿರುವುದರ ಸೂಚನೆಯಾಗಿದೆ. ಮೂತ್ರ ವ್ಯವಸ್ಥೆಯು ಮೂತ್ರವನ್ನು ಸರಿಯಾಗಿ ನಿಯಂತ್ರಿಸಲು ಸಾಧ್ಯವಾಗದಿದ್ದಾಗ ಈ ರೀತಿಯಾದ ಸಮಸ್ಯೆ ಹೆಚ್ಚಾಗುತ್ತದೆ. ಅಂದರೆ, ನೀವು ಶೌಚಾಲಯಕ್ಕೆ ಹೋಗುವ ವರೆಗೆ ಮೂತ್ರ ವಿಸರ್ಜನೆಯನ್ನು ತಡೆಹಿಡಿಯಲು ಸಾಧ್ಯವಾಗದಿರುವುದು ಅಥವಾ ಮೂತ್ರ ಸೋರಿಕೆಯಾಗುವುದು ನಿಮ್ಮ ನಿಯಂತ್ರಣದಲ್ಲಿ ಇಲ್ಲದಿರುವುದಾಗಿದೆ. ಈ ಅಪಾಯವು ವಯಸ್ಸು ಹೆಚ್ಚಾದಂತೆ ಅಧಿಕವಾಗುತ್ತದೆ, ಆದರೆ ಇದು ಚಿಕ್ಕ ವಯಸ್ಸಿನವರಲ್ಲಿಯೂ ಕಂಡುಬರಬಹುದು.
ಮೂತ್ರ ಸೋರಿಕೆ ಸಾಮಾನ್ಯವಾಗಿ ಎರಡು ಸಂದರ್ಭಗಳಲ್ಲಿ ಸಂಭವಿಸಬಹುದು. ಮೊದಲನೆಯದು ತೇಗುವುದು, ಸೀನುವುದು, ಓಡುವುದು ಅಥವಾ ಭಾರವಾದ ವಸ್ತುಗಳನ್ನು ಎತ್ತುವಂತಹ ಕ್ರಿಯೆಗಳ ಸಮಯದಲ್ಲಿ ಸಂಭವಿಸುತ್ತದೆ. ಎರಡನೆಯ ಸಂದರ್ಭದಲ್ಲಿ, ಮೂತ್ರವು ಇದ್ದಕ್ಕಿದ್ದಂತೆ ಬರುತ್ತದೆ ನೀವು ಶೌಚಾಲಯಕ್ಕೆ ಬೇಗ ಹೋಗದಿದ್ದರೆ, ಮೂತ್ರ ಸೋರಿಕೆಯಾಗುತ್ತದೆ. ಮಾತ್ರವಲ್ಲ, ಯುಟಿಐ ಕಾರಣದಿಂದಾಗಿಯೂ ಮೂತ್ರ ಸೋರಿಕೆ ಆಗಬಹುದು. ಇನ್ನು ಕೆಲವರಲ್ಲಿ ಋತುಬಂಧದಿಂದ ದೇಹದಲ್ಲಿ ಉಂಟಾಗುವ ಹಾರ್ಮೋನುಗಳ ಬದಲಾವಣೆಗಳು ಸಹ ಈ ರೀತಿ ಸಮಸ್ಯೆ ಕಂಡುಬರುವುದಕ್ಕೆ ಕಾರಣವಾಗಬಹುದು. ಕೆಫೀನ್ ಅಥವಾ ಆಲ್ಕೋಹಾಲ್ ಅನ್ನು ಅತಿಯಾಗಿ ಸೇವಿಸುವುದರಿಂದಲೂ ಮೂತ್ರ ಸೋರಿಕೆಯಾಗಬಹುದು.
ಇದನ್ನೂ ಓದಿ: ಪುರುಷರೇ.. ಮೂತ್ರ ತಡೆಯಲಾಗದೆ ಸೋರಿಕೆಯಾಗುತ್ತಾ? ಬಾಳೆ ಗಿಡದಲ್ಲಿ ಸಿಗುವ ಈ ಹೂವನ್ನು ಬಳಸಿ ನೋಡಿ
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ