ಊಟದ ನಂತರ ಒಂದು ಲೋಟ ಮಜ್ಜಿಗೆ ಕುಡಿದು ವಜ್ರಾಸನ ಮಾಡಿ; ದೇಹದಲ್ಲಿನ ಬದಲಾವಣೆ ನಿಮ್ಮನ್ನು ಅಚ್ಚರಿಗೊಳಿಸುತ್ತದೆ

| Updated By: preethi shettigar

Updated on: Dec 18, 2021 | 7:00 AM

Health Tips: ನಿಮ್ಮ ಜೀರ್ಣಾಂಗ ವ್ಯವಸ್ಥೆಯನ್ನು ಸುಧಾರಿಸಲು ಸಹಾಯ ಮಾಡುವ ಅನೇಕ ನೈಸರ್ಗಿಕ ಪರಿಹಾರಗಳನ್ನು ಆಯುರ್ವೇದದಲ್ಲಿ ಉಲ್ಲೇಖಿಸಲಾಗಿದೆ. ನಿಮ್ಮ ದಿನಚರಿ ಮತ್ತು ಆಹಾರದಲ್ಲಿ ನೀವು ಸಣ್ಣ ಬದಲಾವಣೆಗಳನ್ನು ಮಾಡಿದರೆ, ಜೀರ್ಣಕಾರಿ ಸಮಸ್ಯೆಗಳನ್ನು ಹೋಗಲಾಡಿಸಬಹುದು.

ಊಟದ ನಂತರ ಒಂದು ಲೋಟ ಮಜ್ಜಿಗೆ ಕುಡಿದು ವಜ್ರಾಸನ ಮಾಡಿ; ದೇಹದಲ್ಲಿನ ಬದಲಾವಣೆ ನಿಮ್ಮನ್ನು ಅಚ್ಚರಿಗೊಳಿಸುತ್ತದೆ
ಸಾಂಕೇತಿಕ ಚಿತ್ರ
Follow us on

ಪ್ರತಿಯೊಬ್ಬರು ಉತ್ತಮ ಮತ್ತು ರುಚಿಕರ ಆಹಾರ ತಿನ್ನಲು ಇಷ್ಟಪಡುತ್ತಾರೆ. ಆದರೆ ನಾವು ಅದನ್ನು ಜೀರ್ಣಿಸಿಕೊಳ್ಳಲು ಯಾವ ಮಾರ್ಗ ಕಂಡುಕೊಳ್ಳುತ್ತೇವೆ ಎನ್ನುವುದು ಇಲ್ಲಿ ಬಹಳ ಮುಖ್ಯ. ಜೀವನದಲ್ಲಿ ಜೀರ್ಣಕ್ರಿಯೆಗೆ ಎಷ್ಟು ಪ್ರಾಮುಖ್ಯತೆ ಇದೆಯೋ ಅಷ್ಟೇ ಮುಖ್ಯ ಆಹಾರ ಸೇವನೆಯ ಕ್ರಮ. ಉತ್ತಮ ಜೀರ್ಣಕ್ರಿಯೆಯು ನಮ್ಮ ಆರೋಗ್ಯವನ್ನು ಕಾಪಾಡುವಲ್ಲಿ ದೊಡ್ಡ ಪಾತ್ರವನ್ನು ವಹಿಸುತ್ತದೆ. ಜೀರ್ಣಕ್ರಿಯೆ ಸರಿಯಾಗಿ ಆಗದೇ ಇದ್ದಾಗ ದೇಹದಲ್ಲಿ ಅನೇಕ ರೀತಿಯ ಕಾಯಿಲೆಗಳು ಹುಟ್ಟಿಕೊಳ್ಳುತ್ತವೆ. ಮಲಬದ್ಧತೆ, ಚರ್ಮದ ಸಮಸ್ಯೆಗಳು, ರಕ್ತಹೀನತೆ ಮುಂತಾದ ಅನೇಕ ಆರೋಗ್ಯ (Health) ಸಮಸ್ಯೆಗಳು ಕೂಡ ಬರಬಹುದು. ಇತ್ತೀಚೆಗೆ ನಿಮ್ಮ ಜೀರ್ಣಕ್ರಿಯೆಯ ಸಮಸ್ಯೆಗಳನ್ನು ಗುಣಪಡಿಸುವ ಅನೇಕ ವಸ್ತುಗಳು ಸಹ ಮಾರುಕಟ್ಟೆಯಲ್ಲಿವೆ. ಅದಾಗ್ಯೂ, ಜೀರ್ಣಕ್ರಿಯೆಯನ್ನು (Digestion)ಹೆಚ್ಚಿಸಲು ಮತ್ತು ಕರುಳಿನ ಸ್ಥಿತಿಯನ್ನು ಸುಧಾರಿಸಲು ನೈಸರ್ಗಿಕ ಪರಿಹಾರಗಳನ್ನು ಅನುಸರಿಸುವುದು ಉತ್ತಮ. ನಿಮ್ಮ ಜೀರ್ಣಾಂಗ ವ್ಯವಸ್ಥೆಯನ್ನು ಸುಧಾರಿಸಲು ಸಹಾಯ ಮಾಡುವ ಅನೇಕ ನೈಸರ್ಗಿಕ ಪರಿಹಾರಗಳನ್ನು ಆಯುರ್ವೇದದಲ್ಲಿ ಉಲ್ಲೇಖಿಸಲಾಗಿದೆ. ನಿಮ್ಮ ದಿನಚರಿ ಮತ್ತು ಆಹಾರದಲ್ಲಿ ನೀವು ಸಣ್ಣ ಬದಲಾವಣೆಗಳನ್ನು ಮಾಡಿದರೆ, ಜೀರ್ಣಕಾರಿ ಸಮಸ್ಯೆಗಳನ್ನು ಹೋಗಲಾಡಿಸಬಹುದು. ಆದ್ದರಿಂದ ಕೆಲವು ವಿಶೇಷ ಸಲಹೆಗಳನ್ನು ಗಮನಿಸಿ.

ಊಟದ ನಂತರ ವಜ್ರಾಸನ
ಊಟದ ನಂತರ ವಜ್ರಾಸನ ಮಾಡುವುದು ತುಂಬಾ ಪ್ರಯೋಜನಕಾರಿ. ವಜ್ರಾಸನದಲ್ಲಿ ಕುಳಿತುಕೊಳ್ಳುವುದರಿಂದ ನಿಮ್ಮ ಹೊಟ್ಟೆಯಲ್ಲಿ ರಕ್ತ ಪರಿಚಲನೆ ಸುಧಾರಿಸುತ್ತದೆ ಮತ್ತು ಜೀರ್ಣಕ್ರಿಯೆಯನ್ನು ಸುಲಭಗೊಳಿಸುತ್ತದೆ.

ಮಧ್ಯಾಹ್ನದ ಊಟದೊಂದಿಗೆ ಮಜ್ಜಿಗೆಯನ್ನು ಸೇವಿಸಿ
ನೀವು ಉತ್ತಮ ಜೀರ್ಣಕ್ರಿಯೆಯನ್ನು ಬಯಸಿದರೆ ಮಜ್ಜಿಗೆ ಕುಡಿಯಿರಿ. ಮಜ್ಜಿಗೆಯು ಪ್ರೋಬಯಾಟಿಕ್ ಪ್ರಯೋಜನಗಳನ್ನು ಹೊಂದಿದೆ ಮತ್ತು ಆಮ್ಲೀಯತೆಯ ಲಕ್ಷಣಗಳನ್ನು ನಿವಾರಿಸಲು ಸೂಕ್ತವಾಗಿದೆ. ಊಟದ ಜೊತೆಗೆ ಕೂಡ ಮಜ್ಜಿಗೆ ಸೇವಿಸಬಹುದು.

ಹೊಂದಿಕೆಯಾಗದ ಆಹಾರವನ್ನು ಒಟ್ಟಿಗೆ ಸೇವಿಸುವುದನ್ನು ತಪ್ಪಿಸಿ
ಆಯುರ್ವೇದದಲ್ಲಿ, ಹೊಂದಿಕೆಯಾಗದ ಕೆಲವು ಆಹಾರ ಪದಾರ್ಥಗಳ ಬಗ್ಗೆ ಹೇಳಲಾಗಿದೆ. ನಾವು ಅವುಗಳಿಂದ ದೂರವಿರಬೇಕು. ಹಣ್ಣುಗಳು ಮತ್ತು ಹಾಲು, ಮೀನು ಮತ್ತು ಹಾಲು, ತಣ್ಣನೆಯ ಮತ್ತು ಬಿಸಿ ಆಹಾರಗಳನ್ನು ಒಟ್ಟಿಗೆ ತಿನ್ನಬಾರದು. ಇದು ನಿಮ್ಮ ಜೀರ್ಣಕ್ರಿಯೆಯನ್ನು ತೊಂದರೆಗೊಳಿಸುತ್ತದೆ.

ನೆನೆಸಿದ ಬೀನ್ಸ್ ಮತ್ತು ನಟ್ಸ್ ತಿನ್ನಿರಿ
ಪ್ರತಿಯೊಬ್ಬರು ದ್ವಿದಳ ಧಾನ್ಯಗಳು ಮತ್ತು ನಟ್ಸ್ ತಿನ್ನುತ್ತಾರೆ. ಆದರೆ ಅವುಗಳಲ್ಲಿ ಫೈಟಿಕ್ ಆಮ್ಲವಿದೆ ಎಂದು ನಿಮಗೆ ತಿಳಿದಿದೆಯೇ? ಕರುಳಿಗೆ ಇವುಗಳಿಂದ ಪೋಷಕಾಂಶಗಳನ್ನು ಹೀರಿಕೊಳ್ಳಲು ಕಷ್ಟವಾಗುತ್ತದೆ. ಆದ್ದರಿಂದ, ಇವುಗಳನ್ನು ನೆನೆಸಿ ತಿನ್ನಬೇಕು. ಏಕೆಂದರೆ ಅವುಗಳನ್ನು ನೆನೆಸಿದರೆ ಫೈಟಿಕ್ ಆಮ್ಲವನ್ನು ತೆಗೆದುಹಾಕುತ್ತದೆ ಮತ್ತು ದೇಹದಲ್ಲಿ ಸುಲಭವಾಗಿ ಜೀರ್ಣವಾಗುತ್ತದೆ.

ಪ್ರತಿದಿನ 5000 ಹೆಜ್ಜೆ ವಾಕ್ ಮಾಡಿ
ವಾಕಿಂಗ್ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಹೀಗಾಗಿ ಹೆಚ್ಚು ವಾಕ್ ಮಾಡಿ. ನಿಮ್ಮ ಜೀರ್ಣಕ್ರಿಯೆಯ ಪ್ರಕ್ರಿಯೆಯು ಇದರಿಂದ ಸುಧಾರಿಸುತ್ತದೆ. ವ್ಯಾಯಾಮ ಮಾಡಲು ನಿಮಗೆ ಸಮಯ ಸಿಗದಿದ್ದರೆ, ನೀವು ಪ್ರತಿದಿನ ಕನಿಷ್ಠ 5000 ಹೆಜ್ಜೆ ವಾಕ್ ಮಾಡಿ. ಇದು ನಿಮ್ಮ ಜೀರ್ಣಕ್ರಿಯೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ.

ಇದನ್ನೂ ಓದಿ:
ನಿಂತು ನೀರು ಕುಡಿಯುವ ಅಭ್ಯಾಸ ಇದೆಯೇ? ಆರೋಗ್ಯ ಸಮಸ್ಯೆ ಉಂಟಾಗುವ ಮೊದಲು ಎಚ್ಚರ ವಹಿಸಿ

Pearl Millet Benefits: ಸಜ್ಜೆ ರೊಟ್ಟಿ ಮಾಡುವ ವಿಧಾನದ ಜತೆಗೆ ಆರೋಗ್ಯಕರ ಗುಣಗಳ ಕುರಿತು ಇಲ್ಲಿದೆ ಮಾಹಿತಿ