Coffee Benefits: ಕಾಫಿ ಕುಡಿಯುವುದರಿಂದ ನಿಮ್ಮ ಜೀವಿತಾವಧಿ ಹೆಚ್ಚುತ್ತಂತೆ!

| Updated By: ನಯನಾ ರಾಜೀವ್

Updated on: Jun 05, 2022 | 2:43 PM

ಕಾಫಿ ಎಂದರೆ ಯಾರಿಗೆ ತಾನೆ ಇಷ್ಟವಿಲ್ಲ ಹೇಳಿ, ಖುಷಿಯಾದರೂ, ದುಃಖವಾದರೂ, ತಲೆನೋವಿದ್ದರೂ, ಮೈಕೈನೋವಿದ್ದರೂ ಮೊದಲು ನೆನಪಾಗುವುದೇ ಕಾಫಿ.

Coffee Benefits: ಕಾಫಿ ಕುಡಿಯುವುದರಿಂದ ನಿಮ್ಮ ಜೀವಿತಾವಧಿ ಹೆಚ್ಚುತ್ತಂತೆ!
Coffee
Follow us on

ಕಾಫಿ ಎಂದರೆ ಯಾರಿಗೆ ತಾನೆ ಇಷ್ಟವಿಲ್ಲ ಹೇಳಿ, ಖುಷಿಯಾದರೂ, ದುಃಖವಾದರೂ, ತಲೆನೋವಿದ್ದರೂ, ಮೈಕೈನೋವಿದ್ದರೂ ಮೊದಲು ನೆನಪಾಗುವುದೇ ಕಾಫಿ.
ಗೌನ್​ಜೌನ ಸದರ್ನ್​ ಯೂನಿವರ್ಸಿಟಿಯು ಮಾಡಿದ ಅಧ್ಯಯನದಲ್ಲಿ, ಕಾಫಿಯಲ್ಲಿ ಹೃದ್ರೋಗ, ಟೈಪ್ 2 ಡಯಾಬಿಟಿಸ್, ಖಿನ್ನತೆ, ಪಿತ್ತಜನಕಾಂಗದ ಕ್ಯಾನ್ಸರ್ ಸೇರಿದಂತೆ ಅನೇಕ ರೋಗಗಳ ಅಪಾಯವನ್ನು ಕಡಿಮೆ ಮಾಡುವ ಪ್ರವೃತ್ತಿ ಇದೆ ಎಂದು ತಿಳಿಸಲಾಗಿದೆ.

ಕಾಫಿಯಿಂದ ಸಾವಿನ ಪ್ರಮಾಣ ಕಡಿಮೆಯಾಗುತ್ತದೆ
ದಿನದಲ್ಲಿ 400 ಮಿ.ಗ್ರಾಂ ಕೆಫೀನ್ ಹೊಂದಿದ ಕಾಫಿ ಕುಡಿಯುವುದರಿಂದ ಸಾವಿನ ಪ್ರಮಾಣ ಕ್ರಮೇಣವಾಗಿ ಕಡಿಮೆಯಾಗುತ್ತದೆ. ಒಂದು ಅಧ್ಯಯನದ ಪ್ರಕಾರ, ದಿನದಲ್ಲಿ 3 ರಿಂದ 5 ಕಪ್ ಕಾಫಿ ಕುಡಿಯುವುದರಿಂದ ಚಿಕ್ಕ ವಯಸ್ಸಿನಲ್ಲಿಯೇ ಸಾಯುವ ಪ್ರಮಾಣ ಶೇ 15% ರಷ್ಟು ಕಡಿಮೆಯಾಗುತ್ತದೆಯಂತೆ.

ಪ್ರಪಂಚದಾದ್ಯಂತ ಕಾಫಿಯ ಬಗ್ಗೆ ಸಾಕಷ್ಟು ಅಧ್ಯಯನಗಳು ನಡೆದಿವೆ. ಅಲ್ಲದೆ ಕಾಫಿ ಸೇವಿಸುವ ಮಹಿಳೆಯರಲ್ಲಿ 50 ಪ್ರತಿಶತದಷ್ಟು ಸಾವಿನ ಪ್ರಮಾಣ ಕಡಿಮೆಯಾಗುತ್ತದೆ, ಏಕೆಂದರೆ ಖಿನ್ನತೆ ಯನ್ನು ಶಮನ ಮಾಡಲು ಬೇಕಿರುವ ರಾಸಾಯನಿಕಗಳ ಉತ್ಪಾದನೆಯನ್ನು ಮೆದುಳಿನಲ್ಲಿ ಹೆಚ್ಚಿಸಲು ಕಾಫಿ ಸಹಾಯ ಮಾಡುತ್ತದೆ ಎಂಬುದನ್ನು ಅಧ್ಯಯನ ಹೇಳಿದೆ.

 ಸಾವಿನ ಅಪಾಯ 10 ವರ್ಷ ಕಡಿಮೆಯಾಗುತ್ತದೆ

ಬ್ರಿಟನ್ ನಲ್ಲಿ ನಡೆಸಿದ ಮತ್ತೊಂದು ಅಧ್ಯಯನವು ಕಾಫಿ ಕುಡಿಯುವವರಲ್ಲಿ ಸಾವಿನ ಅಪಾಯವನ್ನು ಸುಮಾರು 10 ವರ್ಷಗಳವರೆಗೆ ಕಡಿಮೆಗೊಳಿಸಬಹುದೆಂದು ಹೇಳಿದೆ. ಸುಮಾರು ಐದು ಲಕ್ಷ ಜನರನ್ನು ಈ ಅಧ್ಯಯನಕ್ಕೆ ಒಳಪಡಿಸಲಾಗಿದೆ. ಕಾಫಿ ಕುಡಿಯುವುದರಿಂದ ಯೌವನ ಸ್ಥಿರವಾಗಿರುತ್ತದೆ ಎಂದು ಹೇಳಲಾಗಿದೆ.

ಕಾಫಿಯ ಪ್ರಯೋಜನಗಳು

ನ್ಯಾಷನಲ್ ಕ್ಯಾನ್ಸರ್ ಸ್ಕೂಲ್ ಆಫ್ ಅಮೆರಿಕದಲ್ಲಿ ಎರಿಕಾ ಲಾಫ್ಟ್ ಫೀಲ್ಡ್ ಎಂಬ ಸಂಶೋಧಕ ನಡೆಸಿದ ಅಧ್ಯಯನವೊಂದರಲ್ಲಿ, ನಾವು 4 ರಿಂದ 5 ಕಪ್ ಕಾಫಿ ಕುಡಿಯುವುದರಿಂದ ಅನೇಕ ಪ್ರಯೋಜನಗಳನ್ನು ಪಡೆಯಬಹುದು ಎಂಬ ಮಾಹಿತಿ ತಿಳಿದು ಬಂದಿದೆ.

ಕಾಫಿಯಲ್ಲಿ ಒಂದು ಸಾವಿರಕ್ಕೂ ಹೆಚ್ಚು ರಾಸಾಯನಿಕ ಸಂಯುಕ್ತಗಳಿವೆ, ಇದರಲ್ಲಿ ಉತ್ಕರ್ಷಣ ನಿರೋಧಕಗಳು ಇರುತ್ತವೆ. ಮತ್ತು ಈ ಉತ್ಕರ್ಷಣ ನಿರೋಧಕಗಳು ಜೀವಕೋಶಗಳನ್ನು ರಕ್ಷಿಸುತ್ತವೆ ಮತ್ತು ಖಿನ್ನತೆಯನ್ನು ಕಡಿಮೆಮಾಡುವ ಮೂಲಕ, ಆತ್ಮಹತ್ಯೆಯ ಪ್ರವೃತ್ತಿಯನ್ನು 50% ವರೆಗೆ ಕಡಿಮೆ ಮಾಡುತ್ತದೆ. ಅಧ್ಯಯನವು ಬಹಿರಂಗಪಡಿಸಿದ ಕೆಫೀನ್ ಸೇವನೆಯ ಪ್ರಯೋಜನಗಳನ್ನು ಇಲ್ಲಿ ತಿಳಿಯಬಹುದು.

-ಪ್ರಾಸ್ಟೇಟ್ ಕ್ಯಾನ್ಸರ್ ಅಪಾಯವನ್ನು 9% ರಷ್ಟು ಕಡಿಮೆ ಮಾಡುತ್ತದೆ.

-ವಿವಿಧ ರೀತಿಯ ಕ್ಯಾನ್ಸರ್ ಅಪಾಯವನ್ನು 12% ರಷ್ಟು ಕಡಿಮೆ ಮಾಡುತ್ತದೆ.

-ಕೊಲೆಸ್ಟ್ರಾಲ್ ಅನ್ನು ಸಹ ನಿಯಂತ್ರಿಸುತ್ತದೆ

-ತೂಕ ಇಳಿಸುವಲ್ಲಿ 20% ಪರಿಣಾಮಕಾರಿಯಾಗಿ ಸಹಾಯ ಮಾಡುತ್ತದೆ.

-ಟೈಪ್ 2 ಡಯಾಬಿಟಿಸ್ ಸಮಸ್ಯೆಯ ಅಪಾಯವನ್ನು 50% ರಷ್ಟು ಕಡಿಮೆ ಮಾಡುತ್ತದೆ.

-ಹೃದ್ರೋಗ ಸಮಸ್ಯೆಯ ಅಪಾಯವನ್ನು 16% ಕಡಿಮೆ ಮಾಡುತ್ತದೆ.

-ದಿನಕ್ಕೆ ಒಂದು ಕಪ್ ಕಾಫಿ ಕುಡಿಯುವುದರಿಂದ ಪಾರ್ಶ್ವವಾಯು ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ,

-ದಿನಕ್ಕೆ ಎರಡು ಮೂರು ಕಪ್ ಕಾಫಿ ಕುಡಿಯುವ 65 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಮಹಿಳೆಯರಿಗೆ ಸಾಮಾನ್ಯವಾಗಿ ಬುದ್ಧಿಮಾಂದ್ಯತೆ ಬರುವ ಸಾಧ್ಯತೆ ಕಡಿಮೆ ಎಂದು ಅಧ್ಯಯನ ಹೇಳುತ್ತದೆ.

 

ಈ ಮೇಲಿನ ಲೇಖನವು ಟಿವಿ9ನ ಅಧಿಕೃತ ಮಾಹಿತಿಯಾಗಿರುವುದಿಲ್ಲ, ಅಧ್ಯಯನದ ಮಾಹಿತಿಯನ್ನು ಒಳಗೊಂಡಿರುತ್ತದೆ.

ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Published On - 2:40 pm, Sun, 5 June 22