Mental Health: ವೈದ್ಯರ ಮಾನಸಿಕ ಸ್ಥಿತಿ ವೈದ್ಯಕೀಯ ನಿರ್ಲಕ್ಷ್ಯಕ್ಕೂ ಕಾರಣವಾಗಬಹುದು

Doctor's Mental Healthವೈದ್ಯರ ಮಾನಸಿಕ ಸ್ಥಿತಿಯು ವೈದ್ಯಕೀಯ ನಿರ್ಲಕ್ಷ್ಯಕ್ಕೆ ಕಾರಣವಾಗಬಹುದು ಎಂದು ಸಂಶೋಧನೆಯೊಂದು ತಿಳಿಸಿದೆ. ಬ್ರಿಟಿಷ್ ಮೆಡಿಕಲ್ ಜರ್ನಲ್​ನಲ್ಲಿ ಪ್ರಕಟವಾಗಿರುವ ವರದಿ ಪ್ರಕಾರ, ಮೆಡಿಸಿನ್ ಇನ್ ಆಸ್ಟ್ರೇಲಿಯಾ ಬ್ಯಾಲೆನ್ಸಿಂಗ್ ಎಂಪ್ಲಾಯ್​ಮೆಂಟ್ ಆಂಡ್ ಲೈವ್ 2013-2018 ನಡುವೆ 12,000 ವೈದ್ಯರ ಸಮೀಕ್ಷೆಯನ್ನು ನಡೆಸಿತ್ತು.

Mental Health: ವೈದ್ಯರ ಮಾನಸಿಕ ಸ್ಥಿತಿ ವೈದ್ಯಕೀಯ ನಿರ್ಲಕ್ಷ್ಯಕ್ಕೂ ಕಾರಣವಾಗಬಹುದು
Doctor
Follow us
TV9 Web
| Updated By: ನಯನಾ ರಾಜೀವ್

Updated on: Jun 06, 2022 | 8:00 AM

ವೈದ್ಯರ ಮಾನಸಿಕ ಸ್ಥಿತಿಯು ವೈದ್ಯಕೀಯ ನಿರ್ಲಕ್ಷ್ಯಕ್ಕೆ ಕಾರಣವಾಗಬಹುದು ಎಂದು ಸಂಶೋಧನೆಯೊಂದು ತಿಳಿಸಿದೆ. ಬ್ರಿಟಿಷ್ ಮೆಡಿಕಲ್ ಜರ್ನಲ್​ನಲ್ಲಿ ಪ್ರಕಟವಾಗಿರುವ ವರದಿ ಪ್ರಕಾರ, ಮೆಡಿಸಿನ್ ಇನ್ ಆಸ್ಟ್ರೇಲಿಯಾ ಬ್ಯಾಲೆನ್ಸಿಂಗ್ ಎಂಪ್ಲಾಯ್​ಮೆಂಟ್ ಆಂಡ್ ಲೈವ್ 2013-2018 ನಡುವೆ 12,000 ವೈದ್ಯರ ಸಮೀಕ್ಷೆಯನ್ನು ನಡೆಸಿತ್ತು.

ವೈದ್ಯರು ಸಹ ಮನುಷ್ಯರು. ಅವರಲ್ಲಿಯೂ ಭಾವನೆಗಳ ಏರಿಳಿತ, ಖುಷಿ-ದುಃಖ, ಬೇಸರ ಎಲ್ಲವೂ ಇದ್ದೇ ಇರುತ್ತದೆ. ಕೋವಿಡ್ ಆರಂಭವಾದಾಗಿನಿಂದಲೂ ರಾತ್ರಿ, ಹಗಲು ಎನ್ನದೇ ದುಡಿಯುತ್ತಿರುವ ಅವರು, ಸಮಯಕ್ಕೆ ಸರಿಯಾಗಿ ಆಹಾರ ಸೇವೆನೆ ಇಲ್ಲದೇ, ಮಾನಸಿಕ ನೆಮ್ಮದಿ ಕಂಡುಕೊಳ್ಳದೇ ಸೇವೆ ಸಲ್ಲಿಸುತ್ತಿದ್ದಾರೆ.

ಸಮೀಕ್ಷೆಯನ್ನು ಪೂರ್ಣಗೊಳಿಸಿದ ವೈದ್ಯರು ಅವರ ವಯಸ್ಸು, ಲಿಂಗ, ವಿಶೇಷತೆ, ವ್ಯಕ್ತಿತ್ವ, ಆರೋಗ್ಯ, ಜೀವನ ತೃಪ್ತಿ, ಕೆಲಸದ ಪರಿಸ್ಥಿತಿಗಳ ಬಗ್ಗೆ ಅವಲೋಕನ ಮಾಡಿದ್ದರು. ಸಮೀಕ್ಷೆ ನಡೆಸಿದ ವೈದ್ಯರಲ್ಲಿ ಕೇವಲ ಐದು ಪ್ರತಿಶತದಷ್ಟು ವೈದ್ಯರು ಈ ಅವಧಿಯಲ್ಲಿ ವೈದ್ಯಕೀಯ ನಿರ್ಲಕ್ಷ್ಯದ ಬಗ್ಗೆ ಮಾಹಿತಿ ನೀಡಿದ್ದಾರೆ. ಅದರಲ್ಲಿ ಮಹಿಳೆಯರಿಗಿಂತ ಪುರುಷ ವೈದ್ಯರೇ ಇದ್ದಾರೆ.

ಕೊರೊನಾದ ಸಂದರ್ಭ ಹಾಗೂ ನಂತರವೂ ವೈದ್ಯರು ಓವರ್ ಟೈಂ ಕೆಲಸ ಮಾಡುತ್ತಿದ್ದು, ಇದರಿಂದ ಅವರ ವೈಯಕ್ತಿಕ ಜೀವನದ ಮೇಲೂ ಪರಿಣಾಮ ಬೀರುತ್ತಿದೆ. ಈ ಎರಡು ವರ್ಷದಲ್ಲಿ ವೈದ್ಯರ ನಿಸ್ವಾರ್ಥ ಸೇವೆಗೆ ಇಡೀ ವಿಶ್ವವೇ ತಲೆ ಬಾಗಿದೆ.

ಇವರೂ ಸಹ ತಮ್ಮ ಮಾನಸಿಕ ಹಾಗೂ ದೈಹಿಕ ಸ್ಥಿಮಿತ ಕಾಪಾಡಿಕೊಳ್ಳುವುದು ಅತಿ ಮುಖ್ಯ. ಹೀಗಾಗಿ ಇಡೀ ದಿನ ತಮ್ಮ ಮೂಡನ್ನು ಕ್ರಿಯಾಶೀಲವಾಗಿಟ್ಟುಕೊಳ್ಳಲು ಹಾಗೂ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು ಎಲ್ಲಾ ವೈದ್ಯರಿಗೂ ಕೆಲವು ಸಲಹೆಗಳು ಇಲ್ಲಿವೆ.

ತಾಳ್ಮೆ: ತಾಳ್ಮೆಯೊಂದಿದ್ದರೆ ರೋಗಿಯನ್ನು ಅಥವಾ ಅವರ ಕುಟುಂಬದವರನ್ನು ಮೃಧುವಾಗಿ ನಿಭಾಯಿಸಲು ಸಾಧ್ಯ. ಇಲ್ಲವಾದರೆ, ಪ್ರತಿ ಘಟನೆಗೂ ನಿಮ್ಮ ಮಾನಸಿಕ ನೆಮ್ಮದಿಯನ್ನು ಕಳೆದುಕೊಳ್ಳಬೇಕಾಗಬಹುದು.ಪ್ರತಿ ರೋಗಿಗಳು ವಿಭಿನ್ನ ಮನಸ್ಥಿತಿ ಹೊಂದಿರುತ್ತಾರೆ. ಅವರಿಗೆ ಚಿಕಿತ್ಸೆ ನೀಡುವ ವೈದ್ಯರು ಅವರ ಮನಸ್ಥಿತಿಗೆ ತಕ್ಕಂತೆ ನಡೆದುಕೊಳ್ಳಬೇಕಾಗುತ್ತದೆ.

ಯೋಗ-ವ್ಯಾಯಾಮ; ದೈಹಿಕ ಆರೋಗ್ಯಕ್ಕೆ ವ್ಯಾಯಾಮ ಹಾಗೂ ಯೋಗ ಅತ್ಯಂತ ಪರಿಣಾಮಕಾರಿಯಾದರೆ, ಧ್ಯಾನ ಮಾನಸಿಕ ನೆಮ್ಮದಿಗೆ ಹೆಚ್ಚು ಸಹಾಯಕಾರಿ. ಪ್ರತಿ ದಿನ ಮುಂಜಾನೆ 1 ಗಂಟೆಗಳ ಕಾಲ ಇದಕ್ಕೆ ವಹಿಸಿದರೆ ಇಡೀ ದಿನ ನಮ್ಮ ಮನಸ್ಸನ್ನು ದಿನದ ಚಟುವಟಿಕೆಗಳಲ್ಲಾಗುವ ಏರಿಳಿತಳನ್ನ ಸಮನಾಗಿ ಸ್ವೀಕರಿಸಲು ಸಾಧ್ಯ.

ನಿಮ್ಮ ಸಂತೋಷದ ಮಾರ್ಗ ಕಂಡುಕೊಳ್ಳಿ: ಕೆಲವರಿಗೆ ಲಾಂಗ್ ಡ್ರೈವ್, ಸಂಗೀತ ಕೇಳುವುದು, ಓದುವುದು ಹೀಗೆ ಯಾವುದೋ ಒಂದು ಅಭ್ಯಾಸದಲ್ಲಿ ಖುಷಿ ಸಿಗುತ್ತದೆ. ವೈದ್ಯರು ಸಹ ತಮ್ಮ ಖುಷಿ ಎಲ್ಲಿ ಸಿಗುತ್ತದೆ? ಎಂಬುದನ್ನು ಮೊದಲು ಕಂಡುಕೊಳ್ಳಿ. ಪ್ರತಿಯೊಬ್ಬರಿಗೂ ಖುಷಿ ಎಲ್ಲಿ ಸಿಗುತ್ತದೆ ಎಂದು ಅವರೇ ಕಂಡುಕೊಳ್ಳಬೇಕು. ಕೆಲವರಿಗೆ ಕುಟುಂಬದೊಂದಿಗೆ ಇದ್ದರೆ ಖುಷಿಯಾಗಬಹುದು,

ಕುಟುಂಬದ ಜತೆ ಸಮಯ ಕಳೆಯಿರಿ: ಸಾಧ್ಯವಾದಷ್ಟು ಹೊರಗಡೆ ಪ್ರವಾಸ ಮಾಡಿ. ಇದು ಮನಸ್ಸನ್ನು ಹಗುರ ಮಾಡುವುದಲ್ಲದೇ, ನಾಳೆಯ ಕೆಲಸಕ್ಕೆ ಹೊಸ ಹುರುಪು ತುಂಬುತ್ತದೆ. ಕುಟುಂಬದೊಂದಿಗೆ ಸಮಯ ಕಳೆದರೆ ಎಂತಹ ಒತ್ತಡವಾದರೂ ಸರಿ ಕಡಿಮೆಯಾಗಿ ಬಿಡುತ್ತದೆ.

ಕೆಲಸ ಮತ್ತು ಜೀವನವನ್ನು ಪ್ರತ್ಯೇಕವಾಗಿ ನೋಡಿ: ಕೆಲವೊಮ್ಮೆ ರೋಗಿಯ ಜೀವವನ್ನೇ ಕಸಿದುಕೊಳ್ಳಬಹುದು. ಅಥವಾ ಕೆಲಸದ ಒತ್ತಡವನ್ನು ಮನೆಯಲ್ಲಿ ತೋರಿದರೆ ಕುಟುಂಬದ ಕಲಹಕ್ಕೂ ಕಾರಣವಾಗಬಹುದು. ಕೆಲ ವೈದ್ಯರು ಕೆಲಸದ ಒತ್ತಡವನ್ನು ಕುಟುಂಬದ ಮೇಲೆ, ಕುಟುಂಬದಲ್ಲಿನ ಬೇಸರವನ್ನು ಕೆಲಸದ ಮೇಲೆ ತೋರಿಸುವುದನ್ನು ನೋಡಬಹುದು.

ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ
ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ
ಕಲಬುರಗಿಯ ಮುಖ್ಯರಸ್ತೆಯಲ್ಲಿ ಸಂಚಾರ ನಿಷೇಧಿಸಿ ಪೊಲೀಸ್ ಕಮೀಶನರ್ ಆದೇಶ
ಕಲಬುರಗಿಯ ಮುಖ್ಯರಸ್ತೆಯಲ್ಲಿ ಸಂಚಾರ ನಿಷೇಧಿಸಿ ಪೊಲೀಸ್ ಕಮೀಶನರ್ ಆದೇಶ
ಮೊದಲ ಓವರ್​ನಲ್ಲೇ ಸ್ಟಾರ್ಕ್ ಬೆಂಡೆತ್ತಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್
ಮೊದಲ ಓವರ್​ನಲ್ಲೇ ಸ್ಟಾರ್ಕ್ ಬೆಂಡೆತ್ತಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್
ಹತ್ಯೆ ಹಿಂದಿನ ಉದ್ದೇಶ ಇನ್ನೂ ಗೊತ್ತಾಗಿಲ್ಲವೆಂದ ಚಿಕ್ಕಬಳ್ಳಾಪುರ ಎಸ್​ಪಿ
ಹತ್ಯೆ ಹಿಂದಿನ ಉದ್ದೇಶ ಇನ್ನೂ ಗೊತ್ತಾಗಿಲ್ಲವೆಂದ ಚಿಕ್ಕಬಳ್ಳಾಪುರ ಎಸ್​ಪಿ
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily Horoscope: ಈ ರಾಶಿಯವರು ಇಂದು ಹೊಸ ವಾಹನ ಖರೀದಿಸುವರು
Daily Horoscope: ಈ ರಾಶಿಯವರು ಇಂದು ಹೊಸ ವಾಹನ ಖರೀದಿಸುವರು
ಆವೇಶ, ಆಕ್ರೋಶ... ಸ್ಯಾಮ್ ಕೊನ್​ಸ್ಟಾಸ್ ಮುಂದೆ ಘರ್ಜಿಸಿದ ವಿರಾಟ್ ಕೊಹ್ಲಿ
ಆವೇಶ, ಆಕ್ರೋಶ... ಸ್ಯಾಮ್ ಕೊನ್​ಸ್ಟಾಸ್ ಮುಂದೆ ಘರ್ಜಿಸಿದ ವಿರಾಟ್ ಕೊಹ್ಲಿ
ಜಸ್​ಪ್ರೀತ್ ಬುಮ್ರಾ ಖಡಕ್ ಲುಕ್​ಗೆ ಸ್ಯಾಮ್​ ಕೊನ್​ಸ್ಟಾಸ್ ಗಪ್ ಚುಪ್
ಜಸ್​ಪ್ರೀತ್ ಬುಮ್ರಾ ಖಡಕ್ ಲುಕ್​ಗೆ ಸ್ಯಾಮ್​ ಕೊನ್​ಸ್ಟಾಸ್ ಗಪ್ ಚುಪ್
ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ