Drinking Water After Tea: ಚಹಾದ ಬಳಿಕ ನೀರು ಕುಡಿಯುವುದು ತುಂಬಾ ಅಪಾಯಕಾರಿ ಎಂದು ನಿಮಗೆ ತಿಳಿದಿದೆಯೇ?

ಚಹಾ(Tea) ವಿಲ್ಲದೆ ದಿನ ಶುರುವಾದೀತೆ?, ಚಹಾ ಕುಡಿಯದೆ ಕೆಲಸ ಮಾಡಲು ಮನಸ್ಸು ಬಂದೀತೆ? ಬೆಳಗ್ಗೆ ಎದ್ದಾಗಿನಿಂದ ಹಿಡಿದು ರಾತ್ರಿ ಮಲಗುವವರೆಗೂ ಹಲು ಬಾರಿ ಚಹಾವನ್ನು ಕುಡಿಯುವವರಿದ್ದಾರೆ.

Drinking Water After Tea: ಚಹಾದ ಬಳಿಕ ನೀರು ಕುಡಿಯುವುದು ತುಂಬಾ ಅಪಾಯಕಾರಿ ಎಂದು ನಿಮಗೆ ತಿಳಿದಿದೆಯೇ?
Tea And Water

Updated on: Nov 17, 2022 | 9:50 AM

ಚಹಾ(Tea) ವಿಲ್ಲದೆ ದಿನ ಶುರುವಾದೀತೆ?, ಚಹಾ ಕುಡಿಯದೆ ಕೆಲಸ ಮಾಡಲು ಮನಸ್ಸು ಬಂದೀತೆ? ಬೆಳಗ್ಗೆ ಎದ್ದಾಗಿನಿಂದ ಹಿಡಿದು ರಾತ್ರಿ ಮಲಗುವವರೆಗೂ ಹಲು ಬಾರಿ ಚಹಾವನ್ನು ಕುಡಿಯುವವರಿದ್ದಾರೆ. ಚಹಾ ಭಾರತೀಯರ ಹೃದಯದಲ್ಲಿದೆ. ಟೀ ಎಂದರೆ ದೊಡ್ಡವರಿಂದ ಹಿಡಿದು ಮಕ್ಕಳವರೆಗೆ ಎಲ್ಲರಿಗೂ ಅಚ್ಚುಮೆಚ್ಚು, ಹಲವು ವರ್ಷಗಳಿಂದ ಚಹಾ ಕುಡಿಯುತ್ತಿರುವ ನಿಮಗೆ ಸಹಜವಾಗಿ ಪ್ರತಿಯೊಂದು ವಿಧದ ಚಹಾದ ಸ್ವಾದದ ಅನುಭವವಾಗಿಯೇ ಇರುತ್ತದೆ.

ಅನೇಕ ಮಂದಿ ದಿನಕ್ಕೆ 8 ರಿಂದ 10 ಬಾರಿ ಅಥವಾ ಹೆಚ್ಚು ಬಾರಿ ಚಹಾವನ್ನು ಕುಡಿಯುತ್ತಾರೆ. ಚಹಾ ಕುಡಿಯದಿದ್ದರೆ, ಅವರಿಗೆ ಕೆಲಸ ಮಾಡಲು ಮನಸ್ಸೇ ಆಗುವುದಿಲ್ಲ, ಅತಿಯಾದ ಚಹಾ ಸೇವನೆ ಹಾನಿಕಾರಕ ಎನ್ನುತ್ತಾರೆ ವೈದ್ಯರು.

ಚಹಾ ಭಾರತೀಯರ ಹೃದಯದಲ್ಲಿದೆ. ಟೀ ಎಂದರೆ ದೊಡ್ಡವರಿಂದ ಹಿಡಿದು ಮಕ್ಕಳವರೆಗೆ ಎಲ್ಲರಿಗೂ ಅಚ್ಚುಮೆಚ್ಚು, ಹಲವು ವರ್ಷಗಳಿಂದ ಚಹಾ ಕುಡಿಯುತ್ತಿರುವ ನಿಮಗೆ ಪ್ರತಿಯೊಂದು ವಿಧದ ಚಹಾದ ಸ್ವಾದದ ಅನುಭವವಾಗಿಯೇ ಇರುತ್ತದೆ. ಒಂದು ಕಪ್ ಚಹಾ ಕುಡಿಯುವುದರಿಂದ ನಿಮ್ಮ ಮನಸ್ಸು ಮತ್ತು ದೇಹವು ಉಲ್ಲಾಸಗೊಳ್ಳುತ್ತದೆ. ಅದರಲ್ಲೂ ಚಳಿ ವಾತಾವರಣ, ಹಿಮ ಬೀಳುವಾಗ, ಮಳೆಗಾಲದಲ್ಲಿ ಒಂದೇ ಒಂದು ಲೋಟ ಚಹಾ ಕುಡಿದರೆ ಸಾಕು ಅಮೃತ ಕುಡಿದ ಅನುಭವವಾಗುತ್ತದೆ.

ಆದರೆ ಚಹಾದ ನಂತರ ನೀರು ಕುಡಿಯುವುದು ತುಂಬಾ ಅಪಾಯಕಾರಿ ಎಂದು ನಿಮಗೆ ತಿಳಿದಿದೆಯೇ? ಇದು ದೇಹದ ವಿವಿಧ ಭಾಗಗಳಿಗೆ ಹಾನಿ ಮಾಡುತ್ತದೆ. ಇದರ ಬಗ್ಗೆ ತಿಳಿದುಕೊಳ್ಳೋಣ

ಹಲ್ಲುಗಳ ದಂತಕವಚವು ಹಾನಿಗೊಳಗಾಗುತ್ತದೆ
ಚಹಾವನ್ನು ಕುಡಿದ ತಕ್ಷಣ ನೀರು ಕುಡಿದಾಗ ದಂತಕವಚವು ಹಾನಿಗೊಳಗಾಗುತ್ತದೆ. ಹಲ್ಲುಗಳು ಶೀತ, ಬಿಸಿ, ಹುಳಿ, ಸಿಹಿಯನ್ನು ಅನುಭವಿಸಲು ಅನುಮತಿಸುವುದಿಲ್ಲ. ಹಲ್ಲುಗಳ ನರಗಳ ಮೇಲೂ ಕೂಡ ಪರಿಣಾಮ ಬೀರುತ್ತದೆ.

ಅಲ್ಸರ್ ಸಮಸ್ಯೆ
ಚಹಾವನ್ನು ಕುಡಿದು ನೀರು ಕುಡುಯುವುದರಿಂದ ಅಲ್ಸರ್ ಸಮಸ್ಯೆ ಶುರುವಾಗುತ್ತದೆ. ಹಾಗೆಯೇ ಆಸಿಡಿಟಿ ಸಮಸ್ಯೆ ಕೂಡ ನಿಮ್ಮನ್ನು ಕಾಡಬಹುದು.

ಮೂಗಿನಿಂದ ರಕ್ತಸ್ರಾವವಾಗಬಹುದು
ಚಹಾದ ನಂತರ ನೀರು ಕುಡಿಯುವುದರಿಂದ ಮೂಗಿನಿಂದ ರಕ್ತಸ್ರಾವವಾಗಬಹುದು. ಶೀತ ಮತ್ತು ಶಾಖವನ್ನು ಸಹಿಸಿಕೊಳ್ಳಲು ದೇಹದ ಅಸಮರ್ಥತೆ ಇದಕ್ಕೆ ಕಾರಣ. ಬೇಸಿಗೆಯಲ್ಲಿ ಸಮಸ್ಯೆ ಇನ್ನಷ್ಟು ಹೆಚ್ಚಾಗಬಹುದು.

ಗಂಟಲು ನೋವು, ಶೀತ ಸಂಭವಿಸಬಹುದು
ಬಿಸಿ ಚಹಾದ ನಂತರ ತಣ್ಣೀರು ಕುಡಿಯುವುದರಿಂದ ಗಂಟಲು ನೋವು, ಕೆಮ್ಮು ಮತ್ತು ಶೀತದಂತಹ ಸಮಸ್ಯೆಗಳು ಉಂಟಾಗಬಹುದು. ಇದು ದೇಹದಲ್ಲಿ ಶೀತದ ಉಲ್ಬಣವನ್ನು ಹೆಚ್ಚಿಸುತ್ತದೆ. ಬಿಸಿ ಚಹಾದ ನಂತರ ಜನರು ತಕ್ಷಣ ನೀರನ್ನು ಕುಡಿಯಬಾರದು.

 

ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Nayana Rajeev

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More
Follow Us