ನಿಮಗೆ ಈ ಆರೋಗ್ಯ ಸಮಸ್ಯೆ ಇದ್ರೆ ನುಗ್ಗೆಕಾಯಿ ಹತ್ತಿರಕ್ಕೂ ಹೋಗಬೇಡಿ

ನುಗ್ಗೆಕಾಯಿ ಜೀವಸತ್ವ, ಖನಿಜ ಮತ್ತು ಉತ್ಕರ್ಷಣ ನಿರೋಧಕಗಳಿಂದ ಸಮೃದ್ಧವಾಗಿದೆ. ಇವುಗಳ ನಿಯಮಿತ ಸೇವನೆ ಜೀರ್ಣಕ್ರಿಯೆಯನ್ನು ಸುಧಾರಿಸುತ್ತವೆ ಮತ್ತು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ. ಆದರೆ ಇಷ್ಟೊಂದು ಆರೋಗ್ಯ ಪ್ರಯೋಜನಗಳನ್ನು ಹೊಂದಿದ್ದರೂ, ಕೂಡ ನುಗ್ಗೆಕಾಯಿ ಕೆಲವರ ಆರೋಗ್ಯಕ್ಕೆ ಒಳ್ಳೆಯದಲ್ಲ. ಹೌದು, ಇವುಗಳನ್ನು ಸೇವನೆ ಮಾಡಬೇಕೆ ಅಥವಾ ಬೇಡವೇ ಎಂಬುದು ವ್ಯಕ್ತಿಯ ಆರೋಗ್ಯ ಸ್ಥಿತಿಯನ್ನು ಅವಲಂಬಿಸಿರುತ್ತದೆ. ಹಾಗಾದರೆ ನುಗ್ಗೆಕಾಯಿ ಸೇವನೆ ಯಾರಿಗೆ ಒಳ್ಳೆಯದಲ್ಲ ಎಂಬುದನ್ನು ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.

ನಿಮಗೆ ಈ ಆರೋಗ್ಯ ಸಮಸ್ಯೆ ಇದ್ರೆ ನುಗ್ಗೆಕಾಯಿ ಹತ್ತಿರಕ್ಕೂ ಹೋಗಬೇಡಿ
ನುಗ್ಗೆಕಾಯಿ ಸೇವನೆಯ ಅಡ್ಡಪರಿಣಾಮ

Updated on: Dec 19, 2025 | 2:46 PM

ನುಗ್ಗೆಕಾಯಿ (Drumstick) ಆರೋಗ್ಯಕ್ಕೆ ತುಂಬಾ ಒಳ್ಳೆಯದು, ಇದರಲ್ಲಿ ಅಗತ್ಯವಾದ ಜೀವಸತ್ವ, ಖನಿಜ ಮತ್ತು ಉತ್ಕರ್ಷಣ ನಿರೋಧಕಗಳು ಸಮೃದ್ಧವಾಗಿದೆ. ಇದನ್ನು ನಿಯಮಿತವಾಗಿ ಸೇವನೆ ಮಾಡುವುದರಿಂದ ನಾನಾ ರೀತಿಯ ಪ್ರಯೋಜನಗಳನ್ನು ಪಡೆಯಬಹುದು. ಸಾಮಾನ್ಯವಾಗಿ ಈ ತರಕಾರಿ ಬಹುತೇಕ ಎಲ್ಲಾ ಋತುಗಳಲ್ಲಿ ಲಭ್ಯವಿದ್ದು ಇದರ ರುಚಿ ಮತ್ತು ಆರೋಗ್ಯ ಪ್ರಯೋಜನಗಳಿಂದಾಗಿ, ಇದನ್ನು ಕರಿ, ಸೂಪ್ ಮತ್ತು ಸಾಂಪ್ರದಾಯಿಕ ಭಕ್ಷ್ಯಗಳಲ್ಲಿಯೂ ಬಳಸಲಾಗುತ್ತದೆ. ಇದರ ಎಲೆಗಳು ಕೂಡ ನೈಸರ್ಗಿಕವಾಗಿ ಪ್ರೋಟೀನ್ ಅನ್ನು ಹೊಂದಿರುತ್ತವೆ. ನುಗ್ಗೆಕಾಯಿ ಕೂಡ ಜೀರ್ಣಕ್ರಿಯೆ, ರೋಗನಿರೋಧಕ ಶಕ್ತಿ ಮತ್ತು ಉರಿಯೂತದ ಸಮಸ್ಯೆಗಳಿಗೆ ಮುಕ್ತಿ ನೀಡಲು ಪ್ರಯೋಜನಕಾರಿ. ಇವುಗಳಲ್ಲಿರುವ ಔಷಧೀಯ ಗುಣಗಳಿಂದಾಗಿಯೇ ಇದನ್ನು ವ್ಯಾಪಕವಾಗಿ ಸೇವನೆ ಮಾಡಲಾಗುತ್ತದೆ. ಆದರೆ ಇಷ್ಟೊಂದು ಆರೋಗ್ಯ ಪ್ರಯೋಜನಗಳನ್ನು ಹೊಂದಿದ್ದರೂ, ಕೂಡ ನುಗ್ಗೆಕಾಯಿ ಕೆಲವರ ಆರೋಗ್ಯಕ್ಕೆ ಒಳ್ಳೆಯದಲ್ಲ. ಹೌದು, ಇವುಗಳನ್ನು ಸೇವನೆ ಮಾಡಬೇಕೆ ಅಥವಾ ಬೇಡವೇ ಎಂಬುದು ವ್ಯಕ್ತಿಯ ಆರೋಗ್ಯ ಸ್ಥಿತಿಯನ್ನು ಅವಲಂಬಿಸಿರುತ್ತದೆ. ಹಾಗಾದರೆ ನುಗ್ಗೆಕಾಯಿ ಸೇವನೆ ಯಾರಿಗೆ ಒಳ್ಳೆಯದಲ್ಲ ಎಂಬುದನ್ನು ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.

  • ಗರ್ಭಿಣಿಯರು ನುಗ್ಗೆಕಾಯಿಯನ್ನು ಸೇವಿಸದಿರುವುದು ಒಳ್ಳೆಯದು. ಏಕೆಂದರೆ ಇದು ದೇಹದಲ್ಲಿ ಶಾಖವನ್ನು ಉತ್ಪಾದಿಸುತ್ತದೆ ಅದರ ಪರಿಣಾಮ ಗರ್ಭಾವಸ್ಥೆಯಲ್ಲಿ ಅಸ್ವಸ್ಥತೆ ಅಥವಾ ತೊಡಕುಗಳು ಉಂಟಾಗಬಹುದು.
  • ಮುಟ್ಟಿನ ಸಮಯದಲ್ಲಿ ಭಾರೀ ರಕ್ತಸ್ರಾವವನ್ನು ಅನುಭವಿಸುವ ಮಹಿಳೆಯರು ಕೂಡ ನುಗ್ಗೆಕಾಯಿಯ ಸೇವನೆ ಮಾಡುವುದನ್ನು ತಪ್ಪಿಸಬೇಕು. ಇದರ ಬಿಸಿ ಗುಣ ರಕ್ತಸ್ರಾವವನ್ನು ಮತ್ತಷ್ಟು ಹೆಚ್ಚಿಸಬಹುದು, ಅಷ್ಟು ಮಾತ್ರವಲ್ಲ, ದೌರ್ಬಲ್ಯ ಅಥವಾ ಅಸ್ವಸ್ಥತೆಗೆ ಕಾರಣವಾಗಬಹುದು.
  • ನುಗ್ಗೆಕಾಯಿ ಸ್ವಾಭಾವಿಕವಾಗಿ ರಕ್ತದೊತ್ತಡವನ್ನು ಕಡಿಮೆ ಮಾಡುತ್ತವೆ. ಆದರೆ ಈಗಾಗಲೇ ಕಡಿಮೆ ರಕ್ತದೊತ್ತಡದಿಂದ ಬಳಲುತ್ತಿರುವವರು ಈ ತರಕಾರಿಯ ಸೇವನೆ ಮಾಡಬಾರದು. ಏಕೆಂದರೆ ಇದರಿಂದ ಸ್ಥಿತಿ ಇನ್ನಷ್ಟು ಹದಗೆಡಬಹುದು.
  • ಮೂರ್ಛೆ ಅಥವಾ ಆಯಾಸದಂತಹ ಲಕ್ಷಣಗಳು ಕಂಡುಬರುತ್ತಿರುವವರು ಕೂಡ ನುಗ್ಗೆಕಾಯಿ ಸೇವನೆಯನ್ನು ಮಿತಗೊಳಿಸಬೇಕು.
  • ದೀರ್ಘಕಾಲದ ಜೀರ್ಣಕಾರಿ ಸಮಸ್ಯೆಗಳಿಂದ ಬಳಲುತ್ತಿರುವವರು ನುಗ್ಗೆಕಾಯಿಯನ್ನು ಪದೇ ಪದೇ ಸೇವನೆ ಮಾಡಬಾರದು ಅದರ ಸೇವನೆಯನ್ನು ಮಿತಿಗೊಳಿಸಬೇಕು ಅಥವಾ ಸಂಪೂರ್ಣವಾಗಿ ತಪ್ಪಿಸಬೇಕು. ಏಕೆಂದರೆ ಇದರಲ್ಲಿ ಹೆಚ್ಚಿನ ನಾರಿನ ಅಂಶ ಮತ್ತು ಶಕ್ತಿ ಅಂಶ ಹೆಚ್ಚಾಗಿದ್ದು ಕೆಲವರಲ್ಲಿ ಉಬ್ಬುವುದು, ಆಮ್ಲೀಯತೆ ಅಥವಾ ಹೊಟ್ಟೆಯ ಅಸ್ವಸ್ಥತೆಯನ್ನು ಉಂಟುಮಾಡಬಹುದು. ಹಾಗಾಗಿ ನುಗ್ಗೆಕಾಯಿ ಸೇವನೆ ಮಾಡುವಾಗ ಸ್ವಲ್ಪ ಜಾಗೃತವಾಗಿರಿ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ