30 ದಿನ ಮಾಂಸಾಹಾರ ಸೇವಿಸದಿದ್ದರೆ ಏನಾಗುತ್ತೆ ನೋಡಿ…
ಮಾಂಸ ಪ್ರಿಯರು ಒಂದು ತಿಂಗಳು ಮಾಂಸಾಹಾರ ಸೇವನೆ ಮಾಡುವುದನ್ನು ಬಿಟ್ಟರೆ ದೇಹದಲ್ಲಿ ಯಾವ ರೀತಿಯ ಬದಲಾವಣೆಗಳಾಗುತ್ತದೆ ಎಂಬುದು ನಿಮಗೆ ತಿಳಿದಿದೆಯೇ? ನೀವು ಕೂಡ ಈ ಚಾಲೆಂಚ್ ಮಾಡಲು ಸಿದ್ಧರಿದ್ದರೆ ಕೆಲವು ವಿಷಯಗಳನ್ನು ತಿಳಿಯುವುದು ಒಳ್ಳೆಯದು. ಏಕೆಂದರೆ 30 ದಿನಗಳ ಮಾಂಸಾಹಾರದ ವಿರಾಮ ನಿಮ್ಮ ಆರೋಗ್ಯದ ಮೇಲೆ ಬೀರುವ ಪರಿಣಾಮಗಳ ಬಗ್ಗೆ ತಿಳಿದುಕೊಂಡಾಗ ಮಾತ್ರ ಅದರಿಂದ ಸಿಗುವ ಪ್ರಯೋಜನಗಳ ಅರಿವಾಗುತ್ತದೆ. ಹಾಗಾಗಿ ಈ ಸ್ಟೋರಿಯನ್ನು ತಪ್ಪದೆ ಓದಿ, ಚಾಲೆಂಜ್ ಗೆ ಸಿದ್ದವಾಗಿ.

ಮಾಂಸಾಹಾರ (Meat) ಸೇವನೆ ಆರೋಗ್ಯಕ್ಕೆ ಹಲವು ರೀತಿಯಲ್ಲಿ ಪ್ರಯೋಜನಕಾರಿ. ಆದರೆ ಇತ್ತೀಚಿನ ದಿನಗಳಲ್ಲಿ ಒಂದಿಷ್ಟು ಜನ ಮಾಂಸಾಹಾರ ಸೇವನೆಯಿಂದ ಹಿಂದೆ ಸರಿಯುತ್ತಿದ್ದಾರೆ. ಅದರ ಬದಲಾಗಿ ಸಸ್ಯಹಾರಿಗಳಾಗುತ್ತಿದ್ದಾರೆ. ಹಾಗಾಗಿ ಆರೋಗ್ಯ ಕಾಪಾಡಿಕೊಳ್ಳಲು ಮಾಂಸಾಹಾರ ತ್ಯಜಿಸಬೇಕೇ ಅಥವಾ ಬೇಡವೇ ಎಂಬ ಗೊಂದಲ ಕೆಲವರದ್ದು. ನಿಯಮಿತವಾಗಿ ಮಾಂಸಾಹಾರ ತಿನ್ನುವ ನೀವು 30 ದಿನಗಳು ಅಂದರೆ ಒಂದು ತಿಂಗಳು ಮಾಂಸವನ್ನು ಸೇವಿಸದಿದ್ದರೆ ಅದು ನಿಮ್ಮ ದೇಹದ ಮೇಲೆ ಯಾವ ರೀತಿಯ ಪರಿಣಾಮ ಬೀರುತ್ತದೆ ಎಂಬುದು ನಿಮಗೆ ತಿಳಿದಿದೆಯೇ, ಹಾಗಾದರೆ ಈ ಸ್ಟೋರಿ ಓದಿ, ಆ ಮೂಲಕ ಇದರಿಂದ ಸಿಗುವ ಪ್ರಯೋಜನಗಳ ಬಗ್ಗೆ ತಿಳಿದುಕೊಳ್ಳಿ.
30 ದಿನಗಳ ಕಾಲ ಮಾಂಸ ಸೇವಿಸದಿದ್ದರೆ ಏನಾಗುತ್ತದೆ?
ಉರಿಯೂತ ಕಡಿಮೆಯಾಗುತ್ತದೆ: ಸಂಸ್ಕರಿಸಿದ ಮಾಂಸ ಮತ್ತು ಕೆಂಪು ಮಾಂಸಗಳಲ್ಲಿ ಸ್ಯಾಚುರೇಟೆಡ್ ಕೊಬ್ಬು ಅಧಿಕವಾಗಿರುತ್ತವೆ. ಪ್ರತಿನಿತ್ಯ ಮಾಂಸ ಸೇವನೆ ಮಾಡುವುದು ಉರಿಯೂತಕ್ಕೆ ಕಾರಣವಾಗಬಹುದು.
ಶಕ್ತಿ ಕಡಿಮೆಯಾಗಬಹುದು: ಮಾಂಸ ಸೇವನೆಯನ್ನು ನಿಲ್ಲಿಸುವುದರಿಂದ ನಿಮ್ಮ ಶಕ್ತಿಯ ಮಟ್ಟ ಕುಸಿಯಬಹುದು. ದಣಿದ ಅನುಭವವಾಗಬಹುದು. ಹಾಗಾಗಿ ನೀವು ಬೇರೆ ರೀತಿಯಲ್ಲಿ ನಿಮ್ಮ ಪ್ರೋಟೀನ್ ಸೇವನೆಯನ್ನು ಹೆಚ್ಚಿಸಿಕೊಳ್ಳಬೇಕಾಗುತ್ತದೆ.
ಕರುಳಿನ ಆರೋಗ್ಯ ಕಾಪಾಡಬಹುದು: ಮಾಂಸವನ್ನು ಒಂದು ತಿಂಗಳ ಕಾಲ ತ್ಯಜಿಸುವ ಮೂಲಕ ನಿಮ್ಮ ಕರುಳಿನ ಆರೋಗ್ಯವು ಸುಧಾರಿಸಿಕೊಳ್ಳಬಹುದು. ಇವುಗಳ ಬದಲು ಧಾನ್ಯಗಳ ಸೇವನೆ ಮಾಡಬಹುದು. ಇದರಿಂದ ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳು ಕಡಿಮೆಯಾಗುತ್ತದೆ.
ಮಲಬದ್ಧತೆಗೆ ಮುಕ್ತಿ ನೀಡುತ್ತದೆ: ಮಾಂಸವನ್ನು ಕಡಿಮೆ ಮಾಡಿ ಧಾನ್ಯ, ತರಕಾರಿ ಮತ್ತು ದ್ವಿದಳ ಧಾನ್ಯಗಳಂತಹ ಹೆಚ್ಚಿನ ಸಸ್ಯ ಆಧಾರಿತ ಆಹಾರಗಳ ಸೇವನೆ ಮಾಡುವುದರಿಂದ ಮಲಬದ್ಧತೆ ಸಮಸ್ಯೆಗೆ ಮುಕ್ತಿ ಸಿಗುತ್ತದೆ.
ಇದನ್ನೂ ಓದಿ: 21 ದಿನ ಒಂದು ಕಪ್ ದಾಳಿಂಬೆ ಹಣ್ಣನ್ನು ತಿನ್ನುವ ಚಾಲೆಂಜ್: ಸಂಶೋಧನೆಯಿಂದ ಆಶ್ಚರ್ಯಕಾರಿ ಮಾಹಿತಿ ಬಹಿರಂಗ
ಒಮ್ಮೆಲೇ ಮಾಂಸಾಹಾರ ಬಿಟ್ಟರೆ ಏನಾಗಬಹುದು?
ನೀವು ಇದ್ದಕ್ಕಿದ್ದಂತೆ ಮಾಂಸ ಸೇವನೆಯನ್ನು ಕಡಿಮೆ ಮಾಡಿದರೆ ಅಪಾಯವೂ ಆಗಬಹುದು. ಹಾಗಾಗಿ ಒಮ್ಮೆಲೇ ಬಿಡುವುದು ಒಳ್ಳೆಯದಲ್ಲ. ಜೊತೆಗೆ ಮಾಂಸಾಹಾರದ ಬದಲು ಸಮತೋಲಿತ ಆಹಾರವನ್ನು ಕಾಪಾಡಿಕೊಳ್ಳುವುದು ಒಳ್ಳೆಯದು. ಇದರಿಂದ ಪ್ರೋಟೀನ್ ಕೊರತೆಯಾಗುವುದಿಲ್ಲ. ಇಲ್ಲವಾದಲ್ಲಿ ಮೂಳೆ ದುರ್ಬಲವಾಗುವ ಅಪಾಯ ಹೆಚ್ಚಾಗಿರುತ್ತದೆ. ಆದ್ದರಿಂದ, ಆರೋಗ್ಯ ಕಾಪಾಡಿಕೊಳ್ಳಲು, ಮಾಂಸಕ್ಕೆ ಸರಿಸಮನಾದ ಆಹಾರಗಳನ್ನು ಸೇವನೆ ಮಾಡಿ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




