Dry Cough: ಒಣ ಕೆಮ್ಮನ್ನು ಕಡಿಮೆ ಮಾಡುವುದು ಹೇಗೆ? ಆಯುರ್ವೇದ ಪರಿಹಾರ ಇಲ್ಲಿದೆ

| Updated By: ನಯನಾ ರಾಜೀವ್

Updated on: Jun 25, 2022 | 12:27 PM

ಶೀತವು ಸಾಮಾನ್ಯವಾಗಿ 3-4 ದಿನಗಳಲ್ಲಿ ಕಡಿಮೆಯಾಗುತ್ತದೆ, ಆದರೆ ಕಫ, ಕೆಮ್ಮು ಒಮ್ಮೆ ಶುರುವಾದರೆ 15-20 ದಿನಗಳಾದರೂ ಹೋಗುವುದಿಲ್ಲ. ನಿರಂತರ ಕೆಮ್ಮು ಸಾಕಷ್ಟು ಅಸ್ವಸ್ಥತೆಯನ್ನು ಉಂಟುಮಾಡುತ್ತದೆ, ಇದಕ್ಕೆ ಒಣ ಕಫವೇ ಕಾರಣ. ಇದು ನಿದ್ರೆಯನ್ನು ದುರ್ಬಲಗೊಳಿಸುತ್ತದೆ ಮತ್ತು ಆಹಾರವನ್ನು ನುಂಗಲು ಕಷ್ಟವಾಗುತ್ತದೆ.

Dry Cough: ಒಣ ಕೆಮ್ಮನ್ನು ಕಡಿಮೆ ಮಾಡುವುದು ಹೇಗೆ? ಆಯುರ್ವೇದ ಪರಿಹಾರ ಇಲ್ಲಿದೆ
Dry Cough
Follow us on

ಶೀತವು ಸಾಮಾನ್ಯವಾಗಿ 3-4 ದಿನಗಳಲ್ಲಿ ಕಡಿಮೆಯಾಗುತ್ತದೆ, ಆದರೆ ಕಫ, ಕೆಮ್ಮು ಒಮ್ಮೆ ಶುರುವಾದರೆ 15-20 ದಿನಗಳಾದರೂ ಹೋಗುವುದಿಲ್ಲ. ನಿರಂತರ ಕೆಮ್ಮು ಸಾಕಷ್ಟು ಅಸ್ವಸ್ಥತೆಯನ್ನು ಉಂಟುಮಾಡುತ್ತದೆ, ಇದಕ್ಕೆ ಒಣ ಕಫವೇ ಕಾರಣ. ಇದು ನಿದ್ರೆಯನ್ನು ದುರ್ಬಲಗೊಳಿಸುತ್ತದೆ ಮತ್ತು ಆಹಾರವನ್ನು ನುಂಗಲು ಕಷ್ಟವಾಗುತ್ತದೆ.

ಹಾಗಾಗಿ ಮಾತ್ರೆ ಔಷಧಿಗಳಿಗಿಂತ ಆಯುರ್ವೇದದ ಔಷಧಗಳನ್ನು ತೆಗೆದುಕೊಂಡರೆ ಒಣ ಕಫವನ್ನು ಕಡಿಮೆ ಮಾಡಬಹುದು.
ಹಾಗಾದರೆ ಒಣ ಕೆಮ್ಮನ್ನು ಕಡಿಮೆ ಮಾಡುವುದು ಹೇಗೆ ಎಂಬುದರ ಕುರಿತು ಮಾಹಿತಿ ಇಲ್ಲಿದೆ

-ಮಸ್ಟರ್ಡ್​ ಆಯಿಲ್ ಹಾಗೂ ಉಪ್ಪನ್ನು ಮಿಶ್ರಣ ಮಾಡಿ ಗಂಟಲು ಹಾಗೂ ಎದೆಯ ಭಾಗಕ್ಕೆ ಹಚ್ಚಿ.

-ನಾಲ್ಕು ಏಲಕ್ಕಿ ಅದಕ್ಕೆ ಅರ್ಧ ಚಮಚ ಸಕ್ಕರೆ ಹಾಗೂ ಅರ್ಧ ಚಮಚ ತುಪ್ಪ ಮಿಶ್ರಣ ಮಾಡಿ ನಿತ್ಯ ಮೂರು ಬಾರಿ ಸೇವಿಸಿ.

-ಕಫದ ಸಮಸ್ಯೆಯಿದ್ದರೆ ಬಿಸಿ ನೀರಲ್ಲಿ ಉಪ್ಪು ಹಾಕಿ ದಿನಕ್ಕೆ ಎರಡು-ಮೂರು ಬಾರಿ ಬಾಯಿ ಮುಕ್ಕಳಿಸಿ, ಇದರಿಂದ ಗಂಟಲಿನ ಕಫ ಕರಗುತ್ತದೆ.

– ದೀರ್ಘಕಾಲದವರೆಗೆ ಕಫದ ಸಮಸ್ಯೆ ಕಾಡುತ್ತಿದ್ದರೆ ನಿಂಬೆ ಹಣ್ಣಿನ ರಸಕ್ಕೆ ಕಪ್ಪು ಉಪ್ಪು ಅಥವಾ ಸೈಂಧವ ಉಪ್ಪು ಸೇರಿಸಿ. ಅದರೊಂದಿಗೆ ಕರಿಮೆಣಸಿನ ಪುಡಿ ಮಿಶ್ರಣ ಮಾಡಿ ಆ ರಸವನ್ನು ಸೇವಿಸಿದ್ರೆ ಕಫದ ಸಮಸ್ಯೆ ನಿವಾರಣೆಯಾಗುತ್ತದೆ.

-ಕಫ ಕರಗಲು ಹಸಿ ಶುಂಠಿ ಕಷಾಯ ಮಾಡಿ ಅದಕ್ಕೆ ಜೇನುತುಪ್ಪ ಸೇರಿಸಿ ದಿನಕ್ಕೆ 3 – 4 ಬಾರಿ ಸೇವಿಸಿ. ಇದರಿಂದ ಶೀಘ್ರದ ಕಫ ಕರಗುವುದು.

ಜೇನು ತುಪ್ಪ: ಜೇನುತುಪ್ಪವು ಉರಿಯೂತವನ್ನು ಕಡಿಮೆ ಮಾಡುವ ಅಂಶಗಳನ್ನು ಹೊಂದಿದೆ. ಗಂಟಲಿನ ಉರಿಯೂತವನ್ನು ಕಡಿಮೆ ಮಾಡುತ್ತದೆ. ಬಿಸಿ ಚಹಾ ಅಥವಾ ನಿಂಬೆ ಹಣ್ಣಿನ ಬಿಸಿ ನೀರಿಗೆ ಜೇನು ತುಪ್ಪ ಹಾಕಿ ಕುಡಿಯಿರಿ. ಉಪ್ಪು ನೀರಿನಿಂದ ಬಾಯಿ ಮುಕ್ಕಳಿಸಿ ಉಪ್ಪು ನೀರು ಊದಿಕೊಂಡ ಅಂಗಾಶಗಳಿಗೆ ಆರಾಮ ಒದಗಿಸುತ್ತದೆ ಮತ್ತು ಬೇಗ ಗುಣಮುಖ ಆಗಲು ಸಹಾಯ ಮಾಡುತ್ತದೆ.

ಗಿಡಮೂಲಿಕೆಗಳು: ಪುದೀನ, ಅರಸಿನ , ಬೆಳ್ಳುಳ್ಳಿ , ಥೈಮ್, ಮ್ಯಾಶ್‍ಮಲ್ಲೋ ಬೇರು ಮುಂತಾದ ಉರಿಯೂತ ನಿವಾರಕ ಅಂಶಗಳುಳ್ಳ ಗಿಡಮೂಲಿಕೆಗಳು ಗಂಟಲಿನ ಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತವೆ. ಅವುಗಳಲ್ಲಿ ಆ್ಯಂಟಿ ಆಕ್ಸಿಡೆಂಡ್‍ಗಳು ನಿಮ್ಮ ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸುವಂತೆ ಮಾಡುತ್ತದೆ.

ವಿಟಮಿನ್‍ಗಳು: ದೇಹ ಸರಿಯಾಗಿ ಕಾರ್ಯ ನಿರ್ವಹಿಸಲು ವಿಟಮಿನ್‍ಗಳು ಅತ್ಯಗತ್ಯ. ವಿಟಮಿನ್ ಸಿ ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸುವಂತೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.

ಈ ಮೇಲಿನ ಮಾಹಿತಿಯು ಟಿವಿ9ನ ಅಧಿಕೃತ ಮಾಹಿತಿಯಾಗಿರುವುದಿಲ್ಲ, ಸಾಮಾನ್ಯ ಮಾಹಿತಿಯನ್ನು ಒಳಗೊಂಡಿರುತ್ತದೆ.

Published On - 12:27 pm, Sat, 25 June 22