ಪಾಪ್ಕಾರ್ನ್ ತಿನ್ನುವುದರಿಂದಲೂ ದೇಹದ ತೂಕ ಇಳಿಸಿಕೊಳ್ಳಬಹುದು; ಇಲ್ಲಿದೆ ಸಂಪೂರ್ಣ ಮಾಹಿತಿ
ಸ್ನಾಕ್ಸ್ಗಳಲ್ಲೂ ಕಡಿಮೆ ಕ್ಯಾಲೋರಿಯುಳ್ಳ ಆಹಾರವಿರುತ್ತದೆ. ಅದನ್ನು ಸೇವಿಸಿದರೆ ದೇಹದ ತೂಕ ಇಳಿಸಿಕೊಳ್ಳಬಹುದು ಎನ್ನುತ್ತಾರೆ ತಜ್ಞರು. ಅದುವೇ ಪಾಪ್ಕಾರ್ನ್.
ಕೆಲವರ ಪಾಲಿಗೆ ದೇಹದ ತೂಕ ಇಲಿಸಿಕೊಳ್ಳುವುದು ಒಂದು ರೀತಿಯ ನಿರಂತರ ಕೆಲಸ ಎನ್ನುವಂತಾಗಿರುತ್ತದೆ. ಸದಾ ಕಾಲ ಕರಿದ ಪದಾರ್ಥಗಳಿಗೆ, ಜಂಕ್ ಫುಡ್ಗಳತ್ತ ಎಳೆಯುವ ಮನಸ್ಸು ಡೆಯೆಟ್ ಕಡೆಗೆ ಗಮನಹರಿಸುವುದಿಲ್ಲ. ಕೊನೆಗೆ ತೂಕ ಇಳಿಸಿಕೊಳ್ಳಲು ಹಲವು ಪ್ರಯತ್ನಗಳು ಆರಂಭವಾಗುತ್ತದೆ. ಇದಕ್ಕೆ ನೀವು ಕಡಿಮೆ ಕ್ಯಾಲೋರಿಗಳಿರುವ ಆಹಾರವನ್ನು ಸೇವಿಸುವುದು ಅಗತ್ಯವಾಗಿದೆ. ಸ್ನಾಕ್ಸ್ಗಳಲ್ಲೂ ಕಡಿಮೆ ಕ್ಯಾಲೋರಿಯುಳ್ಳ ಆಹಾರವಿರುತ್ತದೆ. ಅದನ್ನು ಸೇವಿಸಿದರೆ ದೇಹದ ತೂಕ ಇಳಿಸಿಕೊಳ್ಳಬಹುದು ಎನ್ನುತ್ತಾರೆ ತಜ್ಞರು. ಅದುವೇ ಪಾಪ್ಕಾರ್ನ್. ಹೌದು ಪಾಪ್ ಕಾರ್ನ್ ನಲ್ಲಿ ಕಡಿಮೆ ಕ್ಯಾಲೋರಿಯಿರುತ್ತದೆ ಎನ್ನಲಾಗಿದ್ದು, ದೇಹದ ತೂಕ ಇಳಿಕೆಗೆ ಸಹಾಯಕ ಎನ್ನಲಾಗಿದೆ. ಈ ಕುರಿತು ಟೈಮ್ಸ್ ಆಫ್ ಇಂಡಿಯಾ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಪಾಪ್ ಕಾರ್ನ್ ದೇಹದ ತೂಕ ಇಳಿಸಿಕೊಳ್ಳುವ ಅತ್ಯುತ್ತಮ ಆಹಾರವಾಗಿದೆ. ಆದರೆ ಅದನ್ನು ನೀವು ಹೇಗೆ ಸೇವಿಸುತ್ತೀರಿ ಎನ್ನುವುದು ಮುಖ್ಯವಾಗಿರುತ್ತದೆ. ಪಾಪ್ಕಾರ್ನ್ ದೇಹದ ತೂಕ ಇಳಿಕೆ ಮಾಡುತ್ತದೆ ಎಂದು ನಿರಂತರವಾಗಿ ಸೇವಿಸಬೇಡಿ. ಇದು ನಿಮ್ಮ ಡಯೆಟ್ ಪ್ಲಾನ್ಅನ್ನು ಹಾಳು ಮಾಡುತ್ತದೆ. ರೆಸ್ಟೋರೆಂಟ್, ಹೊಟೇಲ್ಗಳಲ್ಲಿ ಕೊಡುವ ಪಾಪ್ಕಾರ್ನ್ಗಳ್ಲಿ ಹೆಚ್ಚು ಮಸಾಲೆ ಮತ್ತು ಉಪ್ಪು ಮಿಶ್ರಣಗೊಂಡಿರುತ್ತದೆ ಹೀಗಾಗಿ ಅದರ ಅತಿಯಾದ ಬಳಕೆ ಬೇಡ. ನೀವು ಪಾಪ್ಕಾರ್ನ್ ತಿನ್ನ ಬೇಕೆಂದರೆ ಮನೆಯಲ್ಲಿಯೇ ತಯಾರಿಸಿಕೊಳ್ಳಿ. ಒಂದ ಬೌಲ್ ಪಾಪ್ಕಾರ್ನ್ನಲ್ಲಿ ಸುಮಾರು 30 ರಷ್ಟು ಕ್ಯಾಲೋರಿ ಇರುತ್ತದೆ. ಅಲ್ಲದೆ ಪಾಪ್ಕಾರ್ನ್ನಲ್ಲಿ ವಿಟಮಿನ್ ಬಿ,ಎ, ಇ,ಕೆ ಜತೆಗೆ ಪ್ರೋಟೀನ್ ಕೂಡ ಒಳಗೊಂಡಿದೆ ಎನ್ನುತ್ತಾರೆ ತಜ್ಞರು. 75 ಗ್ರಾಂ ಏರ್ ಪಾಪ್ಡ್ ನಲ್ಲಿ ಸುಮಾರು 750 ಗ್ರಾಂ ಪಾಲಿಫಿನಾಲ್ಗಳಿರುತ್ತವೆ.
ಪಾಪ್ಕಾರ್ನ್ಗಳು ದೇಹದ ತೂಕ ಮಾತ್ರವಲ್ಲದೆ ಹಲವು ಕಾಯಿಲೆಗಳು ಬರದಂತೆಯೂ ತಡೆಯುತ್ತದೆ ಎನ್ನಲಾಗಿದೆ. ಅದರಲ್ಲಿ ಮೊದಲನೆಯದು ಕ್ಯಾನ್ಸರ್. ದೇಹದಲ್ಲಿ ಕ್ಯಾನ್ಸರ್ ಜೀವಕೋಶಗಳ ಉತ್ಪತ್ತಿಯನ್ನು ತಡೆಯುತ್ತದೆ. ಕಣ್ಣಿನ ಆರೋಗ್ಯವೂ ಉತ್ತಮಗೊಳ್ಳುತ್ತದೆ. ಜತೆಗೆ ಹೃದಯ ಸಂಬಂಧಿ ಸಮಸ್ಯೆಗಳಿಗೂ ಪಾಪ್ಕಾರ್ನ್ ನೆರವಾಗುವುದಂತೆ. ಜೀರ್ಣ ಕ್ರಿಯೆ ಸಮಸ್ಯೆಗೂ ಪರಿಹಾರ ನೀಡುವ ಪಾಪ್ಕಾರ್ನ್ ಹಲವು ಆರೋಗ್ಯ ಸುಧಾರಿಸುವ ಗುಣಗಳನ್ನು ಹೊಂದಿದೆ.
(ಇಲ್ಲಿರುವ ಮಾಹಿತಿ ಟಿವಿ9 ಕನ್ನಡ ಡಿಜಿಟಲ್ನ ಅಭಿಪ್ರಾಯವಾಗಿರುವುದಿಲ್ಲ. ಟೀಮ್ಸ್ ಆಪ್ ಇಂಡಿಯಾ ವರದಿಯನ್ನು ಆಧರಿಸಿ ಸಲಹೆ ನೀಡಲಾಗಿದೆ)
ಇದನ್ನೂ ಓದಿ:
Health Tips: ದೇಹದಲ್ಲಿನ ಊತವನ್ನು ತೆಗೆದುಹಾಕಲು ಈ 5 ಮನೆಮದ್ದುಗಳನ್ನು ಅನುಸರಿಸಿ