ದೇಹದ ಪ್ರತಿಯೊಂದು ಆರೋಗ್ಯವೂ ನಿಂತಿರುವುದು ಸೇವಿಸುವ ಆಹಾರ (Food)ದ ಮೇಲೆ. ಆದ್ದರಿಂದ ನೀವು ಸೇವಿಸುವ ಆಹಾರದ ಮೇಲೆ ನಿಗಾ ಇರಲಿ. ಏಕೆಂದರೆ ಚಳಿಗಾಲ (Winter)ದಲ್ಲಿ ಸಂಧಿವಾತ(Arthritis) ದಂತಹ ಸಮಸ್ಯೆಗಳು ಹೆಚ್ಚು ಕಾಡುತ್ತವೆ. ಆದ್ದರಿಂದ ಸೇವಿಸುವ ಆಹಾರದಲ್ಲಿ ಕೊಂಚ ಬದಲಾವಣೆ ಮಾಡಿಕೊಂಡರೆ ಸಂಧಿವಾತದಂತಹ ಸಮಸ್ಯೆಗಳಿಂದ ದೂರವಿರಬಹುದು. ಇದರಲ್ಲಿ ಎರಡು ವಿಧ ಒಂದು ಸಂಧಿವಾತ ಇನ್ನೊಂದು ಅಸ್ಥಿ ಸಂಧಿವಾತ. ಸಂಧಿವಾತವು ನಿಮ್ಮ ರೋಗ ನಿರೋಧಕ ಶಕ್ತಿಯನ್ನು ಆಧರಿಸಿರುತ್ತದೆ. ಅಸ್ಥಿಸಂಧಿವಾತ (Osteoarthritis )ವು ನಿಮ್ಮ ಎಲುಬುಗಳ ಮೃದುತ್ವದ ಮೇಲೆ ಅವಲಂಬಿತವಾಗಿರುತ್ತದೆ ಎನ್ನುತ್ತಾರೆ ವೈದ್ಯರು. ಸಂಧಿವಾತಕ್ಕೆ ವೈದ್ಯರ ಬಳಿ ಹಲವು ಚಿಕಿತ್ಸೆಗಳಿವೆ. ಆದರೆ ವೈದ್ಯರ ಚಿಕಿತ್ಸೆ ಎಂದೂ ಶಾಶ್ವತ ಪರಿಹಾರ ನೀಡುವುದಿಲ್ಲ. ಹೀಗಾಗಿ ಜೀವನಶೈಲಿ ಮತ್ತು ಆಹಾರದಲ್ಲಿ ಬದಲಾವಣೆ ಮಾಡಿಕೊಂಡರೆ ಸಂಧಿವಾತದ ನೋವಿನಿಂದ ಮುಕ್ತಿಪಡೆಯಬಹುದು. ಹಾಗಾದರೆ ಸಂಧಿವಾತವಿರುವವವರು ಎಂತಹ ಆಹಾರಪದ್ಧತಿ ಹೊಂದಿರಬೇಕು ಇಲ್ಲಿದೆ ಮಾಹಿತಿ. ಈ ಕುರಿತು ಇಂಡಿಯಾ.ಕಾಮ್ ವರದಿ ಮಾಡಿದೆ.
ಸಂರಕ್ಷಿಸಿದ ಆಹಾರ ಬೇಡ:
ದೇಹದಲ್ಲಿ ಉರಿಯೂತವನ್ನು ಉಂಟುಮಾಡುವ ಆಹಾರಗಳ ಸೇವನೆಯನ್ನು ನಿರ್ಬಂಧಿಸಿ. ಕಾರ್ಬೋಹೈಡ್ರೇಟ್, ಶುಗರ್ ಅಥವಾ ಸಂರಕ್ಷಿಸಿದ ಆಹಾರಗಳ ಬಳಕೆ ಹೆಚ್ಚು ಬೇಡ. ಇವು ನಿಮ್ಮ ಸಂಧಿವಾತವನ್ನು ಹೆಚ್ಚಿಸಬಹುದು. ಈ ಕುರಿತು ವೈದ್ಯರು ಹೇಳುವುದೆಂದರೆ ಸಂಸ್ಕರಿಸಿದ ಕಾರ್ಬೋಹೈಡ್ರೇಟ್‌ಗಳು ಮತ್ತು ಗ್ಲುಟನ್ ಎರಡೂ ಹೆಚ್ಚು ಉರಿಯೂತದ ಮತ್ತು ಸಂಧಿವಾತಕ್ಕೆ ಕಾರಣವಾಗುತ್ತದೆ. ಅದಾಗಲೇ ಸಂಧಿವಾತದ ಸಮಸ್ಯೆ ಇದ್ದರೆ ನೋವನ್ನು ಹೆಚ್ಚು ಮಾಡುತ್ತದೆ.
ಮೀನು ಸೇವಿಸಿ:
ಒಮೆಗಾ 3 ಸಮೃದ್ಧವಾಗಿರುವ ಮೀನುಗಳು ನಿಮ್ಮ ದೇಹದಲ್ಲಿ ಸಂಧಿವಾತದ ನೋವುಗಳನ್ನು ನಿವಾರಿಸಬಲ್ಲದು. ವೈದ್ಯರ ಸಲಹೆಯಂತೆ ಒಮೆಗಾ 3 ಇರುವ ಅಹಾರಗಳನ್ನು ಹೆಚ್ಚು ಸೇವಿಸಿ. ಇದು ನಿಮ್ಮ ಸಂಧಿವಾತದ ಸಮಸ್ಯೆಗೆ ಪರಿಹಾರ ನೀಡುತ್ತದೆ. ಮೀನು ಕೇವಲ ಸಂಧಿವಾತ ಮಾತ್ರವಲ್ಲದೆ ದೇಹದ ಇತರ ಭಾಗಗಳ ನೋವನ್ನೂ ನಿವಾರಿಸುತ್ತದೆ. ಹೀಗಾಗಿ ಸೀ ಫುಡ್ಗಳನ್ನು ಹೆಚ್ಚು ಸೇವಿಸಿ.
ಡ್ರೈ ಪ್ರೂಟ್ಸ್ ಮತ್ತು ಬೀಜಗಳು:
ಮೀನು ಮಾತ್ರವಲ್ಲ ಡ್ರೈ ಫ್ರೂಟ್ಸ್ ಮತ್ತು ಕೆಲವು ಬೀಜಗಳು ನಿಮ್ಮ ಸಂಧಿವಾತದ ಸಮಸ್ಯೆಗೆ ಪರಿಹಾರ ನೀಡುತ್ತದೆ. ಇವುಗಳಲ್ಲಿ ಯಥೇಚ್ಛವಾದ ವಿಟಮಿನ್ ಇ ಮತ್ತು ಖನಿಜಾಂಶಗಳು ಇರುವುದರಿಂದ ಸಂಧಿವಾತ ಸೇರಿದಂತೆ ದೇಹದ ವಿವಿಧ ಭಾಗಗಳಲ್ಲಿರುವ ನೋವನ್ನು ನಿವಾರಿಸುತ್ತದೆ.
ಆಲಿವ್ ಎಣ್ಣೆ:
ಬೆಣ್ಣೆ ಮತ್ತು ಇತರ ಎಣ್ಣೆಗಳ ಬದಲಾಗಿ ಆಲಿವ್ ಎಣ್ಣೆಯನ್ನು ಹೆಚ್ಚಾಗಿ ಬಳಸಬಹುದು. ಇದರಲ್ಲಿರುವ ಆ್ಯಂಟಿ ಆಕ್ಸಿಡೆಂಟ್ಗಳು ಮತ್ತು ಉರಿಯೂತ ಕಡಿಮೆ ಮಾಡುವ ಅಂಶಗಳು ನಿಮ್ಮ ಸಂಧಿವಾತದ ಸಮಸ್ಯೆಗೆ ಪರಿಹಾರ ನೀಡುತ್ತದೆ. ಕೇವಲ ಸಂಧಿವಾತದ ಸಮಸ್ಯೆಗಳಿಗೆ ಮಾತ್ರವಲ್ಲದೆ ಹೃದಯ ಸಂಬಂಧಿ ಸಮಸ್ಯೆಗಳಿಗೂ ಆಲಿವ್ ಎಣ್ಣೆ ಉತ್ತಮ ಆಹಾರವಾಗಿದೆ.
(ಇಲ್ಲಿರುವಸಲಹೆಗಳು ಟಿವಿ9 ಡಿಜಿಟಲ್ನ ಅಭಿಪ್ರಾಯವಾಗಿರುವುದಿಲ್ಲ. ಇಂಡಿಯಾ.ಕಾಮ್ನ ಮಾಹಿತಿ ಆಧರಿಸಿ ಮಾಹಿತಿ ನೀಡಲಾಗಿದೆ.)
ಇದನ್ನೂ ಓದಿ:
Health Tips: ಕೈ ಬೆರಳುಗಳಲ್ಲಿ ಊತ ಉಂಟಾಗಿದೆಯೇ? ಈ ಮನೆಮದ್ದುಗಳು ನಿಮ್ಮ ನೆರವಿಗೆ ಇದೆ ಪರಿಶೀಲಿಸಿ