Sign In

By signing in or creating an account, you agree with Associated Broadcasting Company's Terms & Conditions and Privacy Policy.

Acidity: ಆಸಿಡಿಟಿ ಸಮಸ್ಯೆಯ ನಿವಾರಣೆಗೆ ಈ ಮನೆಮದ್ದುಗಳ ನೆರವು ಪಡೆಯಿರಿ

ಯಾವ ಹೊತ್ತಿನಲ್ಲಾದರೂ ಸರಿ ಅತಿಯಾದ ಆಹಾರ ಸೇವನೆ ಬೇಡ. ಊಟದ ಬದಲು ಹಣ್ಣು, ತರಕಾರಿಗಳ ಸೇವನೆಗೆ ಹೆಚ್ಚಿನ ಆದ್ಯತೆ ನೀಡಿ. ಇದು ನಿಮ್ಮನ್ನು ಆರೋಗ್ಯಯುತವಾಗಿಡುವಂತೆ ಮಾಡುತ್ತದೆ.

Acidity: ಆಸಿಡಿಟಿ ಸಮಸ್ಯೆಯ ನಿವಾರಣೆಗೆ ಈ ಮನೆಮದ್ದುಗಳ ನೆರವು ಪಡೆಯಿರಿ
ಸಾಂಕೇತಿಕ ಚಿತ್ರ
Follow us
TV9 Web
| Updated By: Pavitra Bhat Jigalemane

Updated on:Jan 23, 2022 | 4:03 PM

ತಿಂದ ಆಹಾರ ಜೀರ್ಣವಾಗದೆ ಪಚನಕ್ರಿಯೆಯಲ್ಲಿ ಅಸಮತೋಲನ ಉಂಟಾದಾಗ ಆಗುವ ಸಮಸ್ಯೆಯೇ ಆಸಿಡಿಟಿ (Acidity). ಸಾಮಾನ್ಯವಾಗಿ ಕೆಲಸಕ್ಕೆ ತೆರಳುವವರಿಗೆ, ತಡವಾಗಿ ಊಟ ಮಾಡುವವರಿಗೆ, ಮಸಾಲೆ ಪದಾರ್ಥವನ್ನು ಹೆಚ್ಚು ಸೇವಿಸುವವರಲ್ಲಿ ಆಸಿಡಿಟಿ ಸಮಸ್ಯೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಹುಳಿ ತೇಗು, ಹೊಟ್ಟೆ ನೋವು, ಹೊಟ್ಟೆ ಉಬ್ಬರ ಸೇರಿದಂತೆ ಹಲವು ಸಮಸ್ಯೆಗಳು ಆಸಿಡಿಟಿಯಿಂದ ಉಲ್ಬಣವಾಗುತ್ತದೆ. ಆದ್ದರಿಂದ ಸೇವಿಸುವ ಆಹಾರ, ಸೇವಿಸುವ ಸಮಯ ಎಲ್ಲವೂ ಮುಖ್ಯವಾಗಿರುತ್ತದೆ. ದೇಹದ ಸ್ವಾಸ್ಥ್ಯವನ್ನು ಕಾಪಾಡಿಕೊಳ್ಳಲು ಸರಿಯಾದ ಆಹಾರವನ್ನು ಸರಿಯಾದ ರೀತಿಯಲ್ಲಿ ಸೇವಿಸಬೇಕು. ಇಲ್ಲವಾದರೆ ಇಂತಹ ಸಮಸ್ಯೆಗಳು ದಿನನಿತ್ಯ ಕಾಡಲಿದೆ. ಆದ್ದರಿಂದಲೇ  ಆಹಾರದ ಬಗ್ಗೆ ಹೆಚ್ಚಿನ ಗಮನವಿದ್ದರೆ ಆಸ್ಪತ್ರೆಯೆಡೆಗೆ ಮುಖ ಮಾಡುವುದು ಕಡಿಮೆಯಾಗುತ್ತದ ಎನ್ನುತ್ತಾರೆ. ಹಾಗಾದರೆ ಆಸಡಿಟಿ ಸಮಸ್ಯೆಗೆ ಕಾರಣಗಳೇನು? ಮನೆಯಲ್ಲಿಯೇ ಯಾವ ರೀತಿ ಆಸಿಡಿಟಿಯನ್ನು ಶಮನಗೊಳಿಸಿಕೊಳ್ಳಬಹುದು ಎನ್ನುವ ಮಾಹಿತಿ ಇಲ್ಲಿದೆ ನೋಡಿ.

ಆಸಿಡಿಟಿಗೆ ಯಾವ ಕ್ರಮಗಳನ್ನು ನಿರ್ಬಂಧಿಸಬೇಕು?

ಮಸಾಲೆ ಆಹಾರಗಳಿಗೆ ಕಡಿವಾಣವಿರಲಿ ಆಸಡಿಟಿಗೆ ಮುಖ್ಯಕಾರಣವೇ ಮಸಾಲೆ ಆಹಾರಗಳು. ಬಾಯಿ ಚಪ್ಪರಿಸಿ ತಿನ್ನುವ ಮಾಸಾಲಾಪುರಿ, ಪಾನಿಪುರಿಗಳು ಆಸಿಡಿಟಿಗೆ ಕಾರಣವಾಗುತ್ತದೆ. ಮಸಾಲೆಯುಕ್ತ ಆಹಾರಗಳು ದೇಹದಲ್ಲಿ ಜೀರ್ಣವಾಗದೆ  ತೊಂದರೆ ಕೊಡುತ್ತವೆ. ಆಗ ಆಸಿಡಿಟಿಯ ಸಮಸ್ಯೆ ಕಾಣಿಸಿಕೊಳ್ಳುತ್ತದೆ,

ಅತಿಯಾದ ಸೇವನೆ ಬೇಡ ಯಾವ ಹೊತ್ತಿನಲ್ಲಾದರೂ ಸರಿ ಅತಿಯಾದ ಆಹಾರ ಸೇವನೆ ಬೇಡ. ಊಟದ ಬದಲು ಹಣ್ಣು, ತರಕಾರಿಗಳ ಸೇವನೆಗೆ ಹೆಚ್ಚಿನ ಆದ್ಯತೆ ನೀಡಿ. ಇದು ನಿಮ್ಮನ್ನು ಆರೋಗ್ಯಯುತವಾಗಿಡುವಂತೆ ಮಾಡುತ್ತದೆ. ಅಲ್ಲದೆ ಕಿತ್ತಳೆಯಂತಹ ಸಿಟ್ರಿಕ್​ ಆಮ್ಲವಿರುವ ಆಹಾರಗಳನ್ನು ಹಸಿದ ಹೊಟ್ಟೆಯಲ್ಲಿ ಸೇವಿಸಿದರೆ ಆಸಿಟಿಡಿಯ ಸಮಸ್ಯೆ ಕಾಡುತ್ತದೆ.

ಹಸಿವೆಯನ್ನು ಕಟ್ಟಬೇಡಿ ಹೆಚ್ಚಿನ ಸಮಸಯ ಹಸಿದುಕೊಂಡು ಇರಬೇಡಿ. ಇದು ನಿಮ್ಮ ಹೊಟ್ಟೆಯಲ್ಲಿ ಗ್ಯಾಸ್ಟ್ರಿಕ್​ ಉಂಟುಮಾಡುತ್ತದೆ. ಆದ್ದರಿಂದ ಹಸಿವೆಯಾದ ತಕ್ಷಣ ಸ್ವಲ್ಪವಾದರೂ ಸರಿ ಏನನ್ನಾದರೂ ತಿನ್ನಿ. ಇದು ಹಸಿವೆಯನ್ನೂ ನೀಗಿಸುತ್ತದೆ. ಜತೆಗೆ ಆಸಿಡಿಟಿ ಸಮಸ್ಯೆಯನ್ನೂ  ಉಂಟುಮಾಡುವುದಿಲ್ಲ.

ಊಟವಾದ ತಕ್ಷಣ ವಿಶ್ರಾಂತಿ ಬೇಡ ಕೆಲವರಿಗೆ ಅಭ್ಯಾಸವಿರುತ್ತದೆ, ಊಟವಾದ ತಕ್ಷಣ ಮಲಗುವುದು ಅಥವಾ ಆರಾಮದಿಂದ ಕುಳಿತುಕೊಳ್ಳುವುದು. ಇಂತಹ ಅಭ್ಯಾಸಗಳು ಬೇಡವೇ ಬೇಡ. ಊಟವಾದ ತಕ್ಷಣ ಒಂದೈದು ಹೆಜ್ಜೆಯಾದರು ನಡೆದಾಡಿ . ಇದು ನಿಮ್ಮ ಪಚನಕ್ರಿಯೆಗೆ ಸಹಾಯವಾಗುತ್ತದೆ.

ಮದ್ಯಪಾನ, ಧೂಮಪಾನದಿಂದ ದೂರವಿರಿ ಮದ್ಯಪಾನ, ಧೂಮಪಾನ ಮಾತ್ರವಲ್ಲ. ನೀವು ಸೇವಿಸುವ ಕಾಫಿ, ಟೀಯಂತಹ ಪಾನೀಯಗಳೂ ಆಸಿಡಿಟಿಯನ್ನು ಉಂಟುಮಾಡುತ್ತವೆ. ಆದ್ದರಿಂದ ಅವುಗಳ ಸೇವನೆ ಮಿತಿಯಲ್ಲಿರಲಿ. ಅದಕ್ಕಿಂತ ಮುಖ್ಯವಾಗಿ ನಿಮ್ಮ ಒತ್ತಡವೂ ನಿಮ್ಮ ಆಸಿಡಿಟಿ ಸಮಸ್ಯೆಯನ್ನು  ಹೆಚ್ಚಿಸಬಹುದು. ಹೀಗಾಗಿ ಆದಷ್ಟು ತಾಳ್ಮೆಯಿಂದ ಇರಿ.

ಮನೆಮದ್ದುಗಳೇನು?

ಪ್ರತಿದಿನ ಬೇಳಗ್ಗೆ ಹಸಿದ ಹೊಟ್ಟೆಯಲ್ಲಿ ಕೊತ್ತಂಬರಿ ನೀರನ್ನು ಸೇವಿಸಿ. ಕೊತ್ತಂಬರಿ ಬೀಜದ ಪುಡಿಗೆ ನೀರನ್ನು ಸೇರಿಸಿ, ಅಗತ್ಯವಿದ್ದರೆ ಸ್ವಲ್ಪ ಸಕ್ಕರೆಯನ್ನು ಸೇರಿಸಿ ಪ್ರತಿದಿನ ಬೆಳಗ್ಗೆ ಕುಡಿಯಿರಿ ಇದು ನಿಮ್ಮ ಆಸಿಡಿಟಿ ಸಮಸ್ಯೆಯನ್ನು ನಿವಾರಿಸುತ್ತದೆ. ಎಳೆನೀರು ಆಸಿಡಿಟಿಗೆ ಉತ್ತಮ ಆಹಾರವಾಗಿದೆ. ಕೆಲವೊಮ್ಮ ಸಮಾರಂಭಗಳಲ್ಲಿ ಮಾಡಿದ ಊಟ ಜೀರ್ಣವಾಗದೆ ಆಸಿಡಿಟಿ ಸಮಸ್ಯೆಗೆ ಕಾರಣವಾಗುತ್ತದೆ ಅಂತಹ ಸಂದರ್ಭಗಳಲ್ಲಿ ಎಳೆನೀರು ಕುಡಿಯಿರಿ. ಅದು ಸಾಧ್ಯವಾಗದೇ ಹೋದರೆ ಕುಳಿತಲ್ಲೇ ಅನುಲೋಮ, ವಿಲೋಮ ಪ್ರಾಣಾಯಾಮಗಳನ್ನು ಮಾಡಿ. ಜೇಷ್ಟಮದ್ದು ಅಥವಾ ಯಷ್ಟಿಮದ್ದಿನ ಪುಡಿಯನ್ನು ಪ್ರತಿದಿನ ಬೆಳಗ್ಗೆ ಅರ್ಧ ಚಮಚ ಸೇವಿಸಿ. ಪ್ರತಿದಿನ ಮಲಗುವ ಮೊದಲು ಒಂದು ಲೋಟ ಉಗುರುಬೆಚ್ಚಗಿನ ಹಾಲಿಗೆ ಒಂದು ಚಮಚ ಹಸುವಿನ ತುಪ್ಪವನ್ನು ಸೇರಿಸಿ ಸೇವಿಸಿ. ಇದು ನಿಮ್ಮ ಹೊಟ್ಟೆನೋವನ್ನು ಕಡಿಮೆ ಮಾಡುತ್ತದೆ. ಪ್ರತಿದಿನ ಹಾಲಿಗೆ 1 ಚಮಚ ಶತಾವರಿ ಪುಡಿಯನ್ನು ಮಿಶ್ರಣ ಮಾಡಿ ಸೇವಿಸಿ. ಇದು ನಿಮ್ಮ ಆಸಿಡಿಟಿ ಸಮಸ್ಯೆಯನ್ನು ನಿವಾರಿಸುತ್ತದೆ.

(ಇಲ್ಲಿರವ ಸಲಹೆಗಳು ಟಿವಿ9 ಕನ್ನಡ ಡಿಜಿಟಲ್​ನ ಅಭಿಪ್ರಾಯವಾಗಿರುವುದಿಲ್ಲ. ಹಿಂದೂಸ್ತಾನ್​ ಟೈಮ್ಸ್​ಗೆ ವೈದ್ಯರು ನೀಡಿದ ಮಾಹಿತಿಯನ್ನು ಆಧರಿಸಿದೆ.)

ಇದನ್ನೂ ಓದಿ:

ಶಾಖ ಉತ್ಪತ್ತಿ ಮಾಡುವ ದಿನಬಳಕೆಯ ವಸ್ತುಗಳಿಂದ ಚರ್ಮ ಸುಡಬಹುದು; ಎಚ್ಚರಿಕೆಯಿಂದಿರಿ

Published On - 4:01 pm, Sun, 23 January 22