AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Arthritis: ಸಂಧಿವಾತದಿಂದ ಬಳಲುತ್ತಿದ್ದರೆ ಆಹಾರ ಪದ್ಧತಿ ಹೀಗಿರಲಿ

ಕಾರ್ಬೋಹೈಡ್ರೇಟ್​, ಶುಗರ್​ ಅಥವಾ ಸಂರಕ್ಷಿಸಿದ ಆಹಾರಗಳ ಬಳಕೆ ಹೆಚ್ಚು ಬೇಡ. ಇವು ನಿಮ್ಮ ಸಂಧಿವಾತವನ್ನು ಹೆಚ್ಚಿಸಬಹುದು.

Arthritis: ಸಂಧಿವಾತದಿಂದ ಬಳಲುತ್ತಿದ್ದರೆ ಆಹಾರ ಪದ್ಧತಿ ಹೀಗಿರಲಿ
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: Pavitra Bhat Jigalemane

Updated on: Jan 22, 2022 | 5:29 PM

ದೇಹದ ಪ್ರತಿಯೊಂದು ಆರೋಗ್ಯವೂ ನಿಂತಿರುವುದು ಸೇವಿಸುವ ಆಹಾರ (Food)ದ ಮೇಲೆ. ಆದ್ದರಿಂದ ನೀವು ಸೇವಿಸುವ ಆಹಾರದ ಮೇಲೆ ನಿಗಾ ಇರಲಿ. ಏಕೆಂದರೆ ಚಳಿಗಾಲ (Winter)ದಲ್ಲಿ ಸಂಧಿವಾತ(Arthritis) ದಂತಹ ಸಮಸ್ಯೆಗಳು ಹೆಚ್ಚು ಕಾಡುತ್ತವೆ. ಆದ್ದರಿಂದ ಸೇವಿಸುವ ಆಹಾರದಲ್ಲಿ ಕೊಂಚ ಬದಲಾವಣೆ ಮಾಡಿಕೊಂಡರೆ ಸಂಧಿವಾತದಂತಹ ಸಮಸ್ಯೆಗಳಿಂದ ದೂರವಿರಬಹುದು. ಇದರಲ್ಲಿ ಎರಡು ವಿಧ ಒಂದು ಸಂಧಿವಾತ ಇನ್ನೊಂದು ಅಸ್ಥಿ ಸಂಧಿವಾತ. ಸಂಧಿವಾತವು ನಿಮ್ಮ ರೋಗ ನಿರೋಧಕ ಶಕ್ತಿಯನ್ನು ಆಧರಿಸಿರುತ್ತದೆ. ಅಸ್ಥಿಸಂಧಿವಾತ (Osteoarthritis )ವು ನಿಮ್ಮ ಎಲುಬುಗಳ ಮೃದುತ್ವದ ಮೇಲೆ ಅವಲಂಬಿತವಾಗಿರುತ್ತದೆ ಎನ್ನುತ್ತಾರೆ ವೈದ್ಯರು. ಸಂಧಿವಾತಕ್ಕೆ ವೈದ್ಯರ ಬಳಿ ಹಲವು ಚಿಕಿತ್ಸೆಗಳಿವೆ. ಆದರೆ ವೈದ್ಯರ ಚಿಕಿತ್ಸೆ ಎಂದೂ ಶಾಶ್ವತ ಪರಿಹಾರ ನೀಡುವುದಿಲ್ಲ. ಹೀಗಾಗಿ ಜೀವನಶೈಲಿ ಮತ್ತು  ಆಹಾರದಲ್ಲಿ ಬದಲಾವಣೆ ಮಾಡಿಕೊಂಡರೆ ಸಂಧಿವಾತದ ನೋವಿನಿಂದ ಮುಕ್ತಿಪಡೆಯಬಹುದು. ಹಾಗಾದರೆ ಸಂಧಿವಾತವಿರುವವವರು ಎಂತಹ ಆಹಾರಪದ್ಧತಿ ಹೊಂದಿರಬೇಕು ಇಲ್ಲಿದೆ ಮಾಹಿತಿ. ಈ ಕುರಿತು ಇಂಡಿಯಾ.ಕಾಮ್​ ವರದಿ ಮಾಡಿದೆ. 

ಸಂರಕ್ಷಿಸಿದ ಆಹಾರ ಬೇಡ:  ದೇಹದಲ್ಲಿ ಉರಿಯೂತವನ್ನು ಉಂಟುಮಾಡುವ ಆಹಾರಗಳ ಸೇವನೆಯನ್ನು ನಿರ್ಬಂಧಿಸಿ. ಕಾರ್ಬೋಹೈಡ್ರೇಟ್​, ಶುಗರ್​ ಅಥವಾ ಸಂರಕ್ಷಿಸಿದ ಆಹಾರಗಳ ಬಳಕೆ ಹೆಚ್ಚು ಬೇಡ. ಇವು ನಿಮ್ಮ ಸಂಧಿವಾತವನ್ನು ಹೆಚ್ಚಿಸಬಹುದು. ಈ ಕುರಿತು ವೈದ್ಯರು ಹೇಳುವುದೆಂದರೆ ಸಂಸ್ಕರಿಸಿದ ಕಾರ್ಬೋಹೈಡ್ರೇಟ್‌ಗಳು ಮತ್ತು ಗ್ಲುಟನ್ ಎರಡೂ ಹೆಚ್ಚು ಉರಿಯೂತದ ಮತ್ತು ಸಂಧಿವಾತಕ್ಕೆ ಕಾರಣವಾಗುತ್ತದೆ. ಅದಾಗಲೇ ಸಂಧಿವಾತದ ಸಮಸ್ಯೆ ಇದ್ದರೆ ನೋವನ್ನು  ಹೆಚ್ಚು ಮಾಡುತ್ತದೆ.

ಮೀನು ಸೇವಿಸಿ: ಒಮೆಗಾ 3 ಸಮೃದ್ಧವಾಗಿರುವ ಮೀನುಗಳು ನಿಮ್ಮ ದೇಹದಲ್ಲಿ ಸಂಧಿವಾತದ ನೋವುಗಳನ್ನು ನಿವಾರಿಸಬಲ್ಲದು. ವೈದ್ಯರ ಸಲಹೆಯಂತೆ ಒಮೆಗಾ 3 ಇರುವ ಅಹಾರಗಳನ್ನು ಹೆಚ್ಚು ಸೇವಿಸಿ. ಇದು ನಿಮ್ಮ ಸಂಧಿವಾತದ ಸಮಸ್ಯೆಗೆ ಪರಿಹಾರ ನೀಡುತ್ತದೆ. ಮೀನು ಕೇವಲ ಸಂಧಿವಾತ ಮಾತ್ರವಲ್ಲದೆ ದೇಹದ ಇತರ ಭಾಗಗಳ ನೋವನ್ನೂ ನಿವಾರಿಸುತ್ತದೆ. ಹೀಗಾಗಿ ಸೀ ಫುಡ್​ಗಳನ್ನು ಹೆಚ್ಚು ಸೇವಿಸಿ.

ಡ್ರೈ ಪ್ರೂಟ್ಸ್​ ಮತ್ತು ಬೀಜಗಳು: ಮೀನು ಮಾತ್ರವಲ್ಲ ಡ್ರೈ ಫ್ರೂಟ್ಸ್​ ಮತ್ತು ಕೆಲವು ಬೀಜಗಳು ನಿಮ್ಮ ಸಂಧಿವಾತದ ಸಮಸ್ಯೆಗೆ ಪರಿಹಾರ ನೀಡುತ್ತದೆ. ಇವುಗಳಲ್ಲಿ ಯಥೇಚ್ಛವಾದ ವಿಟಮಿನ್​ ಇ ಮತ್ತು ಖನಿಜಾಂಶಗಳು ಇರುವುದರಿಂದ ಸಂಧಿವಾತ ಸೇರಿದಂತೆ ದೇಹದ ವಿವಿಧ ಭಾಗಗಳಲ್ಲಿರುವ ನೋವನ್ನು ನಿವಾರಿಸುತ್ತದೆ.

ಆಲಿವ್​ ಎಣ್ಣೆ: ಬೆಣ್ಣೆ ಮತ್ತು ಇತರ ಎಣ್ಣೆಗಳ ಬದಲಾಗಿ ಆಲಿವ್​ ಎಣ್ಣೆಯನ್ನು ಹೆಚ್ಚಾಗಿ ಬಳಸಬಹುದು. ಇದರಲ್ಲಿರುವ ಆ್ಯಂಟಿ ಆಕ್ಸಿಡೆಂಟ್​ಗಳು ಮತ್ತು ಉರಿಯೂತ ಕಡಿಮೆ ಮಾಡುವ ಅಂಶಗಳು ನಿಮ್ಮ ಸಂಧಿವಾತದ ಸಮಸ್ಯೆಗೆ ಪರಿಹಾರ ನೀಡುತ್ತದೆ. ಕೇವಲ ಸಂಧಿವಾತದ ಸಮಸ್ಯೆಗಳಿಗೆ ಮಾತ್ರವಲ್ಲದೆ ಹೃದಯ ಸಂಬಂಧಿ ಸಮಸ್ಯೆಗಳಿಗೂ ಆಲಿವ್​ ಎಣ್ಣೆ ಉತ್ತಮ ಆಹಾರವಾಗಿದೆ.

(ಇಲ್ಲಿರುವಸಲಹೆಗಳು ಟಿವಿ9 ಡಿಜಿಟಲ್​ನ ಅಭಿಪ್ರಾಯವಾಗಿರುವುದಿಲ್ಲ. ಇಂಡಿಯಾ.ಕಾಮ್​ನ ಮಾಹಿತಿ ಆಧರಿಸಿ ಮಾಹಿತಿ ನೀಡಲಾಗಿದೆ.)

ಇದನ್ನೂ ಓದಿ:

Health Tips: ಕೈ ಬೆರಳುಗಳಲ್ಲಿ ಊತ ಉಂಟಾಗಿದೆಯೇ? ಈ ಮನೆಮದ್ದುಗಳು ನಿಮ್ಮ ನೆರವಿಗೆ ಇದೆ ಪರಿಶೀಲಿಸಿ

ತಾಯಿಯ ಜೊತೆಯಲ್ಲೇ ಸನ್ಮಾನ; ಇದು ಚೈತ್ರಾ ಕುಂದಾಪುರ ಪಾಲಿನ ಹೆಮ್ಮೆಯ ಕ್ಷಣ
ತಾಯಿಯ ಜೊತೆಯಲ್ಲೇ ಸನ್ಮಾನ; ಇದು ಚೈತ್ರಾ ಕುಂದಾಪುರ ಪಾಲಿನ ಹೆಮ್ಮೆಯ ಕ್ಷಣ
ಬಿಜೆಪಿಯಿಂದ ಉಚ್ಚಾಟಿತ ಯತ್ನಾಳ್ ತನ್ನ ಅಸ್ತಿತ್ವ ಉಳಿಸಿಕೊಳ್ಳಬೇಕಿದೆ: ಸಚಿವ
ಬಿಜೆಪಿಯಿಂದ ಉಚ್ಚಾಟಿತ ಯತ್ನಾಳ್ ತನ್ನ ಅಸ್ತಿತ್ವ ಉಳಿಸಿಕೊಳ್ಳಬೇಕಿದೆ: ಸಚಿವ
ರಸ್ತೆಯಲ್ಲಿ ನಿಲ್ಲಿಸಿದ್ದ ಸ್ಕೂಟಿಯನ್ನೇ ತಳ್ಳಿಕೊಂಡು ಹೋದ ಗೂಳಿ!
ರಸ್ತೆಯಲ್ಲಿ ನಿಲ್ಲಿಸಿದ್ದ ಸ್ಕೂಟಿಯನ್ನೇ ತಳ್ಳಿಕೊಂಡು ಹೋದ ಗೂಳಿ!
ಕ್ಯಾನ್ಸರ್​ಗೀಡಾಗಿದ್ದ ಚಿರಂತ್ ಬಲಗೈ ಮೂಳೆ ಆಪರೇಷನ್ ಮೂಲಕ ತೆಗೆಯಲಾಗಿದೆ!
ಕ್ಯಾನ್ಸರ್​ಗೀಡಾಗಿದ್ದ ಚಿರಂತ್ ಬಲಗೈ ಮೂಳೆ ಆಪರೇಷನ್ ಮೂಲಕ ತೆಗೆಯಲಾಗಿದೆ!
‘ಕಲಾಮಾಧ್ಯಮ’ ಯಶಸ್ಸು ಕಂಡಿದ್ದು ರಾತ್ರೋರಾತ್ರಿ ಅಲ್ಲ; ಪರಮ್ ಕಷ್ಟದ ಹಾದಿ
‘ಕಲಾಮಾಧ್ಯಮ’ ಯಶಸ್ಸು ಕಂಡಿದ್ದು ರಾತ್ರೋರಾತ್ರಿ ಅಲ್ಲ; ಪರಮ್ ಕಷ್ಟದ ಹಾದಿ
ಗಂಗಾ ಎಕ್ಸ್‌ಪ್ರೆಸ್‌ವೇಯಲ್ಲಿ ವಾಯುಪಡೆಯಿಂದ ಯುದ್ಧವಿಮಾನಗಳ ತಾಲೀಮು
ಗಂಗಾ ಎಕ್ಸ್‌ಪ್ರೆಸ್‌ವೇಯಲ್ಲಿ ವಾಯುಪಡೆಯಿಂದ ಯುದ್ಧವಿಮಾನಗಳ ತಾಲೀಮು
ಶಿವಾನಂದ ಪಾಟೀಲ್ ರಾಜೀನಾಮೆ ಅಂಗೀಕರಿಸಲು ಬರಲ್ಲ: ಯುಟಿ ಖಾದರ್
ಶಿವಾನಂದ ಪಾಟೀಲ್ ರಾಜೀನಾಮೆ ಅಂಗೀಕರಿಸಲು ಬರಲ್ಲ: ಯುಟಿ ಖಾದರ್
ಪತ್ರದಲ್ಲಿ ಷರತ್ತುಗಳಿರಲ್ಲ, 2 ಸಾಲಿನ ಸಾರಾಂಶ ಮಾತ್ರ ಇರುತ್ತದೆ: ಯತ್ನಾಳ್
ಪತ್ರದಲ್ಲಿ ಷರತ್ತುಗಳಿರಲ್ಲ, 2 ಸಾಲಿನ ಸಾರಾಂಶ ಮಾತ್ರ ಇರುತ್ತದೆ: ಯತ್ನಾಳ್
ತನಿಖೆಯನ್ನು ಎನ್​ಐಎಗೆ ವಹಿಸುವಂತೆ ಅಮಿತ್ ಶಾರನ್ನು ಕೋರಿದ್ದೇನೆ: ಸಚಿವೆ
ತನಿಖೆಯನ್ನು ಎನ್​ಐಎಗೆ ವಹಿಸುವಂತೆ ಅಮಿತ್ ಶಾರನ್ನು ಕೋರಿದ್ದೇನೆ: ಸಚಿವೆ
ಸುಹಾಸ್ ಕಾರಿಗೆ ಮೀನಿನ ವಾಹನ ಡಿಕ್ಕಿ ಹೊಡೆದ ಸಿಸಿಟಿವಿ ದೃಶ್ಯ ಇಲ್ಲಿದೆ
ಸುಹಾಸ್ ಕಾರಿಗೆ ಮೀನಿನ ವಾಹನ ಡಿಕ್ಕಿ ಹೊಡೆದ ಸಿಸಿಟಿವಿ ದೃಶ್ಯ ಇಲ್ಲಿದೆ