Coriander Water Benefits: ಪ್ರತಿದಿನ ಬೆಳಿಗ್ಗೆ ಕೊತ್ತಂಬರಿ ಕಾಳಿನ ನೀರನ್ನು ಕುಡಿಯಿರಿ; ನಿಮ್ಮಲ್ಲಿನ ಅನೇಕ ಸಮಸ್ಯೆಗಳಿಗೆ ಇದೇ ಮದ್ದು

ಕೊತ್ತಂಬರಿ ನೀರಿನಲ್ಲಿ ಪೊಟ್ಯಾಸಿಯಮ್, ಕ್ಯಾಲ್ಸಿಯಂ, ವಿಟಮಿನ್ ಸಿ ಮತ್ತು ಮೆಗ್ನೀಸಿಯಮ್ ಹೇರಳವಾಗಿದೆ. ಈ ಪೋಷಕಾಂಶಗಳು ರೋಗಗಳನ್ನು ದೂರವಿಡಲು ಸಹಾಯ ಮಾಡುತ್ತದೆ.

Coriander Water Benefits: ಪ್ರತಿದಿನ ಬೆಳಿಗ್ಗೆ ಕೊತ್ತಂಬರಿ ಕಾಳಿನ ನೀರನ್ನು ಕುಡಿಯಿರಿ; ನಿಮ್ಮಲ್ಲಿನ ಅನೇಕ ಸಮಸ್ಯೆಗಳಿಗೆ ಇದೇ ಮದ್ದು
ಕೊತ್ತಂಬರಿ ಕಾಳು
Follow us
TV9 Web
| Updated By: preethi shettigar

Updated on: Jan 24, 2022 | 7:34 AM

ಕೊತ್ತಂಬರಿ ಕಾಳನ್ನು ಸಾಮಾನ್ಯವಾಗಿ ಭಾರತೀಯ ಅಡುಗೆಯಲ್ಲಿ ಬಳಸಲಾಗುತ್ತದೆ. ಕೊತ್ತಂಬರಿ ಕಾಳು(Coriander) ಆಹಾರದ ರುಚಿಯನ್ನು ಹೆಚ್ಚಿಸುವುದು ಮಾತ್ರವಲ್ಲದೆ ಆರೋಗ್ಯಕ್ಕೂ(Health) ತುಂಬಾ ಪ್ರಯೋಜನಕಾರಿ. ಅನೇಕ ಆಹಾರ ತಜ್ಞರು ಕೊತ್ತಂಬರಿ ಕಾಳಿನ ನೀರನ್ನು ಕುಡಿಯಲು ಶಿಫಾರಸು ಮಾಡುತ್ತಾರೆ. ಈ ನೀರನ್ನು ತಯಾರಿಸಲು, 1 ಚಮಚ ಕೊತ್ತಂಬರಿ ಕಾಳುಗಳನ್ನು 1 ಕಪ್ ಕುಡಿಯುವ ನೀರಿನಲ್ಲಿ ರಾತ್ರಿ(Night) ನೆನೆಸಿಡಿ. ಬೆಳಿಗ್ಗೆ ಈ ನೀರನ್ನು ಫಿಲ್ಟರ್ ಮಾಡಿ. ಅದರ ನಂತರ ನೀವು ಈ ನೀರನ್ನು ಕುಡಿಯಬಹುದು. ಕೊತ್ತಂಬರಿ ನೀರಿನಲ್ಲಿ ಪೊಟ್ಯಾಸಿಯಮ್, ಕ್ಯಾಲ್ಸಿಯಂ, ವಿಟಮಿನ್ ಸಿ ಮತ್ತು ಮೆಗ್ನೀಸಿಯಮ್ ಹೇರಳವಾಗಿದೆ. ಈ ಪೋಷಕಾಂಶಗಳು ರೋಗಗಳನ್ನು ದೂರವಿಡಲು ಸಹಾಯ ಮಾಡುತ್ತದೆ.

ಕೊತ್ತಂಬರಿ ಕಾಳಿನ ನೀರು ಆರೋಗ್ಯಕ್ಕೆ ಹೇಗೆ ಉಪಯುಕ್ತ?

ರೋಗನಿರೋಧಕ ಶಕ್ತಿಯ ಹೆಚ್ಚಳ

ಕೊತ್ತಂಬರಿ ಕಾಳು ನಿಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಏಕೆಂದರೆ ಇದರಲ್ಲಿನ ಆಂಟಿಆಕ್ಸಿಡೆಂಟ್‌ಗಳು ದೇಹದಲ್ಲಿನ ಸ್ವತಂತ್ರ ರಾಡಿಕಲ್‌ಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದು ಅನೇಕ ರೋಗಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ.

ತಲೆ ಕೂದಲನ್ನು ಬಲಪಡಿಸುತ್ತದೆ

ಕೊತ್ತಂಬರಿ ಕಾಳು ವಿಟಮಿನ್ ಕೆ, ಸಿ ಮತ್ತು ಎ ಯಂತಹ ವಿಟಮಿನ್‌ಗಳಿಂದ ಸಮೃದ್ಧವಾಗಿದೆ. ಕೂದಲು ಗಟ್ಟಿಯಾಗಲು ಮತ್ತು ವೇಗವಾಗಿ ಬೆಳೆಯಲು ಇವು ಅತ್ಯಗತ್ಯ. ಬೆಳಿಗ್ಗೆ ಕೊತ್ತಂಬರಿ ಕಾಳಿನ ನೀರನ್ನು ಕುಡಿಯುವುದರಿಂದ ಕೂದಲು ಉದುರುವುದು ಮತ್ತು ಒಡೆಯುವುದು ಕಡಿಮೆಯಾಗುತ್ತದೆ. ನೀವು ಕೊತ್ತಂಬರಿ ಕಾಳನ್ನು ಎಣ್ಣೆ ರೂಪದಲ್ಲಿ ಕೂಡ ಕೂದಲಿಗೆ ಅನ್ವಯಿಸಬಹುದು.

ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ

ಕೊತ್ತಂಬರಿಯು ಕೆಲವು ಜೀರ್ಣಕಾರಿ ಗುಣಗಳನ್ನು ಹೊಂದಿದೆ. ಬೆಳಿಗ್ಗೆ ಕೊತ್ತಂಬರಿ ನೀರನ್ನು ಕುಡಿಯುವುದರಿಂದ ಜೀರ್ಣಕ್ರಿಯೆ ಸುಧಾರಿಸುತ್ತದೆ ಮತ್ತು ಚಯಾಪಚಯವನ್ನು ವೇಗಗೊಳಿಸುತ್ತದೆ. ಈ ಎರಡೂ ಗುಣಲಕ್ಷಣಗಳು ನಿಮ್ಮ ತೂಕ ನಷ್ಟ ಪ್ರಕ್ರಿಯೆಯಲ್ಲಿ ನಿಮಗೆ ಸಹಾಯ ಮಾಡಬಹುದು.

ಪಿಗ್ಮೆಂಟೇಶನ್ ಮತ್ತು ಮೊಡವೆಗಳನ್ನು ಕಡಿಮೆ ಮಾಡುತ್ತದೆ

ಕೊತ್ತಂಬರಿ ಕಾಳಿನಲ್ಲಿ ಕಬ್ಬಿಣದ ಅಂಶ ಹೇರಳವಾಗಿದೆ. ಇದು ಆಂಟಿಫಂಗಲ್ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಸಹ ಹೊಂದಿದೆ. ಬೆಳಗ್ಗೆ ಕೊತ್ತಂಬರಿ ಕಾಳಿನನ ನೀರನ್ನು ಕುಡಿಯುವುದರಿಂದ ತ್ವಚೆಯು ಕಾಂತಿಯುತ ಹಾಗೂ ಮೃದುವಾಗಿರುತ್ತದೆ.

ಕೊಲೆಸ್ಟ್ರಾಲ್ ಅನ್ನು ತೊಡೆದುಹಾಕುತ್ತದೆ

ಕೊತ್ತಂಬರಿ ಕಾಳಿನಲ್ಲಿ ಕೊಲೆಸ್ಟ್ರಾಲ್ ಅನ್ನು ನಿಯಂತ್ರಣದಲ್ಲಿಡುವ ಕೆಲವು ಅಂಶಗಳಿವೆ. ಸಂಶೋಧನೆಯ ಪ್ರಕಾರ, ನೀವು ಅಧಿಕ ಕೊಲೆಸ್ಟ್ರಾಲ್ ಹೊಂದಿದ್ದರೆ, ಕೊತ್ತಂಬರಿ ಕಾಳು ನೆನೆಸಿದ ನೀರನ್ನು ಸೇವಿಸಬಹುದು.

ಮಧುಮೇಹವನ್ನು ನಿಯಂತ್ರಿಸುತ್ತದೆ

ಮಧುಮೇಹವನ್ನು ನಿಯಂತ್ರಿಸಲು ನೀವು ಕೊತ್ತಂಬರಿ ನೀರನ್ನು ಕುಡಿಯಬಹುದು. ಕೊತ್ತಂಬರಿ ಕಾಳಿನ ನೀರನ್ನು ಕುಡಿಯುವುದರಿಂದ ರಕ್ತದಲ್ಲಿನ ಇನ್ಸುಲಿನ್ ಪ್ರಮಾಣ ನಿಯಂತ್ರಣದಲ್ಲಿರುತ್ತದೆ.

ಇದನ್ನೂ ಓದಿ: ಚರ್ಮದ ಅಲರ್ಜಿ ಸಮಸ್ಯೆಗಳಿಗೆ ಈ ಆಹಾರಗಳನ್ನು ಸೇವಿಸಿ; ಫೋಟೋದೊಂದಿಗೆ ಇಲ್ಲಿದೆ ಮಾಹಿತಿ

Cold Wave Diseases: ತಣ್ಣನೆಯ ಗಾಳಿಯಿಂದ ಆರೋಗ್ಯದಲ್ಲಾಗುತ್ತದೆ ಅನೇಕ ಬದಲಾವಣೆ; ಇರಲಿ ಎಚ್ಚರ

ಪ್ರಧಾನಿ ಮೋದಿಯೊಂದಿಗೆ ಶಿವಕುಮಾರ್ ನೀರಾವರಿ ಸೇರಿದಂತೆ ಹಲವು ವಿಷಯಗಳ ಚರ್ಚೆ
ಪ್ರಧಾನಿ ಮೋದಿಯೊಂದಿಗೆ ಶಿವಕುಮಾರ್ ನೀರಾವರಿ ಸೇರಿದಂತೆ ಹಲವು ವಿಷಯಗಳ ಚರ್ಚೆ
ಕಲಬುರಗಿ: ವಿದ್ಯುತ್​ ತಂತಿ ತಗುಲಿ 6 ಎಕರೆ ಕಬ್ಬಿನ ಬೆಳೆ ಬೆಂಕಿಗಾಹುತಿ
ಕಲಬುರಗಿ: ವಿದ್ಯುತ್​ ತಂತಿ ತಗುಲಿ 6 ಎಕರೆ ಕಬ್ಬಿನ ಬೆಳೆ ಬೆಂಕಿಗಾಹುತಿ
ಬಿಗ್ ಬಾಸ್ ಮನೆಯಲ್ಲಿ ರಾಜ-ಯುವರಾಣಿ ಬಂಧನ; ಮಾಡಿದ ತಪ್ಪೇನು?
ಬಿಗ್ ಬಾಸ್ ಮನೆಯಲ್ಲಿ ರಾಜ-ಯುವರಾಣಿ ಬಂಧನ; ಮಾಡಿದ ತಪ್ಪೇನು?
Daily Devotional: ಅಯ್ಯಪ್ಪ ಮಾಲೆ ಧಾರಣೆಯ ಹಿಂದಿನ ಮಹತ್ವ ತಿಳಿಯಿರಿ
Daily Devotional: ಅಯ್ಯಪ್ಪ ಮಾಲೆ ಧಾರಣೆಯ ಹಿಂದಿನ ಮಹತ್ವ ತಿಳಿಯಿರಿ
ಈ ರಾಶಿಯವರಿಗೆ ಆರು ಗ್ರಹಗಳ ಶುಭ ಫಲವಿದೆ
ಈ ರಾಶಿಯವರಿಗೆ ಆರು ಗ್ರಹಗಳ ಶುಭ ಫಲವಿದೆ
ಸೆಟ್ಟೇರಿತು ‘ಎಕ್ಕ’ ಸಿನಿಮಾ; ಖುಷಿ ಖುಷಿಯಲ್ಲಿ ಮಾತನಾಡಿದ ಯುವ ರಾಜ್​ಕುಮಾರ್
ಸೆಟ್ಟೇರಿತು ‘ಎಕ್ಕ’ ಸಿನಿಮಾ; ಖುಷಿ ಖುಷಿಯಲ್ಲಿ ಮಾತನಾಡಿದ ಯುವ ರಾಜ್​ಕುಮಾರ್
ಘಟಸರ್ಪಗಳಿರುವ ಹುತ್ತಕ್ಕೆ ಸಿಪಿ ಯೋಗೇಶ್ವರ್ ಕೈ ಹಾಕಿದ್ದಾರೆ: ಪುಟ್ಟರಾಜು
ಘಟಸರ್ಪಗಳಿರುವ ಹುತ್ತಕ್ಕೆ ಸಿಪಿ ಯೋಗೇಶ್ವರ್ ಕೈ ಹಾಕಿದ್ದಾರೆ: ಪುಟ್ಟರಾಜು
ಗೃಹ ಲಕ್ಷ್ಮಿ ಹಣದ ಬಗ್ಗೆ ಮಹತ್ವದ ಅಪ್ಡೇಟ್ ನೀಡಿದ ಸಚಿವೆ ಹೆಬ್ಬಾಳ್ಕರ್​
ಗೃಹ ಲಕ್ಷ್ಮಿ ಹಣದ ಬಗ್ಗೆ ಮಹತ್ವದ ಅಪ್ಡೇಟ್ ನೀಡಿದ ಸಚಿವೆ ಹೆಬ್ಬಾಳ್ಕರ್​
ಜೆಡಿಎಸ್ ಶಾಸಕರನ್ನು ಕಾಂಗ್ರೆಸ್​ಗೆ ತರುವಷ್ಟು ತಾಕತ್ತು ನಂಗಿಲ್ಲ: ಬಾಲಕೃಷ್ಣ
ಜೆಡಿಎಸ್ ಶಾಸಕರನ್ನು ಕಾಂಗ್ರೆಸ್​ಗೆ ತರುವಷ್ಟು ತಾಕತ್ತು ನಂಗಿಲ್ಲ: ಬಾಲಕೃಷ್ಣ
ಹೆಬ್ಬಾಳ್ಕರ್ ರಾಜೀನಾಮೆ ನೀಡಿ ಪಂಚಮಸಾಲಿ ಹೋರಾಟದಲ್ಲಿ ಭಾಗಿಯಾಗಲಿ: ಯತ್ನಾಳ್
ಹೆಬ್ಬಾಳ್ಕರ್ ರಾಜೀನಾಮೆ ನೀಡಿ ಪಂಚಮಸಾಲಿ ಹೋರಾಟದಲ್ಲಿ ಭಾಗಿಯಾಗಲಿ: ಯತ್ನಾಳ್