ನಿರಂತರ ಆಯಾಸ, ಚರ್ಮ ಕಳೆಗುಂದುವಿಕೆ , ತೀವ್ರ ಕೂದಲು ಉದುರುವುದು, ಶಕ್ತಿಯ ಕೊರತೆ, ವೇಗವಾದ ಹೃದಯ ಬಡಿತ , ಉಸಿರಾಟದ ತೊಂದರೆ, ಮೂಡಿ ಆಗಿರುವುದು ಇಂತಹ ಸಮಸ್ಯೆಗಳು ಇತ್ತೀಚಿನ ದಿನಗಳಲ್ಲಿ ಮಹಿಳೆಯರಲ್ಲಿ ಕಾಣಿಸಿಕೊಳ್ಳುತ್ತಿದೆ. ಇದಕ್ಕೆ ಕಾರಣ ಎಂದರೆ ರಕ್ತಹೀನತೆ (Anemia). ದೇಹದಲ್ಲಿ ಕಬ್ಬಿಣಾಂಶದ (Iron content) ಕೊರತೆಯಿಂದ ರಕ್ತಹೀನತೆ ಕಾಣಿಸಿಕೊಳ್ಳುತ್ತದೆ. ಕಬ್ಬಿಣದ ಕೊರತೆಯು ರೋಗನಿರೋಧಕ ಶಕ್ತಿಯನ್ನು ದುರ್ಬಲಗೊಳಿಸಲು ಕಾರಣವಾಗಬಹುದು. ಹದಿಹರೆಯದ ಹೆಣ್ಣುಮಕ್ಕಳಲ್ಲಿ ಇದು ಹೆಚ್ಚಾಗಿ ಕಾಣಸಿಕೊಳ್ಳುತ್ತದೆ, ಇದಕ್ಕಾಗಿ ಆಸ್ಪತ್ರೆಗೆ ಹೋಗಿ ಹತ್ತಾರು ಮಾತ್ರೆಗಳನ್ನು ತಿನ್ನುವ ಬದಲು ನಾವು ಸೇವಿಸುವ ಆಹಾರದಲ್ಲಿಯೇ ಕೊಂಚ ಬದಲಾವಣೆ ಮಾಡಿಕೊಂಡರೆ ರಕ್ತಹೀನತೆ ಸಮಸ್ಯೆಯನ್ನು ಹೊಡೆದೋಡಿಸಬಹುದಾಗಿದೆ. ವಿಶ್ಲೇಷಣೆಯ ಪ್ರಕಾರ, ಹೆಚ್ಚಿನ ರಕ್ತಹೀನತೆಯನ್ನು ಎದುರಿಸುತ್ತಿರುವ ಮಹಿಳೆಯರು ಮತ್ತು ಮಕ್ಕಳನ್ನು ಹೊಂದಿರುವ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತ ಅಗ್ರಸ್ಥಾನದಲ್ಲಿದೆ. ಒಂದಷ್ಟು ಮನೆಮದ್ದುಗಳಿಂದಲೆ ನ್ಯಮೋನಿಯಾ ಸಮಸ್ಯೆಯಿಂದ ದೂರವಿರಬಹುದಾಗಿದೆ. ಅದಕ್ಕಾಗಿ ಇಲ್ಲಿದೆ ಒಂದಷ್ಟು ಸಲಹೆಗಳು.
ಮೊಸರು ಮತ್ತು ಅರಿಶಿನ :
ದೇಹದಲ್ಲಿ ಕಫದ ಪ್ರಮಾಣ ಹೆಚ್ಚಾದರೆ ರಕ್ತಹೀನತೆಯುಂಟಾಗುತ್ತದೆ. ಇದಕ್ಕಾಗಿ ಮೊಸರು ಮತ್ತು ಅರಿಶಿನವನ್ನು ಮಿಶ್ರಣ ಮಾಡಿ ಸೇವಿಸಿದರೆ ಒಳಿತು ಎನ್ನುತ್ತಾರೆ ವೈದ್ಯರು. ರಕ್ತಹೀನತೆಯಿಂದ ಬಳಲುತ್ತಿರುವವರು ದಿನಕ್ಕೆ ಎರಡು ಬಾರಿ ಬೆಳಿಗ್ಗೆ ಮತ್ತು ಮಧ್ಯಾಹ್ನ ಒಂದು ಟೀಚಮಚ ಅರಿಶಿನದೊಂದಿಗೆ ಒಂದು ಕಪ್ ಮೊಸರು ಸೇವಿಸಬೇಕು. ಇದು ಊತ ಮತ್ತು ಚರ್ಮ ಕೋಲ್ಡ್ ಆಗೋದನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಬಿಟ್ರೋಟ್ ಮತ್ತು ದಾಳಿಂಬೆ ಜ್ಯೂಸ್:
ಬಿಟ್ರೂಟ್ ಮತ್ತು ದಾಳಿಂಬೆ ಎರಡೂ ದೇಹದಲ್ಲಿ ರಕ್ತವನ್ನು ಉತ್ಪತ್ತಿ ಮಾಡಲು ಸಹಾಯಕವಾಗಿದೆ. ಬೀಟ್ರೂಟ್ನಲ್ಲಿ ಫೋಲಿಕ್ ಆಮ್ಲದಲ್ಲಿ ಸಮೃದ್ಧವಾಗಿದೆ. ದಾಳಿಂಬೆ ಕಬ್ಬಿಣ ಮತ್ತು ತಾಮ್ರ ಮತ್ತು ಪೊಟ್ಯಾಸಿಯಮ್ನಂತಹ ಇತರ ಖನಿಜಗಳಿಂದ ಕೂಡಿದೆ. ನಿಯಮಿತವಾಗಿ ಸೇವಿಸಿದರೆ, ಈ ರಸಗಳು ಆರೋಗ್ಯಕರ ರಕ್ತದ ಹರಿವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
ಹಸಿರು ತರಕಾರಿ ಮತ್ತು ಹಣ್ಣುಗಳು:
ತರಕಾರಿಗಳನ್ನು ಹಸಿಯಾಗಿ ತಿನ್ನುವುದರಿಂದ ಹೆಚ್ಚು ಉಪಯೋಗವಿದೆ. ಇದರ ಜೊತೆಗೆ ಪ್ರತಿದಿನ ಪ್ರೋಟೋನ್ಯುಕ್ತ ಹಣ್ಣುಗಳ ಸೇವನೆ ಮಾಡಿದರೆ ಕೆಲವೇ ತಿಂಗಳುಗಳಲ್ಲಿ ರಕ್ತ ಹೀನತೆ ಸಮಸ್ಯೆಯನ್ನು ನಿವಾರಿಸಬಹುದು. ಪಾಲಕ್, ಸೆಲರಿ, ಸಾಸಿವೆ ಸೊಪ್ಪು ಮತ್ತು ಬ್ರೋಕೋಲಿ ಮೊದಲಾದವುಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕ್ಲೋರೊಫಿಲ್ ಇರುತ್ತದೆ. ಕ್ಲೋರೋಫಿಲ್ ಕಬ್ಬಿಣದ ಮೂಲವಾಗಿದೆ.
ತಾಮ್ರದ ಪಾತ್ರೆಯಲ್ಲಿಟ್ಟ ನೀರಿನ ಸೇವನೆ:
ದೇಹಕ್ಕೆ ನೀರಿನ ಸೇವನೆಯಂತೂ ಅತೀ ಅಗತ್ಯವಾಗಿದೆ. ಅದರಲ್ಲಿಯೂ ತಾಮ್ರದ ಪಾತ್ರೆಯಲ್ಲಿ ಇರಿಸಿದ ನೀರಿನ ಸೇವನೆ ಆರೋಗ್ಯಕ್ಕೆ ಅತ್ಯುತ್ತಮವಾಗಿದೆ. ಇದರ ಜೊತೆಗೆ ದೇಹದಲ್ಲಿ ನೈಸರ್ಗಿಕ ಖನಿಜಗಳ ಕೊರತೆಯನ್ನು ತುಂಬಿಸಲು ಸಹಾಯ ಮಾಡುತ್ತದೆ ಮತ್ತು ಕೂದಲು ಉದುರುವಿಕೆಗೆ ಚಿಕಿತ್ಸೆಯಂತೆ ಕೆಲಸ ಮಾಡುತ್ತದೆ.
ಇದನ್ನೂ ಓದಿ: