Facial Yoga: ಆರೋಗ್ಯಯುತ ತ್ವಚೆ ಪಡೆಯುಲು ಈ 5 ವ್ಯಾಯಾಮ ಮಾಡಿ

ಮುಖದ ಸೌಂದರ್ಯವನ್ನು ಹೆಚ್ಚಿಸಲು ವ್ಯಾಯಾಮ ಸಹಕಾರಿಯಾಗಿದೆ. ಯಾವೆಲ್ಲಾ ವ್ಯಾಯಾಮಗಳು ಮುಖದ ಆರೋಗ್ಯವನ್ನು ಹೆಚ್ಚಿಸುತ್ತದೆ ಎನ್ನುವ ಮಾಹಿತಿ ಇಲ್ಲಿದೆ.

Facial Yoga: ಆರೋಗ್ಯಯುತ ತ್ವಚೆ ಪಡೆಯುಲು ಈ 5 ವ್ಯಾಯಾಮ ಮಾಡಿ
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: Pavitra Bhat Jigalemane

Updated on: Mar 21, 2022 | 11:05 AM

ಮುಖದ ಸೌಂದರ್ಯ ಎಲ್ಲರಿಗೂ ಬೇಕು. ಅಂದವಾದ, ಸುಕ್ಕುಗಟ್ಟಿದ ಮುಖ ಎಂದರೆ ಪರಿಹಾರ ಏನೆಂದು ಕೇಳುವವರೇ ಹೆಚ್ಚು. ಮುಖದಸೌಂದರ್ಯ ಹೆಚ್ಚಿಸಲು ಸಾಕಷ್ಟು ಕ್ರೀಮ್​ಗಳು, ವೈದ್ಯಕೀಯ ಚಿಕಿತ್ಸೆಗಳಿವೆ. ಆದರೆ ಅದಕ್ಕಾಗಿ ಸಾವಿರಾರು ರೂಪಾಯಿಗಳ ಹಣವನ್ನು ಸುರಿಯಬೇಕು. ಮುಖದ ಸೌಂದರ್ಯ ಹೆಚ್ಚಿಸಿಕೊಳ್ಳಲು ಬೇಕಾದಷ್ಟು ಮನೆಮದ್ದುಗಳಿವೆ. ಅದಕ್ಕಿಂತ ಮುಖ್ಯವಾಗಿ ಹಲವಯು ವ್ಯಾಯಾಮಗಳು ಮುಖವನ್ನು ಅಂದಗೊಳಿಸುತ್ತವೆ. ಸುಕ್ಕುಗಟ್ಟಿದ, ನೆರಿಗೆಯಾದ ಚರ್ಮವನ್ನು ಬಿಗಿಗೊಳಿಸಿ ಕಾಂತಿಯನ್ನು ಹೆಚ್ಚಿಸುತ್ತದೆ. ಮುಖದ ವ್ಯಾಯಾಮ ಮಾಡುವುದರಿಂದ ಮುಖದಲ್ಲಿನ ನರಗಳಲ್ಲಿ ರಕ್ತಸಂಚಾರ ಹೆಚ್ಚಾಗಿ ಆರೋಗ್ಯಕರ ಜೀವಕೋಶಗಳು ಉತ್ಪತ್ತಿಯಾಗುತ್ತವೆ. ಆದ್ದರಿಂದ ಪುರಾತನ ಕಾಲದಿಂದಲೂ ಮುಖದ ವ್ಯಾಯಾಮ ಪದ್ಧತಿ ಜಾರಿಯಲ್ಲಿದೆ. ಹಾಗಾದರೆ ಯಾವೆಲ್ಲಾ ರೀತಿಯ ವ್ಯಾಯಾಮಗಳು ಮುಖದ ಸೌಂದರ್ಯ ವೃದ್ಧಿ ಮಾಡುತ್ತವೆ ಎನ್ನು ಮಾಹಿತಿ ಇಲ್ಲಿದೆ ನೋಡಿ:

ಮುಖದ ಯೋಗವು ನೈಸರ್ಗಿಕ ಪ್ರಕ್ರಿಯೆಯಾಗಿದ್ದು, ಇದು ಟಾಕ್ಸಿನ್ ಮಟ್ಟವನ್ನು ಮತ್ತು ರಾಸಾಯನಿಕ ಮಾನ್ಯತೆ ಕಡಿಮೆ ಮಾಡುತ್ತದೆ ಮತ್ತು ಚರ್ಮದ ಆರೋಗ್ಯವನ್ನು ಸುಧಾರಿಸಲು ಕಾಲಜನ್ ಉತ್ಪಾದನೆಯನ್ನು ಹೆಚ್ಚಿಸುತ್ತದೆ. ಇದು ದುಗ್ಧರಸ ವ್ಯವಸ್ಥೆಯನ್ನು ಉತ್ತೇಜಿಸುವಾಗ ಮುಖದ ಸ್ನಾಯುಗಳು ಮತ್ತು ಚರ್ಮವನ್ನು ವಿಸ್ತರಿಸುವುದು ಮತ್ತು ಮಸಾಜ್ ಮಾಡುವುದು ಒಳಗೊಂಡಿರುತ್ತದೆ. ಇದಲ್ಲದೆ, ಮುಖದ ಯೋಗವು ಉರಿಯೂತವನ್ನು ಎದುರಿಸಲು ಉತ್ತಮ ಮಾರ್ಗವಾಗಿದೆ.

ಹಣೆಯ ಮೇಲಿನ ವ್ಯಾಯಾಮ: ಕಣ್ಣಿನ ಕೆಳಗಡೆ ನೆರಿಗೆಗಳು ಕಾಣಿಸಿಕೊಳ್ಳುತ್ತವೆ. ಇದನ್ನು ತಡೆಯಲು ಹಣೆಯ ಮೇಲೆ ಕೈಗಳ ಎರಡು ಬೆರಳುಗಳನ್ನು ಇರಿಸಿ ಎರಡು ಬೆರಳುಗಳನ್ನು ಹುಬ್ಬಿನ ಕೆಳಗಿಟ್ಟು ನಿಧಾನವಾಗಿ ಮಸಾಜ್​ ಮಾಡಿ. ಇದರಿಂದ ಹಣೆ ಮತ್ತು ಕಣ್ಣುಗಳ ಕೆಳಗಿನ ನೆರಿಗೆಗಳು ಕ್ರಮೇಣ ಕಡಿಮೆಯಾಗುತ್ತವೆ.

ಕೆನ್ನೆಯ ಸೌಂದರ್ಯ: ಅಂದವಾದ ಕೆನ್ನೆಯನ್ನು ಪಡೆಯುವುದು ಎಲ್ಲರ ಆಸೆ. ಅದಕ್ಕಾಗಿ ತೋರು ಬೆರಳು ಮಧ್ಯ ಬೆರಳನ್ನು ಬಳಸಿ ನಿಧಾನವಾಗಿ ಮಸಾಜ್​ ಮಾಡಿರಿ. ಸುಕ್ಕುಗಟ್ಟಿದ ಚರ್ಮ ಬಿಗಿಯಾಗಿ ಕೆನ್ನೆ ಅಂದವಾಗಿ ಕಾಣುತ್ತದೆ.

ಹುಬ್ಬು: ಚೂಪಾದ ಮತ್ತು ಅಂದವಾದ ಹುಬ್ಬುಗಳಿಗಾಗಿ, ಮೂಗಿನ ಎರಡೂ ಬದಿಗಳಲ್ಲಿ ತೋರು ಬೆರಳನ್ನು ಇಟ್ಟು ಮಸಾಜ್ ಮಾಡಿ. ಹುಬ್ಬು ರೇಖೆಯ ಉದ್ದಕ್ಕೂ ಇನ್ನೊಂದು ಬೆರಳಿನಿಂದ ನಿಧಾನವಾಗಿ ಎಳೆಯಿರಿ.

ಕುತ್ತಿಗೆ: ನಿಮ್ಮ ತಲೆಯನ್ನು 45 ಡಿಗ್ರಿ ಕೋನದಲ್ಲಿ ತಿರುಗಿಸಿ.  ನಾಲ್ಕು ದಿಕ್ಕಿನಲ್ಲಿಯೂ ಕುತ್ತಿಗೆಯ ಚಲನೆಯಿರಲಿ. ಪ್ರತಿದಿನ ಕನಿಷ್ಟ 5 ನಿಮಿಷವಾದರೂ ಈ ವ್ಯಾಯಾಮ ಮಾಡಿ. ಇದರಿಂದ ಕುತ್ತಿಗೆ ನೋವು ಕೂಡ ಕಡಿಮೆಯಾಗುತ್ತದೆ. ಕುತ್ತಿಗೆಯಲ್ಲಿನ ಬೊಜ್ಜು ಕೂಡ ಕಾಲಕ್ರಮೇಣ ಕಡಿಮೆಯಾಗುತ್ತದೆ.

ಮುಖದ ವ್ಯಾಯಾಮದಿಂದಾಗುವ ಪ್ರಯೋಜನಗಳು

  1. ಮುಖದ ಸ್ನಾಯುಗಳನ್ನು ಬಲಪಡಿಸುತ್ತದೆ
  2. ಒತ್ತಡವನ್ನುಕಡಿಮೆ ಮಾಡುತ್ತದೆ
  3. ಮಾನಸಿಕ ಆರೋಗ್ಯವನ್ನು ಸುಧಾರಿಸುತ್ತದೆ
  4. ಚರ್ಮವನ್ನು ಬಿಗಿಗೊಳಿಸುತ್ತದೆ
  5. ಮೂಗಿನಲ್ಲಿ ಉಸಿರಾಟವನ್ನು ಆರಾಮವಾಗಿಸುತ್ತದೆ

(ಇಲ್ಲಿರುವ ಸಲಹೆಗಳು ಟಿವಿ9 ಡಿಜಿಟಲ್​ನ ಅಭಿಪ್ರಾಯವಾಗಿರುವುದಿಲ್ಲ. ವ್ಯಾಯಾಮಕ್ಕೂ ಮೊದಲು ತಜ್ಞರ ಸಲಹೆ ಪಡೆದುಕೊಳ್ಳಿ)

ಇದನ್ನೂ ಓದಿ:

Health Tips: ಬೇಸಿಗೆಯಲ್ಲಿ ಆರೋಗ್ಯವಾಗಿರಲು ಏನು ಮಾಡಬೇಕು? ಇಲ್ಲಿದೆ ತಜ್ಞರ ಸಲಹೆ

ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ