Eating Healthy Day: ರಾಷ್ಟ್ರೀಯ ಆಹಾರ ದಿನವನ್ನು ಈ ರೀತಿ ಆಚರಿಸಿ ಆರೋಗ್ಯ ಕಾಪಾಡಿಕೊಳ್ಳಿ

| Updated By: ಅಕ್ಷಯ್​ ಪಲ್ಲಮಜಲು​​

Updated on: Nov 06, 2024 | 9:41 AM

ರಾಷ್ಟ್ರೀಯ ಆರೋಗ್ಯಕರ ಆಹಾರ ದಿನವನ್ನು ಪ್ರತಿವರ್ಷ ನವೆಂಬರ್ ಮೊದಲ ಬುಧವಾರ ಆಚರಿಸಲಾಗುತ್ತದೆ. ಅಂದರೆ ಈ ಬಾರಿ ನ. 6 ರಂದು ಆಚರಣೆ ಮಾಡಲಾಗುತ್ತದೆ. ಈ ದಿನದ ಉದ್ದೇಶ ಆರೋಗ್ಯಕರ ಆಹಾರದ ಪ್ರಾಮುಖ್ಯತೆಯ ಬಗ್ಗೆ ಮತ್ತು ಪೌಷ್ಟಿಕ ಆಹಾರ ಸೇವನೆ ಮಾಡುವುದರಿಂದ ಸಿಗುವ ಪ್ರಯೋಜನಗಳ ಕುರಿತು ಅರಿವು ಮೂಡಿಸುವುದಾಗಿದೆ. ಈ ದಿನ ತರಕಾರಿ, ಹಣ್ಣು, ಧಾನ್ಯ ಮತ್ತು ಪ್ರೋಟೀನ್ ಭರಿತ ಆಹಾರಗಳನ್ನು ಸೇವನೆ ಮಾಡುವುದರ ಮೂಲಕ ಸಕ್ಕರೆ ಪಾನೀಯಗಳು, ಅತಿಯಾಗಿ ಉಪ್ಪು ಹಾಕಿದ ಪ್ಯಾಕ್ ಮಾಡಿದ ಆಹಾರಗಳ ಸೇವನೆಯನ್ನು ಕಡಿಮೆ ಮಾಡಿ ಎಂದು ವೈದ್ಯರು ಸಲಹೆ ನೀಡುತ್ತಾರೆ.

Eating Healthy Day: ರಾಷ್ಟ್ರೀಯ ಆಹಾರ ದಿನವನ್ನು ಈ ರೀತಿ ಆಚರಿಸಿ ಆರೋಗ್ಯ ಕಾಪಾಡಿಕೊಳ್ಳಿ
ಸಾಂದರ್ಭಿಕ ಚಿತ್ರ
Follow us on

ರಾಷ್ಟ್ರೀಯ ಆರೋಗ್ಯಕರ ಆಹಾರ ದಿನವನ್ನು ಪ್ರತಿವರ್ಷ ನವೆಂಬರ್ ಮೊದಲ ಬುಧವಾರ ಆಚರಿಸಲಾಗುತ್ತದೆ. ಅಂದರೆ ಈ ಬಾರಿ ನ. 6 ರಂದು ಆಚರಣೆ ಮಾಡಲಾಗುತ್ತದೆ. ಈ ದಿನದ ಉದ್ದೇಶ ಆರೋಗ್ಯಕರ ಆಹಾರದ ಪ್ರಾಮುಖ್ಯತೆಯ ಬಗ್ಗೆ ಮತ್ತು ಪೌಷ್ಟಿಕ ಆಹಾರ ಸೇವನೆ ಮಾಡುವುದರಿಂದ ಸಿಗುವ ಪ್ರಯೋಜನಗಳ ಕುರಿತು ಅರಿವು ಮೂಡಿಸುವುದಾಗಿದೆ. ಈ ದಿನ ತರಕಾರಿ, ಹಣ್ಣು, ಧಾನ್ಯ ಮತ್ತು ಪ್ರೋಟೀನ್ ಭರಿತ ಆಹಾರಗಳನ್ನು ಸೇವನೆ ಮಾಡುವುದರ ಮೂಲಕ ಸಕ್ಕರೆ ಪಾನೀಯಗಳು, ಅತಿಯಾಗಿ ಉಪ್ಪು ಹಾಕಿದ ಪ್ಯಾಕ್ ಮಾಡಿದ ಆಹಾರಗಳ ಸೇವನೆಯನ್ನು ಕಡಿಮೆ ಮಾಡಿ ಎಂದು ವೈದ್ಯರು ಸಲಹೆ ನೀಡುತ್ತಾರೆ. ಅಲ್ಲದೆ ಪರಿಸರ, ಕೃಷಿ, ಪ್ರಾಣಿಗಳು ಮತ್ತು ಅದನ್ನು ಮನಸ್ಸಿನಲ್ಲಿಟ್ಟುಕೊಂಡು ಬೆಳೆಯುವ, ಕೊಯ್ಲು ಮಾಡುವ ಮತ್ತು ಅದನ್ನು ಉಣಬಡಿಸುವ ಜನರ ಬಗ್ಗೆ ಕಾಳಜಿ ವಹಿಸುವುದು ಈ ದಿನದ ಗುರಿಯಾಗಿದೆ. ಹಾಗಾದರೆ ರಾಷ್ಟ್ರೀಯ ಆಹಾರ ದಿನವನ್ನು ಆಚರಿಸುವುದು ಹೇಗೆ? ಇಲ್ಲಿದೆ ಮಾಹಿತಿ.

ರಾಷ್ಟ್ರೀಯ ಆಹಾರ ದಿನವನ್ನು ಹೇಗೆ ಆಚರಿಸುವುದು?

*ಆಹಾರದ ಪ್ಯಾಕೆಟ್ ಹಿಂದೆ ಇರುವ ಲೇಬಲ್ ಗಳನ್ನು ಓದಿ ಬಳಿಕ ಖರೀದಿಸಿ. ಏಕೆಂದರೆ ನೀವು ಪ್ರತಿದಿನ ತಿನ್ನುವ ಆಹಾರ ಎಲ್ಲಿಂದ ಬರುತ್ತದೆ, ಅದರಲ್ಲಿ

ಏನಿದೆ ಮತ್ತು ಯಾವ ಪದಾರ್ಥಗಳನ್ನು ಒಳಗೊಂಡಿರುತ್ತದೆ ಎಂಬುದನ್ನು ತಿಳಿದುಕೊಳ್ಳುವುದು ಬಹಳ ಮುಖ್ಯವಾಗಿದೆ.

*ನೀವು ಹಿಂದೆಂದೂ ತಿನ್ನದ ಆಹಾರವನ್ನು ತಿನ್ನಲು ಪ್ರಯತ್ನಿಸಿ. ಆದರೆ ಅದು ಆರೋಗ್ಯಕರವಾಗಿರಲಿ.

*ಅಡುಗೆಗೆ ಬಳಸುವುದಕ್ಕೆ ಅನುಕೂಲವಾಗುವಂತೆ ನಿಮ್ಮ ಮನೆಯಲ್ಲಿ ಅನೇಕ ರೀತಿಯ ಗಿಡಮೂಲಿಕೆಗಳನ್ನು ನೆಟ್ಟು ಬೆಳೆಸಿ.

*ನಿಮ್ಮ ತೋಟಕ್ಕೆ ಬಳಸಲು ಕಾಂಪೋಸ್ಟ್ ಗಳನ್ನು ಮನೆಯಲ್ಲಿ ತಯಾರು ಮಾಡಲು ಪ್ರಾರಂಭಿಸಿ.

*ನಿಮ್ಮ ನೆಚ್ಚಿನ ಆಹಾರ ಬೇಯಿಸಲು ಆರೋಗ್ಯಕರ ಮಾರ್ಗವನ್ನು ಕಂಡುಕೊಳ್ಳಿ.

*ನಿಮ್ಮ ನೆಚ್ಚಿನ ಕೆಲವು ಆರೋಗ್ಯಕರ ಆಹಾರಗಳನ್ನು ಆನಂದಿಸಿ ಜೊತೆಗೆ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಲು #NationalFoodDay ಬಳಸಿ.

ಇದನ್ನೂ ಓದಿ: ಪ್ರತಿದಿನ ಒಂದು ಚಮಚ ತೆಂಗಿನ ಎಣ್ಣೆ ಸೇವನೆ ಮಾಡಿದರೆ ಏನಾಗುತ್ತೆ ನೋಡಿ

ರಾಷ್ಟ್ರೀಯ ಆಹಾರ ದಿನದ ಇತಿಹಾಸ

ಸೆಂಟರ್ ಫಾರ್ ಸೈನ್ಸ್ ಇನ್ ದಿ ಪಬ್ಲಿಕ್ ಇಂಟರೆಸ್ಟ್ (ಸಿಎಸ್ಪಿಐ) ರಾಷ್ಟ್ರೀಯ ಆಹಾರ ದಿನವನ್ನು 2011 ರಲ್ಲಿ ಪ್ರಾರಂಭಿಸಿತು. ಆರೋಗ್ಯಕರ, ಆಹಾರ ಎಲ್ಲರಿಗೂ ಸಿಗಲಿ ಎನ್ನುವುದು ಈ ದಿನದ ಉದ್ದೇಶವಾಗಿದ್ದು, ಈ ಬಗ್ಗೆ ಪ್ರತಿಯೊಬ್ಬರಿಗೂ ತಿಳಿಯಲಿ ಎಂದು ಅಭಿಯಾನಗಳನ್ನು ನಡೆಸಲಾಗುತ್ತದೆ. ನವೆಂಬರ್ ತಿಂಗಳ ಪೂರ್ತಿ ಈ ದಿನದ ಬಗ್ಗೆ ಜಾಗೃತಿ ಮೂಡಿಸಲಾಗುತ್ತದೆ.

ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:40 am, Wed, 6 November 24