ಸ್ವಾತಿ ಮಳೆಯ ಔಷಧೀಯ ಗುಣಗಳು ತಿಳಿದರೆ ಆಶ್ಚರ್ಯ ಪಡುತ್ತೀರಿ

ಮಳೆಗಾಲದಲ್ಲಿ ಅಕ್ಟೋಬರ್ ಕೊನೆಯ ವಾರದಿಂದ ನವೆಂಬರ್ ಮೊದಲನೆಯ ವಾರದಲ್ಲಿ (ಅ. 26 ರಿಂದ ನ. 6) ಬರುವ ಮಳೆಯನ್ನು 'ಸ್ವಾತಿ ಮಳೆ' ಎಂದು ಕರೆಯಲಾಗುತ್ತದೆ. ಪ್ರತಿವರ್ಷ ಈ ಅವಧಿಯಲ್ಲಿ ಅಂದರೆ ಮಳೆಗಾಲದ ಕೊನೆಯಲ್ಲಿ ಬರುವ ಈ ಮಳೆ ಸರಿಯಾಗಿ ಬಂದರೆ ಬೇಸಗೆಯಲ್ಲಿ ನೀರಿನ ಬರ ಬರುವುದಿಲ್ಲ ಎಂಬ ನಂಬಿಕೆ ಇದೆ. ಅದರಲ್ಲಿಯೂ ನಮ್ಮ ಕರ್ನಾಟಕದ ಹಲವು ಭಾಗಗಳಲ್ಲಿ 'ಸ್ವಾತಿ ಮಳೆ' ಬರುವುದಕ್ಕೆ ಕಾಯುತ್ತಿರುತ್ತಾರೆ. ಇದರಲ್ಲಿ ಏನಿದೆ ಅಂತಹ ಮಹತ್ವ? ಯಾಕಾಗಿ ಶೇಖರಿಸಿ ಇಟ್ಟುಕೊಳ್ಳಬೇಕು ಎಂಬ ಅನುಮಾನ ಮೂಡಬಹುದು. ಈ ಮಳೆಯಲ್ಲಿ ಅನೇಕ ರೀತಿಯ ಔಷಧೀಯ ಗುಣವಿರುತ್ತದೆ ಎಂದು ಹೇಳಲಾಗುತ್ತದೆ. ಹಾಗಾದರೆ ಇದನ್ನು ಬಳಸುವುದು ಹೇಗೆ? ಇದರಿಂದ ಸಿಗುವ ಮತ್ತಷ್ಟು ಪ್ರಯೋಜನಗಳು ಇಲ್ಲಿದೆ.

ಸ್ವಾತಿ ಮಳೆಯ ಔಷಧೀಯ ಗುಣಗಳು ತಿಳಿದರೆ ಆಶ್ಚರ್ಯ ಪಡುತ್ತೀರಿ
ಸಾಂದರ್ಭಿಕ ಚಿತ್ರ
Follow us
| Updated By: ಅಕ್ಷಯ್​ ಪಲ್ಲಮಜಲು​​

Updated on: Nov 05, 2024 | 10:00 AM

ಮಳೆಗಾಲ ಬರುತ್ತದೆ ಹೋಗುತ್ತದೆ ಬಳಿಕ ಮತ್ತೊಂದು ಕಾಲ ಆರಂಭವಾಗುತ್ತದೆ. ಆದರೆ ಮಳೆಗಾಲದಲ್ಲಿ ಅಕ್ಟೋಬರ್ ಕೊನೆಯ ವಾರದಿಂದ ನವೆಂಬರ್ ಮೊದಲನೆಯ ವಾರದಲ್ಲಿ (ಅ. 26 ರಿಂದ ನ. 6) ಬರುವ ಮಳೆಯನ್ನು ‘ಸ್ವಾತಿ ಮಳೆ’ ಎಂದು ಕರೆಯಲಾಗುತ್ತದೆ. ಪ್ರತಿವರ್ಷ ಈ ಅವಧಿಯಲ್ಲಿ ಅಂದರೆ ಮಳೆಗಾಲದ ಕೊನೆಯಲ್ಲಿ ಬರುವ ಈ ಮಳೆ ಸರಿಯಾಗಿ ಬಂದರೆ ಬೇಸಗೆಯಲ್ಲಿ ನೀರಿನ ಬರ ಬರುವುದಿಲ್ಲ ಎಂಬ ನಂಬಿಕೆ ಇದೆ. ಅದರಲ್ಲಿಯೂ ನಮ್ಮ ಕರ್ನಾಟಕದ ಹಲವು ಭಾಗಗಳಲ್ಲಿ ‘ಸ್ವಾತಿ ಮಳೆ’ ಬರುವುದಕ್ಕೆ ಕಾಯುತ್ತಿರುತ್ತಾರೆ. ಇದರಲ್ಲಿ ಏನಿದೆ ಅಂತಹ ಮಹತ್ವ? ಯಾಕಾಗಿ ಶೇಖರಿಸಿ ಇಟ್ಟುಕೊಳ್ಳಬೇಕು ಎಂಬ ಅನುಮಾನ ಮೂಡಬಹುದು. ಈ ಮಳೆಯಲ್ಲಿ ಅನೇಕ ರೀತಿಯ ಔಷಧೀಯ ಗುಣವಿರುತ್ತದೆ ಎಂದು ಹೇಳಲಾಗುತ್ತದೆ. ಹಾಗಾದರೆ ಇದನ್ನು ಬಳಸುವುದು ಹೇಗೆ? ಇದರಿಂದ ಸಿಗುವ ಮತ್ತಷ್ಟು ಪ್ರಯೋಜನಗಳು ಇಲ್ಲಿದೆ.

ಹಾಲಿಗೆ ಹೆಪ್ಪು ಹಾಕುವ ಅಪರೂಪದ ಸಂಪ್ರದಾಯ;

ಸ್ವಾತಿ ಮಳೆಯ ಮಹತ್ವದ ಬಗ್ಗೆ ಅಜಯ್ ಕುಮಾರ್ ಶರ್ಮಾ ಎಂಬುವರು ತಮ್ಮ ಫೇಸ್ ಬುಕ್ ಖಾತೆಯಲ್ಲಿ ಕೆಲವು ವಿಚಾರಗಳನ್ನು ಹಂಚಿಕೊಂಡಿದ್ದು, ಅವರು ಹೇಳಿರುವ ಪ್ರಕಾರ, ಅನೇಕ ಔಷಧೀಯ ಗುಣವುಳ್ಳ ಸ್ವಾತಿ ಮಳೆಯನ್ನು ನೀರಿನ ಪಾತ್ರೆಯಲ್ಲಿ ಹಿಡಿದು ಬಳಿಕ ಗಾಜಿನ ಭರಣಿ, ಬಾಟಲಿಗಳಲ್ಲಿ ಸಂಗ್ರಹಿಸಿಟ್ಟು ಕೊಂಡರೆ ಅದನ್ನು ವರ್ಷದ ವರೆಗೂ ಬಳಸಲು ಯೋಗ್ಯವಾಗಿರುತ್ತದೆ. ಈ ಮಳೆಯ ನೀರನ್ನು ಸಂಗ್ರಹಿಸಿ ಅದರಿಂದ ಹಾಲಿಗೆ ಹೆಪ್ಪು ಹಾಕುವ ಅಪರೂಪದ ಸಂಪ್ರದಾಯವೊಂದು ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಇದರಿಂದಾಗಿ ಹಾಲು ಹೆಪ್ಪಾಗುವ ಜೈವಿಕ ಕ್ರಿಯೆ ವರ್ಷಕ್ಕೊಮ್ಮೆ ಹೊಸದಾಗಿ ಪ್ರಾರಂಭಗೊಂಡು ಗುಣಮಟ್ಟದ ಮೊಸರು ಲಭ್ಯವಾಗುತ್ತದೆ.

ಇದನ್ನೂ ಓದಿ: ಹೃದಯಾಘಾತದ ಲಕ್ಷಣಗಳನ್ನು 30 ದಿನಗಳ ಮುಂಚಿತವಾಗಿ ಪತ್ತೆಹಚ್ಚಬಹುದು

ಕಣ್ಣಿಗೆ ದಿವ್ಯೌಷಧ

ಸ್ವಾತಿ ಮಳೆಯ ನೀರನ್ನು ಶುದ್ಧವಾದ ಪಾತ್ರೆಯಲ್ಲಿ ನೇರವಾಗಿ ಹಿಡಿದು, ಸ್ವಚ್ಛವಾದ ಬಾಟಲಿಯಲ್ಲಿ ಸಂಗ್ರಹಿಸಿ ಇಟ್ಟುಕೊಳ್ಳಬೇಕು. ಈ ನೀರು ಒಂದು ರೀತಿಯಲ್ಲಿ ಐ’ಡ್ರಾಪ್ ಆಗಿ ಕಾರ್ಯ ನಿರ್ವಹಿಸುತ್ತದೆ. ಇದು ಕಣ್ಣು ಉರಿ, ಕಣ್ಣುಗಳು ಮಂಜಾಗುವುದು, ಟಿ ವಿ- ಮೊಬೈಲ್ ನೋಡಿ ಬರುವ ಕಣ್ಣು ನೋವಿಗೆ ಒಂದೆರಡು ಹನಿ ಬಿಟ್ಟು ಕೊಂಡರೆ ಬಹಳಷ್ಟು ಶಮನಕಾರಿಯಾಗಿದೆ. ಹಾಗಾಗಿ ಇದನ್ನು ಕಣ್ಣಿಗೆ ದಿವ್ಯೌಷಧ ಎನ್ನಬಹುದು. ಈ ಸ್ವಾತಿ ಮಳೆಯ ನೀರು ಕೆಡದಂತೆ ದೀರ್ಘ ಕಾಲ ಇಡಬಹುದು. ಆದರೆ ನೀರನ್ನು ನೇರವಾಗಿ ಶುದ್ಧವಾಗಿ ಸಂಗ್ರಹಿಸುವುದು ಮುಖ್ಯವಾಗುತ್ತದೆ.

ಇನ್ನೊಂದು ಪ್ರಚಲಿತ ಪದ್ಧತಿ ಎಂದರೆ ಸ್ವಾತಿ ನಕ್ಷತ್ರದ ಬಿಸಿಲಿಗೆ ಮನೆಯ ಹೆಣ್ಣುಮಕ್ಕಳು ತಮ್ಮ ರೇಷ್ಮೆ ಸೀರೆಯನ್ನು ಒಮ್ಮೆ ಬಿಸಿಲಿಗೆ ಹಾಕಿ ತೆಗೆಯುತ್ತಾರೆ. ಈ ಸ್ವಾತಿ ಬಿಸಿಲು ನಿಮ್ಮ ಸೀರೆಗಳು ಹುಳಹುಪ್ಟಟೆ ಹಿಡಿದು ಹಾಳಾಗುವುದನ್ನು ತಪ್ಪಿಸುತ್ತದೆ. ನೀವೂ ಸಹ ನವೆಂಬರ್ 6 ರ ಒಳಗೆ ಬೀಳುವ ಮಳೆಯನ್ನು ಹಿಡಿದು, ಸಂಗ್ರಹಿಸಿಟ್ಟುಕೊಂಡು ಇದರ ಉಪಯೋಗ ಪಡೆದುಕೊಳ್ಳಬಹುದು.

ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

‘ನಿಮ್ಮ ನಿಯತ್ತು ನೋಡಬೇಕಿತ್ತು’; ಹನುಮಂತ ವಿರುದ್ಧ ಸಿಡಿದೆದ್ದ ಚೈತ್ರಾ
‘ನಿಮ್ಮ ನಿಯತ್ತು ನೋಡಬೇಕಿತ್ತು’; ಹನುಮಂತ ವಿರುದ್ಧ ಸಿಡಿದೆದ್ದ ಚೈತ್ರಾ
ವಿಜಯಪುರ ಅಹೋರಾತ್ರಿ ಧರಣಿ; ಟೆಂಟ್​ನಲ್ಲೇ ರಾತ್ರಿ ಕಳೆದ ಯತ್ನಾಳ್, ಶೋಭಾ
ವಿಜಯಪುರ ಅಹೋರಾತ್ರಿ ಧರಣಿ; ಟೆಂಟ್​ನಲ್ಲೇ ರಾತ್ರಿ ಕಳೆದ ಯತ್ನಾಳ್, ಶೋಭಾ
Daily Devotional: ಗರ್ಭಪಾತ, ಗರ್ಭ ದೋಷಕ್ಕೆ ಪರಿಹಾರ ತಿಳಿಯಿರಿ
Daily Devotional: ಗರ್ಭಪಾತ, ಗರ್ಭ ದೋಷಕ್ಕೆ ಪರಿಹಾರ ತಿಳಿಯಿರಿ
Nithya Bhavishya: ಈ ರಾಶಿಯವರಿಗೆ ಇಂದು ಆರು ಗ್ರಹಗಳ ಶುಭ ಫಲವಿದೆ
Nithya Bhavishya: ಈ ರಾಶಿಯವರಿಗೆ ಇಂದು ಆರು ಗ್ರಹಗಳ ಶುಭ ಫಲವಿದೆ
ಗುರುಪ್ರಸಾದ್ ಕಾಲ್ ರಿಸೀವ್ ಮಾಡದೇ ಇದ್ರೂ ಯಾರಿಗೂ ಅನುಮಾನ ಬಂದಿಲ್ಲವೇಕೆ?
ಗುರುಪ್ರಸಾದ್ ಕಾಲ್ ರಿಸೀವ್ ಮಾಡದೇ ಇದ್ರೂ ಯಾರಿಗೂ ಅನುಮಾನ ಬಂದಿಲ್ಲವೇಕೆ?
ಅಡುಗೆ ವಿಚಾರಕ್ಕೆ ಜಗಳ; ಜೊತೆಗಿದ್ದವನನ್ನು ರೂಂನಲ್ಲೇ ಹೊಡೆದು ಕೊಂದ ಯುವಕ
ಅಡುಗೆ ವಿಚಾರಕ್ಕೆ ಜಗಳ; ಜೊತೆಗಿದ್ದವನನ್ನು ರೂಂನಲ್ಲೇ ಹೊಡೆದು ಕೊಂದ ಯುವಕ
ಡ್ರಮ್​ನಲ್ಲಿ ರಾಕೆಟ್ ಇಟ್ಟು ಪಟಾಕಿ ಸಿಡಿಸಿದ ಐಐಟಿ ವಿದ್ಯಾರ್ಥಿಗಳು
ಡ್ರಮ್​ನಲ್ಲಿ ರಾಕೆಟ್ ಇಟ್ಟು ಪಟಾಕಿ ಸಿಡಿಸಿದ ಐಐಟಿ ವಿದ್ಯಾರ್ಥಿಗಳು
ವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದು ಪಟಾಕಿ ಹೊಡೆಯುತ್ತಿದ್ದ ವ್ಯಕ್ತಿ ಸಾವು
ವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದು ಪಟಾಕಿ ಹೊಡೆಯುತ್ತಿದ್ದ ವ್ಯಕ್ತಿ ಸಾವು
ಚುನಾವಣೆಗೆ ಸಜ್ಜಾದ ಜಾರ್ಖಂಡ್​ನಲ್ಲಿ ಪ್ರಧಾನಿ ಮೋದಿ ಮೊದಲ ರ್ಯಾಲಿ
ಚುನಾವಣೆಗೆ ಸಜ್ಜಾದ ಜಾರ್ಖಂಡ್​ನಲ್ಲಿ ಪ್ರಧಾನಿ ಮೋದಿ ಮೊದಲ ರ್ಯಾಲಿ
ಲೋಕಾಯುಕ್ತ ನೋಟೀಸ್​​ನಿಂದ ಸಿಎಂ ಸಿದ್ದರಾಮಯ್ಯ ವಿಚಲಿತರಾದಂತೆ ಕಾಣುತ್ತಿದೆ!
ಲೋಕಾಯುಕ್ತ ನೋಟೀಸ್​​ನಿಂದ ಸಿಎಂ ಸಿದ್ದರಾಮಯ್ಯ ವಿಚಲಿತರಾದಂತೆ ಕಾಣುತ್ತಿದೆ!