ಕೆಪಿಸಿಸಿ ಸರ್ವ ಸದಸ್ಯರ ಸಭೆಯಲ್ಲಿ ಸಿದ್ದರಾಮಯ್ಯ ತ್ಯಾಗ ಬಲಿದಾನಗಳ ಮಾತಾಡಿ ಆಶ್ಚರ್ಯ ಹುಟ್ಟಿಸಿದರು!

ಕೆಪಿಸಿಸಿ ಸರ್ವ ಸದಸ್ಯರ ಸಭೆಯಲ್ಲಿ ಸಿದ್ದರಾಮಯ್ಯ ತ್ಯಾಗ ಬಲಿದಾನಗಳ ಮಾತಾಡಿ ಆಶ್ಚರ್ಯ ಹುಟ್ಟಿಸಿದರು!

ಅರುಣ್​ ಕುಮಾರ್​ ಬೆಳ್ಳಿ
|

Updated on: Jan 13, 2025 | 7:44 PM

ಕಾಂಗ್ರೆಸ್ ಪಕ್ಷದಿಂದ ಮಾತ್ರ ಸಮಾಜದಲ್ಲಿ ಪರಿವರ್ತನೆ ತರಲು ಸಾಧ್ಯ, ಬಿಜೆಪಿ ಯಥಾಸ್ಥಿತಿಯನ್ನು ಕಾಯ್ದುಕೊಳ್ಳುವೆಡೆ ಯೋಚನೆ ಮಾಡುತ್ತದೆ, ಜೆಡಿಎಸ್ ಪಕ್ಷಕ್ಕೆ ಯಾವುದೇ ಸಿದ್ಧಾಂತವಿಲ್ಲ, ಯಾರ ಜೊತೆ ಬೇಕಾದರೂ ಅದು ಕೈ ಜೋಡಿಸುತ್ತದೆ ಎಂದು ಸಿದ್ದರಾಮಯ್ಯ ಹೇಳಿದರು. ಈಗ ನಡೆಯುತ್ತಿರುವ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಯಾವುದಾದರೂ ಮಹತ್ವದ ನಿರ್ಣಯ ಹೊರಬೀಳಲಿದೆಯೇ? ಸಿಎಂ ಮಾತುಗಳಿಂದ ಹಾಗನ್ನಿಸಿದ್ದು ಸುಳ್ಳಲ್ಲ!

ಬೆಂಗಳೂರು: ಕೆಪಿಸಿಸಿ ಸರ್ವಸದಸ್ಯರ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆಡಿದ ಮಾತುಗಳಲ್ಲಿ ವೈರಾಗ್ಯದ ಛಾಯೆ ಕಂಡಿತು ಎಂದರೆ ಉತ್ಪ್ರೇಕ್ಷೆ ಅನಿಸದು. ಅಧಿಕಾರ ಹಂಚಿಕೆ ವಿಷಯದಲ್ಲಿ ಬಿಸಿ ಬಿಸಿ ಚರ್ಚೆಗಳಾಗುತ್ತಿರುವ ಸಮಯದಲ್ಲೇ ಸಿದ್ದರಾಮಯ್ಯ ತ್ಯಾಗ ಬಲಿದಾನಗಳ ಬಗ್ಗೆ ಮಾತಾಡಿದ್ದು ಕನ್ನಡಿಗರಲ್ಲಿ ಆಶ್ಚರ್ಯ ಹುಟ್ಟಿಸಿದೆ. ದೇಶದ ಸ್ವಾತಂತ್ರ್ಯಕ್ಕಾಗಿ ಮಹಾತ್ಮಾ ಗಾಂಧಿ ನೇತೃತ್ವದಲ್ಲಿ ಅನೇಕ ಕಾಂಗ್ರೆಸ್ಸಿಗರು ತ್ಯಾಗ ಬಲಿದಾನಗಳನ್ನು ಮಾಡಿದರು, ನಮ್ಮಲ್ಲೂ ಕೂಡ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಬಲಿದಾನಗಳನ್ನು ಮಾಡಿದ್ದಾರೆ, ಹಾಗಾಗಿ ನಾವು ಅದೇ ದಾರಿಯಲ್ಲಿ ಮುನ್ನಡೆದು ತ್ಯಾಗ ಬಲಿದಾನ ಮಾಡುವ ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದು ಸಿದ್ದರಾಮಯ್ಯ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಮಂತ್ರಿಗಳ ಕಾರ್ಯವೈಖರಿ ಕುರಿತು ರಂದೀಪ್ ಸುರ್ಜೆವಾಲಾಗೆ ವರದಿ ಸಲ್ಲಿಸಿದ ಸಿದ್ದರಾಮಯ್ಯ ಮತ್ತು ಶಿವಕುಮಾರ್