ವಕೀಲ ಜಗದೀಶ್ ಸ್ವಭಾವತಃ ಜಗಳಗಂಟನಾದರೂ ಹೃದಯದಿಂದ ಬಹಳ ಒಳ್ಳೆಯವರು: ಚೈತ್ರಾ ಕುಂದಾಪುರ

ವಕೀಲ ಜಗದೀಶ್ ಸ್ವಭಾವತಃ ಜಗಳಗಂಟನಾದರೂ ಹೃದಯದಿಂದ ಬಹಳ ಒಳ್ಳೆಯವರು: ಚೈತ್ರಾ ಕುಂದಾಪುರ

ಅರುಣ್​ ಕುಮಾರ್​ ಬೆಳ್ಳಿ
|

Updated on: Jan 13, 2025 | 6:42 PM

ಬಿಗ್ ಬಾಸ್ ಸೀಸನ್ ಗೆ ಹಣಮಂತು ಮತ್ತು ರಜತ್ ಅವರ ಪ್ರವೇಶ ತಮ್ಮ ಅವಕಾಶಗಳ ಮೇಲೆ ಪರಿಣಾಮ ಬೀರಲಿಲ್ಲ ಎಂದು ಹೇಳಿದ ಚೈತ್ರಾ, ಜಗದೀಶ್ ಮತ್ತು ರಂಜಿತ್ ಇದ್ದಿದ್ರೂ ಅವರು ಟಾಪ್ 5 ನಲ್ಲಿರುತ್ತಿದ್ದರು, ರಂಜಿತ್ ಅಣ್ಣ ಒಬ್ಬ ಅತ್ಯುತ್ತಮ ಲೀಡರ್ ಆಗಿದ್ದರು, ಮತ್ತು ಜಗದೀಶ್ ಸರ್ ಕಂಟೆಂಟ್ ಕಿಂಗ್ ಅನಿಸಿಕೊಂಡಿದ್ದರು, ಇವರಿಬ್ಬರಿಗೆ ಹಣಮಂತು ಮತ್ತು ರಜತ್ ಅತ್ಯಂತ ಸೂಕ್ತ ರಿಪ್ಲೇಸ್ಮೆಂಟ್ ಆಗಿದ್ದಾರೆ ಎಂದರು.

ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ 11 ರಿಂದ ಎಲಿಮಿನೇಟ್ ಆಗಿರುವ ಚೈತ್ರಾ ಕುಂದಾಪುರ ಟಿವಿ9 ಕನ್ನಡ ಪ್ರತಿನಿಧಿಗೆ ನೀಡಿರುವ ಮುಕ್ತ ಸಂದರ್ಶನದಲ್ಲಿ ಅನೇಕ ವಿಷಯಗಳ ಮೇಲೆ ಮಾತಾಡಿದ್ದಾರೆ. ಸೀಸನ್ ಆರಂಭದಲ್ಲೇ ಜಗಳವಾಡಿ ಹೊರಬಿದ್ದ ವಕೀಲ ಜಗದೀಶ್ ಮತ್ತು ರಂಜಿತ್ ಬಗ್ಗೆಯೂ ಮಾತಾಡಿರುವ ಚೈತ್ರಾ, ಜಗದೀಶ್ ಸರ್ ಕೆಟ್ಟವರಲ್ಲ, ಹೃದಯದಿಂದ ತುಂಬಾನೇ ಒಳ್ಳೆಯವರು, ಆದರೆ ಮಾತಾಡುವಾಗ ಅಂಕೆ ತಪ್ಪುತ್ತಿದ್ದರು, ಅವರೊಂದಿಗೆ ಉತ್ತಮ ಬಾಂಡಿಂಗ್ ಹೊಂದಿದ್ದೆ, ತನ್ನೊಂದಿಗೂ ಕಾಲು ಕೆರೆದುಕೊಂಡು ಜಗಳಕ್ಕೆ ಬರುತ್ತಿದ್ದರು, ಅದರೆ ಅವರ ಸ್ವಭಾವ ಚೆನ್ನಾಗಿ ಅರ್ಥಮಾಡಿಕೊಂಡಿದ್ದರಿಂದ ಅಂಥ ಸಂದರ್ಭಗಳನ್ನು ಅವಾಯ್ಡ್ ಮಾಡುತ್ತಿದ್ದೆ, ಆದರೆ ಅಂತಿಮವಾಗಿ ಅವರು ತನ್ನಿಂದಾಗೇ ಹೊರಬೀಳುವಂತಾಗಿದ್ದು ದುರದೃಷ್ಟಕರ ಎಂದು ಚೈತ್ರಾ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: ‘ಬಿಗ್ ಬಾಸ್ ಕನ್ನಡ ಸೀಸನ್ 11’ ಕಪ್ ಗೆಲ್ಲುವ ಭರವಸೆಯಲ್ಲಿ ರಜತ್