Bengaluru Traffic: ವಿಶ್ವಮಟ್ಟದಲ್ಲೂ ಸದ್ದು ಮಾಡಿದ ಬೆಂಗಳೂರು ಟ್ರಾಫಿಕ್..!

ಸಿಲಿಕಾನ್‌ ಸಿಟಿ ಬೆಂಗಳೂರಿನ ಟ್ರಾಫಿಕ್ ಸಮಸ್ಯೆ ದೇಶದಲ್ಲಿ ಮಾತ್ರವಲ್ಲ, ಇದೀಗ ವಿಶ್ವಮಟ್ಟದಲ್ಲೂ ಸುದ್ದಿಯಾಗುತ್ತಿದೆ. ಬೆಂಗಳೂರು ಟ್ರಾಫಿಕ್‌ ಜಾಮ್‌ ಸಮಸ್ಯೆಯ ಬಗ್ಗೆ ಹೊಸದಾಗಿ ವಿವರಿಸಿ ಹೇಳುವ ಅವಶ್ಯಕತೆ ಇಲ್ಲ. ಬೆಂಗಳೂರಲ್ಲಿ ವರ್ಷದಿಂದ ವರ್ಷಕ್ಕೆ ಟ್ರಾಫಿಕ್‌ ಜಾಮ್‌ ಜಾಸ್ತಿ ಆಗುತ್ತಲ್ಲೇ ಇದ್ದು, ಇದೀಗ ಬೆಂಗಳೂರು ಟ್ರಾಫಿಕ್‌ ಜಾಮ್‌ ವಿಚಾರದಲ್ಲಿ ಮತ್ತೊಂದು ಕುಖ್ಯಾತಿಯನ್ನು ಗಳಿಸಿದೆ.

Bengaluru Traffic: ವಿಶ್ವಮಟ್ಟದಲ್ಲೂ ಸದ್ದು ಮಾಡಿದ ಬೆಂಗಳೂರು ಟ್ರಾಫಿಕ್..!
ಬೆಂಗಳೂರು ಟ್ರಾಫಿಕ್ (ಸಾಂದರ್ಭಿಕ ಚಿತ್ರ)
Follow us
ರಮೇಶ್ ಬಿ. ಜವಳಗೇರಾ
|

Updated on:Jan 13, 2025 | 7:28 PM

ಬೆಂಗಳೂರು, (ಜನವರಿ 13): ಸದಾ ವಾಹನ ದಟ್ಟಣೆ, ಟ್ರಾಫಿಕ್ ಜಂಜಾಟದ ಮೂಲಕ ಸಿಟಿ ಜನರನ್ನ ಕಂಗಾಲಾಗಿಸಿದ್ದ ಬೆಂಗಳೂರಿನ ಟ್ರಾಫಿಕ್ ಜಾಮ್ ಭೂತ ಇದೀಗ ವಿಶ್ವಮಟ್ಟದಲ್ಲೂ ಸದ್ದು ಮಾಡುತ್ತಿದೆ. ನೆದರ್ ಲ್ಯಾಂಡ್ ನ ಲೋಕೆಷನ್ ಟೆಕ್ನಾಲಜಿ ಸಂಸ್ಥೆ ಟಾಮ್ ಟಾಮ್ ಬಿಡುಗಡೆ ಮಾಡಿರೋ ವಿಶ್ವದ ಅತಿಹೆಚ್ಚು ಸ್ಲೋ ಮೂವಿಂಗ್ ಟ್ರಾಫಿಕ್ ಹೊಂದಿರುವ ನಗರಗಳ ಪಟ್ಟಿಯಲ್ಲಿ ಸಿಲಿಕಾನ್ ಸಿಟಿ ಬೆಂಗಳೂರಿಗೆ ಮೂರನೇ ಸ್ಥಾನ ಸಿಕ್ಕಿದೆ. ಈ ಮೂಲಕ ಬೆಂಗಳೂರಿನ ಟ್ರಾಫಿಕ್ ಸಮಸ್ಯೆಯನ್ನ ವಿಶ್ವಮಟ್ಟದಲ್ಲಿ ಅನಾವರಣ ಮಾಡಿದೆ.

ಸದ್ಯ ವಿಶ್ವದ ಪ್ರಮುಖ ನಗರಗಳ ಟ್ರಾಫಿಕ್ ದಟ್ಟಣೆ ಬಗ್ಗೆ ಅಧ್ಯಯನ ನಡೆಸಿದ್ದ ಟಾಮ್ ಟಾಮ್ ಸಂಸ್ಥೆ, ಭಾರತದ ಮೂರು ನಗರಗಳಲ್ಲಿ ಅತಿಹೆಚ್ಚು ಟ್ರಾಫಿಕ್ ಇರುವುದಾಗಿ ವರದಿ ರಿಲೀಸ್ ಮಾಡಿದೆ. ಟಾಮ್ ಟಾಮ್ ವರದಿಯಲ್ಲಿ ಕಲ್ಕತ್ತಾ, ಪುಣೆ ಹಾಗೂ ಬೆಂಗಳೂರು ಅತಿಹೆಚ್ಚು ಸಂಚಾರ ದಟ್ಟಣೆ ಹೊಂದಿರುವುದಾಗಿ ವರದಿಯಿಂದ ತಿಳಿದುಬಂದಿದೆ. ಇತ್ತ ರಾಜಧಾನಿಯಲ್ಲಿ ಕಳೆದ ವರ್ಷಕ್ಕಿಂತ ಈ ಬಾರೀ ವಾಹನ ದಟ್ಟಣೆ ಮತ್ತಷ್ಟು ಹೆಚ್ಚಾಗಿರುವ ವರದಿ ಬಹಿರಂಗವಾಗಿದ್ದು, ಬೆಂಗಳೂರಿನಲ್ಲಿ 10 ಕಿಲೋಮೀಟರ್ ದೂರ ತಲುಪೋಕೆ 34 ನಿಮಿಷ 10 ಸೆಕೆಂಡ್ ಸಮಯ ಬೇಕಿದೆ ಎಂದು ವರದಿ ತಿಳಿಸಿದೆ. ಅಲ್ಲದೇ ರಾಜಧಾನಿಯ ಜನರು ವರ್ಷದಲ್ಲಿ ಐದು ದಿನಗಳಷ್ಟು ಸಮಯವನ್ನ ಟ್ರಾಫಿಕ್ ನಲ್ಲೇ ಕಳೆಯುತ್ತಿರುವುದು ವರದಿ ಹೇಳಿದೆ.

ಇದನ್ನೂ ಓದಿ: ಕೆಟ್ಟು ನಿಂತ ವಾಹನ, ರಸ್ತೆ ದುರಸ್ತಿ: ಬೆಂಗಳೂರಿನ ಈ ರಸ್ತೆಗಳಲ್ಲಿ ಸಂಚಾರ ಅಸ್ತವ್ಯಸ್ತ

ಇನ್ನು ಟಾಮ್ ಟಾಮ್ ಸಂಸ್ಥೆಯ ವರದಿ ಹೊರಬೀಳುತ್ತಿದ್ದಂತೆಯೇ ಬಿಜೆಪಿ ನಾಯಕರು ರಾಜ್ಯ ರಾಜಧಾನಿಯ ಟ್ರಾಫಿಕ್ ಕಂಟ್ರೋಲ್ ಮಾಡುವುದಕ್ಕೆ ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ಚಾಟಿ ಬೀಸಿದ್ದಾರೆ. ರಾಜ್ಯ ಸರ್ಕಾರದ ವೈಫಲ್ಯತೆ ಬಗ್ಗೆ ಟೀಕಿಸಿರೋ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ಬೆಂಗಳೂರು ಅಂದ್ರೆ ಉದ್ಯಾನ ನಗರಿ ಅನ್ನೋ ಘನತೆ ಇತ್ತು, ಆದ್ರೆ, ಈಗ ವಾಹನ ದಟ್ಟಣೆಗೆ ಸಿಲುಕಿ ನರಳೋ ನಗರವಾಗಿದೆ ಎಂದು ಟ್ವೀಟ್ ಮೂಲಕ ಕಿಡಿಕಾರಿದ್ದಾರೆ.

ಇತ್ತ ಬಿಜೆಪಿಯ ಅಧಿಕೃತ ಎಕ್ಸ್ ಖಾತೆಯಲ್ಲೂ ಟ್ರಾಫಿಕ್ ಕಿರಿಕಿರಿ ನಿರ್ವಹಣೆಯಲ್ಲಿ ಎಡವಿದ ಸರ್ಕಾರದ ನಡೆಗೆ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಬ್ರ್ಯಾಂಡ್ ಬ್ರ್ಯಾಂಡ್ ಎನ್ನುತ್ತಲೇ ರಾಜಧಾನಿಯನ್ನ ಬ್ಯಾಡ್ ಮಾಡಿದ್ದು ಈ ಸರ್ಕಾರದ ಸಾಧನೆ ಎಂದು ಕಾಂಗ್ರೆಸ್ ವಿರುದ್ಧ ಬಿಜೆಪಿ ಬಾಣಬಿಟ್ಟಿದೆ. ಇತ್ತ ರಾಜಧಾನಿಯ ಟ್ರಾಫಿಕ್ ಸಮಸ್ಯೆ ಬಗ್ಗೆ ಸಿಟಿಜನರು ಕೂಡ ಅಭಿಪ್ರಾಯ ವ್ಯಕ್ತಪಡಿಸೋ ಜೊತೆಗೆ ಸಾರ್ವಜನಿಕ ಸಾರಿಗೆಯನ್ನ ಉತ್ತೇಜಿಸೋ ಕೆಲಸವಾಗಬೇಕು ಅಂತಿದ್ದಾರೆ

ಸದ್ಯ ಬೆಂಗಳೂರಿನಲ್ಲಿ ನಡೆಯುತ್ತಿರೋ ಅವೈಜ್ಞಾನಿಕ ಕಾಮಗಾರಿಗಳು, ರಸ್ತೆಗಳ ದುಸ್ಥಿತಿ ಜೊತೆಗೆ ದಿನೇ ದಿನೇ ಹೆಚ್ಚಳವಾಗುತ್ತಿರುವ ವಾಹನಗಳ ಸಂಖ್ಯೆಯಿಂದ ರಾಜಧಾನಿಯಲ್ಲಿ ಟ್ರಾಫಿಕ್ ಸಮಸ್ಯೆ ಸಹ ದಿನೇ ದಿನೇ ಹೆಚ್ಚಾಗುತ್ತಿದೆ. ಹೀಗಾಗಿ ಸಿಲಿಕಾನ್ ಸಿಟಿಯ ಟ್ರಾಫಿಕ್ ಸಮಸ್ಯೆ ಇದೀಗ ವಿಶ್ವಮಟ್ಟದಲ್ಲಿ ಕುಖ್ಯಾತಿ ಪಡೆಯುವಂತೆ ಮಾಡಿದೆ. ಸದ್ಯ ಬೆಂಗಳೂರನ್ನ ಬ್ರ್ಯಾಂಡ್ ಮಾಡುತ್ತೇವೆ ಎಂದಿರುವ ಸರ್ಕಾರ, ರಾಜಧಾನಿಯ ಟ್ರಾಫಿಕ್ ಕಿರಿಕಿರಿಗೆ ಲಗಾಮು ಹಾಕೋ ಕ್ರಮಗಳನ್ನ ಜಾರಿಗೊಳಿಸುತ್ತಾ ಎನ್ನುವುದನ್ನು ಕಾದುನೋಡಬೇಕಿದೆ.

ವರದಿ: ಶಾಂತಮೂರ್ತಿ,ಟಿವಿ9,ಬೆಂಗಳೂರು

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 7:21 pm, Mon, 13 January 25

ಬಿಗ್ ಬಾಸ್ ಮನೆಯಿಂದ ಹೊರಬಂದು ಮದುವೆ ಬಗ್ಗೆ ಮಾತಾಡಿದ ಚೈತ್ರಾ ಕುಂದಾಪುರ
ಬಿಗ್ ಬಾಸ್ ಮನೆಯಿಂದ ಹೊರಬಂದು ಮದುವೆ ಬಗ್ಗೆ ಮಾತಾಡಿದ ಚೈತ್ರಾ ಕುಂದಾಪುರ
ಮಹಾಕುಂಭದ ಮೊದಲ ದಿನವಾದ ಇಂದು 1 ಕೋಟಿ ಭಕ್ತರಿಂದ ತೀರ್ಥ ಸ್ನಾನ
ಮಹಾಕುಂಭದ ಮೊದಲ ದಿನವಾದ ಇಂದು 1 ಕೋಟಿ ಭಕ್ತರಿಂದ ತೀರ್ಥ ಸ್ನಾನ
ಕಾರ್ಯಕರ್ತರಿಂದಲೇ ಸರ್ಕಾರ ಅಂತ ಹತ್ತು ಸಲ ಹೇಳಿದ್ದೇನೆ: ಸತೀಶ್ ಜಾರಕಿಹೊಳಿ
ಕಾರ್ಯಕರ್ತರಿಂದಲೇ ಸರ್ಕಾರ ಅಂತ ಹತ್ತು ಸಲ ಹೇಳಿದ್ದೇನೆ: ಸತೀಶ್ ಜಾರಕಿಹೊಳಿ
ನಿನ್ನೆ ಜೋಡಿ, ಇಂದು ವೈರಿ: ಕಿತ್ತಾಡಿದ ಭವ್ಯಾ-ತ್ರಿವಿಕ್ರಮ್
ನಿನ್ನೆ ಜೋಡಿ, ಇಂದು ವೈರಿ: ಕಿತ್ತಾಡಿದ ಭವ್ಯಾ-ತ್ರಿವಿಕ್ರಮ್
ಶಿವಕುಮಾರ್ ಸ್ಥಿತಿ ನೋಡಿದರೆ ನನ್ನಲ್ಲಿ ಕರುಣೆ ಹುಟ್ಟುತ್ತದೆ: ಆರ್ ಅಶೋಕ
ಶಿವಕುಮಾರ್ ಸ್ಥಿತಿ ನೋಡಿದರೆ ನನ್ನಲ್ಲಿ ಕರುಣೆ ಹುಟ್ಟುತ್ತದೆ: ಆರ್ ಅಶೋಕ
ಸುರ್ಜೆವಾಲಾ ಭೇಟಿ ನಾಯಕರ ಆಂತರಿಕ ಕಾದಾಟವನ್ನು ತಹಬದಿಗೆ ತರುವುದೆ?‘
ಸುರ್ಜೆವಾಲಾ ಭೇಟಿ ನಾಯಕರ ಆಂತರಿಕ ಕಾದಾಟವನ್ನು ತಹಬದಿಗೆ ತರುವುದೆ?‘
ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಯಾರೊಂದಿಗೂ ನನ್ನ ತಿಕ್ಕಾಟವಿಲ್ಲ: ಜಾರಕಿಹೊಳಿ
ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಯಾರೊಂದಿಗೂ ನನ್ನ ತಿಕ್ಕಾಟವಿಲ್ಲ: ಜಾರಕಿಹೊಳಿ
ನಾವು ಅಧಿಕೃತವಾಗಿ ಸಭೆ ನಡೆಬೇಕೆಂದುಕೊಂಡಿದ್ದೆವು, ಮುಚ್ಚುಮರೆ ಇಲ್ಲ: ಖರ್ಗೆ
ನಾವು ಅಧಿಕೃತವಾಗಿ ಸಭೆ ನಡೆಬೇಕೆಂದುಕೊಂಡಿದ್ದೆವು, ಮುಚ್ಚುಮರೆ ಇಲ್ಲ: ಖರ್ಗೆ
ಪೊಲೀಸರು ಬಂಧಿಸಿರುವ ದುಷ್ಟವ್ಯಕ್ತಿ ಮಾನಸಿಕ ಅಸ್ವಸ್ಥನಲ್ಲ: ಕರ್ಣ
ಪೊಲೀಸರು ಬಂಧಿಸಿರುವ ದುಷ್ಟವ್ಯಕ್ತಿ ಮಾನಸಿಕ ಅಸ್ವಸ್ಥನಲ್ಲ: ಕರ್ಣ
ಕಾಶ್ಮೀರದಲ್ಲಿಂದು ಝಡ್​-ಮೋಡ್​ ಸುರಂಗ ಮಾರ್ಗ​ ಉದ್ಘಾಟಿಸಲಿದ್ದಾರೆ ಮೋದಿ
ಕಾಶ್ಮೀರದಲ್ಲಿಂದು ಝಡ್​-ಮೋಡ್​ ಸುರಂಗ ಮಾರ್ಗ​ ಉದ್ಘಾಟಿಸಲಿದ್ದಾರೆ ಮೋದಿ