AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೆಟ್ಟು ನಿಂತ ವಾಹನ, ರಸ್ತೆ ದುರಸ್ತಿ: ಬೆಂಗಳೂರಿನ ಈ ರಸ್ತೆಗಳಲ್ಲಿ ಸಂಚಾರ ಅಸ್ತವ್ಯಸ್ತ

ಬೆಂಗಳೂರಿನ ವಿವಿಧ ಪ್ರದೇಶಗಳಾದ ಎನ್‌ಆರ್ ಜಂಕ್ಷನ್, ಹೂಡಿ, ಶಿವಾಜಿನಗರ ಮತ್ತು ನಾಯಂಡಹಳ್ಳಿಯಲ್ಲಿ ಇಂದು ಸಂಚಾರ ದಟ್ಟಣೆ ಉಂಟಾಗಿದೆ. ವಾಹನಗಳ ಹಾನಿ, ರಸ್ತೆ ಗುಂಡಿಗಳು ಮತ್ತು ಅತಿ ವೇಗದ ಚಾಲನೆಯಿಂದಾಗಿ ಈ ಸಮಸ್ಯೆ ಉದ್ಭವಿಸಿದೆ. ಸಂಚಾರ ಪೊಲೀಸರು ಸಂಚಾರ ನಿಯಮಗಳನ್ನು ಪಾಲಿಸಲು ಮತ್ತು ಸುರಕ್ಷಿತವಾಗಿ ಚಾಲನೆ ಮಾಡಲು ಜನರನ್ನು ಕೋರಿದ್ದಾರೆ.

ಕೆಟ್ಟು ನಿಂತ ವಾಹನ, ರಸ್ತೆ ದುರಸ್ತಿ: ಬೆಂಗಳೂರಿನ ಈ ರಸ್ತೆಗಳಲ್ಲಿ ಸಂಚಾರ ಅಸ್ತವ್ಯಸ್ತ
ಕೆಟ್ಟು ನಿಂತ ವಾಹನ, ರಸ್ತೆ ದುರಸ್ತಿ: ಬೆಂಗಳೂರಿನ ಈ ರಸ್ತೆಗಳಲ್ಲಿ ಸಂಚಾರ ಅಸ್ತವ್ಯಸ್ತ
ಗಂಗಾಧರ​ ಬ. ಸಾಬೋಜಿ
|

Updated on:Jan 13, 2025 | 7:27 PM

Share

ಬೆಂಗಳೂರು, ಜನವರಿ 13: ಎನ್​ಆರ್​ ಜಂಕ್ಷನ್‌, ಹೂಡಿ ಜಂಕ್ಷನ್​​, ಶಿವಾಜಿನಗರ ಮತ್ತು ನಾಯಂಡಹಳ್ಳಿ ಸೇರಿದಂತೆ ಇತರೆ ನಗರಗಳಲ್ಲಿ ಇಂದು ಕೆಲ ಕಾರಣಾಂತರಗಳಿಂದ ಸಾರ್ವಜನಿಕ ವಾಹನ ಸಂಚಾರದಲ್ಲಿ ಅಸ್ತವ್ಯಸ್ತ ಉಂಟಾಗಿತ್ತು. ಹಾಗಾಗಿ ಆಯಾ ಠಾಣಾ ವ್ಯಾಪ್ತಿಯ ಸಂಚಾರಿ ಪೋಲಿಸರು ಸಂಚಾರ ಸಲಹೆ (Traffic Advisory) ನೀಡುವ ಮೂಲಕ ದಯವಿಟ್ಟು ಸಹಕರಿಸುವಂತೆ ಜನರಲ್ಲಿ ಮನವಿ ಮಾಡಿದ್ದಾರೆ.

ಎನ್​ಆರ್ ಜಂಕ್ಷನ್‌ ಬಳಿ ವಾಹನ ಕೆಟ್ಟು ನಿಂತಿರುವುದರಿಂದ ಟೌನ್ ಹಾಲ್ ಕಡೆಗೆ ನಿಧಾನಗತಿಯ ಸಂಚಾರವಿದೆ. ದಯಮಾಡಿ ಸಹಕರಿಸುವಂತೆ ಬೆಂಗಳೂರು ಸಂಚಾರ ಪೊಲೀಸ್​ ಕೋರಿದ್ದಾರೆ. ರಾಜಾಜಿನಗರ ಸಂಚಾರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಸಾರ್ವಜನಿಕ ರಸ್ತೆಯಲ್ಲೇ ತೊಂದರೆ ಆಗುವ ರೀತಿಯಲ್ಲಿ ಅತೀ ವೇಗವಾಗಿ ಮತ್ತು ಅಜಾಗರೂಕತೆಯಿಂದ ವೀಲಿಂಗ್ ಮಾಡಿದ್ದ ವಾಹನ ಚಾಲಕ ಮತ್ತು ವಾಹನವನ್ನು ಹಿಡಿದು ಕಾನೂನು ರೀತಿ ಕ್ರಮ ಕೈಗೊಂಡಿದ್ದಾರೆ.

ಇದನ್ನೂ ಓದಿ: Bengaluru Traffic: ವಿಶ್ವಮಟ್ಟದಲ್ಲೂ ಸದ್ದು ಮಾಡಿದ ಬೆಂಗಳೂರು ಟ್ರಾಫಿಕ್..!

ಈ ದಿನ ಮಹದೇವಪುರ  ಠಾಣಾ ವ್ಯಾಪ್ತಿಯ ಹೂಡಿ ಜಂಕ್ಷನ್ ಹತ್ತಿರ ಇದ್ದಂತಹ ರಸ್ತೆ ಗುಂಡಿಯನ್ನು ಮುಚ್ಚಿಸಿ ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ. ಇಎಸ್ಐ ಜಂಕ್ಷನ್ ಹತ್ತಿರ ವಾಹನ ಸವಾರರಿಗೆ ಐಎಸ್ಐ ಮಾರ್ಕ್ ಹೆಲ್ಮೆಟ್ ಧರಿಸುವ ಕುರಿತು ಹಾಗೂ ಸಂಚಾರ ನಿಯಮಗಳ ಪಾಲನೆ ಮತ್ತು ಉಲ್ಲಂಘನೆಯಿಂದ ಆಗುವ ಪರಿಣಾಮಗಳ ಕುರಿತು ತಿಳುವಳಿಕೆ ನೀಡಲಾಗಿದೆ.

ಬೆಂಗಳೂರು ಸಂಚಾರ ಪೊಲೀಸ್​ ಟ್ವೀಟ್ 

ಗುರಪ್ಪನಪಾಳ್ಯ ಜಂಕ್ಷನ್‌ನಲ್ಲಿ ನೀರು ನಿಂತಿರುವುದರಿಂದ ಸಾಗರ ಜಂಕ್ಷನ್ ಕಡೆಗೆ ನಿಧಾನಗತಿಯ ಸಂಚಾರವಿತ್ತು. ಬಾಬುಸಪಾಳ್ಯ ಬಳಿ ವಾಹನವೊಂದು ಕೆಟ್ಟು ನಿಂತ್ತಿದ್ದ ಪರಿಣಾಮ ಹೆಬ್ಬಾಳ ಕಡೆಗೆ ಕಡೆಗೆ ನಿಧಾನಗತಿಯ ಸಂಚಾರವಿತ್ತು. ಅದೇ ರೀತಿಯಾಗಿ ವರ್ತೂರು ಸರ್ಕಾರಿ ಪಿ.ಯು ಕಾಲೇಜ್ ಬಳಿ ರಸ್ತೆ ತುಂಬಾ ನೀರು ನಿಂತ ಪರಿಣಾಮ ಕಡೆಗೆ ವರ್ತೂರು ಕೊಡಿಯ ನಿಧಾನಗತಿಯ ಸಂಚಾರಿಸುವಂತೆ ಸಂಚಾರಿ ಪೋಲಿಸರು ಸಲಹೆ ನೀಡಿದ್ದರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 7:26 pm, Mon, 13 January 25