ಕಂಠಪೂರ್ತಿ ಕುಡಿದು ಮದುವೆ ಮಂಟಪದಲ್ಲಿ ವರನ ರಂಪಾಟ; ಆಗಬೇಕಿದ್ದ ಮದುವೆಯನ್ನೇ ಕ್ಯಾನ್ಸಲ್ ಮಾಡಿದ ವಧುವಿನ ತಾಯಿ
ಊಟೋಪಚಾರಗಳ ವಿಚಾರಕ್ಕೆ ಹಾಗೂ ಇನ್ನಿತರ ಕ್ಷುಲ್ಲಕ ಕಾರಣಗಳಿಗೆ ಆಗಬೇಕಿದ್ದ ಮದುವೆಗಳೇ ಕ್ಯಾನ್ಸಲ್ ಆದಂತಹ ಘಟನೆಗಳು ಈ ಹಿಂದೆಯೂ ಸಾಕಷ್ಟು ನಡೆದಿದೆ. ಇದೀಗ ಅಂತಹದ್ದೇ ಪ್ರಕರಣವೊಂದು ಬೆಳಕಿಗೆ ಬಂದಿದ್ದು, ಕಂಠಪೂರ್ತಿ ಕುಡಿದು ಮದುವೆ ಮಂಟಪದಲ್ಲಿ ವರ ರಂಪಾಟ ಮಾಡಿದನೆಂದು ವಧುವಿನ ತಾಯಿ ಮದುವೆಯನ್ನೇ ಕ್ಯಾನ್ಸಲ್ ಮಾಡಿದ್ದಾರೆ. ಈ ಕುರಿತ ವಿಡಿಯೋವೊಂದು ಇದೀಗ ಸಖತ್ ವೈರಲ್ ಆಗುತ್ತಿದ್ದು, ತಾಯಿಯ ಈ ದಿಟ್ಟ ನಿರ್ಧಾರಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಕ್ಷುಲ್ಲಕ ಕಾರಣಗಳಿಗೆ ಮದುವೆ ಮಂಟಪದಲ್ಲಿಯೇ ಇನ್ನೇನೂ ಆಗಬೇಕಿದ್ದ ಮದುವೆಗಳು ನಿಂತು ಹೋದಂತಹ ಸಾಕಷ್ಟು ಘಟನೆಗಳ ಸುದ್ದಿಗಳನ್ನು ಆಗಾಗ್ಗೆ ಕೇಳಿರುತ್ತೇವೆ. ಊಟದ ವಿಚಾರಕ್ಕೆ, ವರೋಪಚಾರ ಮಾಡಿಲ್ಲವೆಂದು, ವರ ಕುಡಿದು ಬಂದು ರಂಪಾಟ ಮಾಡಿದನೆಂದು ಅದೆಷ್ಟೋ ಮದುವೆಗಳು ನಿಂತು ಹೋಗಿವೆ. ಇದೀಗ ಅಂತಹದ್ದೇ ಪ್ರಕರಣವೊಂದು ಬೆಳಕಿಗೆ ಬಂದಿದ್ದು, ಕಂಠಪೂರ್ತಿ ಕುಡಿದು ಆರತಿ ತಟ್ಟೆಯನ್ನೇ ಎಸೆದು ಮದುವೆ ಮಂಟಪದಲ್ಲಿ ವರ ರಂಪಾಟ ಮಾಡಿದನೆಂದು ವಧುವಿನ ತಾಯಿ ಮದುವೆಯನ್ನೇ ಕ್ಯಾನ್ಸಲ್ ಮಾಡಿದ್ದಾರೆ. ಈ ಕುರಿತ ವಿಡಿಯೋವೊಂದು ಇದೀಗ ಸಖತ್ ವೈರಲ್ ಆಗುತ್ತಿದ್ದು, ತಾಯಿಯ ಈ ದಿಟ್ಟ ನಿರ್ಧಾರಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಬೆಂಗಳೂರಿನಲ್ಲಿ ಈ ಘಟನೆ ನಡೆದಿದ್ದು, ವರ ಕುಡಿದು ಬಂದು ಸ್ನೇಹಿತರ ಜೊತೆ ಸೇರಿ ಮದುವೆ ಮಂಟಪದಲ್ಲಿ ದುರ್ವರ್ತನೆ ತೋರಿದ್ದಕ್ಕೆ ವಧುವಿನ ತಾಯಿ ಮದುವೆಯನ್ನೇ ಕ್ಯಾನ್ಸಲ್ ಮಾಡಿದ್ದಾರೆ. ಇದೊಂದು ಕಠಿಣ ನಿರ್ಧಾರವಾಗಿದ್ದರೂ, ಮಗಳ ಭವಿಷ್ಯದ ದೃಷ್ಟಿಯಿಂದ ಮದುವೆಯನ್ನು ಕ್ಯಾನ್ಸಲ್ ಮಾಡಿದ್ದಾರೆ. ಅವನು ಮುಂದೆಯೂ ಇದೇ ರೀತಿ ವರ್ತಿಸಿದರೆ ನನ್ನ ಮಗಳ ಭವಿಷ್ಯ ಏನಾಗಬಹುದು ಎಂದು ಎಂದು ಯೋಚಿಸಿ ದಿಟ್ಟ ನಿರ್ಧಾರವನ್ನು ತೆಗೆದುಕೊಂಡು ಮದುವೆಯನ್ನು ರದ್ದುಗೊಳಿಸಿದ್ದಾರೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ:
A marriage was broken by the mother of the bride over The groom started creating ruckus with his friends by drinking alcohol at his own wedding, the groom threw the aarti plate in a filmy style) Bengaluru pic.twitter.com/G8yxrI8upD
— Ghar Ke Kalesh (@gharkekalesh) January 11, 2025
gharkekalesh ಹೆಸರಿನ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋದಲ್ಲಿ ವಧುವಿನ ತಾಯಿ ಮದುವೆ ದಿನವೇ ಆತ ಈ ರೀತಿ ವರ್ತಿಸಿದ್ದಾನೆ ಇನ್ನೂ ಭವಿಷ್ಯದಲ್ಲಿ ನನ್ನ ಮಗಳ ಪರಿಸ್ಥಿತಿ ಏನು ನಾನು ಮದುವೆಯನ್ನೇ ಕ್ಯಾನ್ಸಲ್ ಮಾಡುತ್ತಿದ್ದೇನೆ ಎಂದು ಕೈ ಮುಗಿದು ಕೇಳಿಕೊಳ್ಳುತ್ತಿರುವಂತಹ ದೃಶ್ಯವನ್ನು ಕಾಣಬಹುದು.
ಇದನ್ನೂ ಓದಿ: ಆ ಭಾಷೆ ನಮ್ಮಿಬ್ಬರ ಬಾಂಧವ್ಯವನ್ನು ಉತ್ತಮಗೊಳಿಸಿತು; ಬೆಂಗಳೂರಿನ ಗಂಡ-ಹೆಂಡ್ತಿ ಸಂಬಂಧ ಬಲಗೊಳಿಸಿದ ಭಾಷಾ ಕಥೆ
ಜನವರಿ 11 ರಂದು ಹಂಚಿಕೊಳ್ಳಲಾದ ಈ ವಿಡಿಯೋ 8.7 ಲಕ್ಷ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಈ ತಾಯಿ ನರಕದಿಂದ ತನ್ನ ಮಗಳ ಜೀವನವನ್ನೇ ಕಾಪಾಡಿದ್ದಾಳೆʼ ಎಂಬ ಕಾಮೆಂಟ್ ಬರೆದುಕೊಂಡಿದ್ದಾರೆ. ಮತ್ತೊಬ್ಬ ಬಳಕೆದಾರರು ʼಮಗಳ ಭವಿಷ್ಯದ ದೃಷ್ಟಿಯಿಂದ ಈ ತಾಯಿ ಇಟ್ಟ ದಿಟ್ಟ ಹೆಜ್ಜೆ ನಿಜಕ್ಕೂ ಹೆಮ್ಮೆ ತರುವಂತಿದೆʼ ಎಂಬ ಕಾಮೆಂಟ್ ಬರೆದುಕೊಂಡಿದ್ದಾರೆ. ಇನ್ನೊಬ್ಬ ಬಳಕೆದಾರರು ʼತಾಯಿಯ ಈ ನಿರ್ಧಾರ ಸ್ವಾಗತಾರ್ಹವಾಗಿದೆʼ ಎಂದು ಹೇಳಿದ್ದಾರೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:22 pm, Mon, 13 January 25