Viral: ಪೊಂಗಲ್ ಆಚರಣೆಗೆ ಪಂಚೆಯುಟ್ಟು ಸಖತ್ ಸ್ಟೆಪ್ಸ್ ಹಾಕಿದ ಚೆಸ್ ಚಾಂಪಿಯನ್ಸ್; ಮುದ್ದಾದ ವಿಡಿಯೋ ವೈರಲ್
ಸಂಕ್ರಾಂತಿ ಆಚರಣೆಯ ಸಿದ್ಧತೆ ಬಲು ಜೋರಾಗಿಯೇ ನಡಿತಿದೆ. ಈ ನಡುವೆ ಇಲ್ಲೊಂದು ವಿಡಿಯೋ ವೈರಲ್ ಆಗಿದ್ದು, ಪೊಂಗಲ್ ಹಬ್ಬದ ಸಂಭ್ರಮಾಚರಣೆಯಲ್ಲಿ ಚೆಸ್ ಚಾಂಪಿಯನ್ಸ್‌ಗಳು ಸಖತ್ತಾಗಿ ನೃತ್ಯ ಮಾಡಿದ್ದಾರೆ. ಹೌದು ಪೊಂಗಲ್ ಆಚರಣೆಯಲ್ಲಿ ಒಟ್ಟು ಸೇರಿದ್ದ ವಿಶ್ವನಾಥನ್ ಆನಂದ್, ಡಿ ಗುಕೇಶ್, ಆರ್. ಪ್ರಗ್ನಾನಂದ ಸೇರಿದಂತೆ ಚೆಸ್ ಚಾಂಪಿಯನ್‌ಗಳೆಲ್ಲಾ ಜೊತೆ ಸೇರಿ ಪಂಚೆ ಉಟ್ಟು ಭರ್ಜರಿ ಡ್ಯಾನ್ಸ್ ಮಾಡಿದ್ದಾರೆ.
ಸಂಕ್ರಾಂತಿ ಹಬ್ಬದ ಆಚರಣೆಯ ಸಿದ್ಧತೆ ಬಲು ಜೋರಾಗಿಯೇ ನಡಿತಿದೆ. ಕರ್ನಾಟಕದಲ್ಲಿ ಸಂಕ್ರಾಂತಿಯೆಂದು ಆಚರಿಸಲಾಗುವ ಈ ಸುಗ್ಗಿ ಹಬ್ಬವನ್ನು ತಮಿಳುನಾಡಿನಲ್ಲಿ ಪೊಂಗಲ್ ಎಂದು 4 ದಿನಗಳ ಕಾಲ ಆಚರಿಸಲಾಗುತ್ತದೆ. ಹಬ್ಬದ ಭರ್ಜರಿ ತಯಾರಿ ನಡುವೆ ಇಲ್ಲೊಂದು ಮುದ್ದಾದ ವಿಡಿಯೋ ಸಖತ್ ವೈರಲ್ ಆಗುತ್ತಿದ್ದು, ಪೊಂಗಲ್ ಸಂಭ್ರಮಾಚರಣೆಯಲ್ಲಿ ಚೆಸ್ ಚಾಂಪಿಯನ್ಸ್‌ಗಳು ಸಖತ್ತಾಗಿ ನೃತ್ಯ ಮಾಡಿದ್ದಾರೆ. ಹೌದು ಪೊಂಗಲ್ ಆಚರಣೆಯಲ್ಲಿ ಒಟ್ಟು ಸೇರಿದ್ದ ವಿಶ್ವನಾಥನ್ ಆನಂದ್, ಡಿ ಗುಕೇಶ್, ಆರ್. ಪ್ರಗ್ನಾನಂದ ಸೇರಿದಂತೆ ಚೆಸ್ ಚಾಂಪಿಯನ್‌ಗಳೆಲ್ಲಾ ಜೊತೆ ಸೇರಿ ಪಂಚೆ ಉಟ್ಟು ಭರ್ಜರಿ ಡ್ಯಾನ್ಸ್ ಮಾಡಿದ್ದಾರೆ.
ಜನವರಿ 12, ಭಾನುವಾರದಂದು ಪೊಂಗಲ್ ಹಬ್ಬದ ಪ್ರಯುಕ್ತ ವಿಶ್ವ ಚಾಂಪಿಯನ್ ವಿಶ್ವನಾಥನ್ ಆನಂದ್ ಮನೆಯಲ್ಲಿ ಆತ್ಮೀಯ ಕೂಟವೊಂದನ್ನು ಏರ್ಪಡಿಸಿದ್ದರು. ಈ ಕಾರ್ಯಕ್ರಮದಲ್ಲಿ ಹಾಲಿ ವಿಶ್ವ ಚಾಂಪಿಯನ್ ಡಿ ಗುಕೇಶ್, ಆರ್ ಪ್ರಗ್ನಾನಂದ, ವಿದಿತ್ ಗುಜರಾತಿ ಮತ್ತು ಸಾಗರ್ ಶಾ ಭಾಗವಹಿಸಿದ್ದರು. ಈ ಎಲ್ಲಾ ಚೆಸ್ ತಾರೆಯರು ಪಂಚೆ ತೊಟ್ಟು ತೊಟ್ಟು ಭರ್ಜರಿ ಡ್ಯಾನ್ಸ್ ಮಾಡಿದ್ದಾರೆ.
Chesscom_in ಹೆಸರಿನ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋದಲ್ಲಿ ಚೆಸ್ ತಾರೆಯರಾದ ವಿಶ್ವನಾಥನ್ ಆನಂದ್, ಡಿ ಗುಕೇಶ್, ಆರ್ ಪ್ರಗ್ನಾನಂದ, ವಿದಿತ್ ಗುಜರಾತಿ ಮತ್ತು ಸಾಗರ್ ಶಾ ಸೇರಿದಂತೆ ಇನ್ನೂ ಹಲವರು ಜೊತೆಯಾಗಿ ನಿಂತು ಸಖತ್ ಆಗಿ ಡ್ಯಾನ್ಸ್ ಮಾಡುತ್ತಿರುವ ದೃಶ್ಯವನ್ನು ಕಾಣಬಹುದು.
ಇದನ್ನೂ ಓದಿ: ಮರದ ಮೇಲೆ ಸಿಂಹ ಹಾಗೂ ಚಿರತೆಯ ಕಾದಾಟ, ರೋಚಕ ಕಾಳಗದ ದೃಶ್ಯ ಇಲ್ಲಿದೆ
ಜನವರಿ 12 ರಂದು ಹಂಚಿಕೊಳ್ಳಲಾದ ಈ ವಿಡಿಯೋ 98 ಸಾವಿರ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಡ್ಯಾನ್ಸ್ ತುಂಬಾ ಮುದ್ದಾಗಿದೆʼ ಎಂಬ ಕಾಮೆಂಟ್ ಬರೆದುಕೊಂಡಿದ್ದಾರೆ. ಇನ್ನೊಬ್ಬ ಬಳಕೆದಾರರು ʼಆಹಾ.. ಬಹಳ ಚೆನ್ನಾಗಿ ನೃತ್ಯ ಮಾಡಿದ್ದಾರೆʼ ಎಂದು ಹೇಳಿದ್ದಾರೆ. ಇನ್ನೂ ಅನೇಕರು ಚೆಸ್ ತಾರೆಯರ ಮುದ್ದಾದ ನೃತ್ಯಕ್ಕೆ ಮನ ಸೋತಿದ್ದಾರೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ