Viral: ಮರದ ಮೇಲೆ ಸಿಂಹ ಹಾಗೂ ಚಿರತೆಯ ಕಾದಾಟ, ರೋಚಕ ಕಾಳಗದ ದೃಶ್ಯ ಇಲ್ಲಿದೆ

ಸೋಷಿಯಲ್ ಮೀಡಿಯಾದಲ್ಲಿ ಪ್ರತಿನಿತ್ಯ ಪ್ರಾಣಿ ಸಾಮ್ರಾಜ್ಯಗಳಿಗೆ ಸಂಬಂಧಪಟ್ಟ ಹಲವಾರು ಕುತೂಹಲಕಾರಿ ವಿಡಿಯೋಗಳು ಹರಿದಾಡುತ್ತಿರುತ್ತವೆ. ಇದೀಗ ಮರದ ಮೇಲೆ ಸಿಂಹ ಮತ್ತು ಚಿರತೆಯೂ ಕಾದಾಟ ನಡೆಸಿದೆ. ಆದರೆ ಚಿರತೆ ತನ್ನ ಚಾಣಾಕ್ಷತೆಯಿಂದ ಸಿಂಹಿಣಿಯ ದಾಳಿಯನ್ನು ತಪ್ಪಿಸಿ ಕೊಂಡಿದೆ. ಈ ಕ್ರೂರ ಪ್ರಾಣಿಗಳ ಕಾಳಗದ ವಿಡಿಯೋವು ಮೈ ಜುಮ್ಮ್ ಎನ್ನುವಂತಿದ್ದು, ಈ ವಿಡಿಯೋಗೆ ನೆಟ್ಟಿಗರಿಂದ ಕಾಮೆಂಟ್ ಗಳು ಹರಿದು ಬಂದಿದೆ.

Viral: ಮರದ ಮೇಲೆ ಸಿಂಹ ಹಾಗೂ ಚಿರತೆಯ ಕಾದಾಟ, ರೋಚಕ ಕಾಳಗದ ದೃಶ್ಯ ಇಲ್ಲಿದೆ
ವೈರಲ್​​ ವಿಡಿಯೋ
Follow us
ಸಾಯಿನಂದಾ
| Updated By: ಅಕ್ಷಯ್​ ಪಲ್ಲಮಜಲು​​

Updated on: Jan 13, 2025 | 12:04 PM

ಪ್ರಾಣಿಗಳ ಲೋಕದಲ್ಲಿ ಬೇಟೆಗಾಗಿ ಪ್ರಾಣಿಗಳ ನಡುವೆ ಪರಸ್ಪರ ಕಾದಾಟಗಳು ನಡೆಯುತ್ತಲೇ ಇರುತ್ತವೆ. ಹೀಗಾಗಿ ಸಾಕಷ್ಟು ಪ್ರಾಣಿಗಳು ಬೇಟೆಯಲ್ಲಿ ಪಳಗಿರುತ್ತವೆ. ಈ ಪ್ರಾಣಿ ಪ್ರಪಂಚದಲ್ಲಿನ ಕಾದಾಟದ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುತ್ತದೆ. ಈ ಕ್ರೂರ ಪ್ರಾಣಿಗಳಾದ ಹುಲಿ, ಚಿರತೆ, ಸಿಂಹವು ಹೊಂಚು ಹಾಕಿ ಬೇಟೆಯಾಡುವುದರಲ್ಲಿ ಒಂದು ಕೈ ಮುಂದೆ ಎನ್ನಬಹುದು. ಈ ಬಲಿಷ್ಠ ಜೀವಿಗಳು ಒಮ್ಮೆ ಗುರಿ ಇಟ್ಟು ಬೇಟೆಗಿಳಿದರೆ ಮುಗಿದೇ ಹೋಯಿತು ವಿಫಲವಾಗುವುದು ಬಹಳ ಕಡಿಮೆ. ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ಮರದ ಮೇಲೆ ಸಿಂಹ ಹಾಗೂ ಚಿರತೆಯ ನಡುವಿನ ಕಾಳಗವು ಮೈ ಜುಮ್ಮ್ ಎನಿಸುವಂತಿದೆ.

AMAZlNGNATURE ಹೆಸರಿನ ಖಾತೆಯಲ್ಲಿ ಈ ವಿಡಿಯೋವನ್ನು ಶೇರ್ ಮಾಡಿಕೊಳ್ಳಲಾಗಿದೆ. ಈ ಸಿಂಹ ಮತ್ತು ಚಿರತೆಯ ನಡುವಿನ ಸಂಘರ್ಷದ ವಿಡಿಯೋ ಇದಾಗಿದ್ದು, ಈ ಈ ಕಾಳಗ ಯಾವುದೇ ಕಾಡಿನಲ್ಲಿ ನಡೆಯದೇ ಮರದಲ್ಲಿ ನಡೆದಿದೆ. ಹೌದು, ಸಿಂಹ ಹಾಗೂ ಚಿರತೆ ನಡುವಿನ ಸಂಘರ್ಷ ನಡೆದಿದ್ದು, ಈ ಕ್ರೂರ ಪ್ರಾಣಿಗಳು ಮರದ ಮೇಲೆಯೇ ಉಗ್ರ ಹೋರಾಟಕ್ಕೆ ಇಳಿದಿದ್ದು, ಇತ್ತ ಈ ಸಿಂಹಿಣಿ ಕೂಡ ತನ್ನ ಶಕ್ತಿಯಿಂದ ಚಿರತೆಯನ್ನು ಮಣಿಸಲು ಮುಂದಾಗಿದೆ.

ಚಿರತೆಯು ನಾನೇನು ಕಮ್ಮಿ ಎಂದು ತನಗಿರುವ ಬಲದಿಂದ, ಸಿಂಹದ ಮೇಲೆ ಎರಗಿದೆ. ಆದರೆ ಕೊನೆಗೆ ಮರದ ಕೊಂಬೆಯೇ ಮುರಿದು ಬಿದಿದೆ. ಇತ್ತ ಚಿರತೆ ತನ್ನ ಚಾಣಾಕ್ಷತೆಯಿಂದ ಸಿಂಹಿಣಿಯ ದಾಳಿಯನ್ನು ತಪ್ಪಿಸಿ ಕೊಂಡಿದೆ. ಈ ಮೈ ಜುಮ್ಮ್ ಎನಿಸುವ ಕಾದಾಟದ ವಿಡಿಯೋ ವೈರಲ್ ಆಗುತ್ತಿದ್ದಂತೆ ಹತ್ತು ಮಿಲಿಯನ್ಸ್ ಗೂ ಅಧಿಕ ವೀಕ್ಷಣೆಗಳನ್ನು ಕಂಡಿದೆ.

ಇದನ್ನೂ ಓದಿ: ಬೇರೆ ಕೆಲಸದ ಆಫರ್‌ ಇಲ್ಲದೇನೇ ಇನ್ಫೋಸಿಸ್‌ ಉದ್ಯೋಗಕ್ಕೆ ರಾಜೀನಾಮೆ ನೀಡಿದ ಟೆಕ್ಕಿ, ಪೋಸ್ಟ್ ವೈರಲ್

ವೀಡಿಯೋ ನೋಡಿ ನೆಟ್ಟಿಗರು, ಕ್ರೂರ ಪ್ರಾಣಿಗಳ ಕಾದಾಟದ ಬಗ್ಗೆ ಪ್ರತಿಕ್ರಿಯೆಯನ್ನು ವ್ಯಕ್ತಪಡಿಸಿದ್ದಾರೆ. ಒಬ್ಬ ಬಳಕೆದಾರನು “ಪ್ರಕೃತಿಯನ್ನು ಪ್ರಕೃತಿಗಾಗಿ ನಿರ್ಮಿಸಲಾಗಿದೆ” ಎಂದು ಬರೆದಿದ್ದಾರೆ. ಮತ್ತೊಬ್ಬರು, ‘ಈ ಕ್ರೂರ ಪ್ರಾಣಿಗಳು ಮರದಲ್ಲಿ ಏನು ಮಾಡುತ್ತಿವೆ’ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರ ಬಳಕೆದಾರರು, ‘ಈ ಪ್ರಾಣಿಗಳ ಕಾದಾಟ ನೋಡುವುದಕ್ಕೆ ಭಯಂಕರವಾಗಿದೆ’ ಎಂದಿದ್ದಾರೆ.

ವೈರಲ್​​​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಕಿರುತೆರೆಯಲ್ಲಿ ಹಲವಾರು ಧಾರಾವಹಿಗಳನ್ನು ನಿರ್ದೇಶಿಸಿರುವ ಸರಿಗಮವಿಜಿ
ಕಿರುತೆರೆಯಲ್ಲಿ ಹಲವಾರು ಧಾರಾವಹಿಗಳನ್ನು ನಿರ್ದೇಶಿಸಿರುವ ಸರಿಗಮವಿಜಿ
ಬೆಂಗಳೂರು: ಸಿಲಿಂಡರ್ ಸ್ಫೋಟಗೊಂಡು 7 ಮಂದಿಗೆ ಗಂಭೀರ ಗಾಯ
ಬೆಂಗಳೂರು: ಸಿಲಿಂಡರ್ ಸ್ಫೋಟಗೊಂಡು 7 ಮಂದಿಗೆ ಗಂಭೀರ ಗಾಯ
ಮಿಡ್ ವೀಕ್ ಬಗ್ಗೆ ಘೋಷಣೆ ಮಾಡಿದ ಬಿಗ್ ಬಾಸ್; ರಜತ್​ಗೆ ಸ್ಕೆಚ್ ಇಟ್ಟ ಭವ್ಯಾ
ಮಿಡ್ ವೀಕ್ ಬಗ್ಗೆ ಘೋಷಣೆ ಮಾಡಿದ ಬಿಗ್ ಬಾಸ್; ರಜತ್​ಗೆ ಸ್ಕೆಚ್ ಇಟ್ಟ ಭವ್ಯಾ
ಬಸ್​ನಲ್ಲಿ ನಿವೃತ್ತ ಐಎಎಸ್ ಅಧಿಕಾರಿಯನ್ನು ಥಳಿಸಿದ ಬಸ್ ಕಂಡಕ್ಟರ್​
ಬಸ್​ನಲ್ಲಿ ನಿವೃತ್ತ ಐಎಎಸ್ ಅಧಿಕಾರಿಯನ್ನು ಥಳಿಸಿದ ಬಸ್ ಕಂಡಕ್ಟರ್​
ಬಿಗ್ ಶೋ ಬಿಗ್ಗೆಸ್ಟ್ ಸಿಕ್ಸ್: ರಾಕೆಟ್ ಸಿಕ್ಸ್ ಸಿಡಿಸಿದ ಮ್ಯಾಕ್ಸ್​ವೆಲ್
ಬಿಗ್ ಶೋ ಬಿಗ್ಗೆಸ್ಟ್ ಸಿಕ್ಸ್: ರಾಕೆಟ್ ಸಿಕ್ಸ್ ಸಿಡಿಸಿದ ಮ್ಯಾಕ್ಸ್​ವೆಲ್
Daily Devotional: ಹಣೆ ಬರಹ ಬದಲಿಸಲು ಸಾಧ್ಯವೆ? ಇಲ್ಲಿದೆ ಉತ್ತರ
Daily Devotional: ಹಣೆ ಬರಹ ಬದಲಿಸಲು ಸಾಧ್ಯವೆ? ಇಲ್ಲಿದೆ ಉತ್ತರ
ಇಂದು ಬನದ ಹುಣ್ಣಿಮೆ, ಈ ದಿನದ ರಾಶಿ ಭವಿಷ್ಯ, ಗ್ರಹಗಳ ಸಂಚಾರ ತಿಳಿಯಿರಿ
ಇಂದು ಬನದ ಹುಣ್ಣಿಮೆ, ಈ ದಿನದ ರಾಶಿ ಭವಿಷ್ಯ, ಗ್ರಹಗಳ ಸಂಚಾರ ತಿಳಿಯಿರಿ
ಜಗದೀಶ್ ಬೆಳ್ಯಪ್ಪ, ಎಂ ಶ್ರೀಕಾಂತ್​ಗೆ ಬೆಂಗಳೂರು ಪ್ರೆಸ್​ಕ್ಲಬ್​ ಪ್ರಶಸ್ತಿ
ಜಗದೀಶ್ ಬೆಳ್ಯಪ್ಪ, ಎಂ ಶ್ರೀಕಾಂತ್​ಗೆ ಬೆಂಗಳೂರು ಪ್ರೆಸ್​ಕ್ಲಬ್​ ಪ್ರಶಸ್ತಿ
ಹಸುಗಳ ಮಾಲೀಕರಿಗೆ ವೈಯಕ್ತಿಕ ಪರಿಹಾರ ಕೊಡುತ್ತೇನೆ ಎಂದ ಸಚಿವ ಜಮೀರ್
ಹಸುಗಳ ಮಾಲೀಕರಿಗೆ ವೈಯಕ್ತಿಕ ಪರಿಹಾರ ಕೊಡುತ್ತೇನೆ ಎಂದ ಸಚಿವ ಜಮೀರ್
ಹಸುಗಳ ಕೆಚ್ಚಲು ಕೊಯ್ದು ವಿಕೃತಿ, ಕೇಸ್ ಬುಕ್: ಸಿಎಂ ಹೇಳಿದ್ದೇನು?
ಹಸುಗಳ ಕೆಚ್ಚಲು ಕೊಯ್ದು ವಿಕೃತಿ, ಕೇಸ್ ಬುಕ್: ಸಿಎಂ ಹೇಳಿದ್ದೇನು?