Fact Check: ಪಾಕಿಸ್ತಾನದಲ್ಲಿ 6 ಜನ ಸಹೋದರರು ತಮ್ಮ 6 ಸಹೋದರಿಯರನ್ನು ವಿವಾಹವಾಗಿದ್ದು ನಿಜವೇ?, ಇಲ್ಲಿದೆ ಸತ್ಯಾಂಶ

ಈ ಪೋಸ್ಟ್​ನ ಸತ್ಯಾಸತ್ಯತೆಯನ್ನು ಟಿವಿ9 ಕನ್ನಡ ಪರಿಶೋದಿಸಿದಾಗ ಸುಳ್ಳು ಹೇಳಿಕೆಯೊಂದಿಗೆ ಇದು ವೈರಲ್ ಆಗುತ್ತಿದೆ ಎಂಬುದು ಕಂಡುಬಂದಿದೆ. ಪಾಕಿಸ್ತಾನದಲ್ಲಿ 6 ಸಹೋದರರು ತಮ್ಮ ಸ್ವಂತ ಸಹೋದರಿಯರನ್ನು ಮದುವೆಯಾಗಿಲ್ಲ, ಆದರೆ ಇತರ ಕುಟುಂಬಗಳ 6 ಹುಡುಗಿಯರನ್ನು ಮದುವೆಯಾಗಿದ್ದಾರೆ. ಮದುವೆಯ ಖರ್ಚು ಕಡಿಮೆ ಮಾಡಲು ಈ ಸಾಮೂಹಿಕ ವಿವಾಹ ಮಾಡಲಾಗಿದೆ.

Fact Check: ಪಾಕಿಸ್ತಾನದಲ್ಲಿ 6 ಜನ ಸಹೋದರರು ತಮ್ಮ 6 ಸಹೋದರಿಯರನ್ನು ವಿವಾಹವಾಗಿದ್ದು ನಿಜವೇ?, ಇಲ್ಲಿದೆ ಸತ್ಯಾಂಶ
Pakistan 6 Brothers Marry 6 Sisters Fact Check
Follow us
ಪ್ರೀತಿ ಭಟ್​, ಗುಣವಂತೆ
| Updated By: Vinay Bhat

Updated on: Jan 13, 2025 | 9:07 PM

ಸಾಮಾಜಿಕ ಜಾಲತಾಣದಲ್ಲಿ ಫೋಟೋವೊಂದು ವೈರಲ್ ಆಗಿದೆ. ಈ ಚಿತ್ರದಲ್ಲಿ ವಧು-ವರರು ಕಾಣಿಸಿಕೊಂಡಿದ್ದಾರೆ (ಆರು ಪುರುಷರು-ಆರು ಮಹಿಳೆಯರು). ವರನ ಕುತ್ತಿಗೆಯಲ್ಲಿ ಮಾಲೆಗಳನ್ನು ಹಾಕಿರುವುದು ಕಾಣಬಹುದು ಮತ್ತು ವಧುಗಳು ಮದುವೆಯ ದಿರಿಸುಗಳಲ್ಲಿ ಕಂಗೊಳಿಸುತ್ತಿದ್ದಾರೆ. ಭಾರೀ ಚರ್ಚೆಗೆ ಗ್ರಾಸವಾಗಿರುವ ಸಾಮೂಹಿಕ ವಿವಾಹದ ಈ ಫೋಟೋ ಪಾಕಿಸ್ತಾನದ್ದು ಎಂದು ಹೇಳಲಾಗಿದೆ. ಪಾಕಿಸ್ತಾನದಲ್ಲಿ 6 ಮಂದಿ ನಿಜವಾದ ಸಹೋದರರು ತಮ್ಮ 6 ಸಹೋದರಿಯರನ್ನು ವಿವಾಹವಾಗಿದ್ದಾರೆ ಎಂಬ ಪೋಸ್ಟ್ ಅನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುತ್ತಿದ್ದಾರೆ.

ಎಕ್ಸ್ ಬಳಕೆದಾರರೊಬ್ಬರು ಈ ಪೋಸ್ಟ್ ಅನ್ನು ಹಂಚಿಕೊಂಡು, ‘‘6 ಮುಸ್ಲಿಂ ಸಹೋದರರು ತಮ್ಮ ಸ್ವಂತ 6 ಮುಸ್ಲಿಂ ಸಹೋದರಿಯರನ್ನು ವಿವಾಹವಾಗಿದ್ದಾರೆ. ಇದು ಇಸ್ಲಾಮಿನ ಸೌಂದರ್ಯವೇ? ತನ್ನ ಸ್ವಂತ ಸಹೋದರಿಯರನ್ನು ಮದುವೆಯಾಗುವ ಯಾವುದೇ ಧರ್ಮ ಅಥವಾ ಧರ್ಮವು ಜಗತ್ತಿನಲ್ಲಿ ಇರುವುದಿಲ್ಲ, ಅದು ಕೂಡ 6 ಸಹೋದರರು ಮತ್ತು 6 ಸಹೋದರಿಯರನ್ನು ಮದುವೆಯಾಗೋದು’’ ಎಂದು ಬರೆದುಕೊಂಡಿದ್ದಾರೆ.

Fact Check:

ಈ ಪೋಸ್ಟ್​ನ ಸತ್ಯಾಸತ್ಯತೆಯನ್ನು ಟಿವಿ9 ಕನ್ನಡ ಪರಿಶೋದಿಸಿದಾಗ ಸುಳ್ಳು ಹೇಳಿಕೆಯೊಂದಿಗೆ ಇದು ವೈರಲ್ ಆಗುತ್ತಿದೆ ಎಂಬುದು ಕಂಡುಬಂದಿದೆ. ನಿಜಾಂಶವನ್ನು ತಿಳಿಯಲು ನಾವು ಮೊದಲಿಗೆ ಕೀವರ್ಡ್‌ ಸಹಾಯದಿಂದ ಗೂಗಲ್​ನಲ್ಲಿ ಸರ್ಚ್ ಮಾಡಿದ್ದೇವೆ. ಆಗ ನಮಗೆ ಹಲವು ಪಾಕಿಸ್ತಾನಿ ಮಾಧ್ಯಮಗಳು ಈ ಕುರಿತು ವರದಿ ಮಾಡಿರುವುದು ಸಿಕ್ಕಿದೆ.

ಜನವರಿ 8, 2025 ರ Express.pk ವರದಿಯ ಪ್ರಕಾರ, ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಪೀರ್ವಾಲಾ, ಜಲಾಲ್‌ಪುರ ಪ್ರದೇಶದಲ್ಲಿ 6 ಸಹೋದರರು ಇನ್ನೊಂದು ಒಂದೇ ಕುಟುಂಬದ 6 ಸಹೋದರಿಯರನ್ನು ಸರಳ ಸಮಾರಂಭದಲ್ಲಿ ವಿವಾಹವಾದರು ಎಂದು ಹೇಳುತ್ತದೆ. ಮದುವೆಯ ವೆಚ್ಚವನ್ನು ಕಡಿಮೆ ಮಾಡಲು ಸಾಮೂಹಿಕ ಮದುವೆಯನ್ನು ಮಾಡಲಾಯಿತು. ಈ ವಿವಾಹಕ್ಕೆ 1 ಲಕ್ಷ ಪಾಕಿಸ್ತಾನಿ ರೂಪಾಯಿ ವೆಚ್ಚವಾಗಿದೆ. ವಧುವಿನ ಕುಟುಂಬಕ್ಕೆ ಆರ್ಥಿಕ ಹೊರೆಯಾಗುವುದನ್ನು ತಪ್ಪಿಸಲು ನಾವೇ ಮದುವೆಗೆ ಎಲ್ಲಾ ವ್ಯವಸ್ಥೆ ಮಾಡಿದ್ದೇವೆ ಮತ್ತು ಯಾವುದೇ ವರದಕ್ಷಿಣೆ ತೆಗೆದುಕೊಳ್ಳಲಿಲ್ಲ ಎಂದು ವರ ಕಮ್ರಾನ್ ಅಬ್ಬಾಸ್ ಹೇಳಿರುವುದನ್ನು ಇಲ್ಲಿ ಉಲ್ಲೇಖಿಸಲಾಗಿದೆ.

ಮತ್ತೊಂದು ವರದಿಯ ಪ್ರಕಾರ, ಮುಲ್ತಾನ್ ನಗರದ ದಕ್ಷಿಣಕ್ಕೆ ಸುಮಾರು 90 ಕಿಮೀ ದೂರದಲ್ಲಿರುವ ಜಲಾಲ್‌ಪುರ ಪೀರ್‌ವಾಲಾದಲ್ಲಿ ಈ ಸಾಮೂಹಿಕ ವಿವಾಹ ನಡೆದಿದೆ ಎಂದು ಈ ವರದಿಗಳಲ್ಲಿ ಹೇಳಲಾಗಿದೆ. ಮದುವೆಯ ಮೇಲಿನ ದೊಡ್ಡ ವೆಚ್ಚವನ್ನು ಕಡಿಮೆ ಮಾಡುವುದು ಇದರ ಮುಖ್ಯ ಉದ್ದೇಶವಾಗಿತ್ತು. ವಧು-ವರರ ನಡುವಿನ ಪರಸ್ಪರ ಸಂಬಂಧದ ಬಗ್ಗೆ, ಎಲ್ಲಾ ಆರು ಸಹೋದರಿಯರು ಒಂದೇ ಕುಟುಂಬದವರು ಆದರೆ, ನಿಜವಾದ ಸಹೋದರಿಯರಲ್ಲ ಎಂದು ಹೇಳಲಾಗಿದೆ. ಮತ್ತೊಂದೆಡೆ, ಆರು ಸಹೋದರರು ಸಹ ಸಂಬಂಧ ಹೊಂದಿಲ್ಲ, ಅವರು ಒಂದೇ ಕುಟುಂಬಕ್ಕೆ ಸೇರಿದವರಷ್ಟೆ. ಅಂದರೆ, ಆರು ಸಹೋದರಿಯರು ಒಂದೇ ತಾಯಿಯ ಹೊಟ್ಟೆಯಿಂದ ಜನಿಸಿದವರಲ್ಲ. ಅವರ ನಡುವೆ ಅಣ್ಣ-ತಂಗಿ ಸಂಬಂಧ ಇದೆ, ಆದರೆ ಅವರು ರಕ್ತ ಸಂಬಂಧಿಗಳಲ್ಲ ಎಂದು ಹೇಳಲಾಗಿದೆ.

ಟಿವಿ9 ಕನ್ನಡ ಕೂಡ ಜನವರಿ 8, 2025 ರಂದು ಈ ಕುರಿತು ಸುದ್ದಿ ಪ್ರಕಟಿಸಿದೆ. ಒಟ್ಟಿಗೆ ಮದುವೆಯಾಗುವುದರಿಂದ ಖರ್ಚು ಕಡಿಮೆಯಾಗುತ್ತದೆ ಎನ್ನುವ ಕಾರಣಕ್ಕೆ ಸಹೋದರಿಗೆ 18 ವರ್ಷ ತುಂಬುವವರೆಗೂ ಕಾದು ಎಲ್ಲರೂ ಒಟ್ಟಿಗೆ ವಿವಾಹವಾಗಿದ್ದಾರೆ. ಈ ಮದುವೆಗೆ ಯಾರೂ ವರದಕ್ಷಿಣೆ ತೆಗೆದುಕೊಂಡಿಲ್ಲ, ಪಾಕಿಸ್ತಾನದ ಮುಲ್ತಾನ್​ನಲ್ಲಿ ಈ ಘಟನೆ ನಡೆದಿದೆ. ವಧು-ವರರು ಸೋದರ ಸಂಬಂಧಿಗಳು ಎಂದು ಹೇಳಲಾಗುತ್ತಿದೆ. ಈ ಸಾಮೂಹಿಕ ವಿವಾಹಕ್ಕೆ ಕೇವಲ 1 ಲಕ್ಷ ಪಾಕಿಸ್ತಾನಿ ರೂಪಾಯಿ ಖರ್ಚಾಗಿದೆ. ಭಾರತೀಯ ಕರೆನ್ಸಿಯಲ್ಲಿ ನೋಡಿದರೆ ಈ ಮೊತ್ತ ಕೇವಲ 30,000 ರೂ. ಆಗಿದೆ. ಇದೇ ವೇಳೆ ವರನ ತಂದೆಯನ್ನು ಈ ವಿಚಾರವಾಗಿ ಮಾತನಾಡಿಸಿದಾಗ, ಕೆಲವು ಅದ್ಧೂರಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವುದಾಗಿ ತಿಳಿಸಿದರು. ಇಂತಹ ಘಟನೆಗಳು ಕುಟುಂಬಗಳ ಆರ್ಥಿಕ ಹೊರೆಯನ್ನು ಕಡಿಮೆ ಮಾಡುತ್ತದೆ ಎಂದು ಹೇಳಿದರು ಎಂಬುದನ್ನು ಉಲ್ಲೇಖಿಸಲಾಗಿದೆ.

ಹೀಗಾಗಿ ಈ ಎಲ್ಲ ಮಾಹಿತಿಯ ಆಧಾರದ ಮೇಲೆ ಪಾಕಿಸ್ತಾನದಲ್ಲಿ 6 ಸಹೋದರರು ತಮ್ಮ ಸ್ವಂತ ಸಹೋದರಿಯರನ್ನು ಮದುವೆಯಾಗಿಲ್ಲ, ಆದರೆ ಇತರ ಕುಟುಂಬಗಳ 6 ಹುಡುಗಿಯರನ್ನು ಮದುವೆಯಾಗಿದ್ದಾರೆ ಎಂಬುದು ಟಿವಿ9 ಕನ್ನಡ ವಾಸ್ತವ ಪರಿಶೀಲನೆಯಿಂದ ಸ್ಪಷ್ಟವಾಗಿದೆ. ಮದುವೆಯ ಖರ್ಚು ಕಡಿಮೆ ಮಾಡಲು ಈ ಸಾಮೂಹಿಕ ವಿವಾಹ ಮಾಡಲಾಗಿದೆ.

ಇನ್ನಷ್ಟು ಫ್ಯಾಕ್ಟ್ ಚೆಕ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಘಟನೆ ಸಿದ್ದರಾಮಯ್ಯ ಮತ್ತು ಅವರ ಸರ್ಕಾರಕ್ಕೆ ಒಳ್ಳೇದು ಮಾಡಲ್ಲ: ವಿಜಯೇಂದ್ರ
ಘಟನೆ ಸಿದ್ದರಾಮಯ್ಯ ಮತ್ತು ಅವರ ಸರ್ಕಾರಕ್ಕೆ ಒಳ್ಳೇದು ಮಾಡಲ್ಲ: ವಿಜಯೇಂದ್ರ
ಅಪಘಾತದ ಸ್ವರೂಪ ನೋಡಿದರೆ ಕಾರು ಚಾಲಕ ಬದುಕುಳಿದಿದ್ದೇ ಪವಾಡ
ಅಪಘಾತದ ಸ್ವರೂಪ ನೋಡಿದರೆ ಕಾರು ಚಾಲಕ ಬದುಕುಳಿದಿದ್ದೇ ಪವಾಡ
ಬೆಂಗಳೂರಿನ ಬಯೋ ಇನ್ನೋವೇಶನ್ ಸೆಂಟರ್​ನಲ್ಲಿ ಅಗ್ನಿ ಅವಘಡ
ಬೆಂಗಳೂರಿನ ಬಯೋ ಇನ್ನೋವೇಶನ್ ಸೆಂಟರ್​ನಲ್ಲಿ ಅಗ್ನಿ ಅವಘಡ
ಬಿಗ್ ಬಾಸ್ ಮುಗಿದ ಬಳಿಕ ಎಲ್​ಎಲ್​ಬಿ ಓದಲು ರೆಡಿ ಆದ ಚೈತ್ರಾ ಕುಂದಾಪುರ
ಬಿಗ್ ಬಾಸ್ ಮುಗಿದ ಬಳಿಕ ಎಲ್​ಎಲ್​ಬಿ ಓದಲು ರೆಡಿ ಆದ ಚೈತ್ರಾ ಕುಂದಾಪುರ
ಬೆಳಗಾವಿಯ ಖಾಸಗಿ ಆಸ್ಪತ್ರೆಯೊಂದರಲ್ಲಿ ಲಕ್ಷ್ಮಿ ಹೆಬ್ಬಾಳ್ಕರ್​​ಗೆ ಚಿಕಿತ್ಸೆ
ಬೆಳಗಾವಿಯ ಖಾಸಗಿ ಆಸ್ಪತ್ರೆಯೊಂದರಲ್ಲಿ ಲಕ್ಷ್ಮಿ ಹೆಬ್ಬಾಳ್ಕರ್​​ಗೆ ಚಿಕಿತ್ಸೆ
ಕಾರು ಅಪಘಾತದಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್​ ಬೆನ್ನು ಮೂಳೆ ಮುರಿತ!
ಕಾರು ಅಪಘಾತದಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್​ ಬೆನ್ನು ಮೂಳೆ ಮುರಿತ!
ಮಂಡ್ಯ: ಶಿವಲಿಂಗಕ್ಕೆ ಸ್ಪರ್ಶಿಸದ ಸೂರ್ಯ ರಶ್ಮಿ, ಕಾದಿದೆಯಾ ಗಂಡಾಂತರ?
ಮಂಡ್ಯ: ಶಿವಲಿಂಗಕ್ಕೆ ಸ್ಪರ್ಶಿಸದ ಸೂರ್ಯ ರಶ್ಮಿ, ಕಾದಿದೆಯಾ ಗಂಡಾಂತರ?
ರನೌಟ್​ನೊಂದಿಗೆ ವಿದೇಶಿ ಲೀಗ್ ಆರಂಭಿಸಿದ ದಿನೇಶ್ ಕಾರ್ತಿಕ್
ರನೌಟ್​ನೊಂದಿಗೆ ವಿದೇಶಿ ಲೀಗ್ ಆರಂಭಿಸಿದ ದಿನೇಶ್ ಕಾರ್ತಿಕ್
‘ಬಂಡವಾಳ ಗೊತ್ತಾಯ್ತು, ಪುಂಗಬೇಡ’; ಭವ್ಯಾ ಬಗ್ಗೆ ತ್ರಿವಿಕ್ರಂ ಖಾರದ ಮಾತು
‘ಬಂಡವಾಳ ಗೊತ್ತಾಯ್ತು, ಪುಂಗಬೇಡ’; ಭವ್ಯಾ ಬಗ್ಗೆ ತ್ರಿವಿಕ್ರಂ ಖಾರದ ಮಾತು
ಮಕರ ಸಂಕ್ರಾಂತಿ ಮತ್ತು ಮಕರ ಜ್ಯೋತಿ ಮಹತ್ವ ತಿಳಿಯಿರಿ
ಮಕರ ಸಂಕ್ರಾಂತಿ ಮತ್ತು ಮಕರ ಜ್ಯೋತಿ ಮಹತ್ವ ತಿಳಿಯಿರಿ