ಐಫೋನ್ ಬಳಸುವವರಿಗೆ ಶಾಕಿಂಗ್ ಸುದ್ದಿ: ಪ್ರಸಿದ್ಧ ಕ್ವಿಕ್-ಕಾಮರ್ಸ್ ತಾಣದ ಅಸಲಿ ಸತ್ಯ ಬಿಚ್ಚಿಟ್ಟ ಬೆಂಗಳೂರಿನ ಮಹಿಳೆ

ಆ್ಯಪಲ್ ಮತ್ತು ಆಂಡ್ರಾಯ್ಡ್ ಬಳಕೆದಾರರಿಗೆ ಕ್ವಿಕ್-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳು ವಿಭಿನ್ನ ಬೆಲೆ ತಂತ್ರಗಳನ್ನು ಹೇಗೆ ಅಳವಡಿಸಿಕೊಳ್ಳುತ್ತವೆ ಎಂಬುದನ್ನು ಎತ್ತಿ ತೋರಿಸುವ ಪುರಾವೆಗಳನ್ನು ಬೆಂಗಳೂರಿನ ಮಹಿಳೆಯೊಬ್ಬರು ಬಹಿರಂಗಪಡಿಸಿದ್ದಾರೆ. ಪೂಜಾ ಎಂಬವರು Zepto ನಲ್ಲಿ ಕೆಲ ಪ್ರಯೋಗವನ್ನು ನಡೆಸಿದ್ದಾರೆ. ಒಂದು ಐಟಮ್ನ ಬೆಲೆ ಐಫೋನ್ ಬಳಕೆದಾರರಿಗೆ ಒಂದು ರೀತಿ ತೋರಿಸಿದರೆ ಅದೇ ಐಟಮ್ನ ಬೆಲೆ ಆಂಡ್ರಾಯ್ಡ್ ಬಳಕೆದಾರರಿಗೆ ಮತ್ತೊಂದು ರೀತಿ ತೋರಿಸುತ್ತಿದೆ.

ಐಫೋನ್ ಬಳಸುವವರಿಗೆ ಶಾಕಿಂಗ್ ಸುದ್ದಿ: ಪ್ರಸಿದ್ಧ ಕ್ವಿಕ್-ಕಾಮರ್ಸ್ ತಾಣದ ಅಸಲಿ ಸತ್ಯ ಬಿಚ್ಚಿಟ್ಟ ಬೆಂಗಳೂರಿನ ಮಹಿಳೆ
Iphone Android Item Price Difference
Follow us
ಪ್ರೀತಿ ಭಟ್​, ಗುಣವಂತೆ
| Updated By: Vinay Bhat

Updated on:Jan 14, 2025 | 1:16 PM

ಐಫೋನ್ ಮತ್ತು ಆಂಡ್ರಾಯ್ಡ್ ಸ್ಮಾರ್ಟ್​ಫೋನ್ ಪೈಕಿ ಯಾವುದು ಬೆಸ್ಟ್ ಎಂಬ ಚರ್ಚೆ ನಡೆಯುತ್ತಲೇ ಇರುತ್ತದೆ. ಕೆಲವರು ಆಂಡ್ರಾಯ್ಡ್ ನಮಗೆ ಬೇಕಾದಂತೆ ಉಪಯೋಗಿಸಲು ಆಗುತ್ತದೆ ಹೀಗಾಗಿ ಇದೇ ಬೆಸ್ಟ್ ಎಂದರೆ, ಇನ್ನೂ ಕೆಲವರು ನಾವು ಸ್ಟಾಂಡರ್ಡ್ ಪೀಪಲ್.. ಐಫೋನ್ ಮಾತ್ರ ಯೂಸ್ ಮಾಡುವುದು ಎನ್ನುತ್ತಾರೆ. ಆದರೀಗ ಇದೇ ಸ್ಟಾಂಡರ್ಡ್ ಪೀಪಲ್​ಗೆ ಶಾಕಿಂಗ್ ಸುದ್ದಿಯೊಂದು ಹೊರಬಿದ್ದಿದೆ. ದುಬಾರಿ ಬೆಲೆಯ ಐಫೋನ್ ಉಪಯೋಗಿಸುವವರು ತಮ್ಮ ಫೋನ್ ಮೂಲಕ ಖರೀದಿಸುವ ಐಟಮ್​ಗಳಿಗೂ ಹೆಚ್ಚಿನ ಹಣವನ್ನು ವ್ಯಹಿಸಬೇಕಾಗುತ್ತದೆ. ಇದರ ಇಂಚಿಂಚು ಮಾಹಿತಿಯನ್ನು ಬೆಂಗಳೂರಿನ ಮಹಿಳೆ ತೆರೆದಿಟ್ಟಿದ್ದಾರೆ.

ಆ್ಯಪಲ್ ಮತ್ತು ಆಂಡ್ರಾಯ್ಡ್ ಬಳಕೆದಾರರಿಗೆ ಕ್ವಿಕ್-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳು ವಿಭಿನ್ನ ಬೆಲೆ ತಂತ್ರಗಳನ್ನು ಹೇಗೆ ಅಳವಡಿಸಿಕೊಳ್ಳುತ್ತವೆ ಎಂಬುದನ್ನು ಎತ್ತಿ ತೋರಿಸುವ ಪುರಾವೆಗಳನ್ನು ಬೆಂಗಳೂರಿನ ಮಹಿಳೆಯೊಬ್ಬರು ಬಹಿರಂಗಪಡಿಸಿದ್ದಾರೆ. ಇನ್​ಸ್ಟಾಗ್ರಾಮ್ ಬಳಕೆದಾರ ಪೂಜಾ ಛಬ್ಡಾ ಎಂಬವರು Zepto ನಲ್ಲಿ ಕೆಲ ಪ್ರಯೋಗವನ್ನು ನಡೆಸಿದ್ದಾರೆ. ಈ ಪ್ಲಾಟ್‌ಫಾರ್ಮ್​ ಒಂದು ಐಟಮ್​ನ ಬೆಲೆ ಐಫೋನ್ ಬಳಕೆದಾರರಿಗೆ ಒಂದು ರೀತಿ ತೋರಿಸಿದರೆ ಅದೇ ಐಟಮ್​ನ ಬೆಲೆ ಆಂಡ್ರಾಯ್ಡ್ ಬಳಕೆದಾರರಿಗೆ ಮತ್ತೊಂದು ರೀತಿ ತೋರಿಸುತ್ತಿದೆ.

ಪೂಜಾ ಅವರು ಒಂದು ಐಫೋನ್ ಮತ್ತು ಆಂಡ್ರಾಯ್ಡ್ ಸ್ಮಾರ್ಟ್​ಫೋನ್ ತೆಗೆದುಕೊಂಡು ಎರಡರಲ್ಲೂ Zepto ಆ್ಯಪ್ ಅನ್ನು ತೆರೆದರು. ಆ್ಯಂಡ್ರಾಯ್ಡ್ ಫೋನ್‌ನಲ್ಲಿ 500 ಗ್ರಾಂ ದ್ರಾಕ್ಷಿಯ ಬೆಲೆ ರೂ. 65 ಎಂದು ತೋರಿಸಲಾಗುತ್ತದೆ. ಆದರೆ, ಆ್ಯಪಲ್ ಐಫೋನ್ ಬಳಕೆದಾರರಿಗೆ, ಅದೇ ಪ್ರಮಾಣದ ದ್ರಾಕ್ಷಿಯ ಬೆಲೆ ಎರಡು ಪಟ್ಟು ಹೆಚ್ಚು ಅಂದರೆ ರೂ. 146 ಎಂದು ತೋರಿಸುತ್ತದೆ.

Google Mahakumbh: ಭಕ್ತಿಯ ಬಣ್ಣಗಳಲ್ಲಿ ಮುಳುಗಿದ ಗೂಗಲ್: ನಿಮ್ಮ ಫೋನ್‌ನಲ್ಲಿ ಒಮ್ಮೆ ಮಹಾಕುಂಭ ಎಂದು ಬರೆದು ನೋಡಿ

ಐಫೋನ್ ಬಳಕೆದಾರರು ಒಂದೇ ಉತ್ಪನ್ನಕ್ಕೆ ಹೆಚ್ಚು ಪಾವತಿಸಿದ ಏಕೈಕ ನಿದರ್ಶನ ಇದಾಗಿರಲಿಲ್ಲ. ಆಂಡ್ರಾಯ್ಡ್ ಅನ್ನು ಬಳಸುವಾಗ Zepto ನಲ್ಲಿ ಕ್ಯಾಪ್ಸಿಕಮ್ ಬೆಲೆ ರೂ. 37 ಇದ್ದರೆ, ಅದೇ ಐಫೋನ್‌ನಲ್ಲಿ ಇದರ ಬೆಲೆ ರೂ. 69 ಆಗಿದೆ. ಬೆಂಗಳೂರಿನ ಮಹಿಳೆ ಈ ವಿಚಾರವನ್ನು ಸಾಕ್ಷಿ ಸಮೇತ ಬಹಿರಂಗ ಪಡಿಸಿದ್ದಾರೆ.

ಈ ಕುರಿತ ವಿಡಿಯೋವನ್ನು ಕೆಳಗೆ ವೀಕ್ಷಿಸಿ:

ಜನರು ಈ ರೀತಿ ಪ್ರತಿಕ್ರಿಯಿಸಿದರು:

ಒಬ್ಬ ಬಳಕೆದಾರರು ಹೀಗೆ ಬರೆದಿದ್ದಾರೆ- ನೀವು ಐಫೋನ್ ಬಳಸುತ್ತಿದ್ದೀರಿ, ಆದ್ದರಿಂದ ನೀವು ಆ್ಯಪಲ್​ನ ಬೆಲೆಯನ್ನು ಪಾವತಿಸಬೇಕಾಗುತ್ತದೆ. ಮತ್ತೊಬ್ಬರು ಇದೇ ಕಾರಣಕ್ಕಾಗಿ ನನ್ನ ಬಳಿ ಆಂಡ್ರಾಯ್ಡ್ ಫೋನ್ ಇದೆ ಎಂದು ಕಾಮೆಂಟ್ ಮಾಡಿದ್ದಾರೆ. ನೀವು ಐಫೋನ್ ಖರೀದಿಸಿದ್ದೀರಿ ಹೀಗಾಗಿ ನೀವು ಶ್ರೀಮಂತರು ಎಂದು ಹೆಚ್ಚಿನ ಬೆಲೆ ಕೊಟ್ಟು ಖರೀದಿಸಲಿ ಎಂದು ಹೀಗೆ ಮಾಡಲಾಗಿದೆ ಎಂದಿದ್ದಾರೆ. ಮತ್ತೋರ್ವ ಬಳಕೆದಾರ ಇದು ತುಂಬಾ ಗಂಭೀರವಾದ ಸಮಸ್ಯೆಯಾಗಿದೆ, ಇದು ಹೀಗೆ ಮುಂದುವರಿದರೆ, ನಾನು ಖಂಡಿತವಾಗಿಯೂ ಐಫೋನ್ ಅನ್ನು ಬಳಸುವುದನ್ನು ನಿಲ್ಲಿಸುತ್ತೇನೆ ಎಂದಿದ್ದಾರೆ. ಇನ್ನೊಬ್ಬ ಬಳಕೆದಾರರು, ಐಫೋನ್ ಬಳಕೆದಾರರಿಗೆ ಎಲ್ಲವೂ ದುಬಾರಿಯಾಗಿದೆ ಎಂದು ತೋರುತ್ತದೆ. ನಿಮ್ಮ ಸ್ಥಾನಮಾನಕ್ಕೆ ತಕ್ಕಂತೆ ಬೆಲೆ ತೆರಬೇಕಾಗುತ್ತದೆ ಎಂದು ಕಾಮೆಂಟ್ ಮಾಡಿದ್ದಾರೆ.

ತಂತ್ರಜ್ಞಾನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 1:14 pm, Tue, 14 January 25

ಸರ್ಕಾರದ ಅಸ್ಥಿಪಂಜರ ಮಾತ್ರ ಉಳಿದಿದೆ, ಸುಟ್ಟುಹೋಗೋದು ನಿಶ್ಚಿತ: ಸೋಮಣ್ಣ
ಸರ್ಕಾರದ ಅಸ್ಥಿಪಂಜರ ಮಾತ್ರ ಉಳಿದಿದೆ, ಸುಟ್ಟುಹೋಗೋದು ನಿಶ್ಚಿತ: ಸೋಮಣ್ಣ
ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಮನೆಗೆ ನುಗ್ಗಿದ ಚಿರತೆ, ವಿಡಿಯೋ ನೋಡಿ
ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಮನೆಗೆ ನುಗ್ಗಿದ ಚಿರತೆ, ವಿಡಿಯೋ ನೋಡಿ
ದರ್ಶನ್, ಶಿವಣ್ಣ ಬಳಿಕ ಧ್ರುವ ಸರ್ಜಾಗೆ ಮಚ್ಚು ನೀಡಿದ ಜೋಗಿ ಪ್ರೇಮ್
ದರ್ಶನ್, ಶಿವಣ್ಣ ಬಳಿಕ ಧ್ರುವ ಸರ್ಜಾಗೆ ಮಚ್ಚು ನೀಡಿದ ಜೋಗಿ ಪ್ರೇಮ್
ತ್ರಿವೇಣಿ ಸಂಗಮ ರಸ್ತೆಯಲ್ಲಿ ನಂದಿನಿ ಹಾಲಿಂದ ತಯಾರಾಗುವ ಬಿಸಿಬಿಸಿ ಚಹಾ ಲಭ್ಯ
ತ್ರಿವೇಣಿ ಸಂಗಮ ರಸ್ತೆಯಲ್ಲಿ ನಂದಿನಿ ಹಾಲಿಂದ ತಯಾರಾಗುವ ಬಿಸಿಬಿಸಿ ಚಹಾ ಲಭ್ಯ
ಅಹಮದಾಬಾದ್‌ನಲ್ಲಿ ಮಕರ ಸಂಕ್ರಾಂತಿ ಹಬ್ಬಕ್ಕೆ ಗಾಳಿಪಟ ಹಾರಿಸಿದ ಅಮಿತ್ ಶಾ
ಅಹಮದಾಬಾದ್‌ನಲ್ಲಿ ಮಕರ ಸಂಕ್ರಾಂತಿ ಹಬ್ಬಕ್ಕೆ ಗಾಳಿಪಟ ಹಾರಿಸಿದ ಅಮಿತ್ ಶಾ
ಹಿಂದಿನ ಸರ್ಕಾರ ಸಾಲಗಳನ್ನು ನಮ್ಮ ಸರ್ಕಾರ ತೀರಿಸುತ್ತಿದೆ: ಪ್ರಿಯಾಂಕ್ ಖರ್ಗೆ
ಹಿಂದಿನ ಸರ್ಕಾರ ಸಾಲಗಳನ್ನು ನಮ್ಮ ಸರ್ಕಾರ ತೀರಿಸುತ್ತಿದೆ: ಪ್ರಿಯಾಂಕ್ ಖರ್ಗೆ
ನಾಳೆ ದೆಹಲಿಗೆ ತೆರಳುವ ಮೊದಲು ಎಲ್ಲವನ್ನೂ ಮಾತಾಡುವೆ: ಕುಮಾರಸ್ವಾಮಿ
ನಾಳೆ ದೆಹಲಿಗೆ ತೆರಳುವ ಮೊದಲು ಎಲ್ಲವನ್ನೂ ಮಾತಾಡುವೆ: ಕುಮಾರಸ್ವಾಮಿ
ಮಹಾಕುಂಭದಲ್ಲಿ ಸಂಕ್ರಾಂತಿಯ ದಿನವಾದ ಇಂದು 2.5 ಕೋಟಿ ಭಕ್ತರಿಂದ ತೀರ್ಥ ಸ್ನಾನ
ಮಹಾಕುಂಭದಲ್ಲಿ ಸಂಕ್ರಾಂತಿಯ ದಿನವಾದ ಇಂದು 2.5 ಕೋಟಿ ಭಕ್ತರಿಂದ ತೀರ್ಥ ಸ್ನಾನ
ಮಿಡ್ ವೀಕ್ ಎಲಿನಿಮೇಷನ್ ಟಾಸ್ಕ್, ಗೆದ್ದವರ್ಯಾರು? ಸೋತವರ್ಯಾರು?
ಮಿಡ್ ವೀಕ್ ಎಲಿನಿಮೇಷನ್ ಟಾಸ್ಕ್, ಗೆದ್ದವರ್ಯಾರು? ಸೋತವರ್ಯಾರು?
ವೇದಿಕೆ ಮೇಲೆ ಚರ್ಚೆಯಲ್ಲಿ ಮಗ್ನರಾದ ಕುಮಾರಸ್ವಾಮಿ ಮತ್ತು ವಿಜಯೇಂದ್ರ
ವೇದಿಕೆ ಮೇಲೆ ಚರ್ಚೆಯಲ್ಲಿ ಮಗ್ನರಾದ ಕುಮಾರಸ್ವಾಮಿ ಮತ್ತು ವಿಜಯೇಂದ್ರ