AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Google Mahakumbh: ಭಕ್ತಿಯ ಬಣ್ಣಗಳಲ್ಲಿ ಮುಳುಗಿದ ಗೂಗಲ್: ನಿಮ್ಮ ಫೋನ್‌ನಲ್ಲಿ ಒಮ್ಮೆ ಮಹಾಕುಂಭ ಎಂದು ಬರೆದು ನೋಡಿ

ನೀವು ನಿಮ್ಮ ಮೊಬೈಲ್ ಫೋನ್ ಅಥವಾ ಡೆಸ್ಕ್‌ಟಾಪ್‌ನಲ್ಲಿ ಗೂಗಲ್ ಅನ್ನು ತೆರೆಯಬೇಕಾಗುತ್ತದೆ. ಇದರ ನಂತರ, ಸರ್ಚ್ ಬಾರ್ನಲ್ಲಿ ಮಹಾಕುಂಭ ಎಂದು ಕನ್ನಡ, ಹಿಂದಿ ಅಥವಾ ಇಂಗ್ಲಿಷ್‌ನಲ್ಲಿ ಬರೆಯಬೇಕು. ಇದನ್ನು ಬರೆದ ಕೆಲವೇ ನಿಮಿಷಗಳಲ್ಲಿ ನಿಮ್ ಡಿಸ್ಪ್ಲೇ ಮೇಲೆ ಗುಲಾಬಿ ದಳಗಳ ಮಳೆ ಸುರಿಯುತ್ತದೆ. ಅಲ್ಲದೆ, ಕೆಳಭಾಗದಲ್ಲಿ ನೀವು ಪರದೆಯ ಮೇಲೆ ಮೂರು ಆಯ್ಕೆಗಳನ್ನು ನೋಡುತ್ತೀರಿ.

Google Mahakumbh: ಭಕ್ತಿಯ ಬಣ್ಣಗಳಲ್ಲಿ ಮುಳುಗಿದ ಗೂಗಲ್: ನಿಮ್ಮ ಫೋನ್‌ನಲ್ಲಿ ಒಮ್ಮೆ ಮಹಾಕುಂಭ ಎಂದು ಬರೆದು ನೋಡಿ
Mahakumbh Google
ಮಾಲಾಶ್ರೀ ಅಂಚನ್​
| Updated By: Vinay Bhat|

Updated on: Jan 14, 2025 | 12:30 PM

Share

ಜಗತ್ತಿನ ಅತಿ ದೊಡ್ಡ ಸರ್ಚ್ ಪ್ಲಾಟ್‌ಫಾರ್ಮ್ ಗೂಗಲ್ ಸದ್ಯ ಭಾರತದಲ್ಲಿ ನಡೆಯುತ್ತಿರುವ ಮಹಾ ಕುಂಭ ಉತ್ಸವದ ಭಕ್ತಿಯಲ್ಲಿ ಮುಳುಗಿ ಹೋಗಿದೆ. ಮಹಾಕುಂಭವನ್ನು ಉತ್ತರ ಪ್ರದೇಶದ ಪ್ರಯಾಗರಾಜ್‌ನಲ್ಲಿ ಆಯೋಜಿಸಲಾಗಿದೆ. ಇದರಲ್ಲಿ ಭಾರತ ಮತ್ತು ವಿದೇಶದಿಂದ ಅನೇಕ ಜನರು ಭಾಗವಹಿಸಲು ಬರುತ್ತಿದ್ದಾರೆ. ಈ ಸಂದರ್ಭವನ್ನು ವಿಶೇಷವಾಗಿಸಲು, ಗೂಗಲ್ ಮ್ಯಾಜಿಕ್ ಟೂಲ್ ಅನ್ನು ಹೊರತಂದಿದೆ. ನೀವು ಗೂಗಲ್‌ನಲ್ಲಿ ಮಹಾಕುಂಭ ಎಂದು ಸರ್ಚ್ ಮಾಡಿದರೆ, ನಿಮ್ಮ ಡಿಸ್​ಪ್ಲೇಯು ಗುಲಾಬಿ ದಳಗಳಿಂದ ತುಂಬಿ ಹೋಗುವಂತಹ ಮ್ಯಾಜಿಕ್ ಅನ್ನು ಗೂಗಲ್ ಮಾಡಿದೆ. ಅಲ್ಲದೆ ನೀವು ಈ ಫೋಟೋವನ್ನು ಯಾರೊಂದಿಗಾದರೂ ಹಂಚಿಕೊಳ್ಳಬಹುದು.

ಇದನ್ನು ಹೇಗೆ ಬಳಸುವುದು:

ಇದಕ್ಕಾಗಿ ನೀವು ನಿಮ್ಮ ಮೊಬೈಲ್ ಫೋನ್ ಅಥವಾ ಡೆಸ್ಕ್‌ಟಾಪ್‌ನಲ್ಲಿ ಗೂಗಲ್ ಅನ್ನು ತೆರೆಯಬೇಕಾಗುತ್ತದೆ. ಇದರ ನಂತರ, ಸರ್ಚ್ ಬಾರ್​ನಲ್ಲಿ ಮಹಾಕುಂಭ ಎಂದು ಕನ್ನಡ, ಹಿಂದಿ ಅಥವಾ ಇಂಗ್ಲಿಷ್‌ನಲ್ಲಿ ಬರೆಯಬೇಕು. ಇದನ್ನು ಬರೆದ ಕೆಲವೇ ನಿಮಿಷಗಳಲ್ಲಿ ನಿಮ್ ಡಿಸ್​ಪ್ಲೇ ಮೇಲೆ ಗುಲಾಬಿ ದಳಗಳ ಮಳೆ ಸುರಿಯುತ್ತದೆ. ಅಲ್ಲದೆ, ಕೆಳಭಾಗದಲ್ಲಿ ನೀವು ಪರದೆಯ ಮೇಲೆ ಮೂರು ಆಯ್ಕೆಗಳನ್ನು ನೋಡುತ್ತೀರಿ.

ಮೊದಲ ಆಯ್ಕೆಯನ್ನು ಕ್ಲಿಕ್ ಮಾಡುವ ಮೂಲಕ, ಗುಲಾಬಿ ದಳಗಳ ಮಳೆಯನ್ನು ನಿಲ್ಲಿಸಬಹುದು. ಹಾಗೆಯೆ ಎರಡನೆಯ ಮಧ್ಯದ ಆಯ್ಕೆಯನ್ನು ಟ್ಯಾಪ್ ಮಾಡುವ ಮೂಲಕ, ನೀವು ಇನ್ನೂ ಹೆಚ್ಚಿನ ಗುಲಾಬಿ ದಳಗಳನ್ನು ಬೀಳಿಸುವಂತೆ ಮಾಡಲು ಸಾಧ್ಯವಾಗುತ್ತದೆ. ಮೂರನೇ ಆಯ್ಕೆಯನ್ನು ಟ್ಯಾಪ್ ಮಾಡುವ ಮೂಲಕ, ಈ ಡಿಸ್​ಪ್ಲೇಯನ್ನು ಯಾರೊಂದಿಗಾದರೂ ಹಂಚಿಕೊಳ್ಳಬಹುದು.

12 ವರ್ಷಗಳ ನಂತರ ಈ ಬಾರಿ ಮಹಾಕುಂಭವನ್ನು ಆಯೋಜಿಸಲಾಗುತ್ತಿದೆ. ಈ ಬಾರಿ ಮಹಾಕುಂಭಕ್ಕೆ 35 ಕೋಟಿ ಭಕ್ತರು ಬರುವ ನಿರೀಕ್ಷೆ ಇದೆ. ಮಹಾಕುಂಭ ಜನವರಿ 13 ರಿಂದ ಫೆಬ್ರವರಿ 26 ರವರೆಗೆ ನಡೆಯಲಿದೆ. ಸುಮಾರು 10,000 ಎಕರೆ ಪ್ರದೇಶದಲ್ಲಿ ಇದನ್ನು ಆಯೋಜಿಸಲಾಗುತ್ತಿದೆ. ಜನವರಿ 2024 ರಲ್ಲಿ ಅಯೋಧ್ಯೆಯಲ್ಲಿ ಭಗವಾನ್ ರಾಮ್ ಲಾಲಾ ಪವಿತ್ರೀಕರಣದ ನಂತರ ನಡೆಯುತ್ತಿರುವ ಮೊದಲ ಮಹಾಕುಂಭ ಇದಾಗಿದೆ.

SIM card: ಸಿಮ್ ಕಾರ್ಡ್​ನ ಒಂದು ಸೈಡ್ ಕಟ್ ಮಾಡಿರುವುದು ಏಕೆ?, ನಿಮಗೆ ತಿಳಿದಿದೆಯೇ?

ಮೊದಲ ದಿನವಾದ ನಿನ್ನೆ (ಜ. 13) 1 ಕೋಟಿ ಭಕ್ತರು ತೀರ್ಥ ಸ್ನಾನ ಮಾಡಿದ್ದಾರೆ. ತ್ರಿವೇಣಿ ಸಂಗಮದಲ್ಲಿ ಭಕ್ತರ ದಟ್ಟಣೆ ಮುಂದುವರೆದಿದೆ. ಈ ಪ್ರದೇಶದಲ್ಲಿ ಡ್ರೋನ್ ಕಣ್ಗಾವಲು ಸಹ ಮಾಡಲಾಗುತ್ತಿದೆ. ಭದ್ರತೆಗಾಗಿ ನೀರೊಳಗಿನ ಡ್ರೋನ್‌ಗಳನ್ನು ಸಹ ಬಳಸಲಾಗಿದೆ. ಹರಿದ್ವಾರ, ಪ್ರಯಾಗರಾಜ್, ಉಜ್ಜಯಿನಿ ಮತ್ತು ನಾಸಿಕ್‌ಗಳಲ್ಲಿ ಪ್ರತಿ 12 ವರ್ಷಗಳಿಗೊಮ್ಮೆ ಕುಂಭಮೇಳವನ್ನು ಆಯೋಜಿಸಲಾಗುತ್ತದೆ. ಇವುಗಳಲ್ಲಿ ಪ್ರಯಾಗರಾಜ್‌ನಲ್ಲಿ ನಡೆಯುವ ಮಹಾ ಕುಂಭ ಮೇಳ ಅತ್ಯಂತ ವಿಶೇಷವಾಗಿರುತ್ತದೆ.

ಮಹಾಕುಂಭ ಹೇಗೆ ಆರಂಭವಾಯಿತು?

ಸಮುದ್ರ ಮಂಥನದ ಸಮಯದಲ್ಲಿ ದೇವತೆಗಳು ಮತ್ತು ರಾಕ್ಷಸರು ಅಮೃತ ಪಾತ್ರೆಗಾಗಿ ಕಾದಾಡುತ್ತಿದ್ದಾಗ ಇಂದ್ರನ ಮಗ ಜಯಂತನು ಅಮೃತ ಪಾತ್ರೆಯೊಂದಿಗೆ ಓಡಿಹೋದನು. ಕಲಶವನ್ನು ತೆಗೆದುಕೊಳ್ಳಲು ರಾಕ್ಷಸರೂ ಅವರ ಹಿಂದೆ ಓಡಿದರು. ಈ ಸಮಯದಲ್ಲಿ ರಾಕ್ಷಸರು ಮತ್ತು ದೇವತೆಗಳ ನಡುವೆ ಯುದ್ಧ ನಡೆಯಿತು. ಜಯಂತ ಅಮೃತ ಕಲಶದೊಂದಿಗೆ ಓಡಿ ಹೋದಾಗ ಅಮೃತ ಕಲಶದ ಕೆಲವು ಹನಿಗಳು ಇಂದು ಮಹಾಕುಂಭ ಆಯೋಜಿಸಿರುವ ಈ ನಾಲ್ಕು ಸ್ಥಳಗಳ ಮೇಲೆ ಬಿದ್ದವು. ಅಂದಿನಿಂದ, ಕುಂಭಮೇಳವನ್ನು ಪ್ರಯಾಗರಾಜ್, ಉಜ್ಜಯಿನಿ, ನಾಸಿಕ್, ಹರಿದ್ವಾರದಲ್ಲಿ ಆಯೋಜಿಸಲಾಗುತ್ತಿದೆ ಎಂಬ ನಂಬಿಕೆಯಿದೆ.

ತಂತ್ರಜ್ಞಾನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಕೆಳಗಿಂದ ಮೇಲೆ ಹರಿವ ನೀರಿನಲ್ಲಿ ದೋಣಿ ಬಿಟ್ಟ ಸಚಿವ ಶಿವರಾಜ್ ಸಿಂಗ್ ಚೌಹಾಣ್
ಕೆಳಗಿಂದ ಮೇಲೆ ಹರಿವ ನೀರಿನಲ್ಲಿ ದೋಣಿ ಬಿಟ್ಟ ಸಚಿವ ಶಿವರಾಜ್ ಸಿಂಗ್ ಚೌಹಾಣ್
ಬ್ರೆಜಿಲ್​ನಲ್ಲಿ ಭಾರತೀಯ ಶಾಸ್ತ್ರೀಯ ಸಂಗೀತ ಕೇಳಿ ತಲೆದೂಗಿದ ಪ್ರಧಾನಿ ಮೋದಿ
ಬ್ರೆಜಿಲ್​ನಲ್ಲಿ ಭಾರತೀಯ ಶಾಸ್ತ್ರೀಯ ಸಂಗೀತ ಕೇಳಿ ತಲೆದೂಗಿದ ಪ್ರಧಾನಿ ಮೋದಿ
ಪ್ರೀತಿಸಿ ಮದುವೆಯಾದಕೆಯನ್ನು ಬಿಟ್ಟು ಮತ್ತೊಂದು ಮದ್ವೆ: ಪ್ರೀತಿ ಕೊಂದ ಪವನ್
ಪ್ರೀತಿಸಿ ಮದುವೆಯಾದಕೆಯನ್ನು ಬಿಟ್ಟು ಮತ್ತೊಂದು ಮದ್ವೆ: ಪ್ರೀತಿ ಕೊಂದ ಪವನ್
ತಂದೆ ಬಗ್ಗೆ ಮಕ್ಕಳು ಕೇಳಿದರೆ ಏನು ಹೇಳ್ತೀರಿ? ನಿರ್ಧಾರ ತಿಳಿಸಿದ ಭಾವನಾ
ತಂದೆ ಬಗ್ಗೆ ಮಕ್ಕಳು ಕೇಳಿದರೆ ಏನು ಹೇಳ್ತೀರಿ? ನಿರ್ಧಾರ ತಿಳಿಸಿದ ಭಾವನಾ
ಪಕ್ಷದ ರಾಜ್ಯಾಧ್ಯಕ್ಷ ಸ್ಥಾನ ಅಧಿಕಾರವಲ್ಲ, ಅದೊಂದು ಜವಾಬ್ದಾರಿ: ಸಿಟಿ ರವಿ
ಪಕ್ಷದ ರಾಜ್ಯಾಧ್ಯಕ್ಷ ಸ್ಥಾನ ಅಧಿಕಾರವಲ್ಲ, ಅದೊಂದು ಜವಾಬ್ದಾರಿ: ಸಿಟಿ ರವಿ
ಯಡಿಯೂರಪ್ಪ ವಿರುದ್ಧ ನಾನು ವಾಗ್ದಾಳಿ ನಡೆಸಲೇ ಇಲ್ಲ: ಲಿಂಬಾವಳಿ
ಯಡಿಯೂರಪ್ಪ ವಿರುದ್ಧ ನಾನು ವಾಗ್ದಾಳಿ ನಡೆಸಲೇ ಇಲ್ಲ: ಲಿಂಬಾವಳಿ
ಕೇಸ್ ವಾಪಸ್ ತೆಗೆದುಕೊಂಡರೆ ಮನು ವಿರುದ್ಧ ಸಾಕ್ಷಿ ಬಿಡ್ತೀನಿ: ಸಂತ್ರಸ್ತೆ
ಕೇಸ್ ವಾಪಸ್ ತೆಗೆದುಕೊಂಡರೆ ಮನು ವಿರುದ್ಧ ಸಾಕ್ಷಿ ಬಿಡ್ತೀನಿ: ಸಂತ್ರಸ್ತೆ
ಸಿನಿಮಾ ಆರಿಸಿಕೊಂಡಿದ್ದೇಕೆ? ಜನಾರ್ಧನ ರೆಡ್ಡಿ ಪುತ್ರನ ಉತ್ತರ
ಸಿನಿಮಾ ಆರಿಸಿಕೊಂಡಿದ್ದೇಕೆ? ಜನಾರ್ಧನ ರೆಡ್ಡಿ ಪುತ್ರನ ಉತ್ತರ
ಪಕ್ಷದ ಕಾರ್ಯದರ್ಶಿ ಮತ್ತು ಅಧಿಕಾರಿಗಳ ಸಭೆ ರಾಮನಗರದಲ್ಲಿ ನಡೆಯಲಿದೆ: ಶಾಸಕ
ಪಕ್ಷದ ಕಾರ್ಯದರ್ಶಿ ಮತ್ತು ಅಧಿಕಾರಿಗಳ ಸಭೆ ರಾಮನಗರದಲ್ಲಿ ನಡೆಯಲಿದೆ: ಶಾಸಕ
ಮನೆಯಲ್ಲಿ ಯಾರೂ ಇಲ್ಲದಿದ್ದಾಗ 3ನೇ ಮಹಡಿಯ ಕಿಟಕಿಯಿಂದ ಹೊರಗೆ ನೇತಾಡಿದ ಮಗು
ಮನೆಯಲ್ಲಿ ಯಾರೂ ಇಲ್ಲದಿದ್ದಾಗ 3ನೇ ಮಹಡಿಯ ಕಿಟಕಿಯಿಂದ ಹೊರಗೆ ನೇತಾಡಿದ ಮಗು