SIM card: ಸಿಮ್ ಕಾರ್ಡ್​ನ ಒಂದು ಸೈಡ್ ಕಟ್ ಮಾಡಿರುವುದು ಏಕೆ?, ನಿಮಗೆ ತಿಳಿದಿದೆಯೇ?

ಮೊದಲ ಸಿಮ್ ಕಾರ್ಡ್‌ಗಳನ್ನು ತಯಾರಿಸಿದಾಗ ಈಗಿನ ಸಿಮ್ ಕಾರ್ಡ್‌ಗಳಂತೆ ಮೂಲೆಯಲ್ಲಿ ಯಾವುದೇ ಕಟ್ ಇರಲಿಲ್ಲ. ಮೊಬೈಲ್ ಬಳಕೆದಾರರು ಸಿಮ್ ಅನ್ನು ಮೊಬೈಲ್ ಒಳಗೆ ನಿರ್ದಿಷ್ಟ ಸ್ಲಾಟ್ನಲ್ಲಿ ಸ್ಥಾಪಿಸಲು ಕಷ್ಟಪಡುತ್ತಿದ್ದರು. ಪ್ರತಿ ಬಾರಿ ಮೊಬೈಲ್ ಸ್ಲಾಟ್ನಲ್ಲಿ ಸಿಮ್ ಅನ್ನು ಹಿಮ್ಮುಖವಾಗಿ ಹಾಕಲಾಗುತಿತ್ತು. ಆದರೆ ಅದನ್ನು ಹೊರತೆಗೆಯಲು ಮತ್ತು ಅದನ್ನು ಮತ್ತೆ ಹಾಕಲು ಕಷ್ಟವಾಗುತ್ತಿತ್ತು.

SIM card: ಸಿಮ್ ಕಾರ್ಡ್​ನ ಒಂದು ಸೈಡ್ ಕಟ್ ಮಾಡಿರುವುದು ಏಕೆ?, ನಿಮಗೆ ತಿಳಿದಿದೆಯೇ?
Sim Card
Follow us
ಮಾಲಾಶ್ರೀ ಅಂಚನ್​
| Updated By: Vinay Bhat

Updated on: Jan 14, 2025 | 11:49 AM

Sim Card Cut: ಸಿಮ್ ಕಾರ್ಡ್ ಇಂದಿನ ಡಿಜಿಟಲ್ ಪ್ರಪಂಚದ ಪ್ರಮುಖ ಭಾಗವಾಗಿದೆ. ಈ ಚಿಕ್ಕ ಚಿಪ್ ಕಾರ್ಡ್ ನಮ್ಮನ್ನು ಮೊಬೈಲ್ ನೆಟ್‌ವರ್ಕ್‌ಗೆ ಸಂಪರ್ಕಿಸುತ್ತದೆ ಮತ್ತು ಕರೆಗಳು, ಸಂದೇಶಗಳು, ಇಂಟರ್ನೆಟ್ ಪ್ರವೇಶವನ್ನು ಒದಗಿಸುತ್ತದೆ. ಸಿಮ್ ಕಾರ್ಡ್‌ನ ಒಂದು ಮೂಲೆಯಲ್ಲಿ ಸಣ್ಣ ಕಟ್ ಇರುವುದನ್ನು ನೀವು ಗಮನಿಸಿರಬಹುದು. ಆದರೆ ಈ ರೀತಿ ಏಕೆ ನೀಡಲಾಗಿದೆ ಎಂದು ನೀವು ಎಂದಾದರೂ ಯೋಚಿಸಿದ್ದೀರಾ?. ಈ ಲೇಖನದ ಮೂಲಕ ನೀವು ಅದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆಯಿರಿ.

ಮೊದಲ ಸಿಮ್ ಕಾರ್ಡ್‌ಗಳನ್ನು ತಯಾರಿಸಿದಾಗ ಈಗಿನ ಸಿಮ್ ಕಾರ್ಡ್‌ಗಳಂತೆ ಮೂಲೆಯಲ್ಲಿ ಯಾವುದೇ ಕಟ್ ಇರಲಿಲ್ಲ. ಮೊಬೈಲ್ ಬಳಕೆದಾರರು ಸಿಮ್ ಅನ್ನು ಮೊಬೈಲ್​ ಒಳಗೆ ನಿರ್ದಿಷ್ಟ ಸ್ಲಾಟ್​ನಲ್ಲಿ ಸ್ಥಾಪಿಸಲು ಕಷ್ಟಪಡುತ್ತಿದ್ದರು. ಪ್ರತಿ ಬಾರಿ ಮೊಬೈಲ್​ ಸ್ಲಾಟ್​ನಲ್ಲಿ ಸಿಮ್ ಅನ್ನು ಹಿಮ್ಮುಖವಾಗಿ ಹಾಕಲಾಗುತಿತ್ತು. ಆದರೆ ಅದನ್ನು ಹೊರತೆಗೆಯಲು ಮತ್ತು ಅದನ್ನು ಮತ್ತೆ ಹಾಕಲು ಕಷ್ಟವಾಗುತ್ತಿತ್ತು. ಸಿಮ್ ಅಳವಡಿಸಲು ಎದುರಾಗುವ ತೊಂದರೆಗಳನ್ನು ಪರಿಗಣಿಸಿ ಟೆಲಿಕಾಂ ಕಂಪನಿಗಳು ಒಂದು ಮಹತ್ವದ ನಿರ್ಧಾರ ಕೈಗೊಂಡಿತು. ಅವರು ಸಿಮ್ ಕಾರ್ಡ್ ಅನ್ನು ಒಂದೇ ಬಾರಿಗೆ ಸರಿಯಾಗಿ ಒಳಗೆ ಕೂಡಿಸಲು ಅದರ ಮೂಲೆಯನ್ನು ಕತ್ತರಿಸುವುದಕ್ಕೆ ಅನುಮತಿಸಿದರು.

ತಾಂತ್ರಿಕ ಭದ್ರತೆ:

ಕಡಿತಕ್ಕೆ ಮತ್ತೊಂದು ಪ್ರಮುಖ ಕಾರಣವೆಂದರೆ ತಾಂತ್ರಿಕ ಭದ್ರತೆ. ಈ ಕಡಿತವು ಸಿಮ್ ಕಾರ್ಡ್ ಸರಿಯಾದ ಸ್ಲಾಟ್‌ಗೆ ಹೊಂದಿಕೊಳ್ಳುತ್ತದೆ ಎಂದು ಖಚಿತಪಡಿಸುತ್ತದೆ. ನೀವು ಸಿಮ್ ಕಾರ್ಡ್ ಅನ್ನು ತಲೆಕೆಳಗಾಗಿ ಅಥವಾ ತಪ್ಪು ದಿಕ್ಕಿನಲ್ಲಿ ಸೇರಿಸಲು ಪ್ರಯತ್ನಿಸಿದರೆ, ಅದು ಸ್ಲಾಟ್‌ಗೆ ಹೊಂದಿಕೆಯಾಗುವುದಿಲ್ಲ. ಈ ವಿನ್ಯಾಸವು ನೆಟವವರ್ಕ್ ಮತ್ತು ಸ್ಮಾರ್ಟ್​ಫೋನ್​ ಅನ್ನು ಹಾನಿಯಿಂದ ರಕ್ಷಿಸುತ್ತದೆ.

Tech Tips: ಸರ್ವಿಸ್ ಸೆಂಟರ್​ಗೆ ಫೋನ್ ಕೊಡುವ ಮುನ್ನ ಈ 3 ಕೆಲಸಗಳನ್ನು ಮಾಡಿ, ಇಲ್ಲದಿದ್ದರೆ ದೊಡ್ಡ ನಷ್ಟ ಅನುಭವಿಸುತ್ತೀರಿ

ಅಂತರರಾಷ್ಟ್ರೀಯ ಮಾನದಂಡಗಳು:

ಸಿಮ್ ಕಾರ್ಡ್‌ಗಳ ಗಾತ್ರ ಮತ್ತು ವಿನ್ಯಾಸಕ್ಕೆ ಸಂಬಂಧಿಸಿದಂತೆ ಅಂತರರಾಷ್ಟ್ರೀಯ ಮಾನದಂಡಗಳನ್ನು (ISO) ಹೊಂದಿಸಲಾಗಿದೆ. ಈ ಮಾನದಂಡಗಳು ಸಿಮ್ ಕಾರ್ಡ್‌ಗಳು ಎಲ್ಲಾ ರೀತಿಯ ಮೊಬೈಲ್ ಫೋನ್‌ಗಳು ಮತ್ತು ಸಾಧನಗಳೊಂದಿಗೆ ಹೊಂದಿಕೊಳ್ಳುತ್ತವೆ ಎಂದು ಖಚಿತಪಡಿಸುತ್ತದೆ. ಕಟ್ ವಿನ್ಯಾಸವು ಈ ಮಾನದಂಡಗಳ ಭಾಗವಾಗಿದೆ, ಆದ್ದರಿಂದ ಪ್ರತಿ ಸಾಧನದಲ್ಲಿ ಸಿಮ್ ಅನ್ನು ಸುಲಭವಾಗಿ ಬಳಸಬಹುದು.

ಸಿಮ್ ಕಾರ್ಡ್ ರಚನೆಯಲ್ಲಿ ಬದಲಾವಣೆ:

ಹಾಗೆ ಕಟ್ ಮಾಡಲು ಆರಂಭಿಸಿದ ನಂತರ ಸಿಮ್ ಕಾರ್ಡ್‌ಗಳ ವಿನ್ಯಾಸದಲ್ಲಿ ನಿಧಾನವಾಗಿ ಇನ್ನೂ ಕೆಲ ಬದಲಾವಣೆಗಳು ಆಗುತ್ತಿವೆ. ಈ ಹಿಂದೆ ಸಿಮ್ ಗಾತ್ರ ದೊಡ್ಡದಾಗಿತ್ತು. ಅದು ಈಗ ಅದು ತುಂಬಾ ಚಿಕ್ಕದಾಗಿದೆ ಎಂಬುದು ನೀವೂ ಗಮನಿಸಿರುತ್ತೀರಿ. ಏಕೆಂದರೆ ಈಗ ಬರುತ್ತಿರುವ ಮೊಬೈಲುಗಳಲ್ಲಿ ಸಣ್ಣ ಸಿಮ್ ಅನ್ನು ಮಾತ್ರ ಹೊಂದಿರುವಂತೆ ಸ್ಲಾಟ್​ ಮಾಡಲಾಗುತ್ತಿದೆ. ಸಿಮ್ ಹಳೆಯ ದೊಡ್ಡ ಗಾತ್ರದ ಪ್ಲೇಟ್ ಅನ್ನು ಒದಗಿಸಿದ್ದರೂ, ಟೆಲಿಕಾಂ ಕಂಪನಿಗಳು ಹಳೆಯ ಫೋನ್‌ನಲ್ಲಿ ಸಿಮ್ ಸೇರಿಸಲು ಮತ್ತೊಂದು ಸಿಮ್ ಕಾರ್ಡ್‌ನ ಫ್ರೇಮ್ ಅನ್ನು ಸೇರಿಸಲು ಮತ್ತು ಬಳಸಲು ಯೋಜಿಸಿವೆ.

ತಂತ್ರಜ್ಞಾನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಅಹಮದಾಬಾದ್‌ನಲ್ಲಿ ಮಕರ ಸಂಕ್ರಾಂತಿ ಹಬ್ಬಕ್ಕೆ ಗಾಳಿಪಟ ಹಾರಿಸಿದ ಅಮಿತ್ ಶಾ
ಅಹಮದಾಬಾದ್‌ನಲ್ಲಿ ಮಕರ ಸಂಕ್ರಾಂತಿ ಹಬ್ಬಕ್ಕೆ ಗಾಳಿಪಟ ಹಾರಿಸಿದ ಅಮಿತ್ ಶಾ
ಹಿಂದಿನ ಸರ್ಕಾರ ಸಾಲಗಳನ್ನು ನಮ್ಮ ಸರ್ಕಾರ ತೀರಿಸುತ್ತಿದೆ: ಪ್ರಿಯಾಂಕ್ ಖರ್ಗೆ
ಹಿಂದಿನ ಸರ್ಕಾರ ಸಾಲಗಳನ್ನು ನಮ್ಮ ಸರ್ಕಾರ ತೀರಿಸುತ್ತಿದೆ: ಪ್ರಿಯಾಂಕ್ ಖರ್ಗೆ
ನಾಳೆ ದೆಹಲಿಗೆ ತೆರಳುವ ಮೊದಲು ಎಲ್ಲವನ್ನೂ ಮಾತಾಡುವೆ: ಕುಮಾರಸ್ವಾಮಿ
ನಾಳೆ ದೆಹಲಿಗೆ ತೆರಳುವ ಮೊದಲು ಎಲ್ಲವನ್ನೂ ಮಾತಾಡುವೆ: ಕುಮಾರಸ್ವಾಮಿ
ಮಹಾಕುಂಭದಲ್ಲಿ ಸಂಕ್ರಾಂತಿಯ ದಿನವಾದ ಇಂದು 2.5 ಕೋಟಿ ಭಕ್ತರಿಂದ ತೀರ್ಥ ಸ್ನಾನ
ಮಹಾಕುಂಭದಲ್ಲಿ ಸಂಕ್ರಾಂತಿಯ ದಿನವಾದ ಇಂದು 2.5 ಕೋಟಿ ಭಕ್ತರಿಂದ ತೀರ್ಥ ಸ್ನಾನ
ಮಿಡ್ ವೀಕ್ ಎಲಿನಿಮೇಷನ್ ಟಾಸ್ಕ್, ಗೆದ್ದವರ್ಯಾರು? ಸೋತವರ್ಯಾರು?
ಮಿಡ್ ವೀಕ್ ಎಲಿನಿಮೇಷನ್ ಟಾಸ್ಕ್, ಗೆದ್ದವರ್ಯಾರು? ಸೋತವರ್ಯಾರು?
ವೇದಿಕೆ ಮೇಲೆ ಚರ್ಚೆಯಲ್ಲಿ ಮಗ್ನರಾದ ಕುಮಾರಸ್ವಾಮಿ ಮತ್ತು ವಿಜಯೇಂದ್ರ
ವೇದಿಕೆ ಮೇಲೆ ಚರ್ಚೆಯಲ್ಲಿ ಮಗ್ನರಾದ ಕುಮಾರಸ್ವಾಮಿ ಮತ್ತು ವಿಜಯೇಂದ್ರ
ಸಚಿವೆ ಚೇತರಿಸಿಕೊಳ್ಳುತ್ತಿದ್ದಾರೆ, ಅವರಿಗೆ ವಿಶ್ರಾಂತಿಯ ಅಗತ್ಯವಿದೆ:ಶಶಿಕಲಾ
ಸಚಿವೆ ಚೇತರಿಸಿಕೊಳ್ಳುತ್ತಿದ್ದಾರೆ, ಅವರಿಗೆ ವಿಶ್ರಾಂತಿಯ ಅಗತ್ಯವಿದೆ:ಶಶಿಕಲಾ
ಸಾರ್ವಜನಿಕವಾಗಿ ಹೆಚ್ಚು ಕಾಣಿಸಿಕೊಳ್ಳದ ಸಚಿವೆಯ ಪತಿ ರವೀಂದ್ರ ಹೆಬ್ಬಾಳ್ಕರ್
ಸಾರ್ವಜನಿಕವಾಗಿ ಹೆಚ್ಚು ಕಾಣಿಸಿಕೊಳ್ಳದ ಸಚಿವೆಯ ಪತಿ ರವೀಂದ್ರ ಹೆಬ್ಬಾಳ್ಕರ್
ಘಟನೆ ಸಿದ್ದರಾಮಯ್ಯ ಮತ್ತು ಅವರ ಸರ್ಕಾರಕ್ಕೆ ಒಳ್ಳೇದು ಮಾಡಲ್ಲ: ವಿಜಯೇಂದ್ರ
ಘಟನೆ ಸಿದ್ದರಾಮಯ್ಯ ಮತ್ತು ಅವರ ಸರ್ಕಾರಕ್ಕೆ ಒಳ್ಳೇದು ಮಾಡಲ್ಲ: ವಿಜಯೇಂದ್ರ
ಅಪಘಾತದ ಸ್ವರೂಪ ನೋಡಿದರೆ ಕಾರು ಚಾಲಕ ಬದುಕುಳಿದಿದ್ದೇ ಪವಾಡ
ಅಪಘಾತದ ಸ್ವರೂಪ ನೋಡಿದರೆ ಕಾರು ಚಾಲಕ ಬದುಕುಳಿದಿದ್ದೇ ಪವಾಡ