AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral: ಎಂಥಾ ಅವಸ್ಥೆ ನೋಡಿ… ಮಾಜಿ ಗಂಡನಿಂದ ಪರಿಹಾರ ಹಣ ಸಿಗ್ತಿದ್ದಂತೆ ಫುಲ್‌ ಖುಷ್‌ ಆದ ಮಹಿಳೆ

ಗಂಡನಿಂದ ಸಿಗುವ ಜೀವನಾಂಶಕ್ಕಾಗಿಯೇ ಮಹಿಳೆಯರು ಬೇಕು ಬೇಕಂತಲೇ ಡಿವೋರ್ಸ್‌ ಪಡೆದುಕೊಳ್ಳುತ್ತಿದ್ದಾರೆ, ವಿಚ್ಛೇದನವನ್ನು ವ್ಯಾಪಾರವನ್ನಾಗಿ ಮಾಡಿಕೊಂಡಿದ್ದಾರೆ ಎಂದು ಇತ್ತೀಚಿಗೆ ಅನೇಕರು ಮಾತನಾಡಿಕೊಳ್ಳುತ್ತಿದ್ದಾರೆ. ಈ ಮಾತಿಗೆ ಉತ್ತಮ ನಿದರ್ಶನದಂತಿರುವ ವಿಡಿಯೋವೊಂದು ವೈರಲ್‌ ಆಗಿದ್ದು, ಲಾಯರ್‌ ಆಫೀಸಿನಲ್ಲಿ ಗಂಡ ಬಹಳ ನೋವಿನಿಂದ ಮಾಜಿ ಹೆಂಡ್ತಿಗೆ ಜೀವನಾಂಶ ನೀಡಿದ್ರೆ, ಹೆಂಡ್ತಿ ಮಾತ್ರ ಬಹಳ ಖುಷಿ ಖುಷಿಯಾಗಿ ಹಣವನ್ನು ಸ್ವೀಕರಿಸಿದ್ದಾಳೆ. ಈ ದೃಶ್ಯ ಇದೀಗ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದೆ.

Viral: ಎಂಥಾ ಅವಸ್ಥೆ ನೋಡಿ… ಮಾಜಿ ಗಂಡನಿಂದ ಪರಿಹಾರ ಹಣ ಸಿಗ್ತಿದ್ದಂತೆ ಫುಲ್‌ ಖುಷ್‌ ಆದ ಮಹಿಳೆ
Wife Smiles Joy As She Receives Alimony From Husband After Divorce
ಮಾಲಾಶ್ರೀ ಅಂಚನ್​
| Updated By: ಅಕ್ಷತಾ ವರ್ಕಾಡಿ|

Updated on:Jan 14, 2025 | 11:28 AM

Share

ಇತ್ತೀಚಿಗೆ ನಮ್ಮ ದೇಶದಲ್ಲಿಯೂ ಡಿವೋರ್ಸ್‌ ಪ್ರಕರಣಗಳು ತೀರಾ ಹೆಚ್ಚಾಗುತ್ತಿದೆ. ಕೆಲ ಮಹಿಳೆಯರು ಕಾನೂನನ್ನು ದುರುಪಯೋಗಪಡಿಸಿಕೊಂಡು ಗಂಡನಿಂದ ಸಿಗುವ ಜೀವನಾಂಶಕ್ಕಾಗಿಯೇ ಬೇಕು ಬೇಕಂತಲೇ ಗಂಡನ ಮೇಲೆ ಆರೋಪಗಳನ್ನು ಹೊರಿಸಿ ವಿಚ್ಛೇದನವನ್ನು ಪಡೆದುಕೊಳ್ಳುತ್ತಿದ್ದಾರೆ. ಅದರಲ್ಲೂ ಕೆಲವರಂತೂ ಡಿವೋರ್ಸ್‌ ಅನ್ನು ವ್ಯಾಪಾರವನ್ನಾಗಿ ಮಾಡಿಕೊಂಡಿದ್ದಾರೆ. ಇಲ್ಲೊಂದು ಇದಕ್ಕೆ ಉತ್ತಮ ನಿದರ್ಶನದಂತಿರುವ ಘಟನೆಯೊಂದು ನಡೆದಿದ್ದು, ಲಾಯರ್‌ ಆಫೀಸಿನಲ್ಲಿ ಗಂಡ ಬಹಳ ನೋವಿನಿಂದ ತಾನು ಕಷ್ಟಪಟ್ಟು ಕೂಡಿಟ್ಟ ಅಥವಾ ಸಾಲ ಮಾಡಿ ತಂದಂತಹ ಹಣವನ್ನು ಮಾಜಿ ಹೆಂಡತಿಯ ಕೈಗೆ ಕೊಟ್ರೆ, ಆಕೆ ಒಂದು ಚೂರು ದುಃಖ ಪಡದೆ ಖುಷಿ ಖುಷಿಯಾಗಿ ಪರಿಹಾರ ಹಣವನ್ನು ಸ್ವೀಕರಿಸಿದ್ದಾಳೆ. ಈ ವಿಡಿಯೋ ಇದೀಗ ಸಖತ್‌ ವೈರಲ್‌ ಆಗುತ್ತಿದೆ.

ಒಂದು ಕಡೆ ಹೆಂಡತಿಯ ಕಾಟ ಹಾಗೂ ಕಾನೂನು ನಮ್ಮ ಕಡೆ ಇಲ್ಲ ಎಂದು ಬೇಸತ್ತು ಗಂಡಸರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದರೆ, ಒಂದಷ್ಟು ಹೆಂಗಸರು ಕಾನೂನನ್ನು ದುರುಪಯೋಗಪಡಿಸಿಕೊಂಡು ಹಣಕ್ಕಾಗಿಯೇ ಡಿವೋರ್ಸ್‌ ಪಡೆದುಕೊಳ್ಳುತ್ತಿದ್ದಾರೆ. ಇದಕ್ಕೆ ಉದಾಹರಣೆಯಂತಿರುವ ಘಟನೆಯೊಂದು ನಡೆದಿದ್ದು, ಮಹಿಳೆಯೊಬ್ಬಳು ಲಾಯರ್‌ ಮುಂದೆಯೇ ನಗು ನಗುತ್ತಾ ಬಹಳ ಖುಷಿಯಿಂದ ಮಾಜಿ ಗಂಡನ ಕೈಯಿಂದ ಸಿಕ್ಕ ಪರಿಹಾರ ಹಣವನ್ನು ಸ್ವೀಕರಿಸಿದ್ದಾಳೆ.

ವಿಡಿಯೋ ಇಲ್ಲಿದೆ ನೋಡಿ:

ಶೋನಿ ಕಪೂರ್‌ (ShoneeKapoor) ಎಂಬವರು ತಮ್ಮ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ ಲಾಯರ್‌ ಆಫೀಸಿನಲ್ಲಿ ಗಂಡ ತನ್ನ ಮಾಜಿ ಹೆಂಡ್ತಿಗೆ ಪರಿಹಾರ ಹಣವನ್ನು ನೀಡುತ್ತಿರುವ ದೃಶ್ಯವನ್ನು ಕಾಣಬಹುದು. ಗಂಡ ಬಹಳ ನೋವಿನಿಂದ ತಾನು ಕೂಡಿಟ್ಟ ಅಥವಾ ಯಾರದ್ದೋ ಕೈಯಲ್ಲಿ ಸಾಲ ಮಾಡಿ ಹಣವನ್ನು ಕೊಟ್ರೆ, ಹೆಂಡ್ತಿ ಮಾತ್ರ ಒಂದು ಚೂರು ದುಃಖ ಪಡದೆ, ನಾಚಿಕೆಯಿಲ್ಲದೆ ನಗು ನಗುತ್ತಾ ಪರಿಹಾರ ಹಣವನ್ನು ಸ್ವೀಕರಿಸಿದ್ದಾಳೆ.

ಇದನ್ನೂ ಓದಿ: ಪೊಂಗಲ್‌ ಆಚರಣೆಗೆ ಪಂಚೆಯುಟ್ಟು ಸಖತ್‌ ಸ್ಟೆಪ್ಸ್‌ ಹಾಕಿದ ಚೆಸ್‌ ಚಾಂಪಿಯನ್ಸ್;‌ ಮುದ್ದಾದ ವಿಡಿಯೋ ವೈರಲ್‌

ಜನವರಿ 11 ರಂದು ಹಂಚಿಕೊಳ್ಳಲಾದ ಈ ವಿಡಿಯೋ 5.4 ಲಕ್ಷ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಪುರುಷರ ಪರವಾಗಿಯೂ ಕಾನೂನುಗಳನ್ನು ತರಬೇಕಿದೆʼ ಎಂದು ಹೇಳಿದ್ದಾರೆ. ಇನ್ನೊಬ್ಬ ಬಳಕೆದಾರರು ʼನಮ್ಮ ದೇಶದಲ್ಲಿ ಮಹಿಳಾ ಸಬಲೀಕರಣವನ್ನು ಪುರುಷರಿಗೆ ಕಿರುಕುಳ ನೀಡುವ ಅಸ್ತ್ರವನ್ನಾಗಿ ಬದಲಾಯಿಸಲಾಗಿದೆʼ ಎಂದು ಕಿಡಿ ಕಾರಿದ್ದಾರೆ. ಮತ್ತೊಬ್ಬ ಬಳಕೆದಾರರು ʼಈಗಂತೂ ಮದುವೆ, ಡಿವೋರ್ಸ್‌ ಎಲ್ಲವೂ ವ್ಯಾಪಾರವಾಗಿದೆʼ ಎಂದು ಹೇಳಿದ್ದಾರೆ.

ವೈರಲ್​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:25 am, Tue, 14 January 25

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ