ಬಿಗ್ ಬಾಸ್ ಮನೆಯೊಳಗೆ ಸಿದ್ಧವಾಯ್ತು ‘ಬಾಯ್ಸ್ Vs ಗರ್ಲ್ಸ್’ ಪ್ರೋಮೋ
ಇತ್ತೀಚೆಗೆ ಬಿಗ್ ಬಾಸ್ ಮನೆಗೆ ನಿರೂಪಕಿ ಅನುಪಮಾ ಗೌಡ ಅವರು ಬಂದಿದ್ದರು. ದೊಡ್ಮನೆ ಸದಸ್ಯರಿಂದಲೇ ಹೊಸ ಶೋಗೆ ಪ್ರೋಮೋ ಮಾಡಿಸಲಾಯಿತು. ರಜತ್, ಗೌತಮಿ, ಮಂಜು, ಮೋಕ್ಷಿತಾ ಮುಂತಾದವರು ಖಡಕ್ ಡೈಲಾಗ್ ಹೇಳುವ ಮೂಲಕ ‘ಬಾಯ್ಸ್ Vs ಗರ್ಲ್ಸ್’ ಪ್ರೋಮೋದಲ್ಲಿ ಮಿಂಚಿದ್ದಾರೆ. ಅದನ್ನು ಕಲರ್ಸ್ ಕನ್ನಡ ವಾಹಿನಿ ಹಂಚಿಕೊಂಡಿದೆ.
‘ಬಿಗ್ ಬಾಸ್ ಕನ್ನಡ ಸೀಸನ್ 11’ ರಿಯಾಲಿಟಿ ಶೋ ಮುಗಿದ ಬಂತರ ‘ಕಲರ್ಸ್ ಕನ್ನಡ’ದಲ್ಲಿ ‘ಬಾಯ್ಸ್ Vs ಗರ್ಲ್ಸ್’ ಕಾರ್ಯಕ್ರಮ ಪ್ರಸಾರ ಆಗಲಿದೆ. ಅದರ ಪ್ರೋಮೋ ಬಿಗ್ ಬಾಸ್ ಮನೆಯೊಳಗೆ ಸಿದ್ಧವಾಗಿದೆ. ದೊಡ್ಮನೆಯೊಳಗೆ ಇರುವ ಸ್ಪರ್ಧಿಗಳಿಂದಲೇ ನಿರೂಪಕಿ ಅನುಪಮಾ ಗೌಡ ಅವರು ಈ ಪ್ರೋಮೋ ಮಾಡಿಸಿದ್ದಾರೆ. ಹೊಸ ಶೋ ಯಶಸ್ವಿ ಆಗಲಿ ಎಂದು ಸುದೀಪ್ ಅವರು ಹಾರೈಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Latest Videos