ಸುರ್ಜೆವಾಲ ಎಲ್ಲರ ಸಮ್ಮುಖದಲ್ಲಿ ಶಿಸ್ತಿನ ಪಾಠ ಹೇಳಿದ್ದರಲ್ಲಿ ಯಾವುದೇ ತಪ್ಪಿಲ್ಲ: ಸತೀಶ್ ಜಾರಕಿಹೊಳಿ, ಸಚಿವ
ಸಭೆಗೆ ಜಿ ಪರಮೇಶ್ವರ್ ಮತ್ತು ಕೆಎನ್ ರಾಜಣ್ಣ ಗೈರಾಗಿದ್ದ ಬಗ್ಗೆ ಪ್ರತಿಕ್ರಿಯೆ ಕೇಳಿದಾಗ, ಯಾಕೆ ಬಂದಿಲ್ಲ ಅನ್ನೋದು ಗೊತ್ತಿಲ್ಲ, ಸಾಯಂಕಾಲ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಇದೆ, ಅವರಿಬ್ಬರು ಅದಕ್ಕೆ ಹಾಜರಾಗಬಹುದು ಮತ್ತು ತಮ್ಮ ಅನುಪಸ್ಥಿತಿಗೆ ಅವರೇ ಉತ್ತರ ನೀಡಬಹುದು ಎಂದು ಹೇಳಿದ ಸಚಿವ ಸತೀಶ್ ಜಾರಕಿಹೊಳಿ ತಮಗೆ ವಾಲ್ಮೀಕಿ ಸಮುದಾಯದ ಸಮಾವೇಶ ನಡೆಸುವ ಯೋಚನೆ ಇಲ್ಲವೆಂದರು.
ಬೆಂಗಳೂರು: ಕೆಪಿಸಿಸಿ ಕಚೇರಿಯಲ್ಲಿ ಸಭೆ ಪೂರ್ತಿಗೊಂಡ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಲೋಕೋಪಯೋಗಿ ಖಾತೆ ಸಚಿವ ಸತೀಶ್ ಜಾರಕಿಹೊಳಿ, ಎಲ್ಲ ಮಂತ್ರಿಗಳು ಮತ್ತು ಕಾರ್ಯಕರ್ತರ ಸಮಕ್ಷಮದಲ್ಲಿ ಕರ್ನಾಟಕದ ಉಸ್ತುವಾರಿ ರಂದೀಪ್ ಸುರ್ಜೇವಾಲಾ ಅವರು ಜವಾಬ್ದಾರಿ ಮತ್ತು ಶಿಸ್ತಿನ ಬಗ್ಗೆ ಮಾಡಿರುವುದರಲ್ಲಿ ಯಾವ ತಪ್ಪೂ ಇಲ್ಲ, ಪ್ರತ್ಯೇಕವಾಗಿ ಕರೆಸಿ ಮಾತಾಡುವ ಅಗತ್ಯ ಎಲ್ಲಿಂದ ಉದ್ಭವಿಸುತ್ತದೆ ಎಂದು ಹೇಳಿದರು. ಕಾಂಗ್ರೆಸ್ ಕಾರ್ಯಕರ್ತರ ಪಕ್ಷ ಅಂತ ಡಿಕೆ ಶಿವವಕುಮಾರ್ ಹೇಳಿರುವುದಕ್ಕೆ ಪ್ರತಿಕ್ರಿಯೆ ನೀಡಿದ ಜಾರಕಿಹೊಳಿ, ಅದೇ ಮಾತನ್ನು ತಾನು ಹತ್ತಾರು ಸಲ ಹೇಳಿದ್ದು, ಕಾರ್ಯಕರ್ತರ ನೆರವಿಲ್ಲದೆ ಸರ್ಕಾರ ನಡೆಸುವುದು ಸಾಧ್ಯವಿಲ್ಲ ಎಂದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಸಚಿವ ಸತೀಶ್ ಜಾರಕಿಹೊಳಿ ಮನೆಯಲ್ಲಿ ಡಿನ್ನರ್ ಮೀಟಿಂಗ್: ಸಿಎಂ ಸೇರಿ ಹಲವರು ಭಾಗಿ
Latest Videos