ಡಿಕೆ ಶಿವಕುಮಾರ್ ಕತ್ತಲೆಯಲ್ಲಿ ಕರಡಿ ಹುಡುಕುವ ಪ್ರಯತ್ನ ಮಾಡುತ್ತಿದ್ದಾರೆ: ಆರ್ ಅಶೋಕ
ವಿಧಾನಸಭಾ ಚುನಾವಣೆಗೆ ಮೊದಲ ಮಂಡ್ಯದಲ್ಲಿ ಪ್ರಚಾರ ಮಾಡುತ್ತಿದ್ದ ಶಿವಕುಮಾರ್ ಅಲ್ಲಿನ ಜನತೆಗೆ, ಹಿಂದೆ ನೀವು ದೇವೇಗೌಡ ಮತ್ತು ಕುಮಾರಸ್ವಾಮಿಯವರಿಗೆ ಅಧಿಕಾರ ನೀಡಿದ ಹಾಗೆ ತನಗೂ ಅಧಿಕಾರ ಕೊಡಿ ಅಂತ ಅಂಗಲಾಚುತ್ತಿದ್ದರು, ಈಗ ಚುನಾಯಿತ ಶಾಸಕರ ಮುಂದೆ ತನಗೆ ಪೆನ್ನು ಕೊಡಿ ಅಂತ ಅವಲತ್ತುಕೊಳ್ಳುತ್ತಿದ್ದಾರೆ ಎಂದು ಅರ್ ಅಶೋಕ ಹೇಳಿದರು.
ಬೆಂಗಳೂರು: ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯೊಂದನ್ನು ಉದ್ದೇಶಿಸಿ ಮಾತಾಡಿದ ವಿರೋಧ ಪಕ್ಷದ ನಾಯಕ ಅರ್ ಅಶೋಕ ಅವರು ಡಿಕೆ ಶಿವಕುಮಾರ್ ಸ್ಥಿತಿಯನ್ನು ನೋಡಿದರೆ ಕರುಣೆ ಹುಟ್ಟುತ್ತದೆ ಎಂದು ಹೇಳಿದರು. ಮುಖ್ಯಮಂತ್ರಿಯಾಗಿ ಅಧಿಕಾರ ಹಂಚಿಕೊಳ್ಳುವ ಬಗ್ಗೆ ಸಿದ್ದರಾಮಯ್ಯ ಜೊತೆ ಯಾರ ಸಮಕ್ಷಮದಲ್ಲಿ ಒಪ್ಪಂದವಾಯಿತು ಅನ್ನೋದನ್ನು ಡಿಸಿಎಂ ಸ್ಪಷ್ಟವಾಗಿ ಹೇಳದೆ ಕತ್ತಲೆಯಲ್ಲಿ ಕರಡಿ ಹುಡುಕುವ ಕೆಲಸ ಮಾಡುತ್ತಿದ್ದಾರೆ ಎಂದು ಅಶೋಕ ಹೇಳಿದರು. ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ ಅಥವಾ ಪ್ರಿಯಾಂಕಾ ಗಾಂಧಿ ವಾದ್ರಾ ಇವರಲ್ಲಿ ಯಾರು ಹಾಜರಿದ್ದರು ಅಂತ ಶಿವಕುಮಾರ್ ಹೇಳಿದರೆ ಅವರ ಕೆಲಸ ಸುಲಭವಾಗುತ್ತದೆ ಎಂದು ಅಶೋಕ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಹಸುವಿನ ಕೆಚ್ಚಲು ಕೊಯ್ದು ಸಂಕ್ರಾಂತಿಗೆ ಗಿಫ್ಟ್ ಕೊಟ್ಟಿದ್ದಾರೆ: ಸರ್ಕಾರದ ವಿರುದ್ಧ ಅಶೋಕ್ ಕಿಡಿ
Latest Videos