ರೀಲ್ಸ್ಗೆ ಅಡಿಕ್ಟ್ ಆಗಿದ್ದೀರಾ? ಅಧಿಕ ರಕ್ತದೊತ್ತಡಕ್ಕೆ ಕಾರಣವಾಗಬಹುದು
ರಾತ್ರಿ ಮಲಗುವ ವೇಳೆ ರೀಲ್ಸ್ ಅಥವಾ ಶಾರ್ಟ್ ವಿಡಯೋಗಳನ್ನು ನೋಡುವುದು ಅಥವಾ ಹೆಚ್ಚು ಹೊತ್ತು ಮೊಬೈಲ್ ವೀಕ್ಷಣೆ ಮಾಡುವುದರಿಂದ ಅಧಿಕ ರಕ್ತದೊತ್ತಡ ಉಂಟಾಗುವುದು ಎಂದು ಸಂಶೋಧನೆಯೊಂದು ತಿಳಿಸಿದೆ. ಈ ಕುರಿತು ವೈದ್ಯರಾದ ದೀಪಕ್ ಕೃಷ್ಣಮೂರ್ತಿ ಎಂಬುವವರು ಎಕ್ಸ್ನಲ್ಲಿ ಈ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ., ರೀಲ್ಸ್ ನೋಡುವುದು ಏಕೆ ಅಪಾಯಕಾರಿ ಎಂಬುದನ್ನು ವಿವರಿಸಿದ್ದಾರೆ. ಈ ಕುರಿತು ಮಾಹಿತಿ ಇಲ್ಲಿದೆ.
ಸಾಮಾಜಿಕ ಜಾಲತಾಣಗಳಲ್ಲಿ ರೀಲ್ಸ್ ಅಥವಾ ಶಾರ್ಟ್ ವಿಡಿಯೋಗಳನ್ನು ನೋಡುವುದು ಯುವಕರು ಹಾಗೂ ಮಧ್ಯ ವಯಸ್ಕರ ಜೀವನದ ಅವಿಭಾಜ್ಯ ಅಂಗವಾಗಿಬಿಟ್ಟಿದೆ. ಊಟ, ನಿದ್ದೆ ಬಿಟ್ಟಾದರೂ ರೀಲ್ಸ್ಗಳನ್ನು ನೋಡಿಕೊಂಡು ಕಾಲ ಕಳೆಯುತ್ತಾರೆ. ಇತ್ತೀಚಿನ ಅಧ್ಯಯನವು ಹೇಳುವಂತೆ ಮಲಗುವ ಸಮಯದಲ್ಲಿ ರೀಲ್ಸ್ಗಳನ್ನು ವೀಕ್ಷಿಸುವುದು ಹೆಚ್ಚು ಸಮಯ ಮೊಬೈಲ್ ನೋಡುತ್ತಿರುವುದು ಯುವಕರು ಹಾಗೂ ಮಧ್ಯ ವಯಸ್ಕರಲ್ಲಿ ಅಧಿಕ ರಕ್ತದೊತ್ತಡವನ್ನು ಹೆಚ್ಚು ಮಾಡುವ ಸಾಧ್ಯತೆ ಇದೆ ಎಂದು ಹೇಳಿದೆ.
ಬಿಎಂಸಿ ಜರ್ನಲ್ನಲ್ಲಿ ಪ್ರಕಟವಾದ ಲೇಖನದಲ್ಲಿ, ಚೀನಾದಲ್ಲಿ 4,318 ಯುವ ಮತ್ತು ಮಧ್ಯ ವಯಸ್ಕರ ಮೇಲೆ ನಡೆಸಿದ ಅಧ್ಯಯನದಲ್ಲಿ ರೀಲ್ಸ್ಗಳನ್ನು ಹೆಚ್ಚಾಗಿ ವೀಕ್ಷಿಸುವವರು ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದಾರೆ ಎಂಬುದು ತಿಳಿದುಬಂದಿದೆ.
ಬೆಂಗಳೂರು ಮೂಲದ ಹೃದ್ರೋಗ ತಜ್ಞ ಡಾ. ದೀಪಕ್ ಕೃಷ್ಣಮೂರ್ತಿ ಅವರು ಹಂಚಿಕೊಂಡ ಸಂಶೋಧನಾ ವರದಿ ಬಿಟ್ಟ ಕಣ್ಣು ಬಿಟ್ಟಂತೆ ಇರುವಂತೆ ಮಾಡಿತು.
ಮತ್ತಷ್ಟು ಓದಿ: High Blood Pressure: ಅಧಿಕ ರಕ್ತದೊತ್ತಡ ಇರುವವರು ಈ ಪ್ರಾಣಾಯಾಮವನ್ನು ಟ್ರೈ ಮಾಡಿ!
ದೀಪಕ್ ಕೃಷ್ಣಮೂರ್ತಿ ಈ ಕುರಿತು ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ. ಮಲಗುವ ಸಮಯದಲ್ಲಿ ರೀಲ್‌ಗಳನ್ನು ವೀಕ್ಷಿಸುವ ಸಮಯವನ್ನು ಆಧರಿಸಿ ಅಧ್ಯಯನವನ್ನು ನಡೆಸಲಾಯಿತು. ಮಲಗುವ ಸಮಯದಲ್ಲಿ ಮೊಬೈಲ್ ನೋಡುವುದು ಜಡ ಸ್ವಭಾವವನ್ನು ಪ್ರತಿಬಿಂಬಿಸುತ್ತದೆ. ಮಲಗುವ ಸಮಯದಲ್ಲಿ ವಿಡಿಯೋಗಳನ್ನು ವೀಕ್ಷಿಸುವುದರಿಂದ ನರಮಂಡಲಗಳು ಸಕ್ರಿಯವಾಗಿಯೇ ಇರುತ್ತವೆ, ಇದರಿಂದ ನಿದ್ರಾಹೀನತೆ ಉಂಟಾಗಬಹುದು ಹಾಗೆಯೇ ರಕ್ತದೊತ್ತಡಕ್ಕೂ ಕಾರಣವಾಗಬಹುದು ಎಂದು ಹೇಳಿದ್ದಾರೆ.
Apart from being a major distraction and waste of time, reel addiction is also associated with high #BloodPressure in young and middle-aged people. Time to #UnInsta!! #DoomScrolling #MedTwitter pic.twitter.com/Kuahr4CZlB
— Dr Deepak Krishnamurthy (@DrDeepakKrishn1) January 11, 2025
ಸಂಶೋಧಕರಾದ ಫೆಂಗ್ಡೆ ಲಿ, ಫಾಂಗ್‌ಫಾಂಗ್ ಮಾ, ಶಾಂಗ್ಯು ಲಿಯು, ಲೆ ವಾಂಗ್, ಲಿಶುವಾಂಗ್ ಜಿ, ಮಿಂಗ್ಕಿ ಝೆಂಗ್ ಮತ್ತು ಗ್ಯಾಂಗ್ ಲಿಯು ಹೇಳಿದಂತೆ ಮಲಗುವ ಸಮಯದಲ್ಲಿ ಶಾರ್ಟ್ ವಿಡಿಯೋಗಳು, ರೀಲ್ಸ್ಗಳನ್ನು ನೋಡುವುದನ್ನು ನಿಯಂತ್ರಿಸಬೇಕು, ಇಲ್ಲವಾದಲ್ಲಿ ಇದು ಅಧಿಕ ರಕ್ತದೊತ್ತಡಕ್ಕೆ ಎಡೆ ಮಾಡಿಕೊಡುತ್ತದೆ ಎಂದು ಹೇಳಿದ್ದಾರೆ.
ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:10 am, Mon, 13 January 25