Autism Spectrum Disorder: ಆಟಿಸಂ ಸಮಸ್ಯೆಯಿದೆ ಎಂದು ಹೇಳಿಕೊಂಡಿದ್ದ ಎಲಾನ್ ಮಸ್ಕ್; ಏನಿದು? ಪರಿಹಾರ ಹೇಗೆ?

Asperger's Syndrome | Elon Musk: ಟ್ವಿಟರ್​ನಲ್ಲಿ ಸದಾ ಸಕ್ರಿಯರಾಗಿರುವ ಟಲಾನ್ ಮಸ್ಕ್ ಆ ಜಾಲತಾಣವನ್ನು ಬರೋಬ್ಬರಿ 44 ಬಿಲಿಯನ್​ ಡಾಲರ್​ಗೆ ಖರೀದಿಸಿದ್ದಾರೆ. ಆದರೆ ಎಲಾನ್ ಮಸ್ಕ್​ಗೆ ಸ್ವಲೀನತೆ ಅಥವಾ ಆಟಿಸಂ ಸ್ಪೆಕ್ಟ್ರಮ್ ಡಿಸಾರ್ಡರ್ (Autism Spectrum Disorder) ಸಮಸ್ಯೆಯಿರುವುದು ನಿಮಗೆ ತಿಳಿದಿದೆಯೇ? ಸ್ವತಃ ಎಲಾನ್ ಈ ಬಗ್ಗೆ ‘ಸ್ಯಾಟರ್ಡೆ ನೈಟ್ ಶೋ’ ಕಾರ್ಯಕ್ರಮದಲ್ಲಿ ಮಾಹಿತಿ ಹಂಚಿಕೊಂಡಿದ್ದರು. ಏನಿದರ ಲಕ್ಷಣ? ಚಿಕಿತ್ಸೆ ಹೇಗೆ?

Autism Spectrum Disorder: ಆಟಿಸಂ ಸಮಸ್ಯೆಯಿದೆ ಎಂದು ಹೇಳಿಕೊಂಡಿದ್ದ ಎಲಾನ್ ಮಸ್ಕ್; ಏನಿದು? ಪರಿಹಾರ ಹೇಗೆ?
ಎಲಾನ್ ಮಸ್ಕ್
Follow us
TV9 Web
| Updated By: shivaprasad.hs

Updated on:Apr 29, 2022 | 7:19 AM

ಸದ್ಯ ಉದ್ಯಮ ಜಗತ್ತಿನಲ್ಲಿ ಎಲಾನ್ ಮಸ್ಕ್​ರದ್ದೇ (Elon Musk) ಮಾತು. ಇತ್ತೀಚೆಗೆ ಟ್ವಿಟರ್ ಖರೀದಿಸುವ ಬಗ್ಗೆ ಘೋಷಣೆಯಾದ ನಂತರವಂತೂ ಲಾನ್ ಮಸ್ಕ್ ಸಖತ್ ಚರ್ಚೆಯಲ್ಲಿದ್ದಾರೆ. ಟ್ವಿಟರ್​ನಲ್ಲಿ ಸದಾ ಸಕ್ರಿಯರಾಗಿರುವ ಟಲಾನ್ ಮಸ್ಕ್ ಆ ಜಾಲತಾಣವನ್ನು ಬರೋಬ್ಬರಿ 44 ಬಿಲಿಯನ್​ ಡಾಲರ್​ಗೆ ಖರೀದಿಸಿದ್ದಾರೆ. ಆದರೆ ಎಲಾನ್ ಮಸ್ಕ್​ಗೆ ಸ್ವಲೀನತೆ ಅಥವಾ ಆಟಿಸಂ ಸ್ಪೆಕ್ಟ್ರಮ್ ಡಿಸಾರ್ಡರ್ (Autism Spectrum Disorder) ಸಮಸ್ಯೆಯಿರುವುದು ನಿಮಗೆ ತಿಳಿದಿದೆಯೇ? ಸ್ವತಃ ಎಲಾನ್ ಈ ಬಗ್ಗೆ ‘ಸ್ಯಾಟರ್ಡೆ ನೈಟ್ ಶೋ’ ಕಾರ್ಯಕ್ರಮದಲ್ಲಿ ಮಾಹಿತಿ ಹಂಚಿಕೊಂಡಿದ್ದರು. ಆಟಿಸಂನಲ್ಲಿ ಯಾವ ರೀತಿಯ ಸಮಸ್ಯೆಯಿರುವುದೆಂದೂ ಬಹಿರಂಗಪಡಿಸಿದ್ದ ಎಲಾನ್ ಮಸ್ಕ್, ಆ್ಯಸ್ಪರ್ಗರ್ ಸಿಂಡ್ರೋಮ್ (Asperger’s Syndrome) ಹೊಂದಿರುವುದಾಗಿ ತಿಳಿಸಿದ್ದರು. ಏನಿದು ಸಮಸ್ಯೆ? ಇದರ ಲಕ್ಷಣಗಳೇನು? ಈ ಕುರಿತ ವಿವರ ಇಲ್ಲಿದೆ.

ಆ್ಯಸ್ಪರ್ಗರ್ ಸಿಂಡ್ರೋಮ್:

ಆ್ಯಸ್ಪರ್ಗರ್ ಸಿಂಡ್ರೋಮ್ ಆಟಿಸಂನ ಒಂದು ಸ್ಥಿತಿಯಾಗಿದ್ದು, ನರಗಳ ಬೆಳವಣಿಗೆಯ ಅಸ್ವಸ್ಥತೆಯಾಗಿದೆ. 2013ರ ನಂತರ ಆ್ಯಸ್ಪರ್ಗರ್ ಸಿಂಡ್ರೋಮ್ ಅನ್ನು ಆಟಿಸಂ ಸ್ಪೆಕ್ಟ್ರಮ್ ಡಿಸಾರ್ಡರ್ ಅಡಿಯಲ್ಲಿಯೇ (ಎಎಸ್​ಡಿ) ಗುರುತಿಸಲಾಗುತ್ತದೆ. ಈ ಸ್ಥಿತಿಗೆ ನಿಖರವಾದ ಕಾರಣ ತಿಳಿದಿಲ್ಲ. ಮೆದುಳಿನಲ್ಲಿನ ಅಸಹಜತೆಗಳು ಅಥವಾ ವಂಶಪಾರಂಪರ್ಯವಾಗಿ ಇದು ಬರಬಹುದು ಎಂದು ಶಂಕಿಸಲಾಗಿದೆ.

ಆ್ಯಸ್ಪರ್ಗರ್ ಸಿಂಡ್ರೋಮ್ ಲಕ್ಷಣಗಳು:

ಆಸ್ಪರ್ಜರ್ ಸಿಂಡ್ರೋಮ್‌ನಿಂದ ಬಳಲುತ್ತಿರುವ ಜನರಲ್ಲಿ ಸಾಮಾಜಿಕ ನಡವಳಿಕೆಯಿಂದ ಸಂವಹನ ಕೌಶಲ್ಯದವರೆಗೆ ವಿಭಿನ್ನ ಲಕ್ಷಣಗಳನ್ನು ಗುರುತಿಸಬಹುದು. ಕೆಲವು ಸಾಮಾನ್ಯ ಲಕ್ಷಣಗಳನ್ನು ಇಲ್ಲಿ ನೀಡಲಾಗಿದೆ.

  1. ಮಾತುಗಳಿಲ್ಲದೇ ಸಂವಹನವನ್ನು ಗ್ರಹಿಸಲು ಅಸಮರ್ಥತೆ
  2. ಒಂದೇ ವಿಷಯದ ಮೇಲೆ ಗಮನ ಕೇಂದ್ರೀಕರಿಸುತ್ತಾರೆ, ಆಗ ಇತರ ವಿಷಯಗಳ ಮೇಲೆ ಗಮನ ಕೇಂದ್ರೀಕರಿಸಲು ಅಸಮರ್ಥತೆ ಎದುರಾಗಬಹುದು.
  3. ಸೀಮಿತ ಸಾಮಾಜಿಕ ಕೌಶಲ್ಯಗಳು
  4. ಮನಸ್ಥಿತಿಯಲ್ಲಿ ಹಠಾತ್ ಬದಲಾವಣೆಗಳು, ಇದರಲ್ಲಿ ಆಕ್ರಮಣಶೀಲತೆಯನ್ನೂ ಒಳಗೊಂಡಿರಬಹುದು
  5. ಶಬ್ದಗಳು, ದೀಪಗಳ ಬಗ್ಗೆ ಅತಿ ಜಾಗರೂಕತೆ
  6. ಅಸಾಮಾನ್ಯ ಧ್ವನಿಯಲ್ಲಿ ಮಾತು (ಸ್ತಬ್ಧ, ರೋಮಾಂಚನ, ಇತ್ಯಾದಿ)
  7. ಇತರ ಜನರ ದೃಷ್ಟಿಕೋನಗಳು ಅಥವಾ ಭಾವನೆಗಳನ್ನು ಗ್ರಹಿಸುವಲ್ಲಿ ಕೊರತೆ
  8. ಅಭಿವ್ಯಕ್ತಿಗೆ ತೊಂದರೆ
  9. ಪುನರಾವರ್ತಿತ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದು

ಇದನ್ನು ಗುರುತಿಸಿ, ಚಿಕಿತ್ಸೆ ನೀಡುವುದು ಹೇಗೆ?

ಆ್ಯಸ್ಪರ್ಗರ್ ಸಿಂಡ್ರೋಮ್ ಇದೆಯೇ ಎಂಬುದನ್ನು ನರವಿಜ್ಞಾನಿಗಳು, ಶಿಶುವೈದ್ಯರು, ಮನೋವಿಜ್ಞಾನಿಗಳು, ASD ತಜ್ಞರು ಅಥವಾ ಮನೋವೈದ್ಯರಿಂದ ಪರೀಕ್ಷಿಸಿ ತಿಳಿಯಬಹುದು. ಆ್ಯಸ್ಪರ್ಗರ್ ಸಿಂಡ್ರೋಮ್​ಗೆ ಖಚಿತ ಔಷಧಿ ಇರದಿದ್ದರೂ ಕೂಡ, ಲಕ್ಷಣಗಳನ್ನು ನಿರ್ವಹಿಸುವ ವಿಧಾನಗಳನ್ನು ತೆಗೆದುಕೊಂಡು ಈ ಮೂಲಕ ಪರಿಣಾಮವನ್ನು ತಗ್ಗಿಸಬಹುದು. ಆ್ಯಸ್ಪರ್ಗರ್ ಸಿಂಡ್ರೋಮ್ ಪ್ರತಿಯೊಬ್ಬ ವ್ಯಕ್ತಿಯಲ್ಲಿ ಭಿನ್ನವಾಗಿ ಪ್ರಕಟವಾಗಬಹುದು.

ಚಿಕಿತ್ಸೆಯ ಸಾಮಾನ್ಯ ವಿಧಾನಗಳು ಇಲ್ಲಿವೆ:

  1. ಔಷಧಿ
  2. ವರ್ತನೆಯ ಬಗ್ಗೆ ಅರಿವು ಮೂಡಿಸುವ ಚಿಕಿತ್ಸೆ (CBT)
  3. ಔದ್ಯೋಗಿಕ ಚಿಕಿತ್ಸೆ
  4. ಸಾಮಾಜಿಕ ಕೌಶಲ್ಯ ತರಬೇತಿ
  5. ಭಾಷಣ ಮತ್ತು ಭಾಷಾ ಚಿಕಿತ್ಸೆ

ವಿ.ಸೂ: ಈ ವಿಚಾರಗಳನ್ನು ಮಾಹಿತಿಯ ಉದ್ದೇಶದಿಂದ ನೀಡಲಾಗಿದೆ, ಅನುಸರಿಸುವ ಮುನ್ನ ಸೂಕ್ತ ತಜ್ಞರಿಂದ ಸಲಹೆ ಪಡೆದುಕೊಳ್ಳಿ.

ಇದನ್ನೂ ಓದಿ: Elon Musk: ಕೋಕಾ-ಕೋಲಾ ಕಂಪೆನಿ ಖರೀದಿಸುತ್ತಾರಂತೆ ಎಲಾನ್ ಮಸ್ಕ್; ಕಾಮಿಡಿ ಮಾಡುತ್ತಿದ್ದಾರೆಯೇ ಎನ್ನುತ್ತಿದ್ದಾರೆ ಜನ

TV9 Kannada Digital Live: ಎಲಾನ್ ಮಸ್ಕ್ ಮಾಲೀಕತ್ವದಲ್ಲಿ ಏನಾಗಬಹುದು ಟ್ವಿಟ್ಟರ್? ನಿಮಗೇನನಿಸುತ್ತದೆ?

Published On - 7:02 am, Fri, 29 April 22

ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ