TV9 Kannada Digital Live: ಎಲಾನ್ ಮಸ್ಕ್ ಮಾಲೀಕತ್ವದಲ್ಲಿ ಏನಾಗಬಹುದು ಟ್ವಿಟ್ಟರ್? ನಿಮಗೇನನಿಸುತ್ತದೆ?

TV9 Kannada Digital Live: ಎಲಾನ್ ಮಸ್ಕ್ ಮಾಲೀಕತ್ವದಲ್ಲಿ ಏನಾಗಬಹುದು ಟ್ವಿಟ್ಟರ್? ನಿಮಗೇನನಿಸುತ್ತದೆ?

TV9 Web
| Updated By: Digi Tech Desk

Updated on: Apr 27, 2022 | 3:36 PM

ಎಲಾನ್ ಮಸ್ಕ್ ಮಾಲೀಕತ್ವದಲ್ಲಿ ಟ್ವಿಟ್ಟರ್ ಇಂಕ್​ನ ಭವಿಷ್ಯ ಹೇಗಿರಲಿದೆ, ಏನೆಲ್ಲ ನಿರೀಕ್ಷೆ ಮಾಡಬಹುದು ಎಂಬ ಬಗ್ಗೆ ಚರ್ಚೆ ಮಾಡೋಣ ಬನ್ನಿ

ವಿಶ್ವದ ವಿವಿಧೆಡೆ ಅದಾಗಲೇ ವಿವಾದಕ್ಕೆ ಕಾರಣ ಆಗಿದ್ದ ಟ್ವಿಟ್ಟರ್ (Twitter) ಈಗ ಅಮೆರಿಕದ ಉದ್ಯಮಿ ಎಲಾನ್ ಮಸ್ಕ್​ರ ಖಾಸಗಿ ಸ್ವತ್ತಾಗಲಿದೆ. ಮಸ್ಕ್ ಅವರೇನೋ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಪೂರ್ಣವಾಗಿ ಒತ್ತು ನೀಡುವ ಮಾತನಾಡುತ್ತಿದ್ದಾರೆ. ಅದರ ಜತೆಗೆ ಟ್ವಿಟ್ಟರ್ ಸಾಮರ್ಥ್ಯವು ಪೂರ್ತಿ ಹೊರತೆಗೆಯುವುದಕ್ಕೆ ಪ್ರಯತ್ನಿಸುವುದಾಗಿಯೂ ಹೇಳಿದ್ದಾರೆ. ಆದರೆ ಎಷ್ಟಾದರೂ ಎಲಾನ್ ಮಸ್ಕ್ ಒಬ್ಬ ಉದ್ಯಮಿ. ವಿಶ್ವದ ನಂಬರ್ 1 ಶ್ರೀಮಂತ. ಜಗತ್ತಿನಾದ್ಯಂತ ಅವರ ಉದ್ಯಮ ಹಿತಾಸಕ್ತಿಗಳಿವೆ. ಎಷ್ಟೋ ದೇಶಗಳಲ್ಲಿ ಪ್ರಬಲವಾದ ಜನಾಭಿಪ್ರಾಯ ಸಂಗ್ರಹ, ದಂಗೆ, ದೊಂಬಿ, ರಾಜಕೀಯ ವಿಪ್ಲವಗಳಿಗೆ ಕಾರಣವಾದ ಸಾಮಾಜಿಕ ಮಾಧ್ಯಮ ಟ್ವಿಟ್ಟರ್. ಇದೇ ಕಾರಣಕ್ಕೆ ವಿವಿಧೆಡೆ ನಿರ್ಬಂಧಕ್ಕೂ ಒಳಗಾಗಿದೆ. ಇಂಥ ಕಾಲಘಟ್ಟದಲ್ಲಿ ಉದ್ಯಮಿ ಎಲಾನ್ ಮಸ್ಕ್ ಅವರು ಟ್ವಿಟ್ಟರ್ ಇಂಕ್. ಕಂಪೆನಿಯ ಸಂಪೂರ್ಣ ಷೇರು ಖರೀದಿಸಿರುವುದು ಸಖೇದಾಶ್ಚರ್ಯ ಉಂಟು ಮಾಡಿದೆ.

ಕೆಲವರಿಗೆ ಸಿಟ್ಟು, ಮತ್ತೆ ಕೆಲವರಿಗೆ ಆಕ್ಷೇಪ. ಇನ್ನೂ ಕೆಲವರು ಆ ಕಂಪೆನಿಯ ಉದ್ಯೋಗಿಗಳ ಸ್ಥಿತಿ ಏನು ಎಂದು ಚಿಂತಿಸುತ್ತಿದ್ದಾರೆ. ಆದರೆ ವಿಷಯ ಇನ್ನೂ ಗಂಭೀರವಾಗಿದೆ. ಒಂದು ಟ್ವೀಟ್​ನಿಂದ ಏನೇನೋ ಬೆಳವಣಿಗೆ, ಬದಲಾವಣೆಗಳಾಗಬಹುದು. ಅಂಥದ್ದೊಂದು ಕಂಪೆನಿ ಎಲಾನ್ ಮಸ್ಕ್ ಮಾಲೀಕತ್ವದಲ್ಲಿ ವಿಶ್ವಾಸಾರ್ಹತೆ ಉಳಿಸಿಕೊಳ್ಳಬಹುದಾ, ಸರಿಯಾದ ಬದಲಾವಣೆ ಹಾದಿಯನ್ನು ತುಳಿಯಬಹುದಾ? ಅದೇ ಈ ದಿನದ ಟಿವಿ9ಕನ್ನಡ ಡಿಜಿಟಲ್ ಲೈವ್​ನ ಚರ್ಚೆ.

ಇದನ್ನೂ ಓದಿ: Elon Musk: ಟ್ವಿಟ್ಟರ್ ಖರೀದಿಸಿದ ಎಲಾನ್ ಮಸ್ಕ್​: ಪ್ರತಿ ಷೇರಿಗೆ 54.20 ಡಾಲರ್​ನಂತೆ 44 ಶತಕೋಟಿ ಡಾಲರ್ ದರ ನಿಗದಿ