‘50-50 ರೂಲ್ಸ್​ನಿಂದ ಹೊಟ್ಟೆ ಮೇಲೆ ಹೊಡೀಬೇಡಿ’: ಕೊರೊನಾ 4ನೇ ಅಲೆ ಬಗ್ಗೆ ಜನರ ಮಾತು

‘50-50 ರೂಲ್ಸ್​ನಿಂದ ಹೊಟ್ಟೆ ಮೇಲೆ ಹೊಡೀಬೇಡಿ’: ಕೊರೊನಾ 4ನೇ ಅಲೆ ಬಗ್ಗೆ ಜನರ ಮಾತು

TV9 Web
| Updated By: ಮದನ್​ ಕುಮಾರ್​

Updated on: Apr 27, 2022 | 9:33 AM

50-50 ಆಕ್ಯುಪೆನ್ಸಿ ನಿಯಮ ಜಾರಿಗೆ ಬಂದರೆ ಚಿತ್ರರಂಗಕ್ಕೆ ಹೆಚ್ಚು ನಷ್ಟ ಆಗುತ್ತದೆ. ಈ ಬಗ್ಗೆ ಪ್ರೇಕ್ಷಕರು ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ.

ಇನ್ನೇನು ಎಲ್ಲವೂ ಸರಿ ಆಯಿತು ಎಂದುಕೊಳ್ಳುವಾಗಲೇ ಕೊರೊನಾ 4ನೇ ಅಲೆಯ (Corona 4th Wave) ಬಗ್ಗೆ ಮಾತು ಶುರುವಾಗಿದೆ. ಈ ಬಾರಿ ವೈರಸ್​ ಹರಡದಂತೆ ತಡೆಗಟ್ಟಲು ಮತ್ತೆ ಕಠಿಣ ಕ್ರಮಗಳನ್ನು ಜಾರಿಗೊಳಿಸುವ ಬಗ್ಗೆ ಚರ್ಚೆ ನಡೆಯುತ್ತಿವೆ. ಈಗಾಗಲೇ ಮೂರು ಬಾರಿ ಲಾಕ್​ಡೌನ್​ ಮತ್ತು ಕೊರೊನಾ ಕರ್ಫ್ಯೂ ಕಾರಣದಿಂದ ಜನರ ಆರ್ಥಿಕ ಸ್ಥಿತಿಗತಿ ಹದಗೆಟ್ಟಿದೆ. ಈಗ ಎಲ್ಲವೂ ಚೇತರಿಕೆ ಕಾಣುತ್ತಿರುವ ಸಂದರ್ಭದಲ್ಲಿ ಮತ್ತೆ 50-50 ನಿಯಮ (50 percent Occupancy) ಜಾರಿಗೆ ತರುವ ಸಾಧ್ಯತೆ ಇದೆ. ಈ ರೀತಿ ಮಾಡಿದರೆ ಚಿತ್ರರಂಗಕ್ಕೆ (Film Industry) ನಷ್ಟ ಆಗಲಿದೆ. ಸಣ್ಣ ಬಜೆಟ್​ ಸಿನಿಮಾದಲ್ಲಿ ಕೆಲಸ ಮಾಡಿದ ಕಲಾವಿದರು ಮತ್ತು ತಂತ್ರಜ್ಞರ ಹೊಟ್ಟೆ ಮೇಲೆ ಹೊಡೆದಂತೆ ಆಗುತ್ತದೆ ಎಂಬ ಅಭಿಪ್ರಾಯ ಜನರಿಂದ ಕೇಳಿಬಂದಿದೆ.

ಇದನ್ನೂ ಓದಿ:

ಬೆಂಗಳೂರಿನಲ್ಲಿ ಮತ್ತೆ ಕೊರೊನಾ ಆತಂಕ ಶುರು; ಕೊರೊನಾ 4ನೇ ಅಲೆ ಎದುರಿಸಲು ಬಿಬಿಎಂಪಿಯಿಂದ ಸಿದ್ಧತೆ

ಸಿಎಂ ಸಭೆ ಬೆನ್ನಲ್ಲೇ ಇಂದು ಅಧಿಕಾರಿಗಳ ಸಭೆ; ಕೊರೊನಾ 4ನೇ ಅಲೆ ಬಗ್ಗೆ ಎಚ್ಚರಿಕೆಯಿಂದಿರಿ ಎಂದ ಸಚಿವ ಕೆ.ಸುಧಾಕರ್