ಬೆಂಗಳೂರಿನಲ್ಲಿ ಮತ್ತೆ ಕೊರೊನಾ ಆತಂಕ ಶುರು; ಕೊರೊನಾ 4ನೇ ಅಲೆ ಎದುರಿಸಲು ಬಿಬಿಎಂಪಿಯಿಂದ ಸಿದ್ಧತೆ
ಸೋಂಕಿನ ನಾಗಲೋಟ ರಾಜಧಾನಿಯಲ್ಲಿ ಆರಂಭವಾಗ್ತಿದ್ದಂತೆ ಪಾಲಿಕೆ(BBMP) ಅಧಿಕಾರಿಗಳು ಅಲರ್ಟ್ ಆಗಿದ್ದಾರೆ. ಚಿಕಿತ್ಸೆಗೆ ನಾಲ್ಕು ಆಸ್ಪತ್ರೆಯಲ್ಲಿ 1165 ಸಾಮಾನ್ಯ ಬೆಡ್ ವ್ಯವಸ್ಥೆ ಮಾಡಲಾಗಿದ್ದು, ಐಸಿಯು, ವೆಂಟಿಲೇಟರ್ ಸೇರಿದಂತೆ ಒಟ್ಟು 2392 ಬೆಡ್ ರೆಡಿ ಮಾಡಲಾಗಿದೆ.
ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕೊರೊನಾ(Coronavirus) ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು ಆತಂಕ ಶುರುವಾಗಿದೆ. ರಾಜ್ಯದಲ್ಲಿ ನಿತ್ಯ ಬರ್ತಿರೋ ಕೇಸ್‌ಗಳ ಪೈಕಿ ಶೇಕಡಾ 90 ರಷ್ಟು ಪ್ರಕರಣಗಳು ಸಿಲಿಕಾನ್ ಸಿಟಿಯಲ್ಲೇ ಬೆಳಕಿಗೆ ಬರ್ತಿವೆ. ಹೀಗೆ ಸೋಂಕಿನ ನಾಗಲೋಟ ರಾಜಧಾನಿಯಲ್ಲಿ ಆರಂಭವಾಗ್ತಿದ್ದಂತೆ ಪಾಲಿಕೆ(BBMP) ಅಧಿಕಾರಿಗಳು ಅಲರ್ಟ್ ಆಗಿದ್ದಾರೆ. ಕೊರೊನಾ ಹೆಚ್ಚಳ ಹಿನ್ನೆಲೆ ಏಪ್ರಿಲ್ 27ರಂದು ಪಿಎಂ ನರೇಂದ್ರ ಮೋದಿ(PM Narendra Modi) ದೇಶದ ಸಿಎಂಗಳ ಜೊತೆ ಮೀಟಿಂಗ್ ಇಟ್ಟಿದ್ದಾರೆ. ಪಿಎಂ ಮೀಟಿಂಗ್ ನಂತರ ಆಕ್ಷನ್ ಪ್ಲ್ಯಾನ್ಗೆ ಬಿಬಿಎಂಪಿ ಸಿದ್ಧತೆ ನಡೆಸಿದೆ. ಕೊರೊನಾ ಸೋಂಕಿತರ ಪ್ರಮಾಣ ಏರಿಕೆ ಹಿನ್ನಲೆ ಸಿಎಂ ಜೊತೆ ಪಿಎಂ ಚರ್ಚೆ ನಡೆಸಲಿದ್ದು ಪಿಎಂ ಸಲಹೆ ಪಡೆದು ನಂತರ ಅಧಿಕಾರಿಗಳು ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಲು ತಯಾರಿ ನಡೆದಿದೆ.
ಬೆಂಗಳೂರಿನಲ್ಲಿ ದಿನೇದಿನೆ ಕೊರೊನಾ ಪ್ರಕರಣಗಳ ಹೆಚ್ಚಳ ಹಿನ್ನೆಲೆ ಬಿಬಿಎಂಪಿ ಕೊರೊನಾ ಲಸಿಕೆ ಪಡೆಯದವರ ಹುಡುಕಾಟ ನಡೆಸುತ್ತಿದೆ. 2ನೇ ಡೋಸ್ ಪಡೆಯದವರ ಮನೆಗೆ ಹೋಗಿ ಲಸಿಕೆ ನೀಡಲು ಸಿದ್ದತೆ ಮಾಡಿಕೊಂಡಿದೆ. ಪತ್ತೆ ಕಾರ್ಯಕ್ಕಾಗಿ ಪೊಲೀಸರ ಸಹಾಯ ಪಡೆಯುವ ಬಗ್ಗೆ ಚರ್ಚೆ ಕೂಡ ನಡೆದಿದ್ದು 4ನೇ ಅಲೆಯಿಂದ ತಪ್ಪಿಸಿಕೊಳ್ಳಲು BBMPಯಿಂದ ಲಸಿಕೆ ಪ್ಲ್ಯಾನ್ ಪ್ರಯೋಗಕ್ಕೆ ಮುಂದಾಗಿದೆ.
ಶೀಘ್ರದಲ್ಲೇ ಎಲ್ಲರಿಗೂ ಕೊರೊನಾ ಲಸಿಕೆ 3ನೇ ಡೋಸ್ ಉಚಿತ? ಸಧ್ಯ 60 ವರ್ಷ ಮೇಲ್ಪಟ್ಟವರಿಗೆ ಬೂಸ್ಟರ್ ಡೋಸ್ ನೀಡಲಾಗ್ತಿದೆ. 60 ವರ್ಷದೊಳಗಿನವರಿಗೆ ಬೂಸ್ಟರ್ ಡೋಸ್ ನೀಡುವ ಬಗ್ಗೆ ಸಭೆ ನಡೆಯಲಿದ್ದು ಉಚಿತವಾಗಿ ಬೂಸ್ಟರ್ ಡೋಸ್ ನೀಡುವ ಬಗ್ಗೆ ಇಂದು ನಿರ್ಧಾರ ಮಾಡಲಾಗುತ್ತೆ. ಶೀಘ್ರದಲ್ಲೇ ಎಲ್ಲರಿಗೂ ಉಚಿತವಾಗಿ ಬೂಸ್ಟರ್ ಡೋಸ್ ಲಭ್ಯ?ವಾಗಲಿದೆ.
ನಾಲ್ಕು ಆಸ್ಪತ್ರೆಗಳನ್ನ ಸಜ್ಜುಗೊಳಿಸಿದ ಬಿಬಿಎಂಪಿ ದಿನದಿಂದ ದಿನಕ್ಕೆ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗ್ತಿದೆ. ಅದ್ರಲ್ಲೂ ರಾಜಧಾನಿ ಬೆಂಗಳೂರನ್ನೇ ಟಾರ್ಗೆಟ್ ಮಾಡಿ ಸೋಂಕು ಮುನ್ನುಗ್ಗುತ್ತಿದ್ದು, ಬಿಬಿಎಂಪಿ ಎಚ್ಚೆತ್ತುಕೊಂಡಿದೆ. ಈಗಾಗಲೇ ಬಿಬಿಎಂಪಿ ಬೆಡ್, ಐಸಿಯು, ವೆಂಟಿಲೇಟರ್ ಸೇರಿದಂತೆ ಚಿಕಿತ್ಸೆ ಬೇಕಾದ ವ್ಯವಸ್ಥೆ ಮಾಡಿಕೊಂಡಿದೆ. ಜೊತೆಗೆ ವ್ಯಾಕ್ಸಿನ್ ಪಡೆಯದೇ ಇರೋರ ಮೇಲೆಯೂ ನಿಗಾವಹಿಸಿದ್ದು ವ್ಯಾಕ್ಸಿನ್ ಬಗ್ಗೆಯೂ ತಿಳುವಳಿಕೆ ಮೂಡಿಸ್ತಿದೆ.
ಕೊರೊನಾ ಎದುರಿಸಲು ಪಾಲಿಕೆ ಸಜ್ಜು ಬೆಂಗಳೂರಿನಲ್ಲಿ ನಿತ್ಯ 2 ರಿಂದ 3 ಸಾವಿರ ಕೋವಿಡ್ ಟೆಸ್ಟ್ ಮಾಡಲಾಗ್ತಿದ್ದು, ನಿತ್ಯ 60 ರಿಂದ 80 ಜನ ಸೋಂಕಿತರು ಪತ್ತೆಯಾಗ್ತಿದ್ದಾರೆ. ಸದ್ಯ ನಗರದಲ್ಲಿನ ಪಾಸಿಟಿವಿಟಿ ದರ 2.28ಕ್ಕೆ ತಲುಪಿದೆ. ಇನ್ನು ಚಿಕಿತ್ಸೆಗೆ ನಾಲ್ಕು ಆಸ್ಪತ್ರೆಯಲ್ಲಿ 1165 ಸಾಮಾನ್ಯ ಬೆಡ್ ವ್ಯವಸ್ಥೆ ಮಾಡಲಾಗಿದ್ದು, ಐಸಿಯು, ವೆಂಟಿಲೇಟರ್ ಸೇರಿದಂತೆ ಒಟ್ಟು 2392 ಬೆಡ್ ರೆಡಿ ಮಾಡಲಾಗಿದೆ.
ಇನ್ನು ಮೂರನೇ ಅಲೆ ವೇಳೆ ಜನ್ರಿಗೆ ವ್ಯಾಕ್ಸಿನ್ ದೊರಕಿದ್ರಿಂದ, ಸೋಂಕಿತನ ತೀವ್ರತೆ ಕಡಿಮೆಯಾಗಿತ್ತು. ಹೀಗಾಗಿ ನಾಲ್ಕನೇ ಅಲೆ ಎದುರಿಸಲು ಎಲ್ರೂ ಕಡ್ಡಾಯವಾಗಿ ವ್ಯಾಕ್ಸಿನ್ ಹಾಕಿಸಿಕೊಳ್ಳಬೇಕು ಅಂತಾ ಪಾಲಿಕೆ ಹೇಳ್ತಿದೆ. ಜತೆಗೆ ಬೂಸ್ಟರ್ ಡೋಸ್ ಹಾಕಿಸಿಕೊಳ್ಳಲು ಮನವಿ ಮಾಡ್ತಿದೆ.
10 ಏರಿಯಾಗಳಲ್ಲಿ ಕೊರೊನಾ ಆರ್ಭಟ ರಾಜ್ಯದಲ್ಲಿನ ಶೇಕಡಾ 90 ರಷ್ಟು ಕೇಸ್‌ಗಳು ಬೆಂಗಳೂರಿನಲ್ಲೇ ಪತ್ತೆಯಾಗ್ತಿವೆ. ಆದ್ರೆ ಈ ಕೇಸ್‌ಗಳ ಪೈಕಿ ಹೆಚ್ಚಿನ ಕೇಸ್‌ಗಳು ನಗರ 10 ಏರಿಯಾಗಳನ್ನೇ ಕಂಡುಬರ್ತಿವೆ. ಬೆಳ್ಳಂದೂರು, ಹೊಂಗಸಂಧ್ರ, ಕೋರಮಂಗಲ, ಹೆಚ್‌ಎಸ್‌ಆರ್‌ಲೇಔಟ್, ವರ್ತೂರು, ಹೂಡಿ, ಕಾಡುಗೋಡಿ ಸೇರಿದಂತೆ ಒಟ್ಟು ಹತ್ತು ವಾರ್ಡ್‌ಗಳಲ್ಲೇ ಹೆಚ್ಚಾಗಿ ಸೋಂಕಿತರು ಪತ್ತೆಯಾಗುತ್ತಿದ್ದಾರೆ.
ಇದನ್ನೂ ಓದಿ: ತೇರು ಎಳೆಯುವಾಗ ವಿದ್ಯುತ್ ಸ್ಪರ್ಶ: ಇಬ್ಬರು ಮಕ್ಕಳು ಸೇರಿ 11 ಮಂದಿ ಸಾವು
Petrol Price Today: ಇಂದು ಕೂಡಾ ಇಂಧನ ದರ ಸ್ಥಿರ; ಭಾರತದ ಪ್ರಮುಖ ನಗರಗಳಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಹೀಗಿದೆ